ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಇಲಾಖೆಯ ಪರಿಚಯ:

ಕರ್ನಾಟಕ ಸರ್ಕಾರವು 1977ರಲ್ಲಿ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಜನಾಂಗವನ್ನು ಗುರುತಿಸಿ, ಅವರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕವಾದ "ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ" ಯನ್ನು ಸೃಜಿಸಿದ್ದು, ಭಾರತ ಸಂವಿಧಾನದ ಅನುಚ್ಛೇದ 15(4) ರಡಿಯಲ್ಲಿ ಶೈಕ್ಷಣಿಕ ಹಾಗೂ 16(4)ರಡಿಯಲ್ಲಿ ಔದ್ಯೋಗಿಕ ಮೀಸಲಾತಿ ಸೌಲಭ್ಯ ನೀಡಿಕೆಗೆ ಅವಕಾಶ ಕಲ್ಪಿಸಿರುತ್ತದೆ. 1999-2000ರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬೇರ್ಪಟ್ಟು ಪ್ರತ್ಯೇಕ ನಿರ್ದೇಶನಾಲಯವನ್ನು ಹೊಂದಿರುತ್ತದೆ. ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರತ್ಯೇಕ ಆಯುಕ್ತಾಲಯ ಹೊಂದಿದ್ದು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಶೈಕ್ಷಣಿಕ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 

ಇಲಾಖೆಯ ಉದ್ದೇಶ ಮತ್ತು ನೋಟ:

ಇಲಾಖೆಯು ಮುಖ್ಯವಾಗಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಶ್ರಮ ವಹಿಸುತ್ತಿದೆ. ಅದಲ್ಲದೆ, ಸಂವಿಧಾನದ ಅನುಚ್ಛೇದ 15(4) ಮತ್ತು 16(4)ರಡಿಯಲ್ಲಿ ಕಲ್ಪಿಸಿರುವ ಮೀಸಲಾತಿ ನಿಯಮದ ಅನುಷ್ಠಾನದ ಪರಿಶೀಲನೆ ಮತ್ತು ವಿವಿಧ ಯೋಜನೆಗಳ ಅನುಷ್ಠಾನವನ್ನು ಕೈಗೊಂಡಿದೆ. ಇಲಾಖೆ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ವಿವರ ಈ ಕೆಳಕಂಡಂತಿದೆ.

ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯಕ್ರಮಗಳು :

ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

1. ವಿದ್ಯಾರ್ಥಿಗಳಿಗೆ ವಸತಿ ಯೋಜನೆ:
ಇಲಾಖೆಯು 59 ಮೆಟ್ರಿಕ್ ಪೂರ್ವ ಹಾಗೂ 47 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ನಿರ್ವಹಿಸುತ್ತಿದೆ. ಒಟ್ಟು 7612 ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಸೌಲಭ್ಯ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇಡೀ ಶೈಕ್ಷಣಿಕ ವರ್ಷದಲ್ಲಿ ಉಚಿತ ಊಟ ಮತ್ತು ವಸತಿಯನ್ನು ಕಲ್ಪಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯುಲು ವಿದ್ಯಾರ್ಥಿಗಳು ಸರ್ಕಾರಿ/ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗಾಗಿ ಸರ್ಕಾರಿ/ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸ್ಗಳಾದ ಪಿ.ಯು.ಸಿ., ಪದವಿ, ಸ್ನಾತಕೋತ್ತರ ಪದವಿ ಇತ್ಯಾದಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ವಸತಿ, ನಿಲಯಗಳಿಗೆ ಪ್ರವೇಶ ಪಡೆಯಲು ವಾರ್ಷಿಕ ಆದಾಯದ ಮಿತಿ

  ಪ್ರವರ್ಗ ಇತರೆ
ಮೆಟ್ರಿಕ್ ಪೂರ್ವ
1 ಲಕ್ಷ
ರೂ.44,550.00
ಮೆಟ್ರಿಕ್ ನಂತರ
2.5 ಲಕ್ಷ
ರೂ.1.0 ಲಕ್ಷ

