ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ತೋಟಗಾರಿಕಾ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ:

ಪ್ರಸ್ತಾವನೆ :-
ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯದ ದಕ್ಷಿಣದಲ್ಲಿದ್ದು, 12.45 ಡಿಗ್ಇ ಯಿಂದ 14.22 ಡಿಗ್ರಿ ಉತ್ತರದ  ಅಕ್ಷಾಂಶ ಒಳಗೆ 76.20 ಡಿಗ್ರಿ ಯಿಂದ 77.31 ಡಿಗ್ರಿ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಲ್ಪಟ್ಟಿದೆ.

ಸ್ವಾಭಾವಿಕ:-
ಈ ಜಿಲ್ಲೆಯಲ್ಲಿ 10 ತಾಲ್ಲೂಕುಗಳಿದ್ದು, 50 ಹೋಬಳಿಗಳು 331 ಗ್ರಾಮ ಪಂಚಾಯತಿಗಳು ಮತ್ತು 2715 ಗ್ರಾಮ ಪಂಚಾಯತಿಗಳು ಇರುತ್ತವೆ. ಜಿಲ್ಲೆಯ ಪೂರ್ವಕ್ಕೆ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳು, ಪಶ್ಚಿಮಕ್ಕೆ ಹಾಸನ, ಚಿಕ್ಕಮಗಳೂರು ಜಿಲ್ಲೆಗಳು, ಉತ್ತರಕ್ಕೆ ಚಿತ್ರದುರ್ಗ  ಹಾಗೂ ಆಂಧ್ರ ಪ್ರದೇಶದ ಗಡಿ ಮತ್ತು ದಕ್ಷಿಣಕ್ಕೆ ಮಂಡ್ಯ ಜಿಲ್ಲೆಗಳಿಮದ ಸುತ್ತುವರಿಯಲ್ಪಟ್ಟಿದೆ.

ಭೌಗೋಳಿಕ ಲಕ್ಷಣಗಳು :-
ಜಿಲ್ಲೆಯ ದಕ್ಷಿಣ ಭಾಗದಲ್ಲಿ ಉತ್ತರ ದಕ್ಷಿಣವಾಗಿ ಬೆಟ್ಟದ ಸಾಲು ಹಬ್ಬಿರುತ್ತದೆ.  ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಮತ್ತು ಹುಲಿಯೂರುದುರ್ಗ ಬೆಟ್ಟಗಳು ಮುಖ್ಯವಾದವುಗಳು, ಇವುಗಳಿಗೆ ಸಮಾನಾಂರತವಾಗಿ ಉತ್ತರ ಭಾಗದಲ್ಲಿ ಮತ್ತೊಂದು ಗುಡ್ಡದ ಸಾಲು ಹಬ್ಬಿದ್ದು, ಇವುಗಳಲ್ಲಿ ಪಾವಗಡ ತಾಲ್ಲೂಕಿನ ಕಾಮನದುರ್ಗ, ನಿಡಗಲ್ ದುರ್ಗಗಳು, ಮಧುಗಿರಿ ತಾಲ್ಲೂಕಿನ ಬೆಟ್ಟಗಳು ಮತ್ತು ಮಿಡಗೇಶಿದುರ್ಗ, ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ, ತುಮಕೂರು ತಾಲ್ಲುಕಿನ ದೇವರಾಯನ ದುರ್ಗ ಮುಖ್ಯವಾದವುಗಳು.  ಜಿಲ್ಲೆಯ ಭೂ ಪ್ರದೇಶವು ಸಮುದ್ರ ಮೆಟ್ಟದಿಂದ 806 ಮೀಟರ್ ಗಳಷ್ಟು ಎತ್ತರದಲ್ಲಿದೆ.

ಜಿಲ್ಲೆಯಲ್ಲಿ ಜೀವ ನದಿಗಳು ಇರುವುದಿಲ್ಲ ಸಣ್ಣ ನದಿಗಳು ಮೆಳೆಗಾಲದಲ್ಲಿ ಮಾತ್ರ ತುಂಬಿ ಕೆರೆಗಳಿಗೆ ನೀರನ್ನು ಒದಗಿಸುತ್ತವೆ.  ಜಯಮಂಗಲಿ ನದಿ ದೇವರಾಯನದುರ್ಗದಲ್ಲಿ ಹುಟ್ಟಿ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಹರಿಯುತ್ತದೆ.  ಇದೇ ಸ್ಥಳದಲ್ಲಿ ಹುಟ್ಟುವ ಗರುಡಾಚಲ ಎಂಬ ಮತ್ತೊಂದು ನದಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಹರಿದು ಜಯಮಂಗಲಿ ನದಿ ಸೇರುತ್ತದೆ.  ಜಯಮಂಗಲಿ ನದಿಯು ಮುಂದುವರೆದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪಿನಾಕಿನಿಯನ್ನು ಕೊಡುತ್ತದೆ.

ಕೊರಟಗೆರೆ ತಾಲ್ಲೂಕಿನ ಸಿದ್ದರವೆಟ್ಟದಲ್ಲಿ ಸುವರ್ಣಮುಖಿ ನದಿಹುಟ್ಟಿ, ಅದೇ ತಾಲ್ಲೂಕಿನಲ್ಲಿ ಹಿರಯುತ್ತದೆ.  ಶಿಂಷಾ ನದಿ ದೇವರಾಯನ ದುರ್ಗದಲ್ಲಿ ಹುಟ್ಟಿ, ಗುಬ್ಬಿ, ಕುಣಿಗಲ್, ತಾಲ್ಲೂಕಿನಲ್ಲಿ ಹರಿದು ಕೊನೆಗೆ ಕಾವೇರಿ ನದಿಯನ್ನು ಸೇರುತ್ತದೆ. ಈ ನದಿಗೆ ಮಾರ್ಕೋನಹಳ್ಳಿ ಜಲಾಶಯ ನಿರ್ಮಿಸಿದ್ದು, 4500 ಹೆಕ್ಟೇರು ಅಚ್ಚುಕಟ್ಟಿನಿಂದ ಕೂಡಿದೆ. ಮೆಳೆಗಾಲದಲ್ಲಿ ಜಲಾಶಯ ತುಂಬಿದಾಗ ನೋಡಲು ಅಕರ್ಷಣೀಯವಾಗಿರುತ್ತದೆ.  ಉತ್ತರ ಪಿನಾಕಿನಿ ಮತ್ತು ಕುಮುದ್ವತಿ ನದಿಗಳು ಪಾವಗಡ ಮತ್ತು ಮಧುಗಿರಿ ತಾಲ್ಲೂಕುಗಳಲ್ಲಿ ಹರಿದು ಕೆರೆ ಕಟ್ಟೆಗಳಿಗೆ ನೀರನ್ನು ಒದಗಿಸುತ್ತದೆ.

ಮಣ್ಣಿನ ವಿವರಣೆ :-
ಜಿಲ್ಲೆಯ ಭೌಗೋಳಿಕ ವಿಸ್ತೀರ್ಣವು ಸುಮಾರು 10,597 ಚದರ ಕಿ.ಮಿ.ಗಳಷ್ಟಿದ್ದು, ರಾಜ್ಯದ ಒಟ್ಟು ವಿಸ್ತಿರ್ಣದಲ್ಲಿ ಶೇಕಡ 5.589 ರಷ್ಟಿದೆ.  ರಾಜ್ಯದ ಜಿಲ್ಲೆಗಳ ವಿಸ್ತೀರ್ಣಕ್ಕೆ ಹೋಲಿಸಿದಾಗ ತುಮಕೂರು ಜಿಲ್ಲೆಯು 3ನೇ ಸ್ಥಾನ ಪಡೆದಿರುತ್ತದೆ.  ಜಿಲ್ಲೆಯ ಬಹುತೇಕ ಪ್ರದೇಶ ಕೆಂಪು ಮತ್ತು ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಕೊಡಿರುತ್ತದೆ.

ಜಿಲ್ಲೆಯ ಮುಖ್ಯ ತೋಟಗಾರಿಕೆ ಬೆಳೆಗಳು:-
ಜಿಲ್ಲೆಯಲ್ಲಿ ರೈತರು ಹೆಚ್ಚಿನ ಆಸಕ್ತಿ ವಹಿಸಿ ತೋಟದ ಬೆಳಗಳು, ಹಣ್ಣುಗಳು, ತರಕಾರಿ, ಹೂವುಗಳು, ಸಾಂಬಾರು ಬೆಳೆಗಳು, ಮತ್ತು ಔಷದಿ ಸಸ್ಯಗಳನ್ನು ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ  ತೆಂಗು, ಅಡಿಕೆ, ಬಾಳೆ, ಮಾವು, ಸಪೋಟ, ದಾಳಿಂಬೆ, ಹುಣಸೆ, ಎಲೆಬಳ್ಳಿ, ಮೆಣಸಿಕಾಯಿ, ಟೊಮೆಟೋ, ಬದನೆ, ಹುರಳಿಕಾಯಿ ಮತ್ತು ಪುಷ್ಪ ಬೆಳೆಗಳು ಬೆಳೆಯುತ್ತಿದ್ದಾರೆ. ಜಿಲ್ಲೆಯ ಬಿತ್ತನೆ ವಿಸ್ತೀರ್ಣ 70544 6 ಹೆಕ್ಟೇರ್ ಇದ್ದು, ಇದರಲ್ಲಿ 227352 ಹೆಕ್ಟೇರ್ ವಿಸ್ತೀರ್ಣದಲ್ಲಿ ತೋಟಗಾರಿಕೆ ಬೆಳೆ ಇರುತ್ತದೆ.

ಕೃಷಿ ಹವಾಮಾನ ಗುಣಗಳು :-
ತುಮಕೂರು ಜಿಲ್ಲೆಯ ಉಷ್ಣಾಂಶ 18 ಸೆಂಟಿಗ್ರೇಡ್ ನಿಂದ 38 ಸೆಂಟಿಗ್ರೇಡ್ ಇದ್ದು,  ಒಣ ಹವೆಯಿಂದ ಕೂಡಿರುತ್ತದೆ. ಜಿಲ್ಲೆಯಲ್ಲಿ ನೈರುತ್ಯ ಮಾರುತದಿಂದ ಜೂನ್ ತಿಂಗಳಲ್ಲಿ ಮಳೆ ಪ್ರಾರಂಭವಾಗಿ ಸೆಪ್ಟಂರ್ ತಿಂಗಳವರೆಗೂ ಬೀಳುತ್ತದೆ. ಈಶಾನ್ಯ ಮಾರುತದಿಂದ  ಅಕ್ಟೋಬರ್ ತಿಂಗಳಲ್ಲಿ ಮಳೆ ಪ್ರಾರಂಭವಾಗಿ ನವೆಂಬರ್ ತಿಂಗಳ ಕೊನೆಯವರೆಗೆ ಬೀಳುತ್ತದೆ. ಡಿಸೆಂಬರ್ ತಿಂಗಳಲ್ಲಿ ಚಳಿಗಾಲ ಪ್ರಾರಂಭವಾಗಿ ಫೆಬ್ರವರಿ ತಿಂಗಳ ಕೊನೆಯವರೆಗೆ ಇರುತ್ತದೆ. ಬೇಸಿಗೆ ಮಾರ್ಚ್ ನಿಂದ ಮೇ ತಿಂಗಳ ಕೊನೆಯವರೆಗೆ ಇರುತ್ತದೆ. ಜಿಲ್ಲೆಯ ವಾಡಿಕೆ ಮಳೆ 739.6 ಮಿ.ಮೀ. ಇದ್ದು, 2016ರ ವರ್ಷದಲ್ಲಿ (ಜನವರಿ 2016 ರಿಂದ ಡಿಸೆಂಬರ್ 2016 ರವರೆಗೆ) ವಾಸ್ತವಿಕ ಸರಾಸರಿ 412.1 ಮೀ.ಮೀ. ಬಿದ್ದಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ಹವಾಮಾನ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನಕಾರಿಯಾಗಿದೆ.

ಹವಾಮಾನಕ್ಕನುಗುಣವಾಗಿ ಜಿಲ್ಲೆಯನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ

1. ಮಧ್ಯ ಒಣ ಪ್ರದೇಶ : ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು

2. ದಕ್ಷಿಣ ಒಣ ಪ್ರದೇಶ: ಕುಣಿಗಲ್ ಮತ್ತು ತುರುವೇಕೆರೆ ತಾಲ್ಲೂಕುಗಳು.

3. ಪೂರ್ವ ಒಣ ಪ್ರದೇಶ: ತುಮಕೂರು ಮತ್ತು ಗುಬ್ಬಿ ತಾಲ್ಲೂಕುಗಳು.

ತೋಟಗಾರಿಕೆ ಇಲಾಖೆಯ ಮೂಲ  ಉದ್ದೇಶ:-

ತೋಟಗಾರಿಕೆ  ಬೆಳೆಗಾರರ ಮೂಲಕ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿಗೊಳಿಸುವ  ಒಂದು ಕಾರ್ಯ ನೀತಿಯನ್ನು ಹೊಂದಿದೆ. ಯೋಗ್ಯ ಗುಣಮಟ್ಟದ ಬೀಜಗಳನ್ನು ಮತ್ತು ಕಸಿ ಸಸಿಗಳನ್ನು ಸರಬರಾಜು ಮಾಡುವುದು, ಬೇಸಾಯದ ಕ್ರಮಗಳಲ್ಲಿ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳಲ್ಲಿ ತಾಂತ್ರಿಕ ತಿಳುವಳಿಕೆ ಹಾಗೂ ಸಲಹೆ ನೀಡುವುದು. “ ರೈತರಿಗೆ”  ತೋಟಗಾರಿಕೆ ತರಬೇತಿ ನೀಡುವುದು. ದುರ್ಬಲ ವರ್ಗದ ಮತ್ತು ಆರ್ಥಿಕವಾಗಿ  ಹಿಂದುಳಿದ ರೈತರುಗಳಿಗೆ ಹಾಗೂ ಬುಡಕಟ್ಟಿನ ಜನಾಂಗಕ್ಕೆ ಅವರ  ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳಲು ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕೆ ಸಹಾಯ ಮಾಡುವುದು. ಹೊಸದಾಗಿ ಕೃಷಿ ವಿಶ್ವ ವಿದ್ಯಾನಿಲಯ ಹಾಗೂ ಸಂಶೋಧನಾ ಕೇಂದ್ರಗಳಿಗೆ ಬಿಡುಗಡೆಯಾದ ತಳಿಗಳನ್ನು ರೈತರಿಗೆ ಶಿಫಾರಸ್ಸು ಮಾಡುವುದು. ಫಲ ಪುಪ್ಪ ಪ್ರದರ್ಶನ, ಸಿದ್ದಗಂಗಾ ಕೈಗಾರಿಕಾ ಮತ್ತು ವಸ್ತು ಪ್ರದರ್ಶನ  ಏರ್ಪಡಿಸಿ ಪ್ರದರ್ಶಿಕೆಗಳ ಮೂಲಕ ತೋಟಗಾರಿಕೆ ಬೆಳೆಗಳನ್ನು ಪ್ರಚಾರ ಮಾಡುವುದು, ಇಲಾಖಾ ಮಾರ್ಗದರ್ಶನದಂತೆ ಹನಿ ನೀರಾವರಿ ಅಳವಡಿಸಿದ ರೈತರಿಗೆ ಸಹಾಯಧನ ನೀಡುವುದು ಸಾವಯವ ತೋಟಗಾರನ್ನು ಉತ್ತೇಜಿಸುವುದು. ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹಿಸುವುದು ರೈತರಿಗೆ ತೋಟಗಾರಿಕೆ ಬಗ್ಗೆ  ತಾಂತ್ರಿಕ ಮಾಹಿತಿಯನ್ನು ತೋಟಗಾರಿಕೆ ಸಲಹಾ ಕೇಂದ್ರದ  ಮೂಲಕ  ನೀಡುವುದು ಇವು ತೋಟಗಾರಿಕೆ ಇಲಾಖೆಯ ಮೂಲ  ಉದ್ದೇಶವಾಗಿದೆ. 

ತಾಂತ್ರಿಕ ವರ್ಗ:

ತುಮಕೂರು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾ ಪಂಚಾಯತ್) ರವರ ಕಾರ್ಯಾಲಯವಿದ್ದು, ತೋಟಗಾರಿಕೆ ಉಪನಿರ್ದೇಶಕರು ಜಿಲ್ಲೆಯಲ್ಲಿನ ತೋಟಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ. ಇವರ ಸಹಾಯಕರಾಗಿ ಒಬ್ಬರು ಕೇಂದ್ರ ಸ್ಥಾನ ಸಹಾಯಕರು (ಸಹಾಯಕ ತೋಟಗಾರಿಕೆ ನಿರ್ದೇಶಕರು) ಒಬ್ಬರು ರಾಷ್ಟೀಯ ತೋಟಗಾರಿಕೆ ಮಿಷನ್ ಮತ್ತು ಮಾರುಕಟ್ಟೆ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಾಂತ್ರಿಕ ಸಹಾಯಕರುಗಳು ( ಸಹಾಯಕ ತೋಟಗಾರಿಕೆ ಅಧಿಕಾರಿಗಳು), ಒಬ್ಬರು ಸಹಾಯಕ ಸಾಂಖ್ಯಿಕ ಅಧಿಕಾರಿ ಹಾಗೂ ಆಡಳಿತ ಸಿಬ್ಬಂಧಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕು ಮಟ್ಟಗಳಲ್ಲಿ ಪ್ರತಿ ತಾಲ್ಲೂಕಿನಲ್ಲೂ ತೋಟಗಾರಿಕೆ ಕಛೇರಿ (ಜಿಲ್ಲಾ ಪಂಚಾಯತ್) ಇದ್ದು, ಕಛೇರಿ ಮುಖ್ಯಸ್ಥರಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇವರ ಸಹಾಯಕ್ಕಾಗಿ ಪ್ರತಿ ಕಛೇರಿಯಲ್ಲಿ ಒಬ್ಬ ಸಹಾಯಕ ತೋಟಗಾರಿಕೆ ಅಧಿಕಾರಿ ಮತ್ತು ತೋಟಗಾರಿಕೆ ಸಹಾಯಕರು ಇರುತ್ತಾರೆ. ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಒಬ್ಬರು ಸಹಾಯಕ ತೋಟಗಾರಿಕೆ ಅಧಿಕಾರಿಗಳಿರುತ್ತಾರೆ. ಇವರುಗಳು ರೈತರುಗಳಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ತಿಳುವಳಿಕೆ, ತಾಂತ್ರಿಕ ಸಲಹೆ ಹಾಗೂ ಮಾರ್ಗದರ್ಶನ ನೀಡುವುದಲ್ಲದೆ ಇಲಾಖೆಯು ರೂಪಿಸಿದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಾರೆ.

 

2016.-17 ನೇ ಸಾಲಿನ ಕಾರ್ಯಕ್ರಮಗಳು

ಜಿಲ್ಲೆಯ ರೈತ ಸಮೂಹದ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್, ರಾಜ್ಯ ವಲಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

2016-17 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಗಳ ವಿವರ:

ಹನಿ ನೀರಾವರಿ ಯೋಜನೆ (ಡಿ-02)
ಈ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಕೆಗಾಗಿ ರೈತರಿಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯಲ್ಲಿ ತೆಂಗು, ಬಾಳೆ, ಮಾವು, ಸಪೋಟ, ದಾಳಿಂಬೆ, ನುಗ್ಗೆ, ಪಪ್ಪಾಯಿ, ದ್ರಾಕ್ಷಿ, ಮತ್ತು ಇತರೆ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹನಿ ನೀರಾವಿ ಅಳವಡಿಕೆಗೆ ಸಹಾಧನ ನೀಡಿ ರೈತರಿಗೆ ಉತ್ತೇಜಿಸಲಾಗಿದೆ. (2 ಹೆಕ್ಟೇರ್ ವರೆಗೆ ಶೇ.90 ರಷ್ಟು ಸಹಾಯಧನ ಉಳಿದ 3 ಹೆಕ್ಟೇರ್ ವರೆಗೆ ಶೇ.45 ರಷ್ಟು ಸಹಾಯಧನ)

ತೋಟಗಾರಿಕೆ ