ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಕೈಮಗ್ಗ ಮತ್ತು ಜವಳಿ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ

ತುಮಕೂರು ಜಿಲ್ಲಾ ಕೈಮಗ್ಗ ಮತ್ತು ಜವಳಿ ಚಟುವಟಿಕೆಗಳ ಪಕ್ಷಿನೋಟ

ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯು ಜಿಲ್ಲಾ ಮಟ್ಟದ ಕಚೇರಿಯಾಗಿದ್ದು, ಜಿಲ್ಲಾ ಪಂಚಾಯತಿಯ ಆಡಳಿತ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಕಚೇರಿಯಾಗಲಿ, ಸಿಬ್ಬಂದಿಯಾಗಲೀ ಇರುವುದಿಲ್ಲ. ಉಪನಿದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಇವರು ಕಚೇರಿ ಮುಖ್ಯಸ್ಥರಾಗರುತ್ತಾರೆ. ಇಲಾಖೆಯು ಜಿಲ್ಲಾ / ರಾಜ್ಯ ಮತ್ತು ಕೇಂದ್ರ ವಲಯದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ತುಮಕೂರು ಜಿಲ್ಲೆಯಲ್ಲಿ 2016ಕ್ಕೆ ಇದ್ದಂತೆ ನೇಕಾರ ಸಹಕಾರ ಸಂಘಗಳ ಮತ್ತು ನೇಕಾರರ ವಿವರಗಳು

1.ಜಿಲ್ಲೆಯ ನೇಕಾರರ ಹಾಗೂ ಕೈಮಗ್ಗ / ವಿದ್ಯುತ್ ಮಗ್ಗಗಳ ಮಾಹಿತಿ

ಕ್ರಸಂ ಮಗ್ಗಗಳು ಮಗ್ಗಗಳಸಂಖ್ಯೆ   ಘಟಕಗಳ ಸಂಖ್ಯೆ  
ಕೈಮಗ್ಗ ವಿದ್ಯುತ್ ಮಗ್ಗ ಕೈಮಗ್ಗ ವಿದ್ಯುತ್ ಮಗ್ಗ
1

ರೇಷ್ಮ

8053 150 7154 122
2 ಹತ್ತಿ 50 20 35 15
3 ಉಣ್ಣೆ 6700 0 6300 0
4 ಅರ್ಟ್ ಸಿಲ್ಕ್ 0 7067 0 5350
  ಒಟ್ಟು 14803 7237 13489 5487

 

2. ಜಿಲ್ಲೆಯಲ್ಲಿ ನೊಂದಾಯಿತ ಕೈಮಗ್ಗ / ವಿದ್ಯುತ್ ಮಗ್ಗ ನೇಕಾರ ಸಹಕಾರ ಸಂಘಗಳ ಮಾಹಿತಿ

ಕ್ರ.ಸಂ ವಿಭಾಗ ಒಟ್ಟು
1 ರೇಷ್ಮೆ ಕೈಮಗ್ಗ 24
2 ಹತ್ತಿ ಕೈಮಗ್ಗ 02
3 ಉಣ್ಣೆ ಕೈಮಗ್ಗ 14
4 ವಿದ್ಯುತ್ ಮಗ್ಗ 07
  ಒಟ್ಟು 47

3. ತಾಲ್ಲೂಕುವಾರು ಕೈಮಗ / ವಿದ್ಯುತ್ ಮಗ್ಗ ನೇಕಾರ ಸಹಕಾರ ಸಂಘಗಳ ಮಾಹಿತಿ

ಕ್ರ.ಸಂ ತಾಲ್ಲೂಕು ರೇಷ್ಮೆ ಉಣ್ಣೆ ಹತ್ತಿ ವಿದ್ಯುತ್ ಮಗ್ಗ
1 ತಿಪಟೂರು 15 1 1 4
2 ಪಾವಗಡ 04 5 0 0
3 ಗುಬ್ಬಿ 04 0 1 1
4 ಚಿಕ್ಕನಾಯಕನಹಳ್ಳಿ 01 2 0 0
5 ತುರುವೇಕೆರೆ 0 2 0 2
6 ಸಿರಾ 0 6 0 0
  ಒಟ್ಟು 24 14 02 7

