ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆ

ಆಡಳಿತ  ವ್ಯವಸ್ಥೆ

ಸರ್ಕಾರವು ಪ್ರತಿವೊಂದು ಜಿಲ್ಲೆಗೆ  ಒಬ್ಬ ಅಧಿಕಾರಿಯನ್ನು  ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಯಾಗಿ ನೇಮಕ ಮಾಡುವುದು.  ಸರ್ಕಾರವು ಪ್ರತಿಯೊಂದು ಜಿಲ್ಲಾ ಪಂಚಾಯತಿಗಾಗಿ ಒಬ್ಬ ಮುಖ್ಯ ಲೆಕ್ಕಾಧಿಕಾರಿಗಳು, ಒಬ್ಬ ಮುಖ್ಯ ಯೋಜನಾಧಿಕಾರಿಗಳು, ಒಬ್ಬರು ಅಥವಾ ಹೆಚ್ಚು ಉಪ-ಕಾರ್ಯದರ್ಶಿಗಳು ಸಹ ನೇಮಕ ಮಾಡಿರುತ್ತಾರೆ ಇವರು ಎಲ್ಲರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧೀನದಲ್ಲಿರುತ್ತಾರೆ ಅವರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಾರೆ.   ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ  ಅಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿಗಳಿಗೆ  ತಾಲ್ಲೂಕು ಮಟ್ಟದ ಆಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸುತ್ತಾರೆ.

ಆಡಳಿತ ರಚನೆ

ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಯ ಕಾರ್ಯಗಳು ಮತ್ತು ಕರ್ತವ್ಯಗಳು :

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.

ಈ ಅಧಿನಿಯಮದ ಮೂಲಕ ಅಥವಾ ಅದರ ಅಡಿಯಲ್ಲಿ ಅಥವಾ ತಾತ್ಕಾಲದಲ್ಲಿ ಜಾರಿಯಲ್ಲಿರುವ  ಯಾವುದೇ ಕಾನೂನಿನ ಅಡಿಯಲ್ಲಿ  ನಿರ್ದಿಷ್ಟವಾಗಿ ವಿಧಿಸಿರುವ ಆಥವಾ ವಹಿಸಿಕೊಟ್ಟಿರುವ  ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು. 

ಅಧ್ಯಕ್ಷರು ಸಾಮಾನ್ಯ ಮೇಲ್ವಿಚಾರಣೆ ಹಾಗೂ ನಿಯಂತ್ರಣಕ್ಕೆ ಮತ್ತು ನಿಯಮಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು ಜಿಲ್ಲಾ ಪಂಚಾಯತಿಯ  ಅಥವಾ ಅದರ ಅಧೀನದಲ್ಲಿನ  ಹುದ್ದೆಯನ್ನು ಧಾರಣ ಮಾಡಿರುವ  ಅಧಿಕಾರಗಳು ಮತ್ತು ನೌಕರರನ್ನು ನಿಯಂತ್ರಿಸತಕ್ಕದ್ದು.

ಜಿಲ್ಲಾ ಪಂಚಾಯತಿಯ  ಎಲ್ಲಾ ಕಾಮಗಾರಿಗಳ ಮೇಲ್ವಿಚಾರಣೆ ನಿಯಂತ್ರಣ ಮಾಡತಕ್ಕದ್ದು.

ಜಿಲ್ಲಾ ಪಂಚಾಯತಿಯ ಎಲ್ಲಾ ಕಾಮಗಾರಿಗಳ ಮತ್ತು ಅಭಿವೃದ್ಧಿ ಯೋಜನೆಗಳ  ತ್ವರಿತ   ನಿರ್ವಹಣೆಗಾಗಿ  ಅವಶ್ಯಕ ಕ್ರಮಗಳನ್ನು ಕೈಕೊಳ್ಳತಕ್ಕದ್ದು.

ಜಿಲ್ಲಾ ಪಂಚಾಯತಿಯ ಮತ್ತು  ಅದರ ಸಮಿತಿಗಳ ಸಭೆಗಳ  ವ್ಯವಹರಣೆಗಳಿಗೆ  ಸಂಬಂಧಿಸಿದ  ಎಲ್ಲ ಕಾಗದ ಪತ್ರಗಳ  ಮತ್ತು ದಸ್ತಾವೇಜುಗಳ ಸುಪರ್ದನ್ನು ಹೊಂದಿರತಕ್ಕದ್ದು.

ಜಿಲ್ಲಾ ಪಂಚಾಯತಿಯ ನಿಧಿಯಿಂದ  ಹಣವನ್ನು ತಗೆಯುವ ಮತ್ತು ಬಟವಾಡೆ  ಮಾಡುವ ಅಧಿಕಾರ ಇರತಕ್ಕದ್ದು. ಗೊತ್ತುಪಡಿಸಬಹುದಾದಂಥ  ಇತರೆ  ಅಧಿಕಾರಗಳನ್ನು  ಚಲಾಯಿಸತಕ್ಕದ್ದು ಮತ್ತು ಅಂಥ ಇತರೆ  ಕಾರ್ಯಗಳನ್ನು ನೆರವೇರಿಸತಕ್ಕದ್ದು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು  ಜಿಲ್ಲಾ ಪಂಚಾಯಿತಿಯ ಪ್ರತಿಯೊಂದು ಸಭೆಗೆ ಹಾಜರಾಗತಕ್ಕದ್ದು  ಮತ್ತು ಅದರ ಯಾವುದೇ  ಸಮಿತಿಯ ಸಭೆಗೆ  ಹಾಜರಾಗಲು ಮತ್ತು ಚರ್ಚೆಯಲ್ಲಿ ಭಾಗವಹಿಸಲು ಹಕ್ಕನ್ನು ಹೊಂದಿರತಕ್ಕದ್ದು.  ಆದರೆ  ಯಾವುದೇ ನಿರ್ಣೆಯವನ್ನು ಮಂಡಿಸಲು ಅಥವಾ ಮತ ಚಲಾಯಿಸಲು ಹಕ್ಕನ್ನು ಹೊಂದಿರತಕ್ಕದ್ದಲ್ಲ.

ಆಡಳಿತ ಶಾಖೆ

ಆಡಳಿತ ಶಾಖೆಯ ರಚನೆ

ಉಪ ಕಾರ್ಯದರ್ಶಿಗಳು (ಆಡಳಿತ) ಇವರ ಕಾರ್ಯಗಳು

ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಎಲ್ಲಾ ನೌಕರರ ಮೇಲೆ ನಿಯಂತ್ರಣ ಹೊಂದಿರುವುದು.

ರಜೆ ಮತ್ತು ಮುಂಗಡ ಮಂಜೂರಾತಿ

ವಾಹನಗಳ ಖರೀದಿ ಮತ್ತು ನಿರ್ವಹಣೆ

ಲೇಖನ ಸಾಮಗ್ರಿ ಮತ್ತು ಪೀಠೋಪಕರಣ ಇತ್ಯಾದಿಗಳ  ಖರೀದಿ

ತಾಲ್ಲೂಕು ಪಂಚಾಯತ್ ಗಳನ್ನು ಒಳಗೊಂಡಂತೆ ಎಲ್ಲಾ ಇಲಾಖೆಗಳ ಮೇಲೆ  ಆಡಳಿತಾತ್ಮಕ ನಿಯಂತ್ರಣ ಹೊಂದಿರುವುದು.

ಅಧೀನ ಕಛೇರಿಗಳ ತಪಾಸಣೆ

ಅಧೀನ ಅಧಿಕಾರಿಗಳ ದಿನಚರಿ ಪರಿಶೀಲನೆ

ಆಧೀನ ಕಛೇರಿಗಳ ಪ್ರಸ್ತಾವನೆಗಳ ಬಗ್ಗೆ ನಿಯಮಾನುಸಾರ ಆಡಳಿತಾತ್ಮಕ ಮಂಜೂರಾತಿ ನೀಡುವುದು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವಹಿಸಲಾದ ಇತರೆ ಕೆಲಸಗಳು

ಅಭಿವೃದ್ಧಿ ಶಾಖೆ

ಅಭಿವೃದ್ಧಿ ಶಾಖೆಯ ರಚನೆ

ಉಪ ಕಾರ್ಯದರ್ಶಿ (ಅಭಿವೃದ್ಧಿ) ಇವರ ಕಾರ್ಯಗಳು

ಯೋಜನಾ ಶಾಖೆ

ಮುಖ್ಯ ಯೋಜನಾಧಿಕಾರಿಗಳು ಯೋಜನಾ ಶಾಖೆಯ ಮುಖ್ಯಸ್ಥರಾಗಿರುತ್ತಾರೆ. ಯೋಜನಾ ಶಾಖೆಯು ಈ ಕೆಳಕಂಡಂತೆ ಕಾರ್ಯಗಳನ್ನು ನಿರ್ವಹಿಸುತ್ತದೆ.

ಲೆಕ್ಕಶಾಖೆ

ಜಿಲ್ಲಾ ಪಂಚಾಯತ್ ಲೆಕ್ಕಪತ್ರ ನಿರ್ವಹಣೆ:

ಜಿಲ್ಲಾ ಪಂಚಾಯತ್ ಲೆಕ್ಕಪತ್ರ ನಿರ್ವಹಣೆಯು 1996ರ ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯತ್ ಹಣಕಾಸು ಮತ್ತು ಲೆಕ್ಕಪತ್ರ) ನಿಯಮಗಳಿಗೆ ಒಳಪಟ್ಟಿದೆ.  ಜಿಲ್ಲಾ ಪಂಚಾಯತ್ ಲೆಕ್ಕಪತ್ರಗಳ ನಿರ್ವಹಣೆಯ ಜವಾಬ್ದಾರಿ ಮುಖ್ಯ ಲೆಕ್ಕಾಧಿಕಾರಿಗಳ ಮೇಲಿರುತ್ತದೆ.ಮುಖ್ಯ ಲೆಕ್ಕಾಧಿಕಾರಿಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕೆಳಗೆ ನೇರವಾಗಿ ಕಾರ್ಯ ನಿರ್ವಹಿಸುತ್ತಾರೆ.ಅವರ ಕೆಳಗೆ ಲೆಕ್ಕಾಧಿಕಾರಿಗಳು, ಲೆಕ್ಕಾಧೀಕ್ಷಕರು ಮತ್ತಿತರ ಪ್ರತ್ಯೇಕ ಸಿಬ್ಬಂದಿ ಇರುತ್ತದೆ.  ಮುಖ್ಯ ಲೆಕ್ಕಾಧಿಕಾರಿಗಳ  ಅಧೀನದಲ್ಲಿ ಮುಖ್ಯವಾಗಿ ಆಯವ್ಯಯ ಶಾಖೆ, ಅಭಿಪ್ರಾಯ ನೀಡಿಕೆ ಶಾಖೆ, ಆಂತರಿಕ ಲೆಕ್ಕಪರಿಶೋಧನಾ ಶಾಖೆ ಹಾಗೂ ಲೆಕ್ಕ ಸಂಕಲನ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು ಈ ಕೆಳಕಂಡಂತೆ ವಿಂಗಡಿಸಲಾಗಿದೆ.

ಮುಖ್ಯ ಲೆಕ್ಕಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ:

ಮುಖ್ಯ ಲೆಕ್ಕಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು 1996ರ ಜಿಲ್ಲಾ ಪಂಚಾಯತ್ ಹಣಕಾಸು ಮತ್ತು ಲೆಕ್ಕಪತ್ರ ನಿಯಮಾವಳಿಯಲ್ಲಿನ  ಅಧ್ಯಾಯ – 6 ರಲ್ಲಿ ವಿಷದಪಡಿಸಲಾಗಿದೆ.  ಅವುಗಳಲ್ಲಿ ಮುಖ್ಯವಾದ ಕರ್ತವ್ಯ ಮತ್ತು ಜವಾಬ್ದಾರಿಗಳು ಈ ಕೆಳಕಂಡಂತಿವೆ.

