ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಸಾರ್ವಜನಿಕ ಶಿಕ್ಷಣ ಇಲಾಖೆ

ಶೈಕ್ಷಣಿಕ ಚಿತ್ರಣ

ತುಮಕೂರು ಕಂದಾಯ ಜಿಲ್ಲೆಯನ್ನು ಎರಡು ಶೈಕ್ಷಣಿಕ ಜಿಲ್ಲೆಗಳಾಗಿ ವಿಂಗಡಿಸಿದೆ. ಒಂದು ತುಮಕೂರು (ದಕ್ಷಿಣ) ಮತ್ತೊಂದು ತುಮಕೂರು (ಉತ್ತರ) ಮಧುಗಿರಿ ಶೈಕ್ಷಣಿಕ ಜಿಲ್ಲೆ. ತುಮಕೂರು (ದಕ್ಷಿಣ) ಜಿಲ್ಲೆಯು ಆರು ತಾಲ್ಲೂಕುಗಳನ್ನು ಒಳಗೊಂಡಿದೆ, ಅವುಗಳೆಂದರೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಮತ್ತು ತುರುವೇಕೆರೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಕೊರಟಗೆರೆ, ಮಧುಗಿರಿ, ಪಾವಗಡ ಮತ್ತು ಸಿರಾ ತಾಲ್ಲೂಕುಗಲನ್ನು ಒಳಗೊಂಡಿರುತ್ತದೆ.

ತುಮಕೂರು (ದಕ್ಷಿಣ) ಜಿಲ್ಲೆಯು 2085 ಸರ್ಕಾರಿ ಪ್ರಾಥಮಿಕ ಪಾಠ ಶಾ,ಲೆ 63 ಅನುದಾನಿತ ಪ್ರಾಥಮಿಕ ಪಾಠ ಶಾಲೆಗಳು, 267 ಅನುದಾನರಹಿತ ಪ್ರಾಥಮಿಕ ಪಾಠಶಾಲೆಗಳು ಹಾಗೂ 2 ಕೇಂದ್ರೀಯ ಶಾಲೆಗಳು, ಒಟ್ಟು ಪ್ರಾಥಮಿಕ ಶಾಲೆಗಳು 2417 , ಮತ್ತು 147 ಸರ್ಕಾರಿ ಪ್ರೌಢಶಾಲೆಗಳು, 205 ಅನುದಾನಿತ ಪ್ರೌಢಶಾಲೆಗಳು, 123 ಅನುದಾನರಹಿತ ಪ್ರೌಢಶಾಲೆಗಲು ಮತ್ತು ಕೇಂದ್ರೀಯ ಪ್ರೌಢಶಾಲೆಗಳನ್ನು ತುಮಕೂರು ದಕ್ಷಿಣ ಜಿಲ್ಲೆಯು ಒಳಗೊಂಡಿದೆ.

ತುಮಕೂರು (ಉತ್ತರ) ಜಿಲ್ಲೆಯಲ್ಲಿ 1291 ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳು, 9 ಅನುದಾನಿತ ಪ್ರಾಥಮಿಕ ಪಾಠ ಶಾಲೆಗಳು, 123 ಅನುದಾನರಹಿತ ಪ್ರಾಥಮಿಕ ಪಾಠ ಶಾಲೆಗಳನ್ನು ಒಳಗೊಂಡಿದೆ ಮತ್ತು 113 ಸರ್ಕಾರಿ ಪ್ರೌಢಶಾಲೆ, 109 ಅನುದಾನಿತ ಪ್ರೌಢಶಾಲೆಗಳು, 57 ಅನುದಾನರಹಿತ ಪ್ರೌಢಶಾಲೆಗಳನ್ನು ಒಳಗೊಂಡಿದೆ.

ಕಡ್ಡಾಯ ಶಿಕ್ಷಣ :

ಭಾರತ ಸಂವಿಧಾನ ಅನುಚ್ಛೇದ 30 ರ ಪ್ರಕಾರ ಶಿಕ್ಷಣವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಸರ್ಕಾರವು 6-16ನೇ ವಯೋಮಾನದವರೆವಿಗೂ ಅಂದರೆ 1-10ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣ ಮತ್ತು ಉಚಿತ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಸರ್ವ ಶಿಕ್ಷಣ ಅಭಿಯಾನದಡಿ ಹಾಗೂ ಪ್ರೌಢಶಿಕ್ಷಣವನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಕಡ್ಡಾಯ ಶಿಕ್ಷಣವನ್ನು ಒದಗಿಸಲಾಗುತ್ತಿದೆ.

ಸರ್ವ ಶಿಕ್ಷಣ ಅಭಿಯಾನ :

ಸರ್ವ ಶಿಕ್ಷಣ ಅಭಿಯಾನವು ಪ್ರಾಥಮಿಕ ಶಿಕ್ಷಣ ಸಾರ್ವತ್ರಿಕರಣವನ್ನು ರಾಜ್ಯಗಳ ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಧಿಸಲು ಇರುವ ಒಂದು ಐತಿಹಾಸಿಕ ಹೆಜ್ಜೆಯಾಗಿದೆ.

ಇಲಾಖೆಯ ಮತ್ತು ಯೋಜನೆಯ ಪರಿಚಯ ಮತ್ತು ಸ್ವರೂಪ .

ಇಲಾಖೆಯ ಮೂಲ ಉದ್ದೇಶ.

1. ಈ ಕಾರ್ಯಕ್ರಮವು 6 ರಿಂದ 14 ವರ್ಷದ ವಯೋಮಾನದ ಎಲ್ಲಾ ಮಕ್ಕಳು ಶಾಲೆಯಲ್ಲಿರುವಂತೆ ಹಾಗೂ ಪ್ರಾಥಮಿಕ ಹಂತದ ಶಿಕ್ಷಣವನ್ನು ಪೂರ್ಣಗೊಳಿಸುವ ಹಂತದ ಜವಾಬ್ದಾರಿ ಹೊಂದಿರುತ್ತದೆ.

2. ಜೀವನಕ್ಕೆ ಉಪಯುಕ್ತವಾದ ಗುಣಾತ್ಮಕ ಪ್ರಾಥಮಿಕ ಶಿಕ್ಷಣ ನೀಡಲು ಉದ್ದೇಶಿಸಿದೆ ಹಾಗೂ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಆಶಯ ಹೊಂದಿರುತ್ತದೆ.

3. ಸಾಮಾಜಿಕ, ಲಿಂಗ ಮತ್ತು ಪ್ರಾದೇಶಿಕ ತಾರತಮ್ಯಗಳನ್ನು ತೊಡೆದು ಹಾಕುವುದು.

4. ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಕಲಿಕೆಯನ್ನು ಸಾರ್ವತ್ರಿಕರಣಗೊಳಿಸುವುದು.

5. ಶಿಕ್ಷಕರಿಗೆ ಬೋಧನಾ ಕೌಶಲ್ಯವನ್ನು ಹೆಚ್ಚಿಸುವುದು.

6. ಪ್ರಾಥಮಿಕ ಶಾಲೆಗಳ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯ, ಶಾಲಾಭಿವೃದ್ಧಿ ಸಮಿತಿಗಳು ಭಾಗವಹಿಸುವುದು.

ಪ್ರಾಥಮಿಕ ಶಿಕ್ಷಣ ಸಾರ್ವತ್ರಿಕರಣಕ್ಕೆ ಸ್ಪಷ್ಟ ಕಾಲಮಿತಿಯುಳ್ಳ ಕಾರ್ಯಕ್ರಮವಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಯೋಜನೆ ಮತ್ತು ಕಾರ್ಯಕ್ರಮದ ಪ್ರಮುಖಾಂಶಗಳು.

ಹೊಸ ಶಾಲೆಗಳು –
1. 1 ಕಿ.ಮೀ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚಿನ 6-14 ವರ್ಷದ ವಯೋಮಾನದ ಮಕ್ಕಳಿದ್ದಲ್ಲಿ ಶಾಲೆ ಪ್ರಾರಂಭಿಸಲಾಗುತ್ತದೆ.

2. ಕಿರಿಯ ಪ್ರಾಥಮಿಕ ಶಾಲೆಗಳ ಉನ್ನತ್ತೀಕರಣ: ಮೂರು ಕಿಲೋ ಮೀಟರ್ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಹಿರಿಯ ಪ್ರಾಥಮಿಕ ಶಾಲೆಯು ಲಭ್ಯವಿಲ್ಲದಿದ್ದಲ್ಲಿ ಅಂತಹ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ 6 ರಿಂದ 8ನೇ ತರಗತಿಗಳಿಗೆ ಉನ್ನತೀಕರಿಸಲಾಗುವುದು.