4. ತಾಲ್ಲೂಕುವಾರು ನೇಕಾರರ ಮಾಹಿತಿ

ಕ್ರ.ಸಂ ತಾಲ್ಲೂಕು ರೇಷ್ಮೆ ಉಣ್ಣೆ ಹತ್ತಿ ವಿದ್ಯುತ್ ಮಗ್ಗ ಒಟ್ಟು
1 ತಿಪಟೂರು 2210 180 15 6325 8730
2 ಪಾವಗಡ 3150 3305 0 75 6530
3 ಗುಬ್ಬಿ 3078 40 10 1250 4378
4 ಚಿಕ್ಕನಾಯಕನಹಳ್ಳಿ 650 1450 0 150 2250
5 ತುರುವೇಕೆರೆ 80 0 0 200 280
6 ಸಿರಾ 120 1950 0 0 2070
  ಒಟ್ಟು 9238 6925 25 8000 24188

 

ಇಲಾಖಾ ಕಾರ್ಯಕ್ರಮಗಳ ಮತ್ತು ಯೋಜನೆಗಳ ಮುಖ್ಯಾಂಶಗಳು:

1..ಜಿಲ್ಲಾ ವಲಯ ಯೊಜನೆಗಳು:-

ಕೈಮಗ್ಗ ಉದ್ದಿಮೆಗಳಿಗೆ ಸಹಾಯ:-

ಈ ಯೋಜನೆಯಡಿ ಕೈಮಗ್ಗ ನೇಕಾರ ಸಹಕಾರ ಸಂಘಗಳ ಅಭಿವೃದ್ಧಿಗೆ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ವಾರ್ಷಿಕವಾಗಿ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಷ್ಟಾನಗೊಳಿಸಲಾಗುವುದು.

ಕೈಮಗ್ಗ ನೇಕಾರ ಸಹಕಾರ ಸಂಘದ ಸದಸ್ಯ ನೇಕಾರರಿಗೆ ನೇಯ್ಗೆಯನ್ನು ನಿರಂತರವಾಗಿ ಉತ್ಪಾದನೆಯಲ್ಲಿ ತೊಡಗಿಸಲು ಸುಧಾರಿತ ಕೈಮಗ್ಗ ಮತ್ತು ಆಧುನಿಕ ಸುಧಾರಿತ ಉಪಕರಣಗಳ ಖರೀದಿಗಾಗಿ ಸಹಾಯಧನ ರೂಪದಲ್ಲಿ ವೆಚ್ಚ ಮಾಡಲಾಗುವುದು.

2. ಕೇಂದ್ರ ಪುರಸ್ಕೃತ ಯೋಜನೆಗಳು:-

1.. ಮಹಾತ್ಮಗಾಂಧಿ ಬುನ್ಕರ್ ಬಿಮಾ ಯೋಜನೆ (MGBBY) ವಿದ್ಯುತ್ ಮಗ್ಗ ನೇಕಾರರಿಗೆ ಗುಂಪು ವಿಮಾ ಯೋಜನೆ (ಜಿ.ಐ.ಎಸ್)
ಕೈಮಗ್ಗ ನೇಕಾರರಿಗೆ ಕೇಂದ್ರ ಸರ್ಕಾರವು ಹೊಸದಾಗಿ ಗುಂಪು ವಿಮಾ ಯೋಜನೆ ಬದಲಾಗಿ ಮಹಾತ್ಮ ಗಾಂಧಿ ಬುನ್ಕರ್ ಬಿಮಾ ಯೋಜನೆಯನ್ನು ರೂಪಿಸಿದ್ದು, ಸದರಿ ಯೋಜನೆಯ ಮಾರ್ಗಸೂಚಿಗಳಂತೆ ಯೋಜನೆಯ ವಿವರಗಳು ಈ ಕೆಳಗಿನಂತಿವೆ.

ವಾರ್ಷಿಕ ವಂತಿಕೆ ಫಲಾನುಭವಿ ವಂತಿಕೆ ರೂ. ರಾಜ್ಯ ಸರ್ಕಾರಚ ವಂತಿಕೆ ರೂ ಕೇಂದ್ರ ಸರ್ಕಾರದ ವಂತಿಕೆ ರೂ. ಭಾರತೀಯ ಜೀವವಿಮಾ ನಿಗಮ ರೂ ಒಟ್ಟು ರೂ.
ಮಹಾತ್ಮಗಾಂಧಿ ಬುನ್ಕರ್ ಬಿಮಾ ಯೋಜನೆ 40/- 40/- 150/- 100/- 330/-
ವಿದ್ಯುತ್ ಮಗ್ಗ ನೇಕಾರರಿಗೆ ಗುಂಪು ವಿಮಾ ಯೋಜನೆ 80/- 0 290/- 100/- 470/-

ಪ್ರಯೋಜನಗಳು:-

ಅ) ಸದರಿ ಯೋಜನೆಯಡಿ ನೊಂದಾಯಿಸಲಾದ ನೇಕಾರರ 9 ರಿಂದ 12ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ವಾರ್ಷಿಕ ರೂ. 1200-00 ಗಳನ್ನು ನೀಡಲಾಗುವುದು

ಆ) ವಿಮಾ ಪರಿಹಾರ:-

ಯೋಜನೆ ಸ್ವಾಭಾವಿಕ ಸಾವು ಅಪಘಾತದಿಂದ ಪೂರ್ಣ ಅಂಗವಿಲಕತೆ ಭಾಗಶಃ ಖಾಯಂ ಅಂಗವಿಕಲತೆ
ಮಹಾತ್ಮಗಾಂಧಿ ಬುನ್ಕರ್ ಬಿಮಾ ಯೋಜನೆ 60000/- 150000/- 75000/- 75000/-
ವಿದ್ಯುತ್ ಮಗ್ಗ ನೇಕಾರರಿಗೆ ಗುಂಪು ವಿಮಾ ಯೋಜನೆ 60000/- 150000/- 75000/- 75000/-

ಇ) ನಾಮನರ್ದೆಶಿತರು ವಿಮಾ ಪರಿಹಾರ ಪಡೆಯಲು ನಿಗಧಿತ ನಮೂನೆಯಲ್ಲಿ ಅರ್ಜಿ, ಮೂಲ ಮರಣ ಪ್ರಮಾಣ ಪತ್ರ, ಅಪಘಾತದ ಬಗ್ಗೆ ಎಫ್,ಐ.ಆರ್. ಅಪಘಾತದಿಂದ ಅಂಗವಿಕಲತೆ ಹೊಂದಿದ್ದಲ್ಲಿ ಈ ಬಗ್ಗೆ ಸರ್ಕಾರಿ ವೈದ್ಯರಿಂದ ದೃಢೀಕರಣ ಇವುಗಳನ್ನು ಸಲ್ಲಿಸಿ ಮೇಲಿನಂತೆ ಪ್ರಯೋಜನ ಪಡೆಯಬಹುದು.

3. ರಾಜ್ಯವಲಯ ಯೋಜನೆಗಳು:-

1. ನೇಕಾರರ ಕಲ್ಯಾಣ ಯೋಜನೆ:- (ಎನ್.ಕೆ.ವೈ)

ಈ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಹಲವಾರು ಕಾರ್ಯಕ್ರಮಗಳಿದ್ದು, ವಿವರಗಳು ಕೆಳಗಿನಂತಿವೆ
(ಅ) ಆರೋಗ್ಯ ಯೋಜನೆಗಳು:- 

1. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ:-
ಕೈಮಗ್ಗ ನೇಕಾರರಿಗೆ ಈ ರೋಗದ ಚಿಕಿತ್ಸೆಗಾಗಿ ವೆಚ್ಚ ಮಾಡಿದ ಖರ್ಚು ಮರುಪಾವತಿಸಲಾಗುವುದು ಹಾಗೂ ವರ್ಷಕ್ಕೆ ರೂ.500/- ರಂತೆ ಜೀವನಾಧಾರ ಭತ್ಯೆ ಸಹ ಚಿಕಿತ್ಸಾ ಅವಧಿಯಲ್ಲಿ ನೀಡಲಾಗುವುದು.

2. ಹೃದ್ರೋಗ ಮತ್ತು ಮೂತ್ರಪಿಂಡ ಜೋಡಣೆ:-
ಕೈಮಗ್ಗ ನೇಕಾರರಿಗೆ ಈ ರೋಗದ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚ ಅಂದರೆ ಗರಿಷ್ಠ ರೂ.50,000/- ಗಳವರೆಗೆ ಮರು ಸಂದಾಯ ಮಾಡಲಾಗುವುದು. ಹಾಗೂ ವರ್ಷಕ್ಕೆ ರೂ. 500/- ರಂತೆ ಜೀವನಾಧಾರ ಭತ್ಯೆ ಸಹ ಚಿಕಿತ್ಸಾ ಅವಧಿಯಲ್ಲಿ ನೀಡಲಾಗುವುದು.

3.ಕುಷ್ಠರೋಗ ಮತ್ತು ಮಾನಸಿಕ ವಿಕಲತೆ / ಅಸಮತೋಲನ:
ಕೈಮಗ್ಗ ನೇಕಾರರು ಕುಷ್ಟರೋಗದಿಂದ ನರಳುತ್ತಿದ್ದರೆ ಅಂತಹ ರೋಗಿಗಳಿಗೆ ಗರಿಷ್ಠ ಒಂದು ವರ್ಷದವರೆಗೆ ಅಥವಾ ಚಿಕಿತ್ಸೆ ಅವಧಿಯವರೆಗೆ ಯಾವುದು ಕಡಿಮೆಯೋ ಅಲ್ಲಿಯವರೆಗೆ ಮಾಸಿಕ ರೂ. 500/- ಗಳ ಸಹಾಯ ನೀಡಲಾಗುವುದು.

ಆ) ನೇಕಾರರ ಅಂತ್ಯ ಸಂಸ್ಕಾರದ ಖರ್ಚು:-
ಕೈಮಗ್ಗ ನೇಕಾರರ ಸಹಕಾರ ಸಂಘ/ ಕೆ.ಹೆಚ್.ಡಿ.ಸಿ. ನೇಕಾರ ಸದಸ್ಯರು ಮರಣ ಹೊಂದಿದಲ್ಲಿ ಕುಟುಂಬದ ಸದಸ್ಯರಿಗೆ ಅಂತ್ಯ ಸಂಸ್ಕಾರದ ವೆಚ್ಚ ರೂ. 1000/-ಗಳನ್ನು ನೀಡಲಾಗುವುದು. ಸಂಘ/ ಕೆ.ಹೆಚ್.ಡಿ.ಸಿ. ರವರು ಮರಣ ಹೊಂದಿದವರ ಕುಟುಂಬಕ್ಕೆ ಮೊದಲು ಹಣ ಬಿಡುಗಡೆ ಮಾಡಿ ನಂತರ ಸರ್ಕಾರದಿಂದ ಮರುಪಾವತಿ ಪಡೆಯಬಹುದು.

2.) ಇತರೆ ಕೈಮಗ್ಗ ನೇಕಾರರ ಯೋಜನೆಗಳು:-
ಅ) ರಾಜ್ಯಪ್ರಶಸ್ತಿ ಹಾಗೂ  ರಾಷ್ಟ್ರ ಪ್ರಶಸ್ತಿ ಯೋಜನೆ:-
ವಿನೂತನ ಕುಶಲತೆಯ ಉತ್ಪನ್ನಗಳನ್ನು ತಯಾರಿಸಿದ ನೇಕಾರರಿಗೆ ರಾಜ್ಯ ಪ್ರಶಸ್ತಿಯಾದರೆ ರೂ. 10,000/- ನಗದು+ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯಾದರೆ ರೂ. 25000/- ನಗದು + ಪ್ರಶಸ್ತಿ ನೀಡಲಾಗುವುದು
ಆ) ನೇಕಾರರು ತಮ್ಮಕೈಮಗ್ಗ ಉತ್ಪನ್ನಗಳ ಮಾರಾಟ ಕೈಗೊಳ್ಳಲು ಜಿಲ್ಲಾ ಕೈಮಗ್ಗ ಮೇಳ ಹಾಗೂ ಕ್ರಾಫ್ಟ್ ಮೇಳಗಳಲ್ಲಿ ಭಾಗವಹಿಸುವುದು
ಇ) ಕೈಮಗ್ಗ ನೇಕಾರರಿಗೆ ಗುರುತಿನ ಚೀಟಿ ವಿತರಣೆ:-
ಈ) ರಾಷ್ಟ್ರೀಯ ಕೈಮಗ್ಗ ಅಭವೃದ್ದಿ ನಿಗಮ (ಎನ್.ಹೆಚ್.ಡಿ.ಸಿ)ದ ಮೂಲಕ ಮಿಲ್ಗೇಟ್ ರಿಯಾಯಿತಿ ದರದಲ್ಲಿ  ನೂಲು ಖರೀದಿ ಸೌಲಭ್ಯ

 

2. ಏಳಿಗೆ ನಿಧಿ ಯೋಜನೆ (ಮಿತವ್ಯಯ ನಿಧಿ ಯೋಜನೆ)ಹಾಗೂ ಬಡ್ಡಿ:-

ಕೈಮಗ್ಗ ನೇಕಾರ ಸಹಕಾರಿ ಸಂಘಗಳು/ ನಿಗಮದಡಿ ಉತ್ಪಾದನೆಯಲ್ಲಿ ತೊಡಗಿರುವ ನೇಕಾರ ಸದಸ್ಯರು ತಾವು ಗಳಿಸಿದ ಮಜೂರಿಯಲ್ಲಿ ಶೇ. 8ಕ್ಕೆ ಕಡಿಮೆ ಇಲ್ಲದಂತೆ ಹಾಗೂ ಶೇ 10 ಕ್ಕೆ ಮೀರದಂತೆ ಹಣವನ್ನು ಸರ್ಕಾರದ ಖಜಾನೆಯಲ್ಲಿ ಲೆಕ್ಕಶೀರ್ಷಿಕೆ ಮೂಲಕ ತುಂಬಬೇಕಾಗಿರುವತ್ತದ. ರಾಜ್ಯ ಸರ್ಕಾರವು ಸಮಚಂದಾ ರೂಪದಲ್ಲಿ ಶೇ. 8 ರಷ್ಟು ಮಾತ್ರ ಮಂಜೂರು ಮಾಡಿ ಸಂಬಂಧಿಸಿದ ಖಜಾನೆಗೆ ಪಾವತಿಸಲಾಗುವುದು.ಅಲ್ಲದೇ ನಿಧಿಯಲ್ಲಿ ಸಂಗ್ರಹವಾದ ಮೊತ್ತಕ್ಕೆ ಈಗ ಶೇ. 12ರಂತೆ ಹಾಗೂ ಕಾಲಕಾಲಕ್ಕೆ ನಿಗಧಿಪಡಿಸಿದ ಬಡ್ಡಿಯನ್ನು ಸಹ ರಾಜ್ಯ ಸರ್ಕಾರದ ವತಿಯಿಂದ ನೀಡಲು ಅವಕಾಶವಿರುತ್ತದೆ.

3. ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ:-

ಕೈಮಗ್ಗ ನೇಕಾರ ಸಹಕಾರ ಸಂಘಗಳಿಗೆ ಸಹಾಯಧನ ಯೋಜನೆಯಡಿ ರಾಷ್ಟ್ರ / ರಾಜ್ಯ / ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ವನ್ನು ಆಯೋಜಿಸಲಾಗುವುದು.

4. ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಸಹಾಯ (ಶೇ. 20 % ರಿಬೇಟ್)

ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಕೂಡಿಬಿದ್ದ ಪಕ್ಕಾ ಮಾಲನ್ನು ಮಾರಾಟ ಮಾಡಲು ರಾಜ್ಯ ಸರ್ಕಾರವು ಘೋಷಿಸಿರುವ (ಹಬ್ಬ ಹರಿದಿನಗಳ ಸಂದರ್ಭದಲ್ಲಿ ) ಅವಧಿಯಲ್ಲಿ ಶೇ.20 ರಂತೆ ಗ್ರಾಹಕರಿಗೆ ರಿಯಾಯತಿ (ರಿಬೇಟ್) ನೀಡಿ ಮಾರಾಟ ಮಾಡಿದಲ್ಲಿ ಸದರಿ ರಿಬೇಟ್ ಮೊತ್ತವನ್ನು ಮರು ಸಂದಾಯ ಮಾಡಿಕೊಳ್ಳುವ ಅವಕಾಶವಿರುತ್ತದೆ.

5. ವಿದ್ಯುತ್ ರಿಯಾಯತಿ:-

ಈಗ ಜಾರಿಯಲ್ಲಿರುವ ಯೋಜನೆಯಂತೆ 20 ಹೆಚ್.ಪಿ ವರೆಗೆ ಇರುವ ವಿದ್ಯುತ್ ಮಗ್ಗ ಘಟಕಗಳು ಕೇವಲ ರೂ.1.25 ಪೈಸೆ ಮಾತ್ರ ಪಾವತಿಸಿರುತ್ತಾರೆ.

6. ನೇಕಾರ ವಿಶೇಷ ಫ್ಯಾಕೇಜ್ ಯೋಜನೆಯಡಿ 02 ವಿದ್ಯುತ್ ಮಗ್ಗಗಳನ್ನು ಪೂರೈಸುವ ಯೋಜನೆ:-

ಸದರಿ ಯೋಜನೆಯಡಿ ನೇಕಾರರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಮತ್ತು ಅವರ ವರಮಾನ ಮಟ್ಟವನ್ನು ಹೆಚ್ಚಿಸಲು ನೇಕಾರರಿಗೆ ತಲಾ 02 ವಿದ್ಯುತ್ ಮಗ್ಗಗಳನ್ನು ಒದಗಿಸುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಘಟಕದ ವೆಚ್ಚ ರೂ. 3.00 ಲಕ್ಷಗಳು ಇದ್ದು ಸಾಮಾನ್ಯ ಫಲಾನುಭವಿಗೆ ಶೇ.50 ರಷ್ಟು ಗರಿಷ್ಠ ಸಹಾಯಧನ ರೂ. 1.50 ಲಕ್ಷಗ (ಎರಡು ಮಗ್ಗಗಳಿಗೆ) ಹಾಗೂ ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗೆ ಶೇ.90 ರಷ್ಟು ಗರಿಷ್ಠ ಸಹಾಯಧನ ರೂ. 2.70 ಲಕ್ಷ (ಎರಡು ಮಗ್ಗಗಳಿಗೆ) ಮಂಜೂರಾತಿ ಪಡೆಯಬಹುದಾಗಿದೆ.

 

7. ನೂತನ ಜವಳಿ ನೀತಿ :-

ನೂತನ ಜವಳಿ ನೀತಿ ಯೋಜನೆಯ ಪ್ರಮುಖ ಅಂಶಗಳು:

1. ಸಾಲಾಧಾರಿತ ಬಂಡವಾಳ ಸಹಾಯಧನ

2. ಬಡ್ಡಿ ಸಹಾಯಧನ

3. ಪ್ರವೇಶ ತೆರಿಗೆ ಮರುಪಾವತಿ

4. ಮುದ್ರಾಂಕ ಶುಲ್ಕ ಮರುಪಾವತಿ

5. ವಿದ್ಯುತ್ ಸಹಾಯಧನ

6. ಅಸ್ಥಿತ್ವದಲ್ಲಿರುವ ಜವಳಿ ಘಟಕಗಳಿಗೆ (ವಿಸ್ತರಣೆ/ ವೈವಿದ್ಯತೆ/ ಆಧುನನೀಕರಣ/ ತಾಂತ್ರಿಕ ಉನ್ನತೀಕರಣ )

7. ಮಾನವ ಸಂಪನ್ಮೂಲ ವಿಭಾಗ ಮತ್ತು ಕೌಶಲ್ಯ ಉನ್ನತೀಕರಣ:- ನೀತಿಯ ಅವಧಿಯಲ್ಲಿ 5 ಲಕ್ಷ ಉದ್ಯೋಗಿಗಳನ್ನು ಸೃಷ್ಠಿಸುವುದು ಮತ್ತು ನಿರುದ್ಯೋಗಿ ಯುವಕ-ಯುವತಿಯವರಿಗೆ ತರಬೇತಿ ನೀಡುವ ಗುರಿ ನೀಡಲಾಗಿದೆ.

8.. ವಸತಿ ಕಾರ್ಯಾಗಾರ:-

ವಸತಿ ಕಾರ್ಯಾಗಾರವನ್ನು ನಿರ್ಮಿಸಿಕೊಳ್ಳುವಲ್ಲಿ ಫಲಾನುಭವಿಯು ಪುರುಷರಾದರೆ ಜಂಟಿ ಖಾತೆ ಮಹಿಳಯಾದಲ್ಲಿ ತನ್ನ ಸ್ವಂತ ಹೆಸರಿನಲ್ಲಿ ಕಡ್ಡಾಯವಾಗಿ ಖಾಲಿ ನಿವೇಶನವನ್ನು ಹೊಂದಿರತಕ್ಕದ್ದು. ಇದರ ಕನಿಷ್ಠ ಅಳತೆಯು 20*30 ಅಡಿ ವಿಸ್ತೀರ್ಣವುಳ್ಳದ್ದಾಗಿರಬೇಕು. ಘಟಕ ವೆಚ್ಚದಲ್ಲಿ ನಿವೇಶನದ ಮೌಲ್ಯವು ಒಳಗೊಂಡಿರುವುದಿಲ್ಲ. ಫಲಾನುಭವಿಯು ಹೊಂದಿರುವ ನಿವೇಶನದ/ ಜಾಗದ ಮೇಲೆ ಯಾವುದೇ ತರಹದ ತಕರಾರು / ವ್ಯಾಜ್ಯ ಮೊಕದ್ದಮೆಗಳಿಂದ ಹೊರತಾಗಿರಬೇಕು.

ರಾಜ್ಯ ಸರ್ಕಾರದ ಆದೇಶ ಸಂಖ್ಯೆ: ವಾಕೈ/28/ಜಕೈಯೋ/2015, ಬೆಂಗಳೂರು ದಿನಾಂಕ; 10-03-2016ರಲ್ಲಿ 2015-16ನೇ ಸಾಲಿನ ವಸತಿ ಕಾರ್ಯಾಗಾರ ಯೋಜನೆಯಡಿ ರೂ.2.50 ಲಕ್ಷಗಳ ಘಟಕವೆಚ್ಚ ನಿಗಧಿಪಡಿಸಲಾಗಿದೆ. ರಾಜ್ಯ ಸರ್ಕಾರದ ಸಹಾಯಧನ ರೂ. 1,00,000/- , ರಾಜೀವ್ ಗಾಂಧಿ ವಸತಿ ನಿಗಮದ ಸಹಾಯಧನ ರೂ. 1,20,000/-ಗಳು ಹಾಗೂ ನೇಕಾರರ ವಂತಿಕೆ ರೂ. 30,000/-ಗಳಾಗಿದ್ದು, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಟಾನಗಗೊಳಿಸಲಾಗುವುದು.

9. ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರರಿಗೆ ಸಹಕಾರಿ ಬ್ಯಾಂಕ್ ಗಳು ಮತ್ತು ಸಂಘಗಳ ಮೂಲಕ ಶೇ. 1ರ ಬಡ್ಡಿ ದರದಲ್ಲಿ ರೂ. 2.00 ಲಕ್ಷಗಳವರೆಗೆ ಸಾಲ ಮತ್ತು ಶೇ. 3 ರ ಬಡ್ಡಿ ದರದಲ್ಲಿ ರೂ. 2.00 ಲಕ್ಷಗಳಿಂದ ರೂ. 5.00 ಲಕ್ಷಗಳವರೆಗೆ ಸಾಲ ಸೌಲಭ್ಯ.:-

ಇದು ಹೊಸದಾಗಿ ರೂಪಿಸಿರುವ ಯೋಜನೆಯಾಗಿದ್ದು, ಸರ್ಕಾರದ ಆದೇಶ ಸಂಖ್ಯೆ:ವಾಕೈ/25/ಜಕೈಯೋ//2016, ಬೆಂಗಳೂರು ದಿನಾಂಕ:09-12-2016 ರನ್ವಯ ವಿದ್ಯುತ್ ಮಗ್ಗ ನೇಕಾರರಿಗೆ ನೇಕಾರಿಕೆಗೆ ಸಂಬಂಧಿಸಿದ ಉದ್ದೇಶಗಳಿಗಾಗಿ ಸಹಕಾರ ಬ್ಯಾಂಕುಗಳು ಮತ್ತು ಸಂಘಗಳ ಮೂಲಕ ಶೇ. 1 ರ ಬಡ್ಡಿ ದರದಲ್ಲಿ ರೂ. 2.00 ಲಕ್ಷಗಳವರೆಗೆ ಸಾಲ ಹಾಗೂ ಶೇ.3ರ ಬಡ್ಡಿ ದರದಲ್ಲಿ ರೂ. 2.00 ಲಕ್ಷಗಳಿಂದ ರೂ. 5.00 ಲಕ್ಷಗಳವರೆಗೆ ಸಾಲ ಸೌಲಭ್ಯದ ಬಗ್ಗೆ ಆದೇಶ ಹೊರಡಿಸಲಾಗಿದೆ.

 

10. , ವಿಶೇಷ ಘಟಕ/ ಗಿರಿಜನ ಉಪಯೋಜನೆ:-

ವಿಶೇಷ ಘಟಕ / ಗಿರಿಜನ ಉಪಯೋಜನೆಗಳಡಿ ಜಕಾರ್ಡ್ ಒಳಗೊಂಡಂತೆ 2 ಸಾಧಾರಣ ವಿದ್ಯುತ್ ಮಗ್ಗಗಳ ಘಟಕವನ್ನು ಸ್ಥಾಪಿಸಿಕೊಂಡು ಸ್ವಂತ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗಲು ವಿದ್ಯುತ್ ಮಗ್ಗಗಳ ಘಟಕವನ್ನು ಸ್ಥಾಪಿಸಿಕೊಂಡು ಸ್ವಂತ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುವಂತೆ, ರೂ. 3,00,000 /-ಗಳ ಅನುದಾನವನ್ನು ನಿಗಧಿಪಿಡಿಸಿದ್ದು, ಪ.ಜಾತಿ ವರ್ಗಕ್ಕೆ ಶೇ.90%ರಷ್ಟು ಅಂದರೆ ರೂ. 2,70,000/- ಗಳ ಸಹಾಯಧನ ಹಾಗೂ ಫಲಾನುಭವಿಯ ವಂತಿಕೆ ಶೇ.10 ರಷ್ಟು ಅಂದರೆ ಅಂದಾಜು ರೂ. 30,000/-ಗಳನ್ನು ಅಥವಾ ಹೆಚ್ಚುವರಿ ಮೊತ್ತವನ್ನು ಫಲಾನುಭವಿಯು ಸ್ವಂತವಾಗಿ ಭರಿಸಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

ಜಿಲ್ಲಾ ಇಲಾಖಾ ಕಚೇರಿಯ ಅಧಿಕಾರಿ / ಸಿಬ್ಬಂದಿ ವಿವರ

ಕ್ರ. ಸಂ

ಅಧಿಕಾರಿ/ ನೌಕರರ /ಹೆಸರು

ಹುದ್ದೆ

ಜಿಲ್ಲಾ/ತಾಲ್ಲೂಕು/ ಹೋಬಳಿ/ ಗ್ರಾ.ಪಂ

ಕಚೇರಿ ದೂರವಾಣಿ ಸಂಖ್ಯೆ

ಮೊಬೈಲ್ ನಂ

1

ಎಸ್ ವಿರೂಪಾಕ್ಷಪ್ಪ

ಉಪನಿರ್ದೇಶಕರು

ತುಮಕೂರು

0816-275370

9986392953

2

ಖಾಲಿ

ಸಹಾಯಕ ನಿರ್ದೇಶಕರು

ತುಮಕೂರು

0816-275370

0

3

.ಸಂತೋಷ ಚಾರಖಾನಿ

ಜವಳಿ ಪ್ರವರ್ಧನಾಧಿಕಾರಿ

ತುಮಕೂರು

0816-275370

9008941033

4

ಖಾಲಿ

ಜವಳಿ ತನಿಖಾಧಿಕಾರಿ

ತುಮಕೂರು

0816-275370

0

5

ಖಾಲಿ

ಜವಳಿ ತನಿಖಾಧಿಕಾರಿ

ತುಮಕೂರು

0816-275370

0

6

ಹೇಮಾವತಿ ಆರ್

ಪ್ರಥಮ ದರ್ಜೆ ಸಹಾಯಕರು

ತುಮಕೂರು

0816-275370

8431067559

7

ಖಾಲಿ

ದ್ವಿತೀಯ ದರ್ಜೆ ಸಹಾಯಕರು

ತುಮಕೂರು

0816-275370

0

8

ಖಾಲಿ

ಗ್ರೂಪ್ “ಡಿ”

ತುಮಕೂರು

0816-275370

0
           

 

ಜಿಲ್ಲಾ ಇಲಾಖಾ ಕಚೇರಿಯ ವಿಳಾಸ

ಉಪನಿರ್ದೇಶಕರವರ ಕಚೇರಿ,
ಕೈಮಗ್ಗ ಮತ್ತು ಜವಳಿ ಇಲಾಖೆ
ನಾಗನಿಲಯ, 5ನೇ ಕ್ರಾಸ್,
ಸಿದ್ದರಂಗಾ ಬಡಾವಣೆ
ತುಮಕೂರು-572102

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in