  1. ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳನ್ನು ಜಿಲ್ಲಾ ಪಂಚಾಯತ್ ನಿಧಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ಅನುಷ್ಟಾನಾಧಿಕಾರಿಗಳಿಗೆ ಬಿಡುಗಡೆ ಮಾಡುವುದು
  2. ಜಿಲ್ಲಾ ಪಂಚಾಯತ್ ಆಯವ್ಯಯವನ್ನು ಸಕಾಲದಲ್ಲಿ ಸಿದ್ದಪಡಿಸಿ ಹಣಕಾಸು ಮತ್ತು ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಯ ಮುಂದೆ ಮಂಡಿಸುವುದು.
  3. ಜಿಲ್ಲಾ ಪಂಚಾಯತ್ನ ಮಾಸಿಕ ಹಾಗೂ ವಾರ್ಷಿಕ ಲೆಕ್ಕಗಳನ್ನು ಸಕಾಲದಲ್ಲಿ ಸಿದ್ದಪಡಿಸುವುದು ಮತ್ತು ಸಮಿತಿ ಮುಂದೆ ಮಂಡಿಸುವುದು.
  4. ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಪಟ್ಟ ಲೆಕ್ಕಗಳನ್ನು ನಿರ್ವಹಿಸುವುದು ಮತ್ತು ಲೆಕ್ಕಗಳನ್ನು ಚಾರ್ಟೆಡ್ ಅಕೌಂಟೆಂಟ್ ರವರಿಂದ ಲೆಕ್ಕಪರಿಶೋಧನೆ ಮಾಡಿಸಿ ಹಣ ಬಳಕೆ ಪ್ರಮಾಣ ಪತ್ರಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು.
  5. ಜಿಲ್ಲಾ ಪಂಚಾಯತ್ ಮತ್ತು ತಾಲ್ಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿನ ಕಛೇರಿಗಳ ಆಂತರಿಕ ಲೆಕ್ಕಪರಿಶೋಧನೆಯನ್ನು  ಕೈಗೊಳ್ಳುವುದು.  ಹಾಗೆಯೇ ಹಣ ದುರುಪಯೋಗ  ಅಥವಾ ಗಂಭೀರವಾದ ಅಕ್ರಮಗಳ ಪ್ರಕರಣಗಳಿದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ಆಂತರಿಕ ಲೆಕ್ಕ ಪರಿಶೋಧನೆಯನ್ನು ಕೈಗೊಳ್ಳುವುದು.
  6. ಮಹಾಲೇಖಪಾಲರು ಕೈಗೊಳ್ಳುವ ಲೆಕ್ಕಪರಿಶೋಧನೆಗೆ ಸಂಬಂಧಪಟ್ಟ ಲೆಕ್ಕಪತ್ರ ದಾಖಲಾತಿಗಳನ್ನು ಒದಗಿಸುವುದು ಮತ್ತು ಅಡ್ ಹಾಕ್ ಸಮಿತಿ ಮುಂದೆ ಆಡಿಟ್ ಆಕ್ಷೇಪಣೆಗಳಿಗೆ ಸೂಕ್ತ ಉತ್ತರಗಳನ್ನು ಒದಗಿಸುವುದು ಇತ್ಯಾದಿ.

ಜಿಲ್ಲಾ ಪಂಚಾಯತ್ ನಲ್ಲಿ ನಿಧಿಯ ಹರಿವು:

ಜಿಲ್ಲಾ ಪಂಚಾಯತಿಗೆ ರಾಜ್ಯ ಮತ್ತು ಕೇಂದ್ರದ ಸಂಚಿತ ನಿಧಿಯಿಂದ ಅನುದಾನವು ಈ ಮುಂದಿನಂತೆ ಚಾಲನೆಗೊಳ್ಳುತ್ತದೆ.
1}   ಯೋಜನೆ ಅನುದಾನ
2}   ಯೋಜನೇತರ ಅನುದಾನ
3}   ಪೂರಕ ಅನುದಾನ

ಯೋಜನೆ ಮತ್ತು ಯೋಜನೇತರ ಅನುದಾನವು ತ್ರೈಮಾಸಿಕವಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುತ್ತದೆ.  ಅದರಂತೆ ಸದರಿ ಮಾಸಿಕ ಅಥವಾ ತ್ರೈಮಾಸಿಕ ಅನುದಾನವನ್ನು ಜಿಲ್ಲಾ ಮಟ್ಟದ ವಿವಿಧ  ಇಲಾಖೆಯ ಅಧಿಕಾರಿಗಳಿಗೆ ತಾಲ್ಲೂಕು ಪಂಚಾಯಿತಿಗೆ ಮತ್ತು ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡಲಾಗುತ್ತದೆ.  ಕೇಂದ್ರ ಸರ್ಕಾರದಿಂದಲೂ ಸಹ ವಿವಿಧ ಯೋಜನೆಗೆ/ಕಾರ್ಯಕ್ರಮಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯತಿಗೆ ಹಾಗೂ ಅದರ ತಾಲ್ಲೂಕು ಹಾಗೂ  ಗ್ರಾಮ ಪಂಚಾಯತ್ ಘಟಕಕ್ಕೆ ಬಿಡುಗಡೆಯಾಗುತ್ತಿದ್ದು ಈ ಕೆಳಕಂಡಂತಿರುತ್ತದೆ.

ಯೋಜನಾ ಅನುದಾನ:
ಯೋಜನೆ ಅನುದಾನವು ಅಭಿವೃದ್ದಿ ಚಟುವಟಿಕೆಗಳಿಗೆ, ಹೊಸ ಮೂಲಭೂತ ಸೌಕರ್ಯದ ಸೃಷ್ಟಿಗೆ ಮತ್ತು ಮೂಲಭೂತ ಸೌಕರ್ಯ ನಿರ್ವಹಣೆಗೆ ಬಿಡುಗಡೆಯಾಗುತ್ತದೆ.  ಅದರ ಹೊರತಾಗಿ ಕೇಂದ್ರ ಪುರಸ್ಕೃತ ಯೋಜನೆಗಳಾದ ಎಂ.ಎನ್.ಆರ್.ಇ.ಜಿ.ಎ. ಹನ್ನೆರಡು ಮತ್ತು ಹದಿಮೂರನೆ ಹಣಕಾಸು, ಎ.ಆರ್.ಡಬ್ಲ್ಯೂ  ಐ.ಎ.ವೈ, ಎಸ್.ಜಿ.ವೈ, ಟಿ.ಎಸ್.ಸಿ.ಗಳಿಗೆ ಬಿಡುಗಡೆಯಾಗುತ್ತದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ದಿಗೂ ಸಹ (ಎಸ್.ಸಿ.ಪಿ) ಅನುದಾನ ಬಿಡುಗಡೆಯಾಗುತ್ತದೆ.  ಯೋಜನಾ ಕಾರ್ಯಕ್ರಮಕ್ಕೆ ಸರ್ಕಾರವು ಹಣಕಾಸು ನಿಗದಿಯನ್ನು [ಪೈನಾನ್ಸಿಯಲ್ ಅಲೋಕೇಶನ್] ಜನಸಂಖ್ಯೆ, ನೈಜ ಬೇಡಿಕೆ ಹಾಗೂ ಹಿಂದುಳಿಯುವಿಕೆ [ನಿರ್ಧಿಷ್ಟ ಮಾಪನದಿಂದ ಅಳೆದ]  ಅಧಾರದ ಮೇಲೆ ನಿರ್ಧರಿಸುತ್ತದೆ.

ಯೋಜನೇತರ ಅನುದಾನ:
ಸದರಿ ಅನುದಾನವು ವಿವಿಧ ಇಲಾಖೆಗಳ ಮುಖ್ಯವಾಗಿ ವೇತನ ಇತರೆ ಸಂಭವನೀಯ ವೆಚ್ಚವನ್ನು ಮತ್ತು ಈಗಲೇ ಸೃಷ್ಟಿಯಾದ ಮೂಲಭೂತ ಸೌಲಭ್ಯದ ನಿರ್ವಹಣೆಗಾಗಿ ಬಿಡುಗಡೆಯಾಗುತ್ತದೆ.  ಸದರಿ ಅನುದಾನವು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುತ್ತದೆ.

ಪೂರಕ ಅನುದಾನ:
ಜಿಲ್ಲಾ ಪಂಚಾಯಿತಿಯ ವಾರ್ಷಿಕ ಆಯವ್ಯಯದಲ್ಲಿ ಕೆಲವೊಂದು ಅನುದಾನದ ಮೊತ್ತವನ್ನು ಸೇರ್ಪಡೆ ಮಾಡಿರುವುದಿಲ್ಲ.  ಅಂತಹ ಅನುದಾನವನ್ನು ಆಯವ್ಯಯ ಹೊರತುಪಡಿಸಿ ಅನುದಾನ ಎಂದು ಕರೆಯಲ್ಪಡುತ್ತದೆ.  ಇಂತಹ  ಅನುದಾನಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಾಮಾನ್ಯವಾಗಿ ತುರ್ತಾಗಿ ಕೈಗೊಳ್ಳುವ ಕುಡಿಯುವ ನೀರು, ರಸ್ತೆ ನಿರ್ಮಾಣ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಯುವ  ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗುತ್ತದೆ.  ಈ ಅನುದಾನವನ್ನು ಯಾವ ಉದ್ದೇಶಕ್ಕೋಸ್ಕರ ಬಿಡುಗಡೆ ಮಾಡಲಾಗಿರುತ್ತದೆಯೋ ಸದರಿ ಉದ್ದೇಶಕ್ಕಾಗಿ ವೆಚ್ಚ ಮಾಡಲಾಗುವುದು.

ಜಿಲ್ಲಾ ಪಂಚಾಯತ್,( ಡಿ.ಆರ್.ಡಿ.ಎ ಶಾಖೆ)

ಯೋಜನಾ ನಿರ್ದೇಶಕರು ಡಿ.ಆರ್.ಡಿ.ಎ ಶಾಖೆಯ ಮುಖ್ಯಸ್ಥರಾಗಿರುತ್ತಾರೆ.

ಡಿ.ಆರ್.ಡಿ.ಎ ಶಾಖೆಯು ಈ ಕೆಳಕಂಡಂತೆ ಕಾರ್ಯಗಳನ್ನು ನಿರ್ವಹಿಸುತ್ತದೆ.

ವಸತಿ ಯೋಜನೆ:
ವಿವಿಧ ವಸತಿ ಯೋಜನೆಗಳಾದ ಆಶ್ರಯ , ಡಾ||ಅಂಬೇಡ್ಕರ್, ಇಂದಿರಾ ಆವಾಜ್ ಯೋಜನೆ , ಬಸವ ವಸತಿ ಯೋಜನೆಗಳ ಅನುಷ್ಠಾನ. ಆಶ್ರಯ ನಿವೇಶನ ಯೋಜನೆಯ  ಅನುಷ್ಠಾನ. ವಸತಿ ಯೋಜನೆಗಳಡಿ ಬರುವ ದೂರುಗಳ ಪರಿಶೀಲನೆ ಹಾಗೂ ಕ್ರಮ.

ಎಸ್.ಜಿ.ಎಸ್.ವೈ
ಯೋಜನೆಯ ಮಾರ್ಗ ಸೂಚಿಯಂತೆ ಮುಖ್ಯ ಚಟುವಟಿಕೆಗಳನ್ನು ಗುರುತಿಸುವುದು. ಗ್ರಾಮ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್  ಮೂಲಕ ವಾರ್ಷಿಕ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಅನುಮೋದನೆ. ಸರ್ಕಾರದ ಮಾರ್ಗ ಸೂಚಿಯಂತೆ ಅನುಷ್ಠಾನಾಧಿಕಾರಿಗಳಿಗೆ ಅನುದಾನ ಬಿಡುಗಡೆ. ಪ್ರಗತಿ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದು.

ಸುವರ್ಣ ಗ್ರಾಮೋದಯ ಯೋಜನೆ
ಯೋಜನೆಯ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಅನುಷ್ಠಾನದ ಉಸ್ತುವಾರಿ. ಪ್ರಗತಿ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಕರ್ನಾಟಕ ಭೂಸೇನಾ ನಿಗಮಗಳ ಮೂಲಕ ಸಿವಿಲ್ ಕಾಮಗಾರಿಗಳ ಅನುಷ್ಠಾನ.

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in