2. ಆಶ್ರಮ ಶಾಲೆಗಳು:
ಹಿಂದುಳಿದ ವರ್ಗಗಳ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ದೃಷ್ಠಿಯಿಂದ ಇಲಾಖೆಯಡಿ ಒಟ್ಟು 07 ಆಶ್ರಮಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಈ ಆಶ್ರಮ ಶಾಲೆಗಳಲ್ಲಿ ಒಟ್ಟು 224 ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಊಟ ಮತ್ತು ವಸತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

3. ಮೊರಾರ್ಜಿದೇಸಾಯಿ ವಸತಿ ಶಾಲೆಗಳು:
ಒಟ್ಟು 06 ಮೊರಾರ್ಜಿ ದೇಸಾಯಿ ಹಾಗೂ 01 ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿದ್ದು, ಕ್ರಮವಾಗಿ 1500 ಹಾಗೂ 400 ಮಂಜೂರಾತಿ ಸಂಖ್ಯೆಯಾಗಿರುತ್ತದೆ. 6 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ ಮತ್ತು ಶಿಕ್ಷಣದ ವ್ಯವಸ್ಥೆ ಇದೆ.

4. ಖಾಸಗಿ ಅನುಧಾನಿತ ಅನಾಥಾಲಯಗಳು:
ಅನಾಥ ಮತ್ತು ನಿರ್ಗತಿಕ ಮಕ್ಕಳ 1 ರಿಂದ 10ನೇ ತರಗತಿವರೆಗಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅನಾಥಾಲಯಗಳನ್ನು ನಡೆಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 09 ಅನಾಥಾಲಯಗಳಿದ್ದು, 3404 ಮಂಜೂರಾತಿ ಸಂಖ್ಯೆ, ಮಾಹೆಯಾನ ರೂ.700.00 ದರದಲ್ಲಿ ವರ್ಷದ 12 ತಿಂಗಳಿಗೆ ಆಹಾರದ ಬಾಬ್ತು ಸಹಾಯಧನ ಮಂಜೂರು ಮಾಡಲಾಗುತ್ತದೆ.

5. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತದ ವಿದ್ಯಾರ್ಥಿವೇತನ ಹಾಗೂ ಊಟ ಮತ್ತು ವಸತಿ ಯೋಜನೆ:

1. ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ.

ತರಗತಿ ಬಾಲಕ/ಬಾಲಕಿ ಅಡಹಾಕ್ ಅನುದಾನ ಒಟ್ಟು
1 ರಿಂದ 5
250
500
750/-
6 ರಿಂದ 8
400
500
900/-
9 ರಿಂದ 10
500
500
1000/-

2.ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.

ವಿವಿಧ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಡೆದಿರುವ ಅಂಕ ಶ್ರೇಣಿಯ ಮೇರೆಗೆ ಹಾಗೂ ಮಂಜೂರಾಗಿರುವ ಅನುದಾನದ ಮಿತಿಗೆ ಒಳಪಟ್ಟು, ವಿದ್ಯಾರ್ಥಿವೇತನವನ್ನು ನೀಡಲಾಗುವುದು.

ಅರ್ಜಿಯನ್ನು ಆನ್ ಲೈನ್ ಮೂಲಕ ಸ್ವೀಕರಿಸಲಾಗುವುದು. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ E-pass DBT ಮೂಲಕ ಜಮಾ ಮಾಡಲಾಗುತ್ತದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದ ದರಗಳು

ಕ್ರ.ಸಂ. ಗುಂಪು ಮಂಜೂರು ಮಾಡಲಾಗುವ ವಿದ್ಯಾರ್ಥಿವೇತನದ ದರ (ವಾರ್ಷಿಕ)
1
ಗುಂಪು-ಎ
3500/-
2
ಗುಂಪು-ಬಿ
3350/-

