ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ:-

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯು ಜಿಲ್ಲಾ ಪರಿಷತ್ ಅಡಿಯಲ್ಲಿ 1987 ರಿಂದಲೂ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿನ ಜನರ  ಆರೋಗ್ಯವನ್ನು  ಸುಧಾರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸರ್ಕಾರದ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಸಂಘಟನಾ ರಚನೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು
ಆಡಳಿತ ಕಛೇರಿ ಕಾರ್ಯಕ್ರಮಾಧಿಕಾರಿಗಳು ತಾಲ್ಲೂಕು ಆರೋಗ್ಯಾಧಿಕಾರಿಗಳು ಆಡಳಿತ ವೈದ್ಯಾಧಿಕಾರಿಗಳ ಕಛೇರಿ ತಾಲ್ಲೂಕು ಜನರಲ್ ಆಸ್ಪತ್ರೆ
ಅಹಾಯಕ ಆಡಳಿತಾಧಿಕಾರಿಗಳು/ ಕಛೇರಿ ಅಧೀಕ್ಷಕರು/ಪ್ರಥಮ ದರ್ಜೆ ಸಹಾಯಕರು/ದ್ವೀತಿಯ ದರ್ಜೆ ಸಹಾಯಕರು/ಕಛೇರಿಯ ಇತರೆ ಸಿಬ್ಬಂದಿಗಳು ಡಿ.ಆರ್. ಸಿ.ಹೆಚ್.ಓ./ಡಿ.ಎಸ್.ಓ./ಡಿ.ಟಿ.ಓ/ಡಿ.ಎಫ್.ಡ್ಬ್ಲ್ಯೂ.ಓ./ಡಿ.ವಿ.ಬಿ.ಡಿ.ಸಿ.ಓ./ಡಿ.ಎಲ್.ಓ./ಡಿ. ಸಿ.ಡಿ.ಎಸ್.ಓ. ಆರೋಗ್ಯ ವೈದ್ಯಾಧಿಕಾರಿಗಳು ,ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ /ಇತರೆ ಅರೆ ವೈದ್ಯಕೀಯ ಸಿಬ್ಬಂದಿ  

 

ಇಲಾಖೆಯ ಮೂಲ ಉದ್ದೇಶ :

ತಾಯಿ ಮತ್ತು ಮಕ್ಕಳ ಮರಣ ಪ್ರಮಾಣದ ಅನುಪಾತದ ಇಳಿಕೆ .

ಪ್ರತಿಯೊಬ್ಬರಿಗೂ ಸಾರ್ವಜನಿಕ ಸೇವೆಗಳಾದ ಪೌಷ್ಠಿಕ ಆಹಾರ ಸೇವನೆ, ಸ್ವಚ್ಚತೆ ಹಾಗೂ ಶುಭ್ರತೆ ಮತ್ತು ಪ್ರತಿಯೊಬ್ಬರಿಗೂ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಮುಖವಾಗಿ ಮಹಿಳೆ, ಮಕ್ಕಳ ಆರೋಗ್ಯ ಮತ್ತು ಚುಚ್ಚುಮದ್ದು ಸೇವೆಗಳು.

ಸಾಂಕ್ರಮಿಕ,ಅಸಾಂಕ್ರಮಿಕ ರೋಗಗಳು ಮತ್ತು ಸ್ಥಳೀಯವಾಗಿ ಹರಡುವಂತಹ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು.

ಸಮಗ್ರ ಪ್ರಥಮಿಕ ಆರೋಗ್ಯ ಚಿಕಿತ್ಸೆ ಒದಗಿಸುವುದು.

ಜನಸಂಖ್ಯೆ ನಿಯಂತ್ರಣ, ಲಿಂಗಾನುಪಾತ ಮತ್ತು ಪ್ರದೇಶವಾರು ಸರಿದೊಗಿಸುವುದು.

ಸ್ಥಳಿಯ ಸಂಪ್ರದಾಯಗಳು ಮತ್ತು ಆಯಷ್ ಪದ್ದತಿಗಳನ್ನು ಬಲಪಡಿಸುವುದು.

ಆರೋಗ್ಯ ಜೀವನ ಶೈಲಿಯನ್ನು ವೃದ್ದಿಪಡಿಸುವುದು.

ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆ ಮುಖ್ಯಾಂಶಗಳು

ಜಿಲ್ಲೆಯ  ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಕಂಡ ಯೋಜನೆಗಳಿದ್ದು, ಈ ಯೋಜನೆ ಮುಖಾಂತರ  ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು. ಮತ್ತು ರೋಗ ನಿಯಂತ್ರಣಗೊಳಿಸಲು ಕಾರ್ಯಕ್ರಮ  ಅಧಿಕಾರಿಗಳು ಕ್ರಮವಹಿಸುತ್ತಾರೆ.

1. ಆರ್.ಸಿ. ಕಾರ್ಯಕ್ರಮ:
ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಒಬ್ಬ ಕಾರ್ಯಕ್ರಮಾಧಿಕಾರಿಗಳು ಇದ್ದು, ತಾಯಿ ಮಕ್ಕಳ  ಆರೋಗ್ಯದ ಬಗ್ಗೆ ಮತ್ತು ಶಿಶುಮರಣ ಪ್ರಮಾಣ ಕಡಿಮೆ ಮಾಡುವ ಬಗ್ಗೆ ತಾಯಿ ಮರಣದ ಪ್ರಮಾಣ ಮಾಡುವುದರ ಬಗ್ಗೆ ಹಾಗೂ ತಾಯಿ ಮಗು ಆರೋಗ್ಯದ ಬಗ್ಗೆ ಸೂಕ್ತ  ಆರೋಗ್ಯ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

2. ಜಿಲ್ಲಾ ಸರ್ವಲೆನ್ಸ್:
ಈ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಗಾವಹಿಸಲಾಗುವುದು. ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಒಬ್ಬ ಕಾರ್ಯಕ್ರಮಾಧಿಕಾರಿಗಳು ನಿಯೋಜಿಸಲಾಗಿದ್ದು ಸಾಂಕ್ರಾಮಿಕ ರೋಗ ನಿಯಂತ್ರಣದ ಬಗ್ಗೆ ಕ್ರಮವಹಿಸುತ್ತಾರೆ.

3) ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ ಮತ್ತು ಪೈಲೇರಿಯಾ ಇವುಗಳ ನಿಂತ್ರಣದ ಬಗ್ಗೆ
ಕ್ರಮವಹಿಸಲಾಗುವುದು.

4) ಕ್ಷಯ ರೋಗ ನಿಂತ್ರಣದ ಬಗ್ಗೆ ಕ್ರಮವಹಿಸಲಾಗುವುದು ಕುಷ್ಠರೋಗ ನಿಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

5) ಏಡ್ಸ್

6)ವಿಚಾರ ಗೋಷ್ಠಗಳು/ತರಬೇತಿಗಳು/ವಸ್ತುಪ್ರದರ್ಶನಗಳು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳವಾರು ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ವೃಂದಗಳ ನೌಕರರುಗಳಿಗೆ ಉತ್ತೇಜಿಸುವ ಸಲುವಾಗಿ ವಿಚಾರ ಗೋಷ್ಠಿಗಳ ಮುಖಾಂತರ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಹಾಗೂ ಇಲಾಖೆ ಹಾಗೂ ಆರೋಗ್ಯದ ಬಗ್ಗೆ ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನಗಳನ್ನು ಶ್ರೀ ಸಿದ್ದಗಂಗಾಮಠದಲ್ಲಿ ಹಾಗೂ ಪಟ್ಟನಾಯಕನಹಳ್ಳೀಯಲ್ಲಿ ಪ್ರತಿ ವರ್ಷವೂ ಏರ್ಪಡಿಸಲಾಗುವುದು.

ಮಾಹಿತಿ ಶಿಕ್ಷಣ ಸಂಪರ್ಕ ವಿಭಾಗ:

ಮಾಹಿತಿ ಶಿಕ್ಷಣ ಸಂಪರ್ಕ/ವಸ್ತು ಪ್ರದರ್ಶನ/ತರಬೇತಿ ಮತ್ತು ಎಲ್ಲಾ ರಾಷ್ಟ್ರೀಯ ಆರೋಗ್ಯ ದಿನಗಳ ಆಚರಣೆ ಮತ್ತು ಜಾಥಾ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವುದು.

ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಜಾನಪದ ಕಲಾತಂಡದಿಂದ ನಾಟಕ ಮತ್ತು ಜಾಥಾ ಕಾರ್ಯಕ್ರಮಗಳ ಮುಖಾಂತರ ಜನರಲ್ಲಿ ಅರಿವು ಮೂಡಿಸುವುದು.

ಪ್ರಸಕ್ತ ಸಾಲಿನಿಂದ ಸಮುದಾಯ ರೇಡಿಯೋಗಳ ಮುಲಕ ತಜ್ಞ ವೈದ್ಯರು ಮತ್ತು ಆರೋಗ್ಯ ಶಿಕ್ಷಣಾದಿಕಾರಿಗಳ ಮೂಲಕ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿಸಿ ಭಿತ್ತರಿಸುವುದರ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ.

ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಿಗೆ ಮಾಹಿತಿ ನೀಡುವುದು. ಮತ್ತು ತಾಲ್ಲೂಕು ಮಟ್ಟದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಕಾರ್ಯಗಾರವನ್ನು ಏರ್ಪಡಿಸಿ ಇಲಾಖಾ ಸೇವೆಗಳ ಬಗ್ಗೆ ಮಾಹಿತಿ ನಿಡುವುದು.

ಪ್ರತಿ ವರ್ಷವು ಶ್ರೀ ಸಿದ್ದಗಂಗಾಮಠ ತುಮಕೂರು ಮತ್ತು ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಬೃಹತ್ ವಸ್ತು ಪ್ರದರ್ಶನವನ್ನು ಏರ್ಪಡಿಸಿ ಕರಪತ್ರವನ್ನು ನೀಡುವುದರ ಮೂಲಕ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ.

ಪ್ರಸ್ತಕ ಸಾಲಿನಲ್ಲಿ ಎರಡು ದಿನಗಳಿಗಿಂತ ಹೆಚ್ಚು ನಡೆಯುವ ಜಾತ್ರೆಯಲ್ಲಿ ಆಯ್ದ 5 ತಾಲ್ಲೂಕುಗಳಾದ ಶಿರಾ ,ಮಾಗೋಡು ಜಾತ್ರೆ, ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿ ತಾಲ್ಲೂಕು ಉರುಸ್, ಗುಬ್ಬಿ ಚನ್ನಬಸವೇಶ್ವರ ಜಾತ್ರೆಯಲ್ಲಿ ವಸ್ತು ಪ್ರದರ್ಶನ ಸೇರ್ಪಡಿಸಿ ದ್ವನಿವರ್ಧಕದ ಮೂಲಕ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಇಲಾಖಾ ಸೇವೆಗಳ ಬಗ್ಗೆ ಮಾಹಿತಿ ನೀಡುವುದು .

ಪಿ.ಸಿ.&ಪಿ.ಎನ್.ಡಿ.ಟಿ.ಕಾಯಿದೆ - 1994 ಗರ್ಭಧಾರಣಾ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನ

ಗರ್ಭಧಾರಣೆಗೆ ಮುಂಚೆ ಅಥಾವ ನಂತರ ಲಿಂಗ ಅಯ್ಕೆಯನ್ನು ನಿಷೇಧಿಸುವುದಕ್ಕಾಗಿ ಮತ್ತು ಅನುವಂಶೀಯ ವೈಪರೀತ್ಯಗಳನ್ನು ಮತ್ತು ಹುಟ್ಟಿನಿಂದ ಬರುವ ಕೆಲವು ಲಿಂಗ ವಿಕಾರವನ್ನು ಪತ್ತೆ ಹಚ್ಚುವ ಉದ್ದೇಶಕ್ಕಾಗಿ

ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗುವ ಲಿಂಗ ನಿರ್ಧರಣೆಗೆ ಅವುಗಳನ್ನು ದುರ್ಭಳಕೆ ಮಾಡಿಕೊಳ್ಳುವುದನ್ನು ತಡೆಯುವುದಕ್ಕಾಗಿ

ಭ್ರೂಣಲಿಂಗಪತ್ತೆ ಮಾಡುವುದು ಲಿಂಗ ಪತ್ತೆ ಮಾಡಲು,ಪರಿಕ್ಷೆಗೆ ಒಳಗಾಗಲು ಗರ್ಭಿಣಿ ಮಹಿಳೆ ಮೇಲೆ ಮಾನಸಿಕ ಒತ್ತಡ ತರುವುದು ಅಪರಾದ.

ಕಾನೂನು ಉಲ್ಲಂಘನೆ ಮಾಡಿದ ಅಪರಾದಕ್ಕೆ 3 ವರ್ಷ ಜೈಲು 50000/- ದಂಡ 2 ನೇ ಬಾರಿ ಮಾಡಿದ ಅಪರಾದಕ್ಕೆ5 ವರ್ಷ ಜೈಲು 100000/- ರೂ ದಂಡ

ಕರ್ನಾಟಕ ಖಾಸಗಿ ಅಧಿನಿಯಮ-2007

ಕರ್ನಾಟಕ ರಾಜ್ಯದಲ್ಲಿ ಖಾಸಗಿ ವೈದ್ಯಸಂಸ್ಥೆಗಲ ಪುರೋಭಿವೃದ್ದಿ ಮತ್ತು ಅವುಗಳ ಮೇಲ್ವಿಒಚಾರಣೆಗೆ ಹಾಗೂ ಅವುಗಳಿಗೆ ಸಂಬಂದಿಸಿದ ಅಥಾವ ಪ್ರಸಾಂಗಿಕವಾದ ವಿಷಯಗಳಿಗಾಗಿ ಉಪಬಂಧ ಕಲ್ಪಿಸಲು ಒಂದು ಅಧಿನಿಯಮ.

ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಆರೋಗ್ಯ ಪಾಲನೆಗೆ ಉತ್ತೇಜನ ನೀಡುವುದು ಮತ್ತು ವೈದ್ಯ ದರ್ಮದ ತತ್ವಗಳಿಗನುಸಾರ ಖಾಸಗಿ ವೈದ್ಯಕಿಯ ಸಂಸ್ಥಗಳ ವ್ಯವಹಾರಗಳನ್ನು ಕಾನೂನಿನ ಮೂಲಕ ನಿಯಂತ್ರಿಸಿ ಮೇಲ್ವಿಚಾರಣೆ ಮಾಡುವುದು.

 

ಜಿಲ್ಲಾ ವಲಯ ಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನ :
ಈ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳ ನಿರ್ವಹಣೆ, ಕಟ್ಟಡಗಳ ನಿರ್ಮಾಣ, ಆಸ್ಪತ್ರೆ ಉಪಕರಣಗಳ ದುರಸ್ತಿ ಹಾಗೂ ಸಾಧನ ಸಲಕರಣೆಗಳ ಸರಬರಾಜು ಮಾಡಲಾಗುವುದು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣ ಮಹಿಳೆಯರಿಗೆ ಕೆಳಕಂಡ ಕಾರ್ಯಕ್ರಮಗಳಡಿ ಸೌಲಭ್ಯಗಳನ್ನು ಅರ್ಹ ಗ್ರಾಮೀಣ ಮಹಿಳೆಯರಿಗೆ ಪ್ರೋತ್ಸಾಹ ಧನ ಹಾಗೂ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು.

ಸಂತಾನೋತ್ಪತಿ ಆರೋಗ್ಯ

ಅಂತರದ ಗರ್ಭದಾರಣೆಯ ವಿಧಾನಗಳಿಗೆ ಒತ್ತು ನೀಡುವುದು.

ಗರ್ಭದಾರಣಾ ಪರೀಕ್ಷಾ ಕಿಟ್ ಮತ್ತು ಸುರಕ್ಷಿತ ಗರ್ಭಪಾತದ ಸೇವೆ ತಲುಪಿಸುವುದು.

ತಾಯಿ ಆರೋಗ್ಯ

ಎಂ.ಸಿ.ಟಿ.ಎಸ್. ಮೂಲಕ ಗರ್ಭದಾರಣೆಯ ಶೀರ್ಘ್ರ ನೊಂದಣಿ ಹಾಗೂ ಸಂಪೂರ್ಣ ಅವಧಿ ಪ್ರಸವೊತ್ತರ ಆರೈಕೆ ತೀರ್ವ ರಕ್ತ ಹಿನತೆ ಇತರೆ ಗಂಡಾಂತರ ಗರ್ಭಿಣಿಯರನ್ನು ಗುರುತಿಸಿ ಸೂಕ್ತವಾಗಿ ನಿಭಾಯಿಸುವುದು.

ಸುಸಜ್ಜಿತ ತರಬೇತಿ ಹೊಂದಿದ ಸಿಬ್ಬಂದಿಯಿಂದ ಹೆರಿಗೆ ಸೇವೆಗಳು.

ನವಜಾತ ಆರೋಗ್ಯ

ಆಶಾ ಕಾರ್ಯಕರ್ತರ ಮೂಲಕ ಗೃಹ ಆಧಾರಿತ ನವಜಾತ ಶಿಶುಗಳ ಆರೈಕೆ .

ಹೆರಿಗೆಯಾಗುವ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕ ನವಜಾತ ಶಿಶು ಆರೈಕೆ ಹಾಗೂ ಪುನಶ್ಚೇತನ ಸೇವೆಗಳು.

ಮಕ್ಕಳ ಆರೋಗ್ಯ

ಅತಿಸಾರ ಬೇದಿ, ನ್ಯೂಮೋನಿಯಾ ನಿಯಂತ್ರಿಸಲು ಕಾರ್ಯಕ್ರಮ ಅನುಷ್ಠಾನ.

ಲಸಿಕಾ ನಿಯಂತ್ರಿಸಲು ಕಾರ್ಯಕ್ರಮ ಅನುಷ್ಠಾನ ಹಾಗೂ ಸೇವೆಗಳು.

ಪೂರಕ ಆಹಾರ,ಕಬ್ಬಿಣಾಂಶ ಮತ್ತು ಪೋಲಿಕ್ ಆಮ್ಲ ಮಾತ್ರೆಯ ಪೂರೈಕೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (4 ಆ:) ಜನನ ನ್ಯೂನತೆ, ವಿಕಾಶದಲ್ಲಿ ವಿಳಂಬ ಪೌಷ್ಠಿಕಾಂಶದ ಕೊರತೆ ಮತ್ತು ಕಾಯಿಲೆಗಳ ಪರೀಕ್ಷೆ ಮತ್ತು ನಿರ್ವಹಣೆ.

ಹದಿಹರೆಯದವರ ಆರೋಗ್ಯ

ಹದಿಹರೆಯದವರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯಕ್ಕಾಗಿ ಸ್ನೇಹಾ ಕ್ಲಿನಿಕ್ ಸೇವೆಗಳು.

ಋತುಚಕ್ರದ ಕಾರ್ಯಕ್ರಮ.

ಹದಿಹರೆಯದವರಲ್ಲಿ ಋತುಚಕ್ರದ ಸುಚಿತ್ವಕ್ಕಾಗಿ ಸ್ಯಾನಿಟರಿ ನ್ಯಾಪ್ ಕಿನ್ ಗಳು ಉಚಿತ ವಿತರಣೆ ಶುಚಿಕಾರ್ಯಕ್ರಮ.

ಜನನಿ ಸುರಕ್ಷಾ ಯೋಜನೆ :
ಜನನಿ ಸುರಕ್ಷಾ ಯೋಜನೆಯಡಿ ಮನೆಯಲ್ಲಿ ಹೆರಿಗೆ ಆದರೆ ರೂ.500-00 ಪ್ರೋತ್ಸಾಹಧನ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆದಲ್ಲಿ ರೂ. 700-00 ಹಾಗೂ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಆದಲ್ಲಿ ಕ್ರಮವಾಗಿ ರೂ. 600-00 ಹಾಗೂ ರೂ. 700-00 ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹೆರಿಗೆಯಾದಲ್ಲಿ ರೂ. 1500-00 ಗಳನ್ನು ಪ್ರೋತ್ಸಾಹಧನವನ್ನಾಗಿ ನೀಡಲಾಗುವುದು. ಒಪ್ಪಂದಕ್ಕೊಳಪಟ್ಟ ಖಾಸಗಿ ಆಸ್ಪತ್ರೆಯಲ್ಲಿಯೂ ಹೆರಿಗೆ ಮಾಡಿಸಿಕೋಂಡಲ್ಲಿ ಈ ಸೌಲಭ್ಯ ಪಡೆಯಬಹುದು.

ಫಲಾನುಭವಿಯು ತಾಯಿ ಕಾರ್ಡ್ ಹೊಂದಿರಬೇಕು .ವಯೋಮಿತಿ ಮತ್ತು ಜೀವಂತ ಜನನಕ್ಕೆ ನಿರ್ಬಂದವಿಲ್ಲ .ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಎ.ಪಿ.ಎಲ್.ಮತ್ತು ಎಸ್.ಸಿ. ಎಸ್.ಟಿ.ಗರ್ಭಿಣಿ ಮಹಿಳೆಯರಿಗೆ ಈ ಕೆಳಕಂಡಂತೆ ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಕ್ರ.ಸಂ. ವಿವರ ಮೊತ್ತ
1 ಮನೆ ಹೆರಿಗೆ 500
2 ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ 700
3 ಗ್ರಾಮೀಣ/ನಗರ ಪ್ರದೇಶಗಳಲ್ಲಿ ಹೆರಿಗೆ 600
4 ನಗರ ಪ್ರದೇಶದ ಹೆರಿಗೆ 700
5 ಖಾಸಗೀ ನರ್ಸೀಂಗ್ ಹೋಂ 1500

ಜನನಿ ಶಿಶು ಸುರಕ್ಷಾ ಕಾರ್ಯಕ್ರಮ

ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ/ ಹೆರಿಗೆ ಮಾಡಿಸಿಕೊಳ್ಳುವ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಗೂ ಹೆರಿಗೆ ಸೇವೆ ಹಾಗೂ ಶಿಶುವಿಗೂ (1 ವರ್ಷದವರೆಗೆ) ಉಚಿತ ಸೇವೆ. ಅಂದರೆ,

ವೈದ್ಯಕೀಯ ತಪಾಸಣೆ ಹಾಗೂ ಹೆರಿಗೆ

ಪ್ರಯೋಗಾಲಯ

ಔಷದಿಗಳು

ಊಟ

ರಕ್ತ

ಸಾರಿಗೆ ವ್ಯವಸ್ಥೆ (ಆರೋಗ್ಯ ಕವಚ 108) (ತಾಯಿ ಕಾರ್ಡ್ ಹೋಂದುವುದು ಕಡ್ಡಾಯ)

ಮಡಿಲು ಕಾರ್ಯಕ್ರಮ :
ಈ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಡಿಲು ತುಂಬುವುದನ್ನು ಹಮ್ಮಿಕೊಳ್ಳಲಾಗುವುದು. ಈ ಸಂದರ್ಭಗಳಲ್ಲಿ ಗರ್ಭಿಣಿ ಸ್ತ್ರೀಗೆ ಗಂಡಾಂತರ ಹೆರಿಗೆಗಳಲ್ಲಿ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಹಾಗೂ ಗ್ರಾಮೀಣ ಸ್ತ್ರೀಯರು ಪಡೆಯಬೇಕಾದ ಪ್ರತಿಬಂಧಕ ಲಸಿಕೆಗಳ ಬಗ್ಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸಲಾಗುವುದು.