3. ಶಿಕ್ಷಕರ ಅನುದಾನ : ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಕ್ಕಳ ಕಲಿಕೆಗೆ ಪೂರಕವಾದ ಕಲಿಕೋಪಕರಣಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ತಯಾರಿಸಿ ಪ್ರತ್ಯಕ್ಷಿಕೆಯ ಮೂಲಕ ಬೋಧನೆ ಮಾಡಲು ಅನುದಾನ ನೀಡಲಾಗುವುದು.

ಸೇವಾನಿರತ ಶಿಕ್ಷಕರ ತರಬೇತಿಗಳು –
ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೆ 10 ದಿನದ ಸೇವಾ ನಿರತ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಧನಾತ್ಮಕ ಚಿಂತನೆಯ ಬಗ್ಗೆ 3 ದಿನಗಳ ವಸತಿ ಸಹಿತ ತರಬೇತಿ, 3 ದಿನಗಳ ನಲಿಕಲಿ ತರಬೇತಿ, 4 ದಿನಗಳ ಆಂಗ್ಲಭಾಷಾ ತರಬೇತಿಯನ್ನು, ಮುಖ್ಯ ಶಿಕ್ಷಕರಿಗೆ ತಾಲ್ಲೂಕು ಹಂತದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ನೀಡಲಾಗುತ್ತಿದೆ. ಈ ತರಬೇತಿಗಳು ಶಿಕ್ಷಕರಿಗೆ ವಿಷಯ ಸಂಪದೀಕರಣ ಹಾಗೂ ಉತ್ತಮ ಪಾಠ ಬೊಧನೆಗೆ ಪೂರಕವಾಗಿವೆ.

ಚಿಣ್ಣರ ಅಂಗಳ –
ಶಾಲೆಯಿಂದ ಹೊರಗುಳಿದ, ವಯೋಮಿತಿ ಮೀರಿದ ಹಾಗೂ ಶಾಲೆಗೆ ದಾಖಲಾಗದೇ ಇರುವ ಮಕ್ಕಳಿಗೆ 60 ದಿನಗಳ ಸೇತುಬಂಧ ಕಾರ್ಯಕ್ರಮವನ್ನು (ಚಿಣ್ಣರ ಅಂಗಳ) ನಡೆಸಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಇದು ವಸತಿಸಹಿತ ಕಾರ್ಯಗಾರವಾಗಿದ್ದು, 50 ಮಕ್ಕಳಿಗಿಂತ ಕಡಿಮೆಯಿದ್ದಾಗಲೂ ಸಹ ನಡೆಸಬಹುದಾಗಿದೆ.

ಮದರಸ/ಮುಕ್ತಾಬ್ –
6-14 ವರ್ಷ ವಯೋಮಾನದ ಶಾಲೆಯಿಂದ ಹೊರಗುಳಿದ ಮುಸ್ಲಿಂ ಮಕ್ಕಳಿಗೆ ಮದರಸಗಳ ಮೂಲಕ ಧಾರ್ಮಿಕ ಶಿಕ್ಷಣವನ್ನು ನೀಡುವುದು, ಇಂತಹ ಮಕ್ಕಳಿಗೆ ರಾಜ್ಯ ಪಠ್ಯಕ್ರಮವನ್ನು ಬೋಧಿಸಿ ನಂತರ ಮುಖ್ಯವಾಹಿನಿಗೆ ತರಲಾಗುವುದು. ಇದಕ್ಕೆ ಪ್ರತಿ ಮಗುವಿಗೆ 1 ವರ್ಷಕ್ಕೆ ಘಟಕ ವೆಚ್ಚ 3000/- ಇರುತ್ತದೆ.

ಸಾರಿಗೆ ವೆಚ್ಚ –
ಎಲ್ಲಾ ಮಕ್ಕಳಿಗೂ 1 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಿಕ್ಷಣ, 3 ಕಿ.ಮೀ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ನೀಡಬೇಕು. ಇಲ್ಲವಾದಲ್ಲಿ ಹತ್ತಿರದ ಪ್ರಾಥಮಿಕ ಶಾಲೆಗೆ ಹಾಜರಾಗುವ ಪ್ರತಿ ಮಗುವಿಗೆ ರೂ.300/- ರಂತೆ 10 ತಿಂಗಳಿಗೆ ರೂ.3000/-ಗಳ ಸಾರಿಗೆ ಭತ್ಯೆಯನ್ನು ನೀಡಲಾಗುವುದು.

ಉಚಿತ ಪಠ್ಯ ಪುಸ್ತಕ –
ಪ್ರಾಥಮಿಕ ಶಾಲೆಯ 1 ರಿಂದ 8ನೇ ತರಗತಿಯ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಅಭ್ಯಾಸಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ಒದಗಿಸಲಾಗುವುದು.

ಅಭ್ಯಾಸ ಪುಸ್ತಕ –
1 ರಿಂದ 3ನೇ ತರಗತಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನಲಿ-ಕಲಿಗೆ ಪೂರಕವಾಗಿ ಓದುವ ಹಾಳೆ, ಅಭ್ಯಾಸ ಪುಸ್ತಕ, ಪ್ರಗತಿ ನೋಟ, ನಲಿ-ಕಲಿ ಕಾರ್ಡುಗಳನ್ನು ರಾಜ್ಯಮಟ್ಟದಲ್ಲಿ ಮುದ್ರಿಸಿ ಎಲ್ಲಾ ಶಾಲೆಗಳಿಗೆ ವಿತರಿಸಲಾಗುವುದು.

ಸಮನ್ವಯ ಶಿಕ್ಷಣ –
6-14 ವರ್ಷ ವಯೋಮಾನದ ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ಸಮೀಕ್ಷೆಯಲ್ಲಿ ಗುರುತಿಸಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
1) ವೈದ್ಯಕೀಯ ಶಿಬಿರಗಳು
2) ಅರ್ಹ ಮಕ್ಕಳಿಗೆ ಉಚಿತ ಸಾಧನಾ-ಸಲಕರಣೆಗಳನ್ನು ವಿತರಿಸುವುದು.
3) ಬಹುಅಂಗವಿಕಲ ಮಕ್ಕಳಿಗಾಗಿ ಮನೆಯಲ್ಲಿಯೇ ಸ್ವಯಂ ಸೇವಕರ ಮೂಲಕ ಜೀವನ ಕೌಶಲಗಳ ತರಬೇತಿ (ಗೃಹಾಧಾರಿತ ಶಿಕ್ಷಣ)
4)ವಿಕಲಚೇತನ ಮಕ್ಕಳ ಪೋಷಕರಿಗೆ ಒಂದು ದಿನದ ಅರಿವು ತರಬೇತಿ
5) ಕರೆಕ್ಟೀವ್ ಸರ್ಜರಿ
6) ಅಂಧ ಮಕ್ಕಳಿಗೆ ಬ್ರೈಲ್ ಕಿಟ್ ವಿತರಣೆ
7) ತಾಲ್ಲೂಕು ಹಂತದ ಸಂಪನ್ಮೂಲ ಕೊಠಡಿಗೆ ಹಾಜರಾಗುವ ವಿಕಲಚೇತನ ಮಕ್ಕಳಿಗೆ ಸಾರಿಗೆ ಭತ್ಯೆ.
8) ಬೆಂಗಾವಲು ಭತ್ಯೆ,
9) ಸಮನ್ವಯ ಶಿಕ್ಷಣ ಅನುಷ್ಠಾನಕ್ಕೆ ವಿಶೇಷ ಶಿಕ್ಷಕರ ನಿಯೋಜನೆ
10) ವಿಕಲಚೇತನ ಮಕ್ಕಳಿಗೆ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ.
11) ತಾಲ್ಲೂಕು ಕೇಂದ್ರಗಳಲ್ಲಿ ವಿಶ್ವ ಅಂಗವಿಕಲ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುವುದು.

ಗ್ರಂಥಾಲಯ –
ಎಲ್ಲಾ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಓದುವ ಅಭ್ಯಾಸ ರೂಢಿಸಲು ಹಿನ್ನಲೆಯಲ್ಲಿ ಓದುವ ಮೂಲೆ ಚಟುವಟಿಕೆಯಡಿ ಕಾರ್ಯಕ್ರಮ ರೂಪಿಸಲಾಗಿದೆ.

ಹೆಚ್ಚುವರಿ ತರಗತಿ ಕೊಠಡಿ –
ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಮಾಡಲು ಅವಕಾಶವಿದೆ.

ಹೆಣ್ಣು ಮಕ್ಕಳ ಶೌಚಾಲಯ –
ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರತ್ಯೇಕ ಹೆಣ್ಣು ಮಕ್ಳಳ ಶೌಚಾಲಯ ನಿರ್ಮಾಣ ಮಾಡಲು ಅವಕಾಶವಿದೆ.

ಮುಖ್ಯ ಶಿಕ್ಷಕರ ಕೊಠಡಿ –
ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಕೊಠಡಯನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುವುದು.

ಅಗ್ನಿ ನಂಧಕ ಉಪಕರಣ –
ಎಲ್ಲಾ ಸರ್ಕಾರಿ ಶಾಲೆಗಳಲ್ಲಿಮಧ್ಯಾಹ್ನ ಉಪಹಾರ ಯೋಜನೆ ವ್ಯವಸ್ಥೆ ಇರುವುದರಿಂದ ಅಗ್ನಿಯ ಆಕಸ್ಮಿಕ ಅವಗಡಗಳನ್ನು ತಪ್ಪಿಸಲು ಎಲ್ಲಾ ಶಾಲೆಗಳಿಗೆ ಅಗ್ನಿ ನಂಧಕ ಯಂತ್ರಗಳನ್ನು ಉಪಯೋಗಿಸಲು ಅನುದಾನ ನೀಡಲಾಗುವುದು.

ದೊಡ್ಡ ಪ್ರಮಾಣದ ದುರಸ್ಥಿ –
ಹತ್ತು ವರ್ಷಕ್ಕಿಂತ ಹಳೆಯದಾದ ಶಾಲಾ ಕೊಠಡಿಗಳ ದೊಡ್ಡ ಪ್ರಮಾಣದ ದುರಸ್ಥಿಗೆ ಅವಕಾಶ ಕಲ್ಪಿಸಿದೆ.

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿರ್ವಹಣಾನುದಾನ –
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 3ಕ್ಕಿಂತ ಕಡಿಮೆ ಶಾಲಾ ಕೊಠಡಿಗಳಿರುವ ಶಾಲೆಗಳಿಗೆ ರೂ.5000/-, ಮತ್ತು 3ಕ್ಕಿಂತ ಹೆಚ್ಚಿನ ಕೊಠಡಿಗಳಿಗೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.7000/- ಗಳ ನಿರ್ವಹಣಾನುದಾನವನ್ನು ಶಾಲಾ ಎಸ್.ಡಿ.ಎಂ.ಸಿ. ಸಮಿತಿಗಳ ಖಾತೆಗೆ ನೇರವಾಗಿ ರಾಜ್ಯ ಕಛೇರಿಯಿಂದ ಬಿಡುಗಡೆ ಮಾಡಲಾಗುತ್ತದೆ. ಈ ಅನುದಾನದಲ್ಲಿ ಸಣ್ಣ ಪ್ರಮಾಣದ ದುರಸ್ಥಿ, ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯಗಳ ನಿರ್ವಹಣೆ ಮಾಡಲಾಗುತ್ತದೆ.

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ –
ಸರ್ಕಾರಿ ಹಾಗೂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಿಗೆ  ರೂ.5000 ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.12000/- ಮತ್ತು ಹಿರಿಯ ಪ್ರಾಥಮಿಕ 6 ಮತ್ತು 7ನೇ ತರಗತಿ ಶಾಲೆಗಳಿಗೆ ರೂ.7000/-ಗಳ ಶಾಲಾನುದಾನವನ್ನ ಶಾಲಾ ಎಸ್.ಡಿ.ಎಂ.ಸಿ. ಸಮಿತಿಗಳ ಖಾತಗೆ ನೇರವಾಗ ರಾಜ್ಯ ಕಛೇರಿಯಿಂದ ಬಿಡುಗಡೆ ಮಾಡಲಾಗುತ್ತದ. ಈ ಅನುದಾನದಲ್ಲಿ ಶಾಲಾ ಕಛೇರಿಗೆ ಲೇಖನ ಸಾಮಗ್ರಿಗಳು ಮತ್ತು ಅತೀ ಮುಖ್ಯವಾದ ಶಾಲಾ ಕಟ್ಟಡದ ಸುಣ್ಣ -ಬಣ್ಣ ಮಾಡಿಸಲು ಉಪಯೋಗಿಸಲಾಗುತ್ತದೆ.

ಸಂಶೋಧನೆ, ಮೌಲ್ಯಮಾಪನ, ಮೇಲುಸ್ತುವಾರಿ ಮತ್ತು ಮೇಲ್ವಿಚಾರಣೆ –
ಈ ಚಟುವಟಿಕೆಯಡಿ ಕ್ಲಸ್ಟರ್ ಹಂತದಲ್ಲಿ ಕಲಿಕೋಪಕರಣಗಳ ಮಾದರಿ ಜಾತ್ರೆ, ಮೆಟ್ರಿಕ್ ಮೇಳ ಮತ್ತು ವಿಚಾರ್ ಸಮಕೀರ್ಣ, ಸಹಪಠ್ಯ ಚಟುವಟಿಕೆಗಳು, ಚರ್ಚಾಸ್ಪರ್ಧೆಗಳನ್ನು ಹೋಬಳಿ ಹಂತದಲ್ಲಿ, ಕಾರ್ಯಾಗಾರ ಮತ್ತು ಸಭೆಗಳನ್ನು ಜಿಲ್ಲಾ ಹಂತದಲ್ಲಿ, ಸಂಶೋಧನೆ, ಕ್ರಿಯಾ ಸಂಶೋಧನೆಗಲ ಮೌಲ್ಯಮಾಪನ, ಡಯಟ್ ವತಿಯಿಂದ ಜ್ಞಾನಗಂಗಾ ಸಾಹಿತ್ಯ, ಪ್ರಗತಿ ಪತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಲು, ಪ್ರತಿಭಾ ಕಾರಂಜಿ ಮತ್ತು ಶಿಕ್ಷಣ ವಾರ್ತೆಗಳನ್ನು ರಾಜ್ಯ ಹಂತದಲ್ಲಿ ನಿರ್ವಹಣೆ ಮಾಡಲಾಗುತ್ತದೆ.

ಕಂಪ್ಯೂಟರ್ ಆಧಾರಿತ ಕಲಿಕಾ ಶಿಕ್ಷಣ –
ಪ್ರತಿ ವರ್ಷ 10 ಶಾಲೆಗಳಿಗೆ ಸಿ.ಎ.ಎಲ್.ಸಿ. ಚಟುವಟಿಕೆಯಡಿ 5 ಗಣಕಯಂತ್ರಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಳವಡಿಸಲಾಗುವುದು. ಮಕ್ಕಳ ಕಲಿಕೆಗೆ ಪೂರಕವಾಗಿ ತರಗತಿವಾರು, ವಿಷಯವಾರು, ಸಿ.ಡಿ.ಗಳನ್ನು ಸರಬರಾಜು ಮಾಡಲಾಗುತ್ತದೆ. ಇವುಗಳ ಸಹಾಯದಿಂದ ಸ್ವಯಂ ಕಲಿಕೆ ಹಾಗೂ ಗರಿಷ್ಠ ಮಟ್ಟದ ಕಲಿಕೆಯನ್ನು ಹೊಂದಬಹುದಾಗಿದೆ.

ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣ, ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಈ ಕೆಳಕಂಡ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

1) ಮುಸ್ಲಿಂ ಮಕ್ಕಳ ಪೋಷಕರಿಗೆ ಶಿಕ್ಷಣದ ಅರಿವಿನ ಕುರಿತು ಜಾಗೃತಿ ಕಾರ್ಯಗಾರ,
2) ಮುಸ್ಲಿಂ ಮುಖಂಡರುಗಳಿಗೆ ಜಾಗೃತಿ ಶಿಬಿರಗಳ ಆಯೋಜನೆ.
3) 7ನೇತರಗತಿ ಮಕ್ಕಳಿಗೆ ವಿಚಾರ ಸಂಕೀರ್ಣ
4) ಸಾಕ್ಷರತಾ ಮತ್ತು ವಿಜ್ಞಾನ ಮೇಳಗಳನ್ನು ತಾಲ್ಲೂಕು ಹಂತದಲ್ಲಿ ಆಯೋಜನೆ.
5) ಕ್ಷೇತ್ರ ಅಧ್ಯಯನ.
6) ಶಿಕ್ಷಕರಿಗೆ ವಿಚಾರ ಸಂಕೀರ್ಣ
7) ಉರ್ದು ಗ್ರಂಥಾಲಯ ಪುಸ್ತಕಗಳು

8) ನಗರ ಅವಕಾಶ ವಂಚಿತ ಮಕ್ಕಳ ಶಿಕ್ಷಣ

9) ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ತರಬೇತಿ.

ಮೂರು ದಿನಗಳ ವಸತಿ ಸಹಿತ ತರಬೇತಿಯನ್ನು ಶಾಲಾಭಿವೃದ್ಧಿ ಮತ್ತುಮೇಲುಸ್ತುವಾರಿ ಸಮಿತಿಗಳ ಸದಸ್ಯರಿಗೆ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಬಗ್ಗೆ ಮತ್ತು ಶಾಲೆಗಳ ನಿರ್ವಹಣೆ ಬಗ್ಗೆ ತರಬೇತಿಗಳು.

ಕೆ.ಜಿ.ಬಿ.ವಿ.
ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ : ಶಾಲೆಗೆ ದಾಖಲಾಗಿ ಶಾಲೆಯಿಂದ ಹೊರಗುಳಿದ, ಶಾಲೆಗೆ ಸೇರದೆ ಇರುವ, ಅಲ್ಪಸಂಖ್ಯಾತ ಮತ್ತು ಬಡತನ ರೇಖೆಗಿಂತ ಕೆಳಗಿರುವ ಹೆಣ್ಣುಮಮಕ್ಕಳಿಗೆ ವಸತಿ ಸಹಿತ ಶಾಲೆಯನ್ನು ಪಾವಗಡದಲ್ಲಿ ತೆರೆದು ನಡೆಸಲಾಗುತ್ತಿದೆ. ಈ ಶಾಲೆಯಲ್ಲಿ ಗರಿಷ್ಠ 150 ವಿದ್ಯಾರ್ಥಿಗಳಿಗೆ 06 ಮತ್ತು 08ನೇ ಗತಗತಿಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಪಠ್ಯ ಬೋಧನೆಯೊಂದಿಗೆ ಕೌಶಲ್ಯ ತರಬೇತಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ, ಆರೋಗ್ಯ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚನ ಅವಕಾಶ ಕಲ್ಪಿಸಿದೆ.

 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ :
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮವು ಪ್ರೌಢಶಾಲಾ ಶಿಕ್ಷಣ ಸಾರ್ವತ್ರಿಕರಣದ ಹಿನ್ನೆಲೆಯಲ್ಲಿ 14 ರಿಂದ 16 ವಯೋಮಾನದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪ್ರೌಢಶಾಲಾ ಶಿಕ್ಷಣ ಲಭ್ಯವಾಗುವಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವ ಗುರಿಯನ್ನು ಹೊಂದಿ 2008-09ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.

ಗುರಿಗಳು :

ಉದ್ದೇಶಗಳು :

 1. ಶಾಲಾ ಅನುದಾ ನ: ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ಶಾಲಾ ಅನುದಾನ, ಪ್ರತಿ ಶಾಲೆಗೆ ರೂ.50000/-
 2. ಸಣ್ಣ ಪ್ರಮಾಣದ ದುರಸ್ಥಿ ಅನುದಾನ : ಆಯ್ದ ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರತಿ ಶಾಲೆಗೆ ರೂ.25000/- (2013-14ನೇ ಸಾಲಿನಿಂದ ಮಂಜೂರಾಗಿರುವುದಿಲ್ಲ)
 3. 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಪ್ರವಾಸದ ಅನುದಾನ : ಪ್ರತಿ ವಿದ್ಯಾರ್ಥಿಗೆ ರೂ.200/- (2013-14ನೇ ಸಾಲಿನಿಂದ ಮಂಜೂರಾಗಿರುವುದಿಲ್ಲ)
 4. ಮುಖ್ಯ ಶಿಕ್ಷಕರಿಗೆ 3 ದಿನಗಳ ಅಂತರರಾಜ್ಯ ಶೈಕ್ಷಣಿಕ ಪ್ರವಾಸ : ಪ್ರತಿ ಮುಖ್ಯ ಶಿಕ್ಷಕರಿಗೆ ರೂ.1500/- ಗಳು (2011-12ನೇ ಸಾಲಿನಲ್ಲಿ ಮಾತ್ರ ಬಿಡುಗಡೆಯಾಗಿರುತ್ತದೆ)
 5. ಇಕೋ ಕ್ಲಬ್ ಅನುದಾನ : ಪರಿಸರ ಜಾಗೃತಿಗಾಗಿ 250 ಪ್ರೌಢಶಾಲೆಗಳಿಗೆ ಇಕೋ ಕ್ಲಬ್ ಅನುದಾನ , ಎಲ್ಲಾ ಸರ್ಕಾರಿ ಹಾಗೂ ಆಯ್ದ ಅನುದಾನಿತ ಪ್ರೌಢಶಾಲೆಗಳಿಗೆ ತಲಾ ರೂ.2500/- ಗಳು (ರಾಷ್ಟ್ರೀಯ ಹಸಿರುಪಡೆ ವತಿಯಿಂದ)
 6. 9ನೇ ತರಗತಿ ಮಕ್ಕಳಿಗೆ ವಿಶೇಷ ಕಲಿಕಾ ಬೋಧನೆ ಅನುದಾನ : ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆಗೆ ನಿರ್ವಹಣಾ ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಗೆ ರೂ.200/- ರಂತೆ
 7. ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುವ ಮೂಲಕ ಸ್ವಯಂ ರಕ್ಷಣಾ ಸಾಮರ್ಥ್ಯ ಬೆಳೆಸುವುದು.
 8. ಐ,ಇ.ಡಿ.ಎಸ್.ಎಸ್ (ಸಮನ್ವಯ ಶಿಕ್ಷಣ) : 2013-14ನೇ ಸಾಲಿನಿಂದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿನ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣೆ, ಸಲಕರಣೆಗಳ ವಿತರಣೆ, ವಿಶೇಷ ಶಿಕ್ಷಕರಿಂದ ಬೋಧನೆಗೆ ವ್ಯವಸ್ಥೆ.
 9. ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು : 9ನೇ ತರಗತಿಯಿಂದ ಶಾಲೆಗಳಲ್ಲಿ ವೃತ್ತಿ ಕೌಶಲ್ಯ ತರಬೇತಿ ಶಿಕ್ಷಣವನ್ನು ನೀಡುವುದು. ಈ ಯೋಜನೆಗೆ ಜಿಲ್ಲೆಯ 3 ಶಾಲೆಗಳಲ್ಲಿ ಮಾತ್ರ ಅನುಷ್ಠಾನಗೊಂಡಿದೆ.
 10. ಕೇಂದ್ರ ಪುರಸ್ಕೃತ ಹೆಣ್ಣುಮಕ್ಕಳ ಪ್ರೋತ್ಸಾಹ ಧನ ಯೋಜನೆ : 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ/ಕೆ.ಜಿ.ಬಿ.ವಿ. ಯ ಪ್ರತಿ ವಿದ್ಯಾರ್ಥಿನಿಗೆ ರೂ.3000/- ಗಳ ಪ್ರೋತ್ಸಾಹ ಧನ ನೇರವಾಗಿ ವಿದ್ಯಾರ್ಥಿನಿಯರ ಖಾತೆಗೆ ಕೇಂದ್ರದಿಂದ ಬಿಡುಗಡೆ ಮಾಡಲಾಗುವುದು.
 11. ತರಬೇತಿಗಳು : ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಎಲ್ಲಾ ವಿಷಯಗಳ ಶಿಕ್ಷಕರುಗಳಿಗೆ ವಿಷಯ ಸಂಪಧೀಕರಣ ಹಾಗೂ ವಿವಿಧ ತರಬೇತಿಗಳು, ಮುಖ್ಯ ಶಿಕ್ಷಕರುಗಳಿಗೆ ಆಡಳಿತಾತ್ಮಕ ತರಬೇತಿ, ನೂತನ ಶಿಕ್ಷಕರುಗಳಿಗೆ ಬುನಾದಿ ತರಬೇತಿ, ಈ ಎಲ್ಲಾ ತರಬೇತಿಗಳನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ನೀಡಲಾಗುತ್ತಿದೆ.
 12. ಸಿವಿಲ್ ಕಾಮಗಾರಿಗಳು : ಪ್ರೌಢಶಾಲೆಗಳ ಬಲವರ್ಧನೆ ಅಡಿಯಲ್ಲಿ 2009-10, 2010-11ನೇ ಸಾಲಿನಲ್ಲಿ ಮಂಜೂರಾದ 48 ಶಾಲೆಗಳಿಗೆ, 2013-14ನೇ ಸಾಲಿನಲ್ಲಿ ಕಾಮಗಾರಿ ಪ್ರಾರಂಭಗೊಂಡು ಪ್ರಗತಿಯಲ್ಲಿದೆ. 19 ಪೂರ್ಣ, 15 ಅಂತಿಮ ಹಂತ, 11 ಪ್ರಗತಿ ಹಂತದಲ್ಲಿದ್ದು, 3 ಶಾಲೆಗಳ ಕಾಮಗಾರಿ ಪ್ರಾರಂಭವಾಗಬೇಕಿದೆ.

ಶಿಕ್ಷಣ ಇಲಾಖೆಯಿಂದ ಕಡ್ಡಾಯ ಶಿಕ್ಷಣ ಮತ್ತು ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ. 6-16 ವಯೋಮಾನದ ಎಲ್ಲಾ ಮಕ್ಕಳು ಶಾಲೆಯಲ್ಲಿರುವಂತೆ ಹಾಗೂ ಪ್ರಾಥಮಿಕ ಹಂತದ ಶಿಕ್ಷಣವನ್ನು ಪೂರ್ಣಗೊಳಿಸುವ ಹಂತದಲ್ಲಿ ಜವಾಬ್ದಾರಿ ಹೊಂದಿರುತ್ತದೆ. 1 - 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಒದಗಿಸಲಾಗಿದೆ.

ಉಚಿತ ಪಠ್ಯ ಪುಸ್ತಕ :
ಪ್ರಾಥಮಿಕ ಶಾಲೆಯ 1 ರಿಂದ 10ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಅಭ್ಯಾಸಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸಿದೆ.

ಇಲಾಖೆಯ ಉದ್ದೇಶಗಳು ಮತ್ತು ಗುರಿಗಳು (ಕಾಣ್ಕೆ).

ಇಲಾಖೆಯ ಶಾಲೆಗಳ ಅಂಕಿ-ಅಂಶ :.

ತುಮಕೂರು ಜಿಲ್ಲೆಯ ತಾಲ್ಲೂಕುವಾರು/ವರ್ಗವಾರು ಪ್ರಾಥಮಿಕ ಶಾಲೆಗಳು (ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು) .

ಕ್ರ ಸಂ

ತಾಲ್ಲೂಕು ಹೆಸರು

ಸರ್ಕಾರಿ ಶಾಲೆಗಳು

ಅನುದಾನಿತ ಶಾಲೆಗಳು

ಅನುದಾನ ರಹಿತ ಶಾಲೆಗಳು

ಕೇಂದ್ರ ಸರ್ಕಾರ ಶಾಲೆಗಳು

ಒಟ್ಟು ಶಾಲೆಗಳ ಸಂಖ್ಯೆ

ಶಿಕ್ಷಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆ

ಸ್ಥಳೀಯ ಸಂಸ್ಥೆ

ಒಟ್ಟು

1

ಚಿ.ನಾ.ಹಳ್ಳಿ

305

3

0

308

10

23

0

341

2

ಗುಬ್ಬಿ

389

3

0

392

8

21

0

421

3

ಕುಣಿಗಲ್

354

3

0

357

13

30

0

400

4

ತಿಪಟೂರು

267

1

0

268

7

35

0

310

5

ತುಮಕೂರು

481

4

0

485

19

139

2

645

6

ತುರುವೇಕೆರೆ

272

3

0

275

6

19

0

300

7

ಕೊರಟಗೆರೆ

262

5

0

267

3

18

0

288

8

ಮಧುಗಿರಿ

349

4

0

353

1

31

0

385

9

ಪಾವಗಡ

233

6

0

239

2

33

0

274

10

ಶಿರಾ

424

8

0

432

3

41

0

476

ಒಟ್ಟು

3336

40

0

3376

72

390

2

3840

ತುಮಕೂರು ಜಿಲ್ಲೆಯ ತಾಲ್ಲೂಕುವಾರು/ವರ್ಗವಾರು ಪ್ರೌಢಶಾಲೆಗಳು

ಕ್ರ ಸಂ

ತಾಲ್ಲೂಕು ಹೆಸರು

ಸರ್ಕಾರಿ ಶಾಲೆಗಳು

ಅನುದಾನಿತ ಶಾಲೆಗಳು

ಅನುದಾನ ರಹಿತ ಶಾಲೆಗಳು

ಕೇಂದ್ರ ಸರ್ಕಾರ ಶಾಲೆಗಳು

ಒಟ್ಟು ಶಾಲೆಗಳ ಸಂಖ್ಯೆ

ಶಿಕ್ಷಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆ

ಸ್ಥಳೀಯ ಸಂಸ್ಥೆ

ಒಟ್ಟು

1

ಚಿ.ನಾ.ಹಳ್ಳಿ

19
2
0
21
32
10
0

63

2

ಗುಬ್ಬಿ

25
3
0
28
30
10
0

68

3

ಕುಣಿಗಲ್

30
3
0
33
25
10
0

68

4

ತಿಪಟೂರು

17
1
0
18
29
7
0

54

5

ತುಮಕೂರು

25
3
0
28
63
73
2

166

6

ತುರುವೇಕೆರೆ

17
2
0
19
26
13
0

58

7

ಕೊರಟಗೆರೆ

19
4
0
23
16
7
0

46

8

ಮಧುಗಿರಿ

27
4
0
31
30
11
0

72

9

ಪಾವಗಡ

21
5
0
26
30
19
0

75

10

ಶಿರಾ

28
5
0
33
33
20
0

86

ಒಟ್ಟು

228
32
0
260
314
180
2
756

ಇಲಾಖೆಯಲ್ಲಿರುವ ಅಧಿಕಾರಿ/ಸಿಬ್ಬಂದಿ ವರ್ಗ :.

ಉಪನಿರ್ದೇಶಕರು, ಉಪಯೋಜನಾ ಸಮನ್ವಯಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಅಧೀಕ್ಷಕರು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು ಮತ್ತು ಗ್ರೂಪ್ -ಡಿ ನೌಕರರು, ಜಿಲ್ಲಾ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ತಾಲ್ಲೂಕು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯೋಜನೆಯ ಉತ್ತಮ ಸಾಧನೆ :
6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದು ಪ್ರಮುಖ ಯೋಜನೆಯ ಉದ್ದೇಶವಾಗಿರುತ್ತದೆ. ಈ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಯೋಜಿತ ಕಾಲಮಿತಿ ಯೋಜನೆಯಾಗಿದ್ದು, ಇದರೊಂದಿಗೆ 6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಮಾಹಿತಿ ಹಕ್ಕು ಅಧಿನಿಯಮ :

ಮಾಹಿತಿ ಹಕ್ಕು ಅಧಿನಿಯಮ 2005 ರಡಿ ನೇಮಕ ಮಾಡಲಾದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿವರ

ಕ್ರ ಸಂ

ಸಾರ್ವಜನಿಕ ಪ್ರಾಧಿಕಾರಿ

ಸಾರ್ವಜನಿಕ ಮಾಹಿತಿ ಅಧಿಕಾರಿ (2005 ರ ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 5(1) ರಡಿಯಲ್ಲಿ)

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (2005 ರ ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 5(1) ರಡಿಯಲ್ಲಿ)

ಪ್ರಥಮ ಮೇಲ್ಮನವಿ ಅಧಿಕಾರಿ (2005 ರ ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 5(1) ರಡಿಯಲ್ಲಿ)

1

ಜಿಲ್ಲಾ ಅನುಷ್ಠಾನಾಧಿಕಾರಿ,ಸರ್ವ ಶಿಕ್ಷಣ ಅಭಿಯಾನ, ಉಪನಿರ್ದೇಶಕರ ಕಛೇರಿ (ಆಡಳಿತ) ಸಂಬಂಧಿಸಿದ ಜಿಲ್ಲೆ

ಸರ್ವ ಶಿಕ್ಷಣ ಅಭಿಯಾನ, ಉಪಯೋಜನಾ ಸಮನ್ವಯಾಧಿಕಾರಿ
ಅಧೀಕ್ಷಕರು,
ಉಪನಿರ್ದೇಶಕರು (ಆಡಳಿತ)

 

ತುಮಕೂರು (ದ) ಜಿಲ್ಲೆಯ ಜಿಲ್ಲಾ ಕಛೇರಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ, ಸಿಬ್ಬಂದಿಗಳ ವಿವರ

ಕ್ರ ಸಂ

ಅಧಿಕಾರಿಗಳ ಹೆಸರು

ಪದನಾಮ

ಜಿಲ್ಲಾ/ತಾಲ್ಲೂಕು ಹೋಬಳಿ/ಗ್ರಾ.ಪಂ

ದೂರವಾಣಿ ಸಂ.

ಮೊ.ಸಂ

1

ಶ್ರೀ ಕೆ.ಮಂಜುನಾಥ

ಡಿ.ಡಿ.ಪಿ.ಐ

ತುಮಕೂರು ಜಿಲ್ಲೆ

0816-2278444

9448999352

2

ವಿ.ಜಿ.ಲೋಕೇಶ್

ಇ.ಓ.-1

ತುಮಕೂರು ಜಿಲ್ಲೆ

0816-2278444

9449614027

3

ತಿಮ್ಮರಾಜು

ಇ.ಓ.-2

ತುಮಕೂರು ಜಿಲ್ಲೆ

016-2278444

9741069414

4

ಎಸ್.ಆರ್.ಬಂಡಿವೀರಪ್ಪ

ಡಿ.ವೈ.ಪಿ.ಸಿ -ಎಸ್.ಎಸ್.ಎ

ತುಮಕೂರು ಜಿಲ್ಲೆ

0816-2275405

9448999407

5

ಎಂ.ಆರ್.ಕಾಮಾಕ್ಷಿ

ಡಿ.ವೈ.ಪಿ.ಸಿ-ಆರ್.ಎಂ.ಎಸ್.ಎ

ತುಮಕೂರು ಜಿಲ್ಲೆ

0816-2251442

9480886950

6

ಮಂಗಳ .ಎಂ.
ಎ.ಪಿ.ಸಿ.-1

ತುಮಕೂರು ಜಿಲ್ಲೆ

0816-2275405

9480695462

7

ರೇಣುಕಮ್ಮ .ಬಿ.

ಎ.ಪಿ.ಸಿ.-2

ತುಮಕೂರು ಜಿಲ್ಲೆ

0816-2275405

9480695463
8.
ಗುರುಸಂಗಪ್ಪ ಹಡಗಲಿ
ದೈಹಿಕ ಶಿಕ್ಷಣಾಧಿಕಾರಿ

ತುಮಕೂರು ಜಿಲ್ಲೆ

0816-2278444

9886931123

9

ಚಂದ್ರಶೇಖರ್

ಪತ್ರಾಂಕಿತ ಸಹಾಯಕರು

ತುಮಕೂರು ಜಿಲ್ಲೆ

0816-2278444

9448833102

10
ದಯಾನಂದ ಎಂ.ಪಿ.
ಲೆಕ್ಕ ಅಧೀಕ್ಷಕರು

ತುಮಕೂರು ಜಿಲ್ಲೆ

0816-2275405

7795791927
11
ಎ.ಎಸ್.ಉಮಾದೇವಿ
ಅಧೀಕ್ಷಕರು ಸಿಬ್ಬಂದಿ
ತುಮಕೂರು ಜಿಲ್ಲೆ

0816-2278444

9980756684

12
ಸಿ.ಬಸವರಾಜು
ಅಧೀಕ್ಷಕರು ಅನುದಾನ
ತುಮಕೂರು ಜಿಲ್ಲೆ

0816-2278444

9844021967

 

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ,ಸಿಬ್ಬಂದಿಗಳ ವಿವರ

ಕ್ರ ಸಂ

ಅಧಿಕಾರಿಗಳ ಹೆಸರು

ಪದನಾಮ

ಜಿಲ್ಲಾ/ತಾಲ್ಲೂಕು ಹೋಬಳಿ/ಗ್ರಾ.ಪಂ

ದೂರವಾಣಿ ಸಂ

ಮೊ.ಸಂ

1

ಶ್ರೀ ಕೆ.ಜಿ.ರಾಜೇಂದ್ರ

ಡಿ.ಡಿ.ಪಿ.ಐ

ಮಧುಗಿರಿ ಶೈ.ಜಿಲ್ಲೆ

08137-283477

9448999347

2

ಅಶ್ವಥನಾರಾಯಣ

ಇ.ಓ.-1

ಮಧುಗಿರಿ ಶೈ.ಜಿಲ್ಲೆ

08137-283477

9880541556

3

ಸಿದ್ದಗಂಗಯ್ಯ

ಡಿ.ವೈ.ಪಿ.ಸಿ -ಎಸ್.ಎಸ್.ಎ

ಮಧುಗಿರಿ ಶೈ.ಜಿಲ್ಲೆ

08137-282238

9448999435

4

ಖಾಲಿ

ಡಿ.ವೈ.ಪಿ.ಸಿ-ಆರ್.ಎಂ.ಎಸ್.ಎ

ಮಧುಗಿರಿ ಶೈ.ಜಿಲ್ಲೆ

08137-283477

 

5

ಎಸ್.ಸಿದ್ದೇಶ್ವರ್
ಎ.ಪಿ.ಸಿ.-1
ಮಧುಗಿರಿ ಶೈ.ಜಿಲ್ಲೆ

08137-282238

9480695465

6

ಟಿ.ಎಸ್.ಶಂಕರಯ್ಯ

ಎ.ಪಿ.ಸಿ.-2

ಮಧುಗಿರಿ ಶೈ.ಜಿಲ್ಲೆ

08137-282238

9480695464

7

ಮಹಾಲಕ್ಷ್ಮೀ
ಲೆಕ್ಕ ಅಧೀಕ್ಷಕರು
ಮಧುಗಿರಿ ಶೈ.ಜಿಲ್ಲೆ

08137-282238

9481836791

8.
ನಟರಾಜು
ಅಧೀಕ್ಷಕರು ಅನುದಾನ
ಮಧುಗಿರಿ ಶೈ.ಜಿಲ್ಲೆ

08137-283477

   9916287748

9
ರಂಗರಾಜು
ಅಧೀಕ್ಷಕರು ಅನುದಾನ
ಮಧುಗಿರಿ ಶೈ.ಜಿಲ್ಲೆ

08137-283477

9844612899

ಮಾಹಿತಿ ಹಕ್ಕು ಅಧಿನಿಯಮ :

ಮಾಹಿತಿ ಹಕ್ಕು ಅಧಿನಿಯಮ 2005 ರಡಿ ನೇಮಕ ಮಾಡಲಾದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿವರ

ಕ್ರ ಸಂ

ಸಾರ್ವಜನಿಕ ಪ್ರಾಧಿಕಾರಿ

ಸಾರ್ವಜನಿಕ ಮಾಹಿತಿ ಅಧಿಕಾರಿ (2005 ರ ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 5(1) ರಡಿಯಲ್ಲಿ)

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (2005 ರ ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 5(1) ರಡಿಯಲ್ಲಿ)

ಪ್ರಥಮ ಮೇಲ್ಮನವಿ ಅಧಿಕಾರಿ (2005 ರ ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 5(1) ರಡಿಯಲ್ಲಿ)

1

ಉಪನಿರ್ದೇಶಕರ ಕಛೇರಿ (ಆಡಳಿತ) ಸಂಬಂಧಿಸಿದ ಜಿಲ್ಲೆ

ಪತ್ರಾಂಕಿತ ಸಹಾಯಕರು
ಅಧೀಕ್ಷಕರು,
ಉಪನಿರ್ದೇಶಕರು (ಆಡಳಿತ)

2015-16ನೇ ಸಾಲಿನ ತುಮಕೂರು (ದ) ಜಿಲ್ಲೆಯ ತಾಲ್ಲೂಕುವಾರು ಎಸ್.ಎಸ್.ಎಲ್.ಸಿ. ಫಲಿತಾಂಶದ ವಿವರ


ಕ್ರ.ಸಂ

ತಾಲ್ಲೂಕು

ಹಾಜರಾತಿ

ಉತ್ತೀರ್ಣ

ಶೇಕಡವಾರು

ಗಂಡು
ಹೆಣ್ಣು

ಒಟ್ಟು

ಗಂಡು
ಹೆಣ್ಣು

ಒಟ್ಟು

ಗಂಡು
ಹೆಣ್ಣು

ಒಟ್ಟು

1

ಚಿ.ನಾ.ಹಳ್ಳಿ

1240

1315

2555

866

1029

1895

69.84

78.25

74.17

2

ಗುಬ್ಬಿ

1689

1690

3379

1320

1451

2771

78.15

85.86

82.01

3

ಕುಣಿಗಲ್

1653

1541

3194

1290

1317

2607

78.04

85.46

81.62

4

ತಿಪಟೂರು

1447

1303

2750

1042

1023

2065

72.01

78.51

75.09

5

ತುಮಕೂರು

5530

4109

9639

3963

3231

7194

71.66

78.63

74.63

6

ತುರುವೇಕೆರೆ

1112

1105

2217

729

887

1616

65.56

80.27

72.89

 

ಒಟ್ಟು

12671

11063

23734

9210

8938

18148

72.69

80.79

76.46

ಆರ್.ಟಿ.ಇ. ಕಾಯ್ದೆ 2009 ರ ಸೆಕ್ಷನ್ 12(1)(ಸಿ) ಅಡಿಯಲ್ಲಿ 2016-17ನೇ ಸಾಲಿನ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ ವಿವರ

ಕ್ರ. ಸಂ.
ಜಿಲ್ಲೆ
ಒಟ್ಟು ಖಾಸಗಿ ಅನುದಾನ ರಹಿತ ಶಾಲೆಗಳ ಸಂಖ್ಯೆ (ರಿ)
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿ/ಎಲ್.ಕೆ.ಜಿ. ಗೆ ದಾಖಲಾಗುವ ಒಟ್ಟು ಮಕ್ಕಳ ಸಂಖ್ಯೆ

ಶೇ. 25 ರಷ್ಟು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿ/ಎಲ್.ಕೆ.ಜಿ. ಗೆ ದಾಖಲಾಗುವ ಒಟ್ಟು ಮಕ್ಕಳ ಸಂಖ್ಯೆ

 

ಆರ್.ಟಿ.ಇ. ಕಾಯ್ದೆ 2009 ರ ಸೆಕ್ಷನ್ 12(1)(ಸಿ) ಅಡಿಯಲ್ಲಿ 2016-17ನೇ ಸಾಲಿನಲ್ಲಿ ದಾಖಲಾದ ಮಕ್ಕಳ ವಿವರ
ನರ್ಸರಿ
1ನೇ ತರಗತಿ
ಒಟ್ಟು
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಆರ್.ಟಿ.ಇ. ಅಡಿಯಲ್ಲಿ ದಾಖಲಾದ ಮಕ್ಕಳ ಸಂಖ್ಯೆ
ಎಲ್.ಕೆ.ಜಿ ಗೆ ದಾಖಲಾದ ಮಕ್ಕಳ ಸಂಖ್ಯೆ
1ನೇ ತರಗತಿ ದಾಖಲಾದ ಮಕ್ಕಳ ಸಂಖ್ಯೆ
ಒಟ್ಟು
ಎಲ್.ಕೆ.ಜ
1ನೇ ತರಗತಿ
ಎಲ್.ಕೆ.ಜ
1ನೇ ತರಗತಿ
1
ತುಮಕೂರು (ದ)
233
9600
2350
2400
512
2912
192
41
1491
245
1736
2
ಮಧುಗಿರಿ
104
4546
1188
1136
297
1433
98
11
1065
68
1133
ಒಟ್ಟು
337
14146
3538
3536
809
4345
290
52
2556
313
2869

 

ಕ್ರ. ಸಂ.
ಜಿಲ್ಲೆಯ ಹೆಸರು
ವರ್ಷವಾರು
ಖಾಸಗಿ ಅನುದಾನ ರಹಿತ ಶಾಲೆಗಳ ಸಂಖ್ಯೆ
ಪೂರ್ವ ಪ್ರಾಥಮಿಕ
1ನೇ ತರಗತಿ ಗೆ ದಾಖಲಾದ ಮಕ್ಕಳು
2ನೇ ತರಗತಿ
3ನೇ ತರಗತಿ
4ನೇ ತರಗತಿ
5ನೇ ತರಗತಿ
ಒಟ್ಟು
ಎಲ್.ಕೆ.ಜಿ.
ಯು.ಕೆ.ಜಿ.
ಒಟ್ಟು
ಯು.ಕೆ.ಜಿ.ಯಿಂದ 1ನೇ ತರಗತಿ
ಹೊಸದಾಗಿ
ಒಟ್ಟು
1
ತುಮಕೂರು (ದ)
2012-13
225
401
0
401
0
1108
1108
0
0
0
0
1509
2013-14
238
1022
401
1423
0
1003
1003
1108
0
0
0
3534
2014-15
233
1340
1022
2362
401
666
1067
1003
1108
0
0
5540
2015-16
239
1582
1340
2922
1022
449
1471
1067
1003
1108
0
7571
2016-17
233
1514
1443
2957
1187
245
1432
1127
915
896
796
8123
2
ಮಧುಗಿರಿ
2012-13
104
166
0
166
0
515
515
0
0
0
0
681
2013-14
103
380
166
546
336
122
458
505
1509
2014-15
104
784
416
1200
165
275
440
449
474
0
0
2563
2015-16
100
1041
748
1789
357
79
436
427
437
456
3545
2016-17
109
1036
1004
2040
698
68
766
411
407
417
429
4470

2016-17ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ವರ್ಷವಾರು ಶುಲ್ಕ ಮರುಪಾವತಿ ವಿವರ

ಕ್ರ. ಸಂ.

ಜಿಲ್ಲೆಯ ಹೆಸರು

ವರ್ಷವಾರು

2016-17ನೇ ಸಾಲಿನಲ್ಲಿ ಶೇ.25% ರಷ್ಟು ಶುಲ್ಕ ಮರುಪಾವತಿ ಪಡೆದ ಅನುದಾನರಹಿತ ಶಾಲೆಗಳ ಸಂಖ್ಯೆ

 

ಘಟಕ ವೆಚ್ಚ (ಒಂದು ಮಗುವಿಗೆ )

ಖಾಸಗಿ ಅನುದಾನರಹಿತ ಶಾಲೆಗಳಿಗೆ ಶುಲ್ಕ ಮರುಪಾವತಿ ಮಾಡಿದ ಒಟ್ಟು ಮಕ್ಕಳ ಸಂಖ್ಯೆ

 

2016-17ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಶುಲ್ಕ ಮರುಪಾವತಿ ಮಾಡಿದ ಒಟ್ಟು ಮೊತ್ತ (ಲಕ್ಷಗಳಲ್ಲಿ)

 

 

 

ಪ್ರಾಥಮಿಕ

ಒಟ್ಟು

ಪೂರ್ವ ಪ್ರಾಥಮಿಕ

ಪ್ರಾಥಮಿಕ

ಪೂರ್ವ ಪ್ರಾಥಮಿಕ

ಪ್ರಾಥಮಿಕ

ಒಟ್ಟು

ಪೂರ್ವ ಪ್ರಾಥಮಿಕ

ಪ್ರಾಥಮಿಕ

ಒಟ್ಟು

1

1a

2

3a

3b

4

4a

5

5a

5b

6

6a

6b

1

ತುಮಕೂರು(ದ)

2012-13

33

225

5924

11848

401

1108

1509

23.76

131.28

155.03

2013-14

45

237

5924

11848

1423

2111

3534

83.30

250.11

333.41

2014-15

41

233

5924

11848

2362

3178

5540

139.92

376.53

516.45

2015-16

46

238

5924

11848

2922

4699

7621

111.04

410.41

521.45

2016-17

41

233

0

0

2957

5166

8123

0

 

0

2

ಮಧುಗಿರಿ(ಉ)

2012-13

86

104

5924

11848

166

515

681

2.50

29.50

32.00

2013-14

58

103

5924

11848

546

963

1509

43.50

69.00

112.50

2014-15

36

104

5924

11848

1200

1363

2563

58.50

104.00

162.50

2015-16

11

100

5924

11848

1789

1756

3545

99.50

154.00

253.50

2016-17

11

109

0

0

2040

2430

4470

0.00

0.00

0.00

ಅಕ್ಷರ ದಾಸೋಹ ಕಾರ್ಯಕ್ರಮಗಳು :2016-17:-
        ಸರ್ಕಾರಿ ಮತ್ತು ಅನುದಾನಿತ  1-10 ನೇ ತರಗತಿ ಶಾಲೆ ಗಳ ಪಟ್ಟಿ:-

ಕ್ರ.ಸಂ

ತಾಲ್ಲೂಕಿನ ಹೆಸರು

1-5 ನೇ ತರಗತಿ ಶಾಲೆಗಳು

6-7 ನೇ ತರಗತಿ ಶಾಲೆಗಳು

8-10 ನೆ ತರಗತಿ ಶಾಲೆಗಳು

1-10 ನೇ ತರಗತಿ ಶಾಲೆಗಳು

ರ್ಕಾರಿ

ಅನುದಾನಿತ

ಒಟ್ಟು

ರ್ಕಾರಿ

ಅನುದಾನಿತ

ಒಟ್ಟು

ರ್ಕಾರಿ

ಅನುದಾನಿತ

ಒಟ್ಟು

ರ್ಕಾರಿ

ಅನುದಾನಿತ

ಒಟ್ಟು

1

ಚಿ.ನಾ.ಹಳ್ಳಿ

192

1

193

113

9

122

19

32

51

324

42

366

2

ಗುಬ್ಬಿ

261

1

262

128

7

135

25

30

55

414

38

452

3

ಕುಣಿಗಲ್

232

0

232

122

13

135

30

25

55

384

38

818

4

ತಿಪಟೂರು

168

0

168

99

7

106

17

29

46

284

36

320

5

ತುಮಕೂರು

283

1

284

198

18

216

25

63

88

506

82

588

6

ತುರುವೇಕೆರೆ

185

1

186

87

5

92

17

26

43

289

32

908

7

ಕೊರಟಗೆರೆ

170

0

170

92

3

95

19

16

35

281

19

300

8

ಮಧುಗಿರಿ

201

0

201

148

1

149

27

30

57

376

31

407

9

ಪಾವಗಡ

114

0

114

119

2

121

21

30

51

254

32

707

10

ಶಿರಾ

251

0

251

173

3

176

28

33

61

452

36

488

ಒಟ್ಟು

2057

4

2061

1279

68

1347

228

314

542

3664

386

3950

ಸರ್ಕಾರಿ ಮತ್ತು ಅನುದಾನಿತ  1-10 ನೇ ತರಗತಿ ಮಕ್ಕಳ ಸಂಖ್ಯೆ

 

ಕ್ರ.ಸಂ

 

ತಾಲ್ಲೂಕಿನ ಹೆಸರು

ಮಕ್ಕಳ ಸಂಖ್ಯೆ

1 ರಿಂದ 5 ನೇ ತರಗತಿ

6 ರಿಂದ 8 ನೇ ತರಗತಿ

9 ರಿಂದ 10 ನೇ ತರಗತಿ

1 ರಿಂದ 10 ನೇ ತರಗತಿ

ರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ

ಅನುದಾನಿತ ಶಾಲೆಗಳ ಮಕ್ಕಳ ಸಂಖ್ಯೆ

ಒಟ್ಟು ಮಕ್ಕಳ ಸಂಖ್ಯೆ

ರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ

ಅನುದಾನಿತ ಶಾಲೆಗಳ ಮಕ್ಕಳ ಸಂಖ್ಯೆ

ಒಟ್ಟು ಮಕ್ಕಳ ಸಂಖ್ಯೆ

ರ್ಕಾರಿ  ಶಾಲೆಗಳ ಮಕ್ಕಳ ಸಂಖ್ಯೆ

ಅನುದಾನಿತ ಶಾಲೆಗಳ ಮಕ್ಕಳ ಸಂಖ್ಯೆ

ಒಟ್ಟು ಮಕ್ಕಳ ಸಂಖ್ಯೆ

ರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ

ಅನುದಾನಿತ ಶಾಲೆಗಳ ಮಕ್ಕಳ ಸಂಖ್ಯೆ

ಒಟ್ಟು ಮಕ್ಕಳ ಸಂಖ್ಯೆ

1

ಚಿ.ನಾ.ಹಳ್ಳಿ

10432

335

10767

4577

1641

6218

1872

2358

4230

16881

4659

21540

2

ಗುಬ್ಬಿ

11467

330

11797

5743

1494

7237

2600

2666

5266

19810

4773

24583

3

ಕುಣಿಗಲ್

7601

586

8187

4571

1626

6197

2847

2117

4964

15019

4858

19877

4

ತಿಪಟೂರು

7626

292

7918

3952

1723

5675

2103

2700

4803

13681

5013

18694

5

ತುಮಕೂರು

18301

1940

20241

9924

7439

17363

3601

10366

13967

31826

21047

52873

6

ತುರುವೇಕೆರೆ

5683

260

5943

2769

1008

3777

1175

1783

2958

9627

3307

12934

7

ಕೊರಟಗೆರೆ

7995

433

8428

4528

831

5359

2481

1493

3974

15004

2757

17761

8

ಮಧುಗಿರಿ

12709

189

12898

6045

1466

7511

2735

3395

6130

21489

5050

26539

9

ಪಾವಗಡ

11360

282

11642

5392

1394

6786

1862

3097

4959

18614

4773

23387

10

ಸಿರಾ

16388

266

16654

8141

1418

9559

4032

2703

6735

28561

4387

32948

ಒಟ್ಟು

109562

4913

114475

55642

20040

75682

25308

32678

57986

190512

60624

251136

 

 

 

ಕರ್ನಾಟಕ ದರ್ಶನ

2016-17ನೇ ಸಾಲಿನಲ್ಲಿ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಇತರೇ ವರ್ಗದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕೈಗೊಳ್ಳುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳು.

ಕರ್ನಾಟಕ ದರ್ಶನದ ಸಾಮಾನ್ಯ ಉದ್ದೇಶಗಳು :

 1. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪರಿಪೂರ್ಣವಾಗಿ ರಾಜ್ಯದಲ್ಲಿರುವ ಮುಖ್ಯವಾದ ಪ್ರವಾಸಿ ಸ್ಥಳಗಳು ಅಂದರೆ, ಸ್ಥಳೀಯ, ವೈಜ್ಞಾನಿಕ, ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ, ವಿಜ್ಞಾನ ಮತ್ತು ಕೈಗಾರಿಕೆಗಳು ಉತ್ತಮ ಶಾಲೆ, ಆಕಾಶವಾಣಿ ಕೇಂದ್ರ, ಗಣಿಗಳು, ಉದ್ಯಾನವನಗಳು, ಮ್ಯೂಸಿಯಂ, ಪ್ರಖ್ಯಾತ ವ್ಯಕ್ತಿಗಳು ಹುಟ್ಟಿದ ಊರು, ಇತ್ಯಾದಿಗಳನ್ನು ಅರಿಯುವುದು.
 2. ಮಕ್ಕಳು ತಮ್ಮ ಶೈಕ್ಷಣಿಕ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಮಾರ್ಗದರ್ಶನ ನೀಡುವುದು.
 3. ಮಕ್ಕಳಲ್ಲಿ ಸಹಕಾರ ಹೊಂದಾಣಿಕೆ, ನಾಯಕತ್ವ, ಮನೋಭಾವನೆಯನ್ನು ಬೆಳೆಸುವುದು.
 4. ಕರ್ನಾಟಕ ಸಾಂಸ್ಕೃತಿ ಪರಂಪರೆಯ ಅರಿವು ಹಾಗೂ ಅಭಿವೃದ್ಧಿಗೊಳಿಸುವಲ್ಲಿ ಮಮಕ್ಕಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.
 5. ಕರ್ನಾಟಕ ಸಾಮಾಜಿಕ, ಸ್ಥಿಗತಿಯ ಕುರಿತು ಅರಿವನ್ನುಂಟು ಮಾಡುವುದು.
 6. ಮಕ್ಕಳಿಗೆ ನೈಜ ಪರಿಸರದ ದರ್ಶನ ಮಾಡಿಸುವುದು.
 7. ತರಗತಿ ಕಲಿಕೆಗೆ ಪೂರಕವಾದ ಮಾಹಿತಿ ಒದಗಿಸುವುದು.
 8. ಶಾಲಾ ಚಟುವಟಿಕೆಗಳನ್ನು ಹೊರ ಪ್ರಪಂಚ ಹಾಗೂ ಸಮಾಜದೊಂದಿಗೆ ಸಮನ್ವಯಗೊಳಿಸುವುದು.

  ಪರಿಶಿಷ್ಟ ಜಾತಿ ಮಕ್ಕಳಿಗೆ ಒರಟ್ಟು ರೂ.17,88,500/-

ಪರಿಶಿಷ್ಟ ಪಂಗಡದ ಮಕ್ಕಳಿಗೆ ಒಟ್ಟು ರೂ.9,10,000/-

ಇತರೆ ವರ್ಗದ ಮಕ್ಕಳಿಗೆ ಒಟ್ಟು ರೂ.9,45,000/-

ಒಟ್ಟು ರೂ.36,43,500/-

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in