3

ಗುಂಪು-ಸಿ
2100/-
4
ಗುಂಪು-ಡಿ
1000/-

6. ವಿದ್ಯಾಸಿರಿ ಯೋಜನೆ

i) ಊಟ ಮತ್ತು ವಸತಿ ಯೋಜನೆ:

ವಿವಿಧ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ದೊರೆಯದಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ.1,500.00 ರಂತೆ ಶೈಕ್ಷಣಿಕ ಅವಧಿಯ 10 ತಿಂಗಳಿಗೆ ಒಟ್ಟು ರೂ.15,000.00 ಸಹಾಯಧನವನ್ನು ಇತರೆ ನಿಬಂಧನೆಗಳಿಗೊಳಪಟ್ಟು, ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗೆ, E-pass DBT ಮೂಲಕ ಜಮಾ ಮಾಡಲಾಗುವುದು.

7. ಶುಲ್ಕ ವಿನಾಯಿತಿ ಕಾರ್ಯಕ್ರಮ :-
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ದೃಷ್ಟಿಯಿಂದ ಸರ್ಕಾರವು, ಸರ್ಕಾರದ ಕಾಲೇಜುಗಳಿಗೆ ನಿಗಧಿಪಡಿಸುವ ಶುಲ್ಕ ದರಗಳನ್ನು ಸಂಬಂಧಪಟ್ಟ ವಿದ್ಯಾರ್ಥಿಯ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಜಮಾಗೊಳಿಸಲಾಗುವುದು.

ಕ್ರ.ಸಂ. ಪ್ರವರ್ವ-1 ಇತರೆ
1.

ಪರೀಕ್ಷಾ ಶುಲ್ಕ

ಭೋಧನಾ ಶುಲ್ಕ

ಪ್ರಯೋಗಾಲಯ ಶುಲ್ಕ

ಕ್ರೀಡಾ ಶುಲ್ಕ

ಗ್ರಂಥಾಲಯ ಶುಲ್ಕ

ಪರೀಕ್ಷಾ ಶುಲ್ಕ

ಭೋಧನಾ ಶುಲ್ಕ

ಪ್ರಯೋಗಾಲಯ ಶುಲ್ಕ

ಕ್ರೀಡಾ ಶುಲ್ಕ

ಗ್ರಂಥಾಲಯ ಶುಲ್ಕ

2.
ರೂ.2.50 ಲಕ್ಷ ವಾರ್ಷಿಕ ಆದಾಯ
ರೂ.1.00 ಲಕ್ಷ ವಾರ್ಷಿಕ ಆದಾಯ

8. ಕೌಶಲ್ಯ ತರಬೇತಿ ಕಾರ್ಯಕ್ರಮ :-
ಹಿಂದುಳಿದ ವರ್ಗಗಳ ನಿರುದ್ಯೋಗಿ ಮಹಿಳೆ/ಪುರುಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಕೌಶಲ್ಯ ತರಬೇತಿ ನೀಡಲಾಗುವುದು.

9. ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹ:-
ಬಿಎಸ್ಸಿ ನರ್ಸಿಂಗ್, ಜಿ.ಎನ್.ಎಮ್. ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಕೆಳಕಂಡಂತೆ ಶುಲ್ಕ ವಿನಾಯಿತಿ ನೀಡಲಾಗುವುದು.

ಕ್ರ.ಸಂ. ವಿವರ ಪಾವತಿಯ ವಿವರ ಜಿ.ಎನ್.ಎಮ್. ಕೋರ್ಸ್ ಬಿ.ಎಸ್ಸಿ ನರ್ಸಿಂಗ್ ಕೋರ್ಸ್
1
ಸಮವಸ್ತ್ರ ಶುಲ್ಕ
ಕೋರ್ಸ್ ಅವಧಿಯಲ್ಲಿ ಒಂದು ಬಾರಿ ಮಾತ್ರ
2000/-
2000/-

2

ಪುಸ್ತಕಗಳ ವೆಚ್ಚ
ಮೊದಲನೇ ವರ್ಷ
500/-
750/-
ಎರಡನೇ ವರ್ಷ
500/-
750/-
3
ಬೋಧನಾ ಶುಲ್ಕ ಪ್ರತಿ ವರ್ಷ (ಖಾಸಗಿ ನರ್ಸಿಂಗ್ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ)
ಪ್ರತಿ ವರ್ಷ
4500/-
5000/-
4
ಶಿಷ್ಯವೇತನ/ಖಾಸಗಿ ನರ್ಸಿಂಗ್ (ಶಾಲೆಗಳಲ್ಲಿನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾತ್ರ)
ಪ್ರತಿ ತಿಂಗಳಿಗೆ
1000/-
1000/-
5
ಸೈಕ್ಯಾಟ್ರಿಕ್ ಕ್ಲಿನಿಕಲ್ ವೆಚ್ಚ
ಕೋರ್ಸ್ ಅವಧಿಯಲ್ಲಿ ಒಂದು ಬಾರಿ ಮಾತ್ರ
2000/-
2000/-

10. ಹೊಲಿಗೆ ತರಬೇತಿ ಕೇಂದ್ರಗಳು :-
ಪ್ರಸ್ತುತ 02 ಹೊಲಿಗೆ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಮಹಿಳೆಯರಿಗೆ ತರಬೇತಿ ಅವಧಿಯಲ್ಲಿ ಮಾಸಿಕ ರೂ.300 ಶಿಷ್ಯವೇತನವನ್ನು ಹಾಗೂ ತರಬೇತಿ ಮುಗಿದ ಬಳಿಕ ನಡೆಸುವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರ ಹಾಗೂ ಅರ್ಹತಾ ಪತ್ರ ವಿತರಿಸಲಾಗುವುದು. ತರಬೇತಿ ಅವಧಿಯು 12 ತಿಂಗಳುಗಳಾಗಿರುತ್ತದೆ.

11.ಕಾನೂನು ಪದವೀಧರರಿಗೆ ತರಬೇತಿ:
ಕಾನೂನು ಪದವಿ ಪಡೆದ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ (ಪ್ರತಿ ವರ್ಷ ಗರಿಷ್ಠ 10 ಅಭ್ಯರ್ಥಿಗಳಂತೆ ಒಟ್ಟು 40 ಅಭ್ಯರ್ಥಿಗಳಿಗೆ) 4 ವರ್ಷಗಳ ಅವಧಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತಿದೆ.

12. ಹಿಂದುಳಿದ ವರ್ಗಗಳ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸಹಾಯಧನ:-
ಹಿಂದುಳಿದ ವರ್ಗಗಳ ಜಾತಿ/ಜನಾಂಗಗಳಿಗೆ ಸೇರಿದ ಸಂಘ ಸಂಸ್ಥೆಗಳಿಗೆ ಸಮುದಾಯ ಭವನ/ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಈ ಕೆಳಕಂಡಂತೆ ಅನುದಾನವನ್ನು ನೀಡಲಾಗುತ್ತದೆ.

ಕ್ರ.ಸಂ. ಸ್ಥಳ ಗರಿಷ್ಠ ಸಹಾಯಧನ
1
ಗ್ರಾಮ ಪಂಚಾಯಿತಿ/ಪಟ್ಟಣ ಪಂಚಾಯಿತಿ
ರೂ.10.00 ಲಕ್ಷ
2
ತಾಲ್ಲೂಕು ಕೇಂದ್ರ ಸ್ಥಾನ
ರೂ.25.00 ಲಕ್ಷ
3
ಜಿಲ್ಲಾ ಕೇಂದ್ರ ಸ್ಥಾನ
ರೂ.50.00 ಲಕ್ಷ

ಅಲೆಮಾರಿ/ಅರೆಅಲೆಮಾರಿ ಜನಾಂಗಗಳ ಸಮಗ್ರ ಅಭಿವೃಧ್ಧಿ ಯೋಜನೆ :-
ಅಲೆಮರಿ/ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

1. ಗೊಲ್ಲರಹಟ್ಟಿ ಅಭಿವೃದ್ಧಿ

2. ಮನೆ ನಿರ್ಮಾಣ (ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಗಳ ಮೂಲಕ)

3. ಮಹಿಳಾ ಸಮುದಾಯ ಭವನ

4. ವಿದ್ಯಾರ್ಥಿ ವೇತನ.

                                             

ಮಾಹಿತಿ ಹಕ್ಕು ಅಧಿನಿಯಮ 2005 ಕಾಲಂ4(1) ಎ ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ / ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ :

ಸಾರ್ವಜನಿಕ ಮಾಹಿತಿ ಅಧಿಕಾರಿ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ತುಮಕೂರು.

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ : ಕಛೇರಿ ಮೇಲ್ವಿಚಾರಕರು, ಜಿಲ್ಲಾ ಬಿಸಿಎಂ ಕಛೇರಿ.

ಕ್ರ.ಸಂ

ನೌಕರರ/ ಕಛೇರಿಯ ಹೆಸರು ಶ್ರೀ.ಶ್ರೀಮತಿ

ಹುದ್ದೆ

ಜಿಲ್ಲೆ/ತಾಲ್ಲೂಕು/ಹೋಬಳಿ/ಗ್ರಾ.ಪಂ

ದೂರವಾಣಿ ಸಂಖ್ಯೆ

1

ರಂಗೇಗೌಡ ಬಿ.

ಸಾರ್ವಜನಿಕ ಮಾಹಿತಿ ಅಧಿಕಾರಿ  ಹಾಗೂ ಜಿಲ್ಲಾ ಅಧಿಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತುಮಕೂರು.

ತುಮಕೂರು

0816-2251736

2

ಮೊಹಮದ್ ಸಿಯಾರ್

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ, ಹಾಗೂ  ಕಛೇರಿ ಮೇಲ್ವಿಚಾರಕರು ,

ತುಮಕೂರು

0816-2251736

3

ನರಸಪ್ಪ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ತುಮಕೂರು

0816-2251736

4

ಸೈಯಿದಾ ಮುಮ್ತಾಜ್ ಬಾನು

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಗುಬ್ಬಿ

08131-222456

5

ಪಾರ್ವತಮ್ಮ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಕುಣಿಗಲ್

08132-221722

6

ಕೆ.ಬಿ.ಕೆಂಚಳ್ಳಿ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ತುರುವೇಕೆರೆ

08139-287676

7

ಹನುಮಂತಯ್ಯ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ತಿಪಟೂರು

08134-252433

8

ಸೀತಾರಾಮೇಗೌಡ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಚಿಕ್ಕನಾಯಕನಹಳ್ಳಿ

08133-267033

9.

ಎಸ್.ಎನ್.ಗುಡಿ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಮಧುಗಿರಿ

08137-282032

10

ಜಯಸಿಂಹ ರಾವ್

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಕೊರಟಗೆರೆ

08138-233220

11

ಭಾನುಮತಿ

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಶಿರಾ

08135-275739

12

ಮುರಳೀಧರ್

ಸಾರ್ವಜನಿಕ ಮಾಹಿತಿ ಅಧಿಕಾರಿ,ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು

ಪಾವಗಡ

08136-244237

ಸಂಪರ್ಕಿಸಿ:

ಜಿಲ್ಲಾ ಅಧಿಕಾರಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಜಿಲ್ಲಾಧಿಕಾರಿ ಕಛೇರಿ ಹಿಂಭಾಗ,ಮಿನಿ ವಿಧಾನ ಸೌಧದ ಹತ್ತಿರ, ತುಮಕೂರು ಜಿಲ್ಲೆ, ತುಮಕೂರು. ತುಮಕೂರು.

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in