ಸರ್ಕಾರಿ ಅಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಿ.ಪಿ.ಎಲ್./ಎಸ್.ಸಿ/ಎಸ್.ಟಿ ಫಲಾನುಭವಿಗಳಿಗೆ ಜಮುಖಾನ, ಬೆಡ್ ಶೀಟ್,ಹೊದಿಕೆ, ಹೊಟ್ಟೆಗೆ ಕಟ್ಟುವ ಬಟ್ಟೆ ,ಸ್ಯಾನಿಟರಿ ಪ್ಯಾಡ್ ಗಳು , ಮಗುವಿನ ರಬ್ಬರ್ ಶೀಟ್ ,ಸ್ವೆಟರ್, ಸೋಪಿನ ಪೆಟ್ಟಿಗೆ,ಒಳಗೊಂಡಂತೆ 19 ಸಾಮಗ್ರಿಗಳುಳ್ಳ ಒಂದು ಕಿಟ್ ವಿತರಿಸಲಾಗುವುದು ಫಲಾನುಭವಿಯು ತಾಯಿಕಾರ್ಡ್ ಬಿ.ಪಿ.ಎಲ್./ಎಸ್.ಸಿ/ಎಸ್.ಟಿ ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಿಗಳಿಗೆ ಮಾತ್ರ.

ಪ್ರಸೂತಿ ಆರೈಕೆ :
ಈ ಕಾರ್ಯಕ್ರಮದಡಿಯಲ್ಲಿ ನವಜಾತ ಶಿಶುಗಳಿಗೆ ರೋಗ ಪ್ರತಿಬಂಧಕ ಲಸಿಕೆಗಳನ್ನು ನೀಡಲಾಗುವುದು. ಹಾಗೂ ಈ ಕಾರ್ಯಕ್ರಮದಡಿಯಲ್ಲಿ ನವಜಾತ ಶಿಶುವಿನ ಆರೈಕೆಗೆ ಹಾಗೂ ಬಾಣಂತಿ ಶುಶ್ರೂಷೆಣೆಗೆ ಅಗತ್ಯವಿರುವ ವಸ್ತುಗಳನ್ನು ಒಟ್ಟಾರೆಯಾಗಿ ಮಡಿಲು ಕಿಟ್ಟು ಮುಖಾಂತರ ನೀಡುವ ಸೌಲಭ್ಯವಿರುತ್ತದೆ.

ಗರ್ಭಾವಸ್ಥೆಯ 4-5 ತಿಂಗಳಲ್ಲಿ ಪೌಷ್ಠಿಕ ಆಹಾರ ಸೇವನೆಗಾಗಿ ರೂ.1000/- ಗಳ ಆರ್ಥಿಕ ಸಹಾಯಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನಗರ ಪ್ರದೇಶದ ಬಾಂಣತಿಗೆ ರೂ.400/- ಮತ್ತು ಗ್ರಾಮೀಣ ಪ್ರದೇಶದ ಬಾಣಂತಿಗೆ ರೂ.300/- ಗಳ ಆರ್ಥಿಕ ಸಹಾಯ.

ಫಲಾನುಭವಿಯು ತಾಯಿಕಾರ್ಡ್ ಬಿ.ಪಿ.ಎಲ್./ಎಸ್.ಸಿ/ಎಸ್.ಟಿ ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಿಗಳಿಗೆ ಮಾತ್ರ. (ಕೋಲಾರ ಮತ್ತು ಧಾರವಾಢ ಜಿಲ್ಲೆಗಳನ್ನು ಹೊರತ್ತುಪಡಿಸಿ)

ತಾಯಿ ಭಾಗ್ಯ ಪ್ಲಸ್

ನೋದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗ ಮಾಡಿಸಿಕೊಂಡಲ್ಲಿ ರೂ.1000/- ಗಳ ಆರ್ಥಿಕ ಸಹಾಯ.

ಫಲಾನುಭವಿಯು ತಾಯಿಕಾರ್ಡ್ ಬಿ.ಪಿ.ಎಲ್./ಎಸ್.ಸಿ/ಎಸ್.ಟಿ ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಿಗಳಿಗೆ ಮಾತ್ರ.

1. ಸಾರ್ವತಿಕ ಲಸಿಕಾ ಕಾರ್ಯಕ್ರಮ :
ಈ ಕಾರ್ಯಕ್ರಮದಡಿಯಲ್ಲಿ 0 ವರ್ಷದಿಂದ 5 ವರ್ಷಗೊಳಗಿನ ಮಕ್ಕಳಿಗೆ ತಗಲಬಹುದಾದ ರೋಗಗಳ ವಿರುದ್ಧ ಪ್ರಾಥಮಿಕ ಹಂತದಲ್ಲಿ ಬಿ.ಸಿ.ಜಿ. ಪೋಲಿಯೋ ಹನಿ, ಡಿ.ಟಿ.ಪಿ. ಇತ್ಯಾದಿ ಲಸಿಕೆಗಳನ್ನು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ಹಾಗೂ ಪ್ರತಿವರ್ಷ ಜನವರಿ ಹಾಗೂ ಫೆಬ್ರವರಿ ಮಾಹೆಗಳಲ್ಲಿ 0 ವರ್ಷದಿಂದ 5 ವರ್ಷಗೊಳಗಿನ ಎಲ್ಲಾ ಮಕ್ಕಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಹಮ್ಮಿಕೊಳ್ಳಲಾಗುವುದು.

2. ಕುಟುಂಬ ಕಲ್ಯಾಣ :
ಈ ಕಾರ್ಯಕ್ರಮದಡಿಯಲ್ಲಿ ಸಂತಾನೋತ್ಪತ್ತಿಯಡಿಯಲ್ಲಿರುವ ಎಲ್ಲಾ ಅರ್ಹ ದಂಪತಿಗಳನ್ನು ಈ ಕಾರ್ಯಕ್ರಮದಡಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲಾಗುವುದು.  ಈ ಯೋಜನೆಯಡಿಯಲ್ಲಿ ಪುರುಷರಿಗೆ ವ್ಯಾಸೆಕ್ಟಮಿ, ಸ್ತ್ರೀಯರಿಗೆ ಟುಬೆಕ್ಟಮಿ, ಲ್ಯಾಪ್ರೋಸ್ಕೋಪಿಕ್ ಸಂತಾನಹರಣ ಶಸ್ತ್ರ ಚಿಕಿತ್ಸೆಯಸನ್ನು ನಡೆಸಲಾಗುವುದು. ಹಾಗೂ ಸರ್ಕಾರದ ಮಾರ್ಗದರ್ಶನದ ಸೂಚಿಯನ್ವಯ ಪ್ರೋತ್ಸಾಹಧನ ನೀಡಲಾಗುವುದು.  ಹೆರಿಗೆಯಾದ ನಂತರ ಅಂತರವನ್ನು ಕಾಯ್ದುಕೊಳ್ಳಲು ಪುರುಷರಿಗೆ ನಿರೋಧ್ ಬಳಕೆ, ಸ್ತ್ರೀಯರಿಗೆ ಐ.ಯು.ಡಿ, ನುಂಗುವ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು.

ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮ:

ಅರ್ಹ ದಂಪತಿಗಳನ್ನು ಗುರ್ತಿಸಿ ಅವರಿಗೆ ಕುಟುಂಬ ಕಲ್ಯಾಣ ವಿಧಾನಗಳಾದ ಶಾಶ್ವತ ವಿಧಾನಗಳು/ಟ್ಯುಬೆಕ್ಟಮಿ/ಲ್ಯಾಪ್ರೋಸ್ಕೊಪಿಕ್ ಟ್ಯುಬೆಕ್ಟಮಿ ಹಾಗೂ ಪುರುಷರಲ್ಲಿ ವ್ಯಾಸೆಕ್ಟಮಿ ವಿಧಾನಗಳಮೂಲಕ ಹಾಗೂ ತಾತ್ಕಲಿಕ ಕುಟುಂಬ ಕಲ್ಯಾಣ ವಿಧಾನಗಳಾದ ನುಂಗುವ ಗುಳಿಗೆ ಹಾಗೂ ನಿರೋದ್ಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸುವ ಸ್ಥಿರತೆಯನ್ನು ಉಂಟು ಮಾಡುವುದು.

ಸುರಕ್ಷತ ಗರ್ಭಪಾತ ವಿಧಾನಗಳನ್ನು ಎಂ.ಟಿ.ಪಿ. ಕಾಯ್ದೆಯಡಿಯಲ್ಲಿ ನೋದಾಯಿತ ಸರಕಾರಿ /ಖಾಸಗಿ ಆಸ್ಪತ್ರೆಯಲ್ಲಿ ಮಾಡಲು ಕ್ರಮ ವಹಿಸುವುದು.

ದಂತ ಭಾಗ್ಯ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರ5ಿಕರಿಗೆ ಬಿಪಿಎಲ್ ದಂತ ಪಂಕ್ತಿಯನ್ನು ನಿಯೋಜನೆ ಮಾಡುವುದು.

ರಾಷ್ಟ್ರೀಯ ಶ್ರವಣದೋಷ ಹತೋಟಿ ಹಾಗೂ ನಿವಾರಣಾ ಕಾರ್ಯಕ್ರಮ:

ಹುಟ್ಟಿದ ಮಕ್ಕಳಲ್ಲಿ ಶ್ರವಣದೋಷವನ್ನು ಕಂಡು ಹಿಡಿದು ಅವುಗಳಿಗೆ ಸೂಕ್ತ ಸಾಧನೆಯನ್ನು ನೀಡುವುದು.

ಕ್ವಾಲಿಟಿ ಅಶ್ಯೂರೆನ್ಸ್ ಕಾರ್ಯಕ್ರಮ:

ಕ್ವಾಲಿಟಿ ಅಶ್ಯೂರೆನ್ಸ್ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಸಾರ್ವಜನಿಕರಿಗೆ ನೀಡುವ ಸಲುವಾಗಿ ಉತ್ತಮ ವಾತಾವರಣ ಕಲ್ಪಿಸುವ ಯೋಜನೆಗಳು.

3. ಆರೋಗ್ಯ ಶಿಕ್ಷಣ ಮತ್ತು ಮಾಹಿತಿ ಕಾರ್ಯಕ್ರಮ :
ಈ ಕಾರ್ಯಕ್ರಮದಡಿಯಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುವ ಎಲ್ಲಾ ಆರೋಗ್ಯ ಕಾರ್ಯಕ್ರಮಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ವಸ್ತುಪ್ರದರ್ಶನದ ಮೂಲಕ ಗ್ರಾಮೀಣ ಮಟ್ಟದಲ್ಲಿ ಚಲನಚಿತ್ರ ಪ್ರದರ್ಶನ ಹಾಗೂ ಭಿತ್ತಿ ಪತ್ರಗಳ ಪ್ರದರ್ಶನದ ಮೂಲಕ ಸ್ತ್ರೀಶಕ್ತಿ ಸಂಘಗಳ ಮೂಲಕ ವಿಚಾರಗೋಷ್ಠಿ, ಚರ್ಚಾಸ್ಪರ್ಧೆ, ಆರೋಗ್ಯವಂತ ಶಿಶುಗಳ ಸ್ಪರ್ಧೆ ಇತ್ಯಾದಿಗಳನ್ನು ಹಾಗೂ ಅಂಗನವಾಡಿ ಶಿಕ್ಷಕಿಯರ ಮೂಲಕ ಪೌಷ್ಠಿಕ ಆಹಾರ ಪ್ರಾತ್ಯಾಕ್ಷಿಕೆ, ಪೋಷಕರ ಜೊತೆ ಸಂವಾದ, ಗುಂಪು ಚರ್ಚೆ ಇತ್ಯಾದಿಗಳನ್ನು ಏರ್ಪಡಿಸಲಾಗುವುದು ಹಾಗೂ ಇಲಾಖೆ ಸಿಬ್ಬಂದಿ ಮೂಲಕ ಗ್ರಾಮೀಣ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ರಸ್ತೆ ಬದಿಯ ತಿಪ್ಪೇಗುಂಡಿಗಳ ಸ್ಥಳಾಂತರ, ಶುದ್ಧ ಕುಡಿಯುವ ನೀರಿನ ಬಳಕೆ ಹಾಗೂ ನೀರಿನ ಮುಖಾಂತರ ಹರಡುವ ಸಾಂಕ್ರಾಮಿಕ ರೋಗಗಳ ತಿಳುವಳಿಕೆ ಇತ್ಯಾದಿಗಳನ್ನು ತಿಳಿಸಲಾಗುವುದು.

4. ರೋಗ ನಿಯಂತ್ರಣ ಕಾರ್ಯಕ್ರಮಗಳು :
ಸಮಗ್ರ ರೋಗ ಕಣ್ಗಾವಲು ಘಟಕ (ಸರ್ವಲೆನ್ಸ್)

ಜಿಲ್ಲಾ ಕಣ್ಗಾವಲು ಕಾರ್ಯಕ್ರಮ:

ಜಿಲ್ಲಾ ಕಣ್ಗಾವಲು ಅಧಿಕಾರಿಗಳು ಈ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ನಿಯಂತ್ರಿಸುತ್ತಿದ್ದು ,ಜಿಲ್ಲೆಯಲ್ಲಿನ ಎಲ್ಲಾ ಸಾಂಕ್ರಾಮಿಕ ಹಾಗೂ ಆಸಾಂಕ್ರಾಮಿಕ ರೋಗಗಳ ಹತೋಟಿಯ ಜವಾಬ್ದಾರಿ ಹೊಂದಿರುತ್ತಾರೆ.ಐಡಿಎಸ್ಪಿಶ (ಸಾಂಕ್ರಾಮಿಕ ರೋಗಗಳ ಹಾಗೂ ಉಲ್ಬಣಪ್ರಕರಣಗಳ ನಿಯಂತ್ರಣ ಕಾರ್ಯಕ್ರಮ) ಎನ್.ಪಿ.ಸಿಡಿಸಿಎಸ್-ಎನ್ ಪಿ ಎಚ್ ಸಿಇ (ಅಸಾಂಕ್ರಮಿಕ ರೋಗಗಳು ನಿಯಂತ್ರಣ ಹಾಗೂ ವಯೋವ್ರದ್ದ ಆರೋಗ್ಯ ಕಾರ್ಯಕ್ರಮ ) ಎನ್.ಟಿ.ಸಿ.ಪಿನ (ತಂಬಾಕು ನಿಯಂತ್ರಣ ಕಾರ್ಯಕ್ರಮ) ಐಡಿಡಿ(ಅಯೋಡಿನ್ ನ್ಯೂನತೆ ನಿಯಂತ್ರಣ, ), ಎನ್ ಪಿ,ಪಿ.ಸಿ,.ಎಫ್ (ಫ್ಲೋರೋಸಿಸ್) ಇತ್ಯಾದಿ ರಾಷ್ಟ್ರೀಯ ಕಾರ್ಯಕ್ರಮ ಗಳಡಿಯಲ್ಲಿ ಜಿಲ್ಲಾದ್ಯಂತ ನಿರಂತರ ಕಣ್ಗಾವಲು ನಡೆಸಲಾಗುತ್ತಿದೆ.


ರಾಷ್ಟ್ರೀಯ ಕೀಟಬಾಧಕ ರೋಗ ನಿಯಂತ್ರಣ ಕಾರ್ಯಕ್ರಮ (ಮಲೇರಿಯಾ ನಿಯಂತ್ರಣ ಕಾರ್ಯಕ್ರಮ)

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನನಿಯಂತ್ರಣ ಕಾರ್ಯಕ್ರಮ :

ಈ ಕಾರ್ಯಕ್ರಮದಡಿಯಲ್ಲಿ ಮಲೇರಿಯಾ ,ಡೆಂಗ್ಯೂ ಚಿಕುಂಗುನ್ಯಾ ಆನೇಕಾಲು ರೋಗ ಮಡದುಳು ಜ್ವರ,ಕಾಲ ಅಜಾರ್ ರೋಗಗಳು ಒಳಪಟ್ಟಿದ್ದು ಕಾಲಾ ಅಜಾರ್ ರೋಗವು ಕರ್ನಾಟಕದಲ್ಲಿ ಕಂಡುಬಂದಿರುವುದಿಲ್ಲ.

ಮಲೇರಿಯ: ರೋಗಕ್ಕೆ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರು ಮನೆ ಬೇಟಿನೀಡಿ ಜ್ವರ ಸಮೀಕ್ಷೆ ನಡೆಸಿ ಜ್ವರ ಪ್ರಕಟಣೆಯಿಂದ ರಕ್ತಲೇಪನ ಸಂಗ್ರಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ 24-48 ಗಂಟೆಯೊಳಗೆ ಪರೀಕ್ಷಿಸಿ ಮಲೇರಿಯ ಪ್ರಕರಣ ಕಂಡುಬಂದಲ್ಲಿ ತಕ್ಷಣವೆ ತೀವ್ರ ಚಿಕಿತ್ಸೆಯನ್ನು ಪ್ರಾರಂಭಿಸಲಾಗುತ್ತದೆ.

ಪ್ರಾಯೋಗಶಾಲೆ ಲಭ್ಯವಿಲ್ಲದ ಹಳ್ಳಿಗಳಲ್ಲಿ ಕಾರ್ಯಕರ್ತೆಯರ ಮುಖಾಂತರ ಮಲೇರಿಯ ಪರೀಕ್ಷಿಸಿ ದೃಢಪಟ್ಟ ಪ್ರಕರಣಗಳಿಗೆ ತಕ್ಷಣವೇ ತೀವ್ರ ವಿಕಿತ್ಸೆ ಪ್ರಾರಂಬಿಸಲಾಗುತ್ತದೆ.

1ಕಿಂತ ಹೆಚ್ಚು ಕಂಡು ಬಂದ ಹಳ್ಲಿಗಳಲ್ಲಿ ಕೀಟನಾಶಕಗಳನ್ನು ಸಿಂಪಡಣಾ ಕಾರ್ಯಕ್ರಮ ನಡೆಸಲಾಗುತ್ತದೆ.

ವಲಸೆ ಕಾರ್ಮಿಕರನ್ನು ಗುರುತಿಸಿ ಜ್ವರ ಸಮೀಕ್ಷೆ ನಡೆಸಿ ರಕ್ತಲೇಪನಗಳನ್ನು ತೆಗೆದು ಪರೀಕ್ಷಿಸಲಾಗುತ್ತಿದೆ .

ಡೆಂಗ್ಯೂಮತ್ತು ಚಿಕುಂಗುನ್ಯಾ : ಆರೋಗ್ಯ ಸಹಾಯಕರು ಗಾಹೂ ಆಶಾ ಕಾರ್ಯಕರ್ತೆಯರಿಂದ ನಿಯಮಿತವಾದ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ.

ನಗರ ಪ್ರದೇಶದಲ್ಲಿ ಸಾಮೂಹಿಕವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಂದ ನಿಯಮಿತವಾದ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ, ಲಾರ್ವ ಾಕಂಡುಬಂದ ತಾಣಗಳಲ್ಲಿ ಅಬೆಟ್ ದ್ರಾವಣ ಹಾಕಲಾಗುತ್ತಿದೆ.

ಆರೋಗ್ಯ ಸಹಾಯಕರಿಂದ ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಲಾರ್ವಾ ಪ್ರಾತ್ಯಕ್ಷತೆ ನಡೆಸಿ ಮಕ್ಕಳಿಗೆ ಶಿಕ್ಷಕರಿಗೆ ,ಹಾಗೂ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನಡಲಾಗುತ್ತಿದೆ.

ನೀರಿನ ತಾಣಗಳನ್ನು ಗುರುತಿಸಿ ಲಾರ್ವಾಹಾರಿ ಮೀನಿಗಳನ್ನು8 ಬಿಡಲಾಗಿದೆ.(ಗಪ್ಪಿ ಮತ್ತು ಗ್ಯಾಂಬೂಸಿಯಾ)

ಸ್ಥಳಿಯ ಟಿವಿ ಮಾದ್ಯಮದಲ್ಲಿ ಡೆಂಗ್ಯು ಮತ್ತು ಚಿಕುಂಗುನ್ಯಾ ರೋಗಗಳಿಗೆ ಸಂಬಂದಿಸಿದ ಜಾಹಿರಾತು ನೀಡಲಾಗಿದೆ.

ಕರ ಪತ್ರ ಹಾಗೂ ಧ್ವನಿವರ್ಧಕಗಳ ಮೂಲಕ ರಾಷ್ಟ್ರೀಯಾ ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ.

ಶಾಲೆಗಳಲ್ಲಿ ಮಕ್ಕಳಿಗೆ ಚರ್ಚಾ ಸ್ಪರ್ದೆ, ಆಶುಭಾಷಣ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಇಲಾಖಾ ವತಿಯಿಂದ ಬಹುಮಾನಗಳನ್ನು ವಿತರಿಸಲಾಗಿದೆ.

ಆರೋಗ್ಯ ಸಹಾಯಕರು ಹಳ್ಳಿ ಗಳಿಗೆ ಭೇಟಿ ನೀಡಿದಾಗ ಸಂಶಯಾಸ್ಪದ ಡೆಂಗ್ಯೂ ಮತ್ತು ಚಿಕುಂಗುನ್ಯಾ ಪ್ರಕರಣಗಳು ಕಂಡುಬಂದಲ್ಲಿ ಅವರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿ ಜಿಲ್ಲಾ ಸರ್ವೇಲೆನ್ಸ್ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಲಾಗುತ್ತಿದೆ.

ಡೆಂಗ್ಯೂಪ್ರಕರಣ ವರದಿಯಾದ ಹಳ್ಳಿಗಳಲ್ಲಿ ಇಳಾಂಗಣ ಧೂಮೀಕರಣ ಮಾಡಲಾಗುತ್ತಿದೆ.

ಫೈಲೇರಿಯ: ಕಂಡುಬಂದ ಫೈಲೇರಿಯ ರೋಗಿಗಳಿಗೆ ಮಾರ್ಬಿಡಿಟಿ ಕಿಟ್ ಗಳನ್ನು ನೀಡಲಾಗಿದೆ.


ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮ

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಗಳು:

ಈ ಕಾರ್ಯಕ್ರಮ ವ್ಯಾಪ್ತಿಗೆ ಆರೋಗ್ಯ ಇಲಾಖೆಯ ನಾಲ್ಕು ಕಾರ್ಯಕ್ರಮಗಳು ಬರುವುದು.

1)ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಗಳು

2)ರಾಷ್ಟ್ರೀಯ ಅಂಧತ್ವ ಕರ್ಯಕ್ರಮ.

3)ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ.

4) ಜಿಲ್ಲಾ ಅಂಗವಿಕ ಕಲ್ಯಾಣ ಕಾರ್ಯಕ್ರಮ

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ

ಜನರಲ್ಲಿಅರಿವು ,ಶಢಂಕಿತ ಕುಷ್ಠರೋಗಿಗಳ ಪತ್ತೆ, ಪ್ರಕರಣವನ್ನು ಧೃಢೀಕರಿಸುವುದು,6ತಿಂಗಳು,12 ತಿಂಗಳುಗಳ ಚಿಕಿತ್ಸೆ ಪ್ರಕರಣಗಳಿಗೆ ಲೆಪ್ರಾ ರಿಯಾಕ್ಷನ್ಗಳ ಪತ್ರ ಚಿಕಿತ್ಸೆ ರೋಗಿಗೆ ವರ್ಷದಲ್ಲಿ ಎರಡು ಜೊತೆ ಚಪ್ಪಲಿ ವಿತರಣೆ ,ಪೂರಕ ೌಷಧಿ ವಿತರಣೆ , ಕೈ-ಕಾಲು ಹುಣ್ನುಗಳಿಗೆ ಅಂಗವಿಕಲತೆ ರೋಗಿಗಳಿಗೆ ಚಿಕಿತ್ಸೆಯ ನಂತರ ಶಸ್ತ್ರ ಚಿಕಿತ್ಸೆ, ವೈದ್ಯಾಧಿಕಾರಿಗಳಿಗೆ ಸಿಬ್ಬಂದಿಗೆ ಆಶಾಗಳಿಗೆ ತರಬೇತಿ ,ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಸೋಮವಾರ ಸ್ಪರ್ಶ್ ಚರ್ಮರೀಗ ಕ್ಲಿನಿಕ್ ಹಾಲಿ ಜಿಲ್ಲೆಯಲ್ಲಿ ಸುಮಾರು 80 ಪ್ರಕರಣಗಳು ಚಿಕಿತ್ಸೆಯಲ್ಲಿ ಇರುತ್ತದೆ.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ.

ಈ ವರ್ಷ2016-17 ರಲ್ಲಿ ಆರಂಭವಾಗಿದ್ದು ಇಲ್ಲಿ ವೈದ್ಯರು, ಸಿಬ್ಬಂದಿಗಳು ವಾರದಲ್ಲಿ ಮೂರು ಬಾರಿ ತಾಲ್ಲೂಕುಗಳಿಗೆ, ಪ್ರಾ.ಆ.ಕೇಂದ್ರಗಳಿಗೆ ಬೇಟಿ ಕೊಟ್ಟು ಮನೋ ರೋಗಿಗಳ ತಪಾಸಣೆ ಸಮಾಲೋಚನೆ, ಚಿಕಿತ್ಸೆ ನೀಡುತ್ತಾರೆ. ವಾರದಲ್ಲಿ ಮೂರು ದಿವಸ ಕೇಂದ್ರ ಸ್ಥಾನದಲ್ಲಿ ಮನೋ ಚೈತನ್ಯ ಕ್ಲಿನಿಕ್ ನಡೆಸಲಾಗುವುದು.ಇಲಾಖೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ನಡೆದಿರುತ್ತದೆ. ಶಾಲಾ ಕಾಲೇಜುಗಳಲ್ಲಿ ಸಮಾಲೋಚಕರು ವಾರದಲ್ಲಿ ಒಮ್ಮೆ ಬೇಟಿ ನೀಡುತ್ತಾರೆ. ಸ್ಲಮ್ ಗಳಿಗೆ ವಾರದಲ್ಲಿಮ ೆರಡುಕಡೆ ಸಮಾಲೋಚನೆ ಕೌನ್ಸಿಲರ್ ಸಮಾಲೋಚನೆ.ಕರ್ತವ್ಯ ಸ್ಥಳಗಳಿಗೆ ವಾರದಲ್ಲಿ ಎರಡು ಕಡೆ ಬೇಟಿ ಕೊಟ್ಟು ಸಮಾಲೋಚನೆ ಹಾಸ್ಟೆಲ್ ಶಕ್ಷಕರಿಗೆ ಜಿಲ್ಲೆಯಾದ್ಯಂತ ತರಬೇತುದಾರರು ತರಬೇತಿ ಖಾಸಗಿ ಮಾನೋ ವೈದ್ಯೆರಿಂದ ತಾಲ್ಲೂಕು ಮಟ್ಟದಲ್ಲಿ ಆಸ್ಪತ್ರೆಗಳಿಗೆ ಮನೋ ಚಿಕಿತ್ಸೆ ತಪಾಸಣಾ ಚಿಕಿತ್ಸೆ . ಮಾನಸಧಿಕ ಹಗಲು ಪುನರ್ ವಸತಿ ಕೇಂದ್ರ ಜಿಲ್ಲೆಯಾದ್ಯಂತ ಕಾರ್ಯಕ್ರಮ, ತುಮಕೂರು ನಗರದಲ್ಲಿ ಮುಖೇನ ಆರಂಭಿಸಲಾಗಿದೆ.

ಜಿಲ್ಲಾ ವಿಶೇಷ ಚೈತನರ ಕಾರ್ಯಕ್ರಮ:

ನೂತನ ಕಾರ್ಯಕ್ರಮ ನಮ್ಮ ಕಚೇರಿಗೆ ವಿಶೇಷ ಶಿಬಿರಗಳನ್ನು ಯೋಜನೆಆ ವಿಒಕಲಚೇತನರಿಗೆ ಪ್ರಮಾಣ ಪತ್ರ ಸಲಕರಣೆಗಳ ಻ವಶ್ಯಕತೆಗಳನ್ನು ನಿಗದಿ ಪಡಿಸುವುದು .ಜಿಲ್ಲಾ ಆಂಗವಿಕಲರ ಕಛೇರಿಯ ಸಂಯೋಜನೆಯಲ್ಲಿ ಕೆಲಸ ನಿರ್ವಹಿಸುವುದು


ಅಂಧತ್ವ ನಿವಾರಣಾ ಕಾರ್ಯಕ್ರಮ

ರಾಷ್ಟ್ರೀಯ ಅಂಧತ್ವ ಕಾರ್ಯಕ್ರಮ:

ಆ ಕಾರ್ಯಕ್ರಮದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಸರ್ಕಾರಿ ಆಸ್ಪತ್ರೆ ಮತ್ತು ಮುಖೇನ್ ಸುಮಾರು 13000 ಕಣ್ಣಿನ ಶಸ್ತ್ರ ಚಿಕಿತ್ಸೆಗಳಯ ಪ್ರತಿ ಸಾಲಿನಲ್ಲಿ ನಡೆಯುತ್ತವೆ. ಶಾಲಾ ಮಕ್ಕಳ ಕಣ್ಣಿನ ಪರೀಕ್ಷೆ, ಉಚಿತ ಕನ್ನಡಕ ವಿತರಣೆ , ಸುಮಾರು 3000 ಕನ್ನಡಕಗಳು , ಬಿಪಿಎಲ ಕಾರ್ಡ್ ಹೊಂದಿರುವ ವೃದ್ದರಿಗೆ ಸುಮಾರು 3000 ಐ.ಇಸಿ ಕಾರ್ಯಕ್ರಮಗಳು,ಇತರೆ ಕಣ್ಣಿನ ರೋಗಗಳ ಚಿಕಿತ್ಸೆ ,ಡಯಾಬಿಟಿಕ್ ರೆಟಿನೋಪಥಿ ಖಾಯಿಲೆಯ ಚಿಕಿತ್ಸೆ.


ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ :

ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಂತ್ರಣ ಕಾರ್ಯಕ್ರಮ -ಗುರಿಗಳು

ಎಲ್ಲಾ ಕ್ಷಯರೋಗಿಗಳಲ್ಲಲಿ ಶೇಕಡಾ90% ರಷ್ಟು ಅಧಿಸೂಚನೆ ಪ್ರಮಾಣವನ್ನು ಸಾಧಿಸುವುದು.

ಶೇಕಡಾ 90%ರಷ್ಟು ಯಶಶ್ವಿನದರ ಪ್ರಮಾಣವನ್ನು ಸಾಧಿಸಲು 85%ರಷ್ಟು ಮರು ಚಿಕಿತ್ಸೆಯ ಯಶಸ್ಸನ್ನು ಸಾಧಿಸುವುದು.

ಬಹು ಔಷಧರೋಗ ನಿರೋದಕ ಕ್ಷಯರೋಗಿಗಳಲ್ಲಿ ಗಮನಾರ್ಹವಾಗಿ ಚಿಕಿತ್ಸೆಯಲ್ಲಿ ಯಶಶ್ವಿ ಪರಿಣಾಮಗಳನ್ನು ಸಾಧಿಸುವುದು.

ಕ್ಷಯರೋಗಿಗಳ ಆ ನಾರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.

ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಗಳು ಕ್ಷಯರೋಗ ಚಿಕಿತ್ಸಾ ಘಟಕಗಳಾಗಿ ಕ್ಷಯರೋಗಿಗಳ ಮೇಲ್ವಿಚಾರಣೆ ಹಾಗೂ ಉಸ್ತುವಾರಿ ನಿರ್ವಹಿಸುತ್ತಿವೆ. ಒಂದು ಲಕ್ಷ ಜನಸಂಖ್ಯೆಗೆ 1ರಂತೆ ಕಫ ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಹಾಗು ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿಯೂ ಸಹ ಕಫ ಪರೀಕ್ಷಾ ಕೇಂದ್ರ ಗಳು ಮತ್ತು ನೇರನಿಗಾವಣಾ ಚಿಕಿತ್ಸೆ ದೊರೆಯುತ್ತದೆ.

ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ,ತುಮಖುರು ಮತ್ತು ಎಸ್.ವಿ.ಐ. ಆರ್.ಹೆಚ್. ಸಿ. ಪಾವಗಡ ಿಲ್ಲಿ ಯಂತ್ರದ ಮುಖಾಂತರ ಬಹು ಔಷಧ ನಿರೋಧಕ ಕ್ಷಯರೋಗದ ಪತ್ತೆಹಚ್ಚಲುಆಗುತ್ತಿದೆ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಇವೆಲ್ಲವುಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.


ಏಡ್ಸ್ ನಿಯಂತ್ರಣ ಕಾರ್ಯಕ್ರಮ

ಡ್ಯಾಪ್ಕೋ ಕಾರ್ಯಕ್ರಮದ ಉದ್ದೇಶ:

ಹೊಸ ಹೆಚ್ ಐವಿ ಸೋಂಕನ್ನು -ಸೊನ್ನೆಗೆ ತನ್ನಿ.

ಕಳಂಕ ತಾರತಮ್ಯವನ್ನು -ಸೊನ್ನೆಗೆ ತನ್ನಿ

ಹೆಚ್,ಐ,ವಿ /ಏಡ್ಸ ನಿಂದ ಸಂಬವಿಸುವ ಸಾವಿನ ಪ್ರಮಾಣವನ್ನು ಸೊನ್ನೆಗೆ ತನ್ನಿ

ಎಲ್ಲರಿಗೂ ಉಚಿತ ಆಪ್ತಸಮಾಲೊಚನೆ ಹಾಗೂ ಪರೀಕ್ಷೆಯ ಸೇವೆಯನ್ನು ಒದಗಿಸುವುದು ಹಾಗೂ ಸೋಂಕಿತರರಿಗರ ೆ,ಆರ್.ಟಿ.ಚಿಕಿತ್ಸೆ ಒದಗಿಸುವುದು .

ಐ,ಇಸಿ ಕಾರ್ಯಕ್ರಮದಿಂದ ೆಲ್ಲರಿಗೂ ಅರಿವು ಮೂಡಿಸುವುದು.

ವರದಿಯ ಪರಿಶಶೀಲನೆ ಮತ್ತು ಮೌಲ್ಯಮಾಪನ ,ಸೋಂಕಿತರಿಗೆ /ಬಾದಿತರಿಗೆ ಸಾಮಾಜಿಕ ಸೌಲತ್ತುಗಳನ್ನು ಪಡೆಯುವಲ್ಲಿ ಸಹಕರಿಸುವುದು.
ಆಶಾ ಕಾರ್ಯಕ್ರಮ

ಆರೋಗ್ಯ ಕವಚ ಕಾರ್ಯಕ್ರಮ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕ್ರಮ:

ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲ ಜನವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತದೆ. ಅತ್ಯಂತ ದುಬಾರಿ ವ್ಯಚ್ಚದ ಚಿಕಿತ್ಸೆಗಳಾದತೃತೀಯ ಹಂತದ ವೈದ್ಯಕೀಯ ಚಿಕಿತ್ಸೆಗಳು ಜನಸಾಮಾನವಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹಲವಾರೆಉ ಕಾರ್ಯಕ್ರಮಗಳನ್ನು ರೂಪಿಸಿದೆ.

ಗಂಭಿರ ಸ್ವರೂಪದ ಹಾಗೂ ದುಬಾರಿ ವೆಚ್ಚದ ಕಾಯಿಲೆಗಳಾದ ಹೃದ್ರೋಗ, ನರರೋಗ ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ,ಗಂಭಿರ ಸ್ವರೂಪದ ಅಪಘತಗಳು ಮತ್ತು ನವಜಾತ ಶಿಶುಗಳಿಗೆ ಸಂಬಂದಿಸಿದ ರೋಗಗಳಿಂದ ಬಳಲುವ ಬಿಪಿಎಲ್ ಕುಟುಂಬ ಗಳಿಗೆ ವಾಜಪೇಯಿ ಆರೋಗ್ಯ ಶ್ರೀ ಎ..ಪಿ .ಎಲ್. ಕುಟುಂಬಗಳಿಗೆ ರಾಜೀವ್ ಆರೋಗ್ಯ ಭಾಗ್ಯ ಹಾಗೂ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಮುಂತಾದ ಮಹತ್ವ ದ ಯೋಜನೆಗಳನ್ನು ಜಾರಿಗೊಳಿಸಿದೆ. ಈಯೋಜನೆಯನ್ನು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಅನುಷ್ಟನಗೋಳಿಸಲು ಅನುಕೂಲವಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಎಂಬ ಸ್ವಾಯತ್ತ ಸಂಸ್ಥಯನ್ನು ರಚಿಸಲಾಗಿದೆ. ಈ ಟ್ರಸ್ಟ್ ಮುಖ್ಯಮಂತ್ರಿಗಳ ಪ್ರಧಾನ ಪೋಷಕತ್ವದ ಸದಸ್ಯೆ ಮಂಡಳಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯ ಕಾರ್ಯಕಾರಿ ಸಮಿತಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ.

ವಾಜಪೇಯಿ ಆರೋಗ್ಯ ಶ್ರೀ ಯೋಜನೆ

ಉದ್ದೇಶ: ಹೃದ್ರೋಗ ಕ್ಯಾನ್ಸರ್, ನರರೋಗ , ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಗಂಭೀರಸ್ವರೋಪದ ಅಪಘತಗಳು ಮತ್ತು ನವಜಾತ ಶಿಶುಗಳಿಗೆ ಸಂಬಂದಿಸಿದ ರೋಗಗಳು ಮುಂತಾದ ಆಘಾತಕಾರಿ ಕಾಯಿಲೆಯಿಂದ ನರಳುವ ಬಡತನ ರೇಖೆಗಿಂತ ಕೆಳಗಿರುವ (ಬಿ ಪಿ ಎಲ್ ) ಕುಟುಂಬಗಳ ಸದಸ್ಯರಿಗೆ ಅತ್ಯುತ್ತಮ ದರ್ಜೆಯ ಸೂಪರ್ ಸ್ಪೆಚಲಿಟಿ ಆಸ್ಪತ್ರೆಗಳಲ್ಲಿ , ಉಚಿತವಾಗಿ ಶಸ್ತ್ರ ಚಿಕಿತ್ಸೆ ಮತ್ತು ಆರೈಕೆಯ ಸೌಲಭ್ಯದೊರಕುವುದು ವಾಜಪೇಯಿ ಆರೋಗ್ಯ ಶ್ರೀ ಯೋಜನೆಉ ಉದ್ದೇಶವಾಗಿದೆ.

ಅರ್ಹತೆ: ಪಲಾನುಭವಿಗಳು ಬವತನ ರೇಖೆಗಿಂತ ಕೆಳಗಿರುವವರಾಗಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಪೂಋಐಕೆ ಇಲಾಖೆಯಿಂದ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದವರಾಗಿರಬೇಕು.

ಯಾರಿಗೆ? ಎಷ್ಟು ವೆಚ್ಚ? :ಪ್ರತಿ ಬಿ.ಪಿಎಲ್. ಕುಟುಂಬಕ್ಕೆ ಒಂದು ವರ್ಷಕ್ಕೆ ರೂ 1.5 ಲಕ್ಷ ಮಾಲ್ಯದ ಚಿಕಿತ್ಸಾ ಸೌಲಭ್ಯ ದೊರೆಯುತ್ತದೆ. ಆದಾಗ್ಯೂ, ವಿಶೇಷ ಪ್ರಕರಣಗಳಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತ ರೂ.50000 /-ಮೌಲ್ಯದ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುವುದು . ಈ ಮೊತ್ತ ಕುಟುಂಬದ ಯಾವುದೇ 5 ಜನರಿಗೆ ಮಾತ್ರ ಲಭ್ಯವಿರುತ್ತದೆ.

ಯೋಜನೆಯಲ್ಲಿ ಒಳಗೊಂಡ ಕಾಯಿಲೆಗಳು ಗಂಭಿರ ಸ್ವರೂಪದ ಏಳು ಪ್ರಮುಖ ಕಾಯಿಲೆಗಳಾದ 1) ಹೃದ್ರೋಗ, 2) ನರರೋಗ 3) ಮೂತ್ರಪಿಂಡದ ಕಾಯಿಲೆ 4) ,ಕ್ಯಾನ್ಸರ್ 5) ಸುಟ್ಟಗಾಯ, 6) ಗಂಭಿರ ಸ್ವರೂಪದ ಅಪಘತಗಳು (ವಾಹನ ಕಾಯಿದೆಯಲ್ಲಿ ಒಳಗೊಳ್ಳದ ಪ್ರಕರಣಗಳು)ಮತ್ತು 7)ನವಜಾತ ಶಿಶುಗಳು ಮತ್ತು ಮಕ್ಕಳ ಕಾಯಿಲೆಗಳು ಹಾಗೂ ಅವುಗಳಿಗೆ ಸಂಬಂದಿಸಿದ 567 ಬಗೆಯ ಚಿಕಿತ್ಸಾ ವಿಧಾನಗಳನ್ನು ಮತ್ತು 109 ಅನುಸರಣಾ ಚಿಕಿತ್ಸೆಗಳನ್ನು ಒಳಗೊಡಿರುತ್ತದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ,ತುಮಕೂರು ಜಿಲ್ಲೆ

ಏಪ್ರಿಲ್ 2005ರಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಿಂದ ಉದ್ಘಾಟನೆಗೊಂಡ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಜನತೆಯ ಅವಶ್ಯಕತೆಗಳಿಗೆ ಸ್ಪಂದಿಸುವ ಸಮಾನಕರ ,ಎಟುಕಬಲ್ಲ, ಗುಣಮಟ್ಟ ಕಾಯ್ದುಕೊಂಡ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಗತಿ ಸಾಧಿಸಲು ಶ್ರಮವಹಿಸಿದೆ.

ಮುಕ್ತನಿಧಿ

1). ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ

10000ರೂ ಮಕ್ತನಿಧಿ.

ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ

.ಪ್ರತಿ ಕಂದಾಯ ಗ್ರಾಮಕ್ಕೆ ಒಂದು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ರಚನೆ.

.ಒಂದು ವರ್ಷದ ಪ್ರತಿ ಗ್ರಾಮ ಾರೋಗ್ಯ ಮತ್ತು ನೈರ್ಮಲ್ಯ ಸಮಿತಿ 10000/-ರೂ ಮಕ್ತ ನಿಧಿ ನೀಡಲಾಗುವುದು.

. ಕೆಲವೂಂದು ಸಾಮಾನ್ಯ ಚಟುವತಿಕೆ ಗಳಾದ ಗ್ರಾಮಮಟ್ಟದ ಸ್ವಚ್ಛತಾ ಚಟುವತಿಕೆ ನೈರ್ಮಲ್ಯ ಚಟುವಟಿಕೆ , ಶಾಲಾ ಆರೋಗ್ಯ ಚಟುವತಿಕೆಗಳು , ಅಂಗನವಾಡಿ ಕೇಂದ್ರದ ಮಟ್ಟದ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಅಥವಾ ತುರ್ತು ಸಮಯದಲ್ಲಿ ಸಾರಿಗೆ ಸಂಪರ್ಕಕ್ಕೆ ಅಂಬ್ಯುಲೆನ್ಸ್ ಸೇವೆಗಳು ಮಾಹಿತಿ ಮತ್ತು ಶಿಕ್ಷಣ ಮತ್ತು ಸಂವಹನದ ಚಟುವಟಿಕೆಗಳ ಸಾಮಗ್ರಿಗಳ ಪ್ರಕಟಣೆ ಇತ್ಯಾದಿಗಳಿಗೆ ಉಪಯೋಗಿಸಿಕೊಳ್ಳಬಹುದು.

. ಈ ನಿಧಿಯನ್ನು ಸಮುದಾಯದ ವಿವಿಧ ಗುಂಪುಗಲ ಚಟುವಟಿಕೆಗೆ ಅನುಕೂಲವಾಗುವಂತೆ ವಿನಿಯೋಗಿಸಬೇಕೇ ಹೊರತು ಒಂದು ಕುಟುಂಬಕ್ಕೆ ಅನುಕೂಲವಾಗುವಂತಲ್ಲ.

2) ಉಪಕೇಂದ್ರದ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ

ಎನ್.ಅರ್.ಹೆಚ್. ಎಂ. ನ ಭಾಗವಾಗಿ ಪ್ರತಿ ಆರೋಗ್ಯ ಉಪಕೇಂದ್ರಕ್ಕೆ 10000ರೂ ಗಳ ಮುಕ್ತ ನಿಧಿ ನೀಡಲಾಗಿದೆ. ಇದಲ್ಲದೆ 10000 ಗಳನ್ನು ನಿರ್ವಹಣಾ ನಿಧಿಯನ್ನಾಗಿ ನೀಡಲಾಗಿದ್ದು ಈ ನಿಧಿಯನ್ನು ಮಾರ್ಗ ಸೂಚಿಗಳನ್ವಯ ಖರ್ಚು ಮಾಡಬೇಕು.

3) ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ

ಎನ್.ಅರ್.ಹೆಚ್. ಎಂ. ನ ಭಾಗವಾಗಿ ಪ್ರತಿ ಆರೋಗ್ಯ ಕೇಂದ್ರಕ್ಕೆ 25,00 ಗಳ ಮುಕ್ತನಿಧಿಯನ್ನು ,50000 ವಾರ್ಷೀಕ ನಿರ್ವಹಣಾ ವೆಚ್ಚ ,100000 ಆರೋಗ್ಯ ರಕ್ಷಾ ಸಮಿತಿ ನಿಧಿಯನ್ನು ನೀಡಲಾಗಿದೆ.

ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಿಯ ಆರೋಗ್ಯ ಚಟುವಟಿಕೆಗಳನ್ನು ಕೈಗೊಳ್ಳಲು ವಾರ್ಷೀಕ 25000 ರೋ. ಗಳನ್ನು ಮುಕ್ತನಿಧಿಯನ್ನಾಗಿ ನೀಡಲಾಗುತ್ತಿದೆ.

ಇದಲ್ಲದೆ.ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಭೌತಿಕ ಪರಿಸರ ನಿರ್ವಹಣೆ ಮತ್ತು ಸುಧಾರಣೆಗಾಗಿ 50000 ರೂ ನಿರ್ವಹಣಾ ಅನುದಾನ ನೀಡಲಾಗಿದೆ.

ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ,ಶೌಚಾಲಯ ,ಇವುಗಳ ಬಳಕೆ ಮತ್ತು ನೀರ್ವಹಣೆಯಂತಹ ಆದ್ಯತಾ ವಿಷಯಗಳನ್ನು ಪೂರೈಸಲು ರೋಗಿ ಕಲ್ಯಾಣ ಸಮಿತಿ ( ಆರೋಗ್ಯ ರಕ್ಷಾ ಸಮಿತಿ) ಗೆ ಒಂದು ಲಕ್ಷ ರೂ ಗಳನ್ನು ಅನುದಾನ ನೀಡಲಾಗುತ್ತದೆ.

4 ಸಮುದಾಯ ಆರೋಗ್ಯ ಕೇಂದ್ರ /ತಾಲ್ಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ

ಎನ್.ಅರ್.ಹೆಚ್. ಎಂ. ನ ಭಾಗವಾಗಿ ಪ್ರತಿಸಮುದಾಯ ಆರೋಗ್ಯ ಕೇಂದ್ರಕ್ಕೆ, ತಾಲ್ಲೂಕು ಆಸ್ಪತ್ರೆ ಗಳಿಗೆ 50,00 ಗಳ ಮುಕ್ತನಿಧಿಯನ್ನು ,10000 ವಾರ್ಷೀಕ ನಿರ್ವಹಣಾ ವೆಚ್ಚ ,100000 ಆರೋಗ್ಯ ರಕ್ಷಾ ಸಮಿತಿ ನಿಧಿಯನ್ನು ನೀಡಲಾಗಿದೆ.

5 ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ

500000/- -ಆರೋಗ್ಯ ರಕ್ಷಾ ಸಮಿತಿ ನಿಧಿ

6. ಜನನಿ ಸುರಕ್ಷಾ ವಾಹಿನಿ

ಎಲ್ಲಾ ವರ್ಗದ ಗರ್ಭಿಣಿ ಮಹಿಳೆಯರು ಶೇಕಡ100% ಎಷ್ಟು ಹೆರಿಗೆ ಗಳನ್ನು ಆಸ್ಪತ್ರೆಗಳಲ್ಲಿ ಮಾಡಿಕೊಳ್ಳುವಂತೆ ಪ್ರೋತ್ಸಹಿಸಲು ಕರ್ನಾಟಕ ಸರ್ಕಾರವು ಆರೋಗ್ಯ ಕವಚ /108 ಮತ್ತು ಜನನಿ ಸುರಕ್ಷಾ ವಾಹಿನಿ ಎಂಬ ಎರಡು ಉಚಿತ ಸಾಗಾಣಿಕೆ ವ್ಯವಸ್ಥೆ ಮಾಡಿದೆ. ಜನನಿ ಸುರಕ್ಷ ವಾಹಿನಿ ತುರ್ತು ವಾಹಿನ ಸೇವೆಯು ಹೆರಿಗೆಗಾಗಿ ಆಸ್ಪತ್ರೆಗಳಿಂದ ಬಂದ ಮಹಿಳೆಯರನ್ನು ಮೇಲ್ದರ್ಜೆ ಆಸ್ಪತ್ರೆಗಳಿಗೆ ಮತ್ತು ಹೆರಿಗೆ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ತಾಯಂದಿರನ್ನು ಅವರ ಮನೆಗಳಿಗೆ ಉಚಿತವಾಗಿ ಸಾಗಿಸಲಾಗುವುದು.

7.ನಗು ಮಗು

ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ನಗು ಮಗು ಉಚಿತ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ.


8.ಆರೋಗ್ಯ ಕವಚ 108

ಅಪಘಾತ ,ಹೆರಿಗೆ, ಹಾವು ಕಡಿತ ,ಮತ್ತಿತರ ತುರ್ತು ಆರೋಗ್ಯ ಸಂದರ್ಭದಲ್ಲಿ ಆರೋಗ್ಉ ಕವಚ ಉಚಿತ ಅಂಬ್ಯುಲೆನ್ಸ್ ಸೇವೆಗಾಗಿ ದೂರವಾಣಿ ಸಂಖ್ಯೆ 108 ಅನ್ನು ಸಂಪರ್ಕಿಸಿ ಯಾವುದೇ ಕೊಡ್ ನಂಬರ್ ಬಳಸ ಬೇಕಾಗಿಲ್ಲ .ಖಾಸಗಿ ಸಂಸ್ಥೆಯಾದ .ಎಮ್.ಆರ್.ಐ. ಯೋದಿಗಿನ ಸಹಬಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.


ಕರ್ನಾಟಕ ಆರೋಗ್ಯ ಸುಧಾರಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮ

ಕರ್ತವ್ಯಗಳನ್ನು ನಿರ್ವಹಿಸಲು ತಮ್ಮ ನೌಕರರು ಉಪಯೋಗಿಸುವ ನಿಯಮಗಳು ,ನಿಬಂದನೆಗಳು ಸೂಚನೆಗಳು , ಕೈಪಿಡಿಗಳು ಮತ್ತು ದಾಖಲೆಗಳು

ಆಡಳಿತ ನಿರ್ವಹಣೆಯನ್ನು ಈ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ನೌಕರರ ಕಾರ್ಯನಿರ್ವಹಣೆಯನ್ನು ಕೆ.ಸಿ.ಎಸ್.ಆರ್., ಕೆಎಫ್.ಸಿ.,ಕೆ.ಟಿ.ಸಿ. ಮತ್ತು ಇಲಾಖೆ ಸುತ್ತೋಲೆಗಳನ್ನು ಹಾಗೂ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ವ್ಯಾಪ್ರತಿಯಲ್ಲಿ ಕಾರ್ಯಕ್ರಮಗಳ ಅನುಷ್ಠನ ಹಾಗೂ ಕರ್ತವ್ಯಗಳನ್ನು ನಿರ್ವಹಿಸಲಾಗುವುದು,.

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಇವರು ಇಲಾಖೆಯ ಮುಖ್ಯಸ್ಥರಾಗಿದ್ದು, ಜಿಲ್ಲಾ ಕಛೇರಿಯ ಹಾಗೂ ಜಿಲ್ಲೆಯ   ಅಧೀನ ಕಛೇರಿಗಳ ಸಿಬ್ಬಂದಿಯ ವಿವರಗಳನ್ನು ಲಗತ್ತಿಸಿದೆ. (Staff Position enclosed)

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ತುಮಕೂರು ಈ ಕಛೇರಿ ವ್ಯಾಪ್ತಿಯ  ಅಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಯ ಸ್ಥಿತಿ ವಿವರ ದಿನಾಂಕ: 24-5-2011 ರಲ್ಲಿದ್ದಂತೆ

ಕ್ರ.ಸಂ

ಹುದ್ದೆಗಳ ವಿವರ

ಮಂಜೂರಾತಿ ಹುದ್ದೆಗಳ ಸಂಖ್ಯೆ

ಕಾರ್ಯನಿರ್ವಣೆಯ ಹುದ್ದೆಗಳ ಸಂಖ್ಯೆ

ಖಾಲಿ ಹುದ್ದೆಗಳ ಸಂಖ್ಯೆ

1

ಜಿಲ್ಲಾ ಆ.ಕು.ಕ. ಅಧಿಕಾರಿಗಳು

1

1

1

2

ಜಿಲ್ಲಾ ಮಲೇರಿಯಾಧಿಕಾರಿಗಳು

1

1

0

3

ಜಿಲ್ಲಾಸರ್ವೆಲೆನ್ಸ್ ಅಧಿಕಾರಿ

1

1

0

4

ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿಗಳು

1

1

0

5

ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳು

1

1

0

6

ವೈದ್ಯಾಧಿಕಾರಿಗಳು  ಕುಟುಂಬ ಕಲ್ಯಾಣ

1

1

0

7

ಜಿಲ್ಲಾ ಲಸಿಕಾಧಿಕಾರಿಗಳು (ಆರ್.ಸಿ.ಹೆಚ್)

1

1

0

8

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು

1

0

1

9

ವೈದ್ಯಾಧಿಕಾರಿಗಳು

1

0

1

10

ತಾಲ್ಲೂಕು ಆರೋಗ್ಯಾಧಿಕಾರಿಗಳು

10

7

3

11

ಸಾ.ಕ.ವೈ.ವೈಧ್ಯಾಧಿಕಾರಿಗಳು

147

133

14

12

ತಜ್ಞ ವೈದ್ಯಾಧಿಕಾರಿಗಳು

100

72

28

13

ದಂತ ಆರೋಗ್ಯಾಧಿಕಾರಿಗಳು

17

9

8

14

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು

1

0

1

15

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು

3

3

0

16

ಸಹಾಯಕ ಎಂಟಮಾಲಜಿಸ್ಟ್

2

1

1

17

ಜಿಲ್ಲಾ ಶುಶ್ರೋಷಾ ಅಧಿಕಾರಿಗಳು ದರ್ಜೆ-1

1

1

0

18

ಜಿಲ್ಲಾ ಶುಶ್ರೋಷಾ ಅದಿಕಾರಿಗಳು ದರ್ಜೆ-2

2

1

1

19

ಸಹಾಯಕ ಮಲೇರಿಯಾಧಿಕಾರಿಗಳು

9

2

7

20

ಮೈಕ್ರೋಬಯಾಲಜಿಸ್ಟ್

1

1

0

21

ಆರೋಗ್ಯ ಮೇಲ್ವಿಚಾರಕರಿ

3

1

2

22

ಸಹಾಯಕ ಸಾಂಖ್ಯಿಕ ಅಧಿಕಾರಿಗಳು

4

3

1

23

ಸಹಾಯಕ ಅಡಳಿತಾಧಿಕಾರಿಗಳು

9

9

0

24

ಕಛೇರಿ ಅಧೀಕ್ಷಕರು

15

13

2

25

ಪ್ರಥಮ ದರ್ಜೆ ಸಹಾಯಕರು

97

56

41

26

ದ್ವಿತಿಯ ದರ್ಜೆ ಸಹಾಯಕರು

51

46

5

27

ಸಹಾಯಕರು ಮತ್ತು ಬೆರಳಚ್ಚುಗರರು

35

32

3

28

ಹಿರಿಯ ಶೀಘ್ರಲಿಪಿಗಾರರು

1

1

0

29

ಕಿರಿಯ ಶೀಘ್ರಲಿಪಿಗಾರರು

3

1

2

30

ಹಿರಿಯ ಬೆರಳಚ್ಚುಗಾರರು

3

2

1

31

ಕಿರಿಯ ಬೆರಳಚ್ಚುಗಾರರು

4

2

2

32

ಹಿರಿಯ ವೈದ್ಯೇತರ ಮೇಲ್ವಿಚಾರಕರು

3

2

1

33

ಕಿರಿಯ ವೈದ್ಯೇತರ ಮೇಲ್ವಿಚಾರಕರು

7

1

6

34

ಭೌಧ್ಧ ರೋಗ ಚಿಕಿತ್ಸರು

1

0

1

35

ಸಮಿ ಸ್ಕೆಲ್ಡ್ ಆರ್ಟಿಸನ್

2

2

0

36

ಚಲನ ಚಿತ್ರ ಪ್ರದರ್ಶಕರು

2

1

1

37

ಮಹಿಳಾ ಆರೋಗ್ಯ ಸಹಾಯಕಿ (ಹಿರಿಯ)

72

62

10

38

ಮಹಿಳಾ ಆರೋಗ್ಯ ಸಹಾಯಕಿ (ಕಿರಿಯ)

555

485

70

39

ಶುಶ್ರೋಷಕರು

160

147

13

40

ಪುರಷ ಆರೋಗ್ಯ ಸಹಾಯಕರು (ಹಿರಿಯ)

65

34

31

41

ಪುರಷ ಆರೋಗ್ಯ ಸಹಾಯಕರು (ಕಿರಿಯ)

319

206

113

42

ಫಾರ್ಮಾಸಿಸ್ಟ್ (ಹಿರಿಯ)

17

14

3

43

ಫಾರ್ಮಾಸಿಸ್ಟ್ (ಕಿರಿಯ)

143

133

10

44

ಪ್ರಯೋಗಶಾಲಾ ತಂತ್ರಜ್ಞರು (ಹಿರಿಯ)

8

2

6

45

ಪ್ರಯೋಗಶಾಲಾ ತಂತ್ರಜ್ಞರು (ಕಿರಿಯ)

109

103

6

46

ಕ್ಷಕಿರಣ ತಂತ್ರಜ್ಞರು

19

19

0

47

ವೈದ್ಯ ನೆರವಿನ ಕಾರ್ಯಕರ್ತರು

14

13

1

48

ನೇತ್ರ ಸಹಾಯಕರು

29

28

1

49

ವಾಹನ ಚಾಲಕರು

78

33

45

50

ಕ್ಷೇತ್ರ ಆರೋಘ್ಯ ಶಿಕ್ಷಣಾಧಿಕಾರಿಗಳು

27

8

19

51

ರೆಪ್ರಿಜರೇಟರ್ ಮೆಕಾನಿಕ್

1

0

1

52

ನಾಲ್ಕನೇ ದರ್ಜೆ ನೌಕರರು

624

257

367

 

ಒಟ್ಟು

2779

1950

829

ಇಲಾಖೆ ಗುರಿ ಮತ್ತು ಸಾಧನೆಗಳು:-

ಎಲ್ಲಾ ಜನರಿಗೂ ಆರೋಗ್ಯ ಸೌಲಭ್ಯ  ಒದಗಿಸುವ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪುವಂತೆ ಅನುಷ್ಠಾನಗೊಳಿಸಲಾಗುವುದು. ಅನುದಾನ: 2011-12 ನೇ ಸಾಲಿಗೆ ವಾರ್ಷಿಕವಾಗಿ ಯೋಜನೆ ಮತ್ತು ಯೋಜನೇತರ ಕಾರ್ಯಾಕ್ರಮಗಳಲ್ಲಿ ಒಟ್ಟಾರೆಯಾಗಿ ರೂ.2498.12ಲಕ್ಷ ನಿಗಧಿಯಾಗಿರುತ್ತದೆ.

ಇಲಾಖೆಯ ಪ್ರಮುಖ ಸಾಧನೆಗಳು:

ಶಿಶು ಮರಣದ ಪ್ರಮಾಣ 17 ಕ್ಕೆ ಇಳಿಕೆ
ತಾಯಿ ಮರಣದ ಪ್ರಮಾಣ 117ಕ್ಕೆ  ಇಳಿಕೆ
ಫಲವತ್ತತೆ ದರ (ಟಿ.ಎಸ್.ಆರ್) 1.90
ಸಾಂಸ್ಥಿಕ ಹೆರಿಗೆಗಳು 90%
ಮೂಲಭೂತ ಸೌಕರ್ಯಗಳ  ಅಭಿವೃದ್ದಿ
ಪ್ರಾ.ಆ.ಕೇಂದ್ರಗಳ  ಉನ್ನತೀಕರಣ
ಆರೋಗ್ಯ  ಇಲಾಖೆಯ ಮಾಹಿತಿ ಗಣಕೀಕೃತ ಸಂಗ್ರಹ
ಬಯೋಮೆಟ್ರಿಕ್ ಮೂಲಕ ಹಾಜರಾತಿ
ಆರೋಗ್ಯ  ಇಲಾಖೆಯ ಸಿಬ್ಬಂದಿಗಳ ತರಬೇತಿ
‘9’ ಪ್ರಥಮ ರೆಫರಲ್ ಕೇಂದ್ರಗಳ ಪ್ರಾರಂಭ
ಜನನಿ ಸುರಕ್ಷಾ ವಾಹಿನಿ, ಉಚಿತ  ಅಂಬ್ಯುಲೆನ್ಸ್   ಸೇವೆ

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1)ಎ ಪ್ರಕಾರ

ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾರ್ವಜನಿಕ ಪ್ರಾಧಿಕಾರವಾಗಿರುತ್ತಾರೆ.
ಸಹಾಯಕ ಆಡಳಿತಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ತುಮಕೂರು ಇವರು ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.
ಕಛೇರಿ ಅಧೀಕ್ಷಕರು ಇವರು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.
ಮುಖ್ಯ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು ಇವರು ಇಲಾಖೆಯ ಮೇಲ್ಮನವಿ ಪ್ರಾಧಿಕಾರಿಯಾಗಿರುತ್ತಾರೆ.

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1)ಬಿ ಪ್ರಕಾರ ವಿವರಗಳು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕರ್ತವ್ಯ ಮತ್ತು ಅಧಿಕಾರಗಳು
ಸದರಿಯವರು ಜಿಲ್ಲೆ ಮತ್ತು ಜಿಲ್ಲೆಯ ಅಧೀನದಲ್ಲಿ ಬರುವ ಎಲ್ಲಾ ಆರೋಗ್ಯ ಸಂಸ್ಥೆಗಳ ಮುಖ್ಯಾಧಿಕಾರಿಗಳಾಗಿರುತ್ತಾರೆ.
ಆರ್ಥಿಕ ಪ್ರತ್ಯಾ ಯೋಜನಾ ಅಧಿಕಾರದಡಿಯಲ್ಲಿ ಬರುವ ಜಿಲ್ಲೆಯ ಎಲ್ಲಾ ಹುದ್ದೆಗಳ ವಿವಿಧ ಟೈಂ ಬಾಂಡ್ ಗೆ ಸಂಬಂಧಿಸಿದ ವೇತನ ಭತ್ಯೆಗಳ ಮಂಜೂರಾತಿ ಅಧಿಕಾರ.
ಜಿಲ್ಲೆಯ ಎಲ್ಲಾ ವೈದ್ಯರ ಹಾಗೂ ಸಿಬ್ಬಂದಿಯವರ ರಜಾ ಮಂಜೂರಾತಿ ಮತ್ತು ಸಾಲ ಮಂಜೂರಾತಿ ಅಧಿಕಾರ.
ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರ ಮತ್ತು ಮುಂಜಾಗರೂಕತಾ ಕ್ರಸಮ ವಹಿಸುವ ಅಧಿಕಾರ.
ಜಿಲ್ಲೆಯಲ್ಲಿನ ಆಹಾರ ಕಲಬೆರಕೆಗೆ ಸಂಬಂಧಿಸಿದ ಮೇಲ್ವಿಚಾರಣೆ ಹಾಗೂ ನಿಯಂತ್ರಣಗೊಳಿಸುವ ಅಧಿಕಾರವಿರುತ್ತದೆ.
ಜಿಲ್ಲೆಯ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕಾರ್ಯನಿರ್ವಹಣೆಯ ಮುಖ್ಯಸ್ಥರಾಗಿರುತ್ತಾರೆ.
ಪತ್ರಾಂಕಿತ ಅಧಿಕಾರಿಗಳ ಪ್ರಯಾಣ ಭತ್ಯೆ ಬಿಲ್ಲುಗಳಿಗೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳಿಗೆ ಮೇಲುಸಹಿ ಮಾಡುವ ಅಧಿಕಾರ.
ಜಿಲ್ಲೆಯ ಅಧೀನ ಕಛೇರಿಗಳ ನಾನ್ ಕ್ಲಿನಿಕಲ್ ಸೌಲಭ್ಯದ ಅಂಗೀಕರಿಸುವ ಅಧಿಕಾರ ಮತ್ತು ಸರಬರಾಜಿಗೆ ಸಂಬಂಧಿಸಿದ ಬಿಲ್ಲುಗಳಿಗೆ ಮೇಲುಸಹಿ ಮಾಡುವ ಅಧಿಕಾರ
ಜಿಲ್ಲಾ ಪಂಚಾಯತಿಯಡಿ ಕೇಂದ್ರ ಪುರಸ್ಕೃತ ಅನುದಾನ ಮತ್ತು ಇತರೆ ಅನುದಾನಗಳ ಹಂಚಿಕೆ ಮತ್ತು ಅನುಷ್ಟಾನಗೊಳಿಸುವ ಅಧಿಕಾರ
ಜಿಲ್ಲೆಯೊಳಗಿನ ಅಧೀನ ಸಂಸ್ಥೆಗಳಿಗೆ ಸಂಬಂಧಿಸಿದ ಕಟ್ಟಡ ಕಾಮಗಾರಿಗಳಿಗೆ, ಮೇಲ್ವಿಚಾರಣೆ ಮತ್ತು ಕಟ್ಟಡ ಕಾಮಗಾರಿ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ.

ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯನ್ನೊಳಗೊಂಡ ಅಧಿಕಾರಿಗಳು ಮತ್ತು ನೌಕರರ ವಿವರ
ಆರ್.ಸಿ.ಹೆಚ್. ಅಧಿಕಾರಿಗಳು : ತಾಯಿ ಮತ್ತು ಮಕ್ಕಳ ಆರೋಗ್ಯ ನಿರ್ವಹಣೆ ಅನುಷ್ಠಾನ ಹಾಗೂ ಸಂತಾನೋತ್ಪತ್ತಿ ಹಾಗೂ ಪ್ರಸೂತಿ ಆರೈಕೆಗೆ ಸಂಬಂಧಪಟ್ಟಂತೆ ಅನುಷ್ಠಾನಗೊಳಿಸುವುದು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು : ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಕಾರ್ಯಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮದ ನಿರ್ವಹಣೆ ಮತ್ತು ಮೇಲ್ವಿಚಾರಣೆ ಬಗ್ಗೆ ಅನುಷ್ಟಾನಗೊಳಿಸುವುದು.
ಜಿಲ್ಲಾ ಮಲೇರಿಯಾ ಅಧಿಕಾರಿಗಳು : ಜಿಲ್ಲೆಯಲ್ಲಿನ ಮಲೇರಿಯಾ ಹತೋಟಿ ಕಾರ್ಯಕ್ರಮ ಹಾಗೂ ಪ್ರಕರಣಗಳು ಉಲ್ಭಣಗೊಳ್ಳದಂತೆ ಸೊಳ್ಳೆನಿಯಂತ್ರಣ ಹಾಗೂ ಐಕಾನ್ ಸಿಂಪಡಣೆ ಮಾಡುವ ಬಗ್ಗೆ ಅನುಷ್ಠಾನಗೊಳಿಸುವುದು.
ಜಿಲ್ಲಾ ಸರ್ವಲೆನ್ಸ್ ಅಧಿಕಾರಿಗಳು : ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು ಹಾಗೂ ಮೇಲ್ವಿಚಾರಣೆ ನಿಯಂತ್ರಣದ ಬಗ್ಗೆ ಅನುಷ್ಠಾನಗೊಳಿಸುವುದು.
ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳು : ಜಿಲ್ಲೆಯಲ್ಲಿನ ಕ್ಷಯರೋಗ ನಿಯಂತ್ರಣದ ಬಗ್ಗೆ ಅನುಷ್ಟಾನಗೊಳಿಸುವುದು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳು : ಜಿಲ್ಲೆಯಲ್ಲಿನ ಕುಷ್ಠರೋಗ ನಿಯಂತ್ರಣದ ಬಗ್ಗೆ ಅನುಷ್ಟಾನಗೊಳಿಸುವುದು.
ಸಹಾಯಕ ಆಡಳಿತಾಧಿಕಾರಿಗಳು : ಜಿಲ್ಲೆಯ ಹಾಗೂ ಈ ಕಛೇರಿಯ ಆಡಳಿತ ಹಾಗೂ ತೀರುವಳಿ ಪತ್ರ, ಎಲ್ಲಾ ವಿಭಾಗಗಳ ಮೇಲ್ವಿಚಾರಣೆ ಮತ್ತು ಸಿಬ್ಬಂದಿಗಳ ಸೇವಾ ವಿವರಗಳು ಹಾಗೂ ನೌಕರರುಗಳ ದೂರಿನ ಬಗ್ಗೆ ಕ್ರಮ ಕೈಗೊಳ್ಳುವುದು.
ಜಿಲ್ಲಾ ಶುಶ್ರೂಷಾ ಅಧಿಕಾರಿಗಳು : ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಆರೋಗ್ಯ ಪರಿಶೀಲನೆ ಬಗ್ಗೆ ಕ್ರಮ ತೆಗೆದುಕೊಳ್ಳುವುದು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು : ಮಾಹಿತಿ ಶಿಕ್ಷಣ ಹಾಗೂ ಪ್ರಚಾರದ ಅನುಷ್ಠಾನ ಮತ್ತು ಖಾಸಗಿ ಆಸ್ ಪತ್ರೆ ಬಗ್ಗೆ ಮಾಹಿತಿ ಪರಿಶೀಲನೆ.
ಕಛೇರಿ ಅಧೀಕ್ಷಕರು (ಆಡಳಿತ) : ಈ ಕಛೇರಿಯ ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ
ಮಾಡುವುದು.
ಕಛೇರಿ ಅಧೀಕ್ಷಕರು (ಲೆಕ್ಕಪತ್ರ) : ಈ ಕಛೇರಿಯ ಲೆಕ್ಕಪತ್ರ ವಿಭಾಗಕ್ಕೆ ಸಂಬಂಧಿಸಿದ ಮೇಲ್ವಿಚಾರಣೆ ಮಾಡುವುದು.

V. ಕರ್ತವ್ಯಗಳನ್ನು ನಿರ್ವಹಿಸಲು ತಮ್ಮ ನೌಕರರು ಉಪಯೋಗಿಸುವ ನಿಯಮಗಳು, ನಿಬಂಧನೆಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು :

ಆಡಳಿತ ನಿರ್ವಹಣೆಯಲ್ಲಿ ಈ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ನೌಕರರ ಕಾರ್ಯನಿರ್ವಹಣೆಯನ್ನು ಕೆ.ಸಿ.ಎಸ್.ಆರ್. ಕೆ.ಎಫ್.ಸಿ. ಕೆ.ಟಿ.ಸಿ. ಮತ್ತು ಇಲಾಖೆಯ ಸುತ್ತೋಲೆಗಳು ಹಾಗೂ ಜಿಲ್ಲಾ ಪಂಚಾಯತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಕರ್ತವ್ಯಗಳನ್ನು ನಿರ್ವಹಿಸಲಾಗುವುದು.

 

 

 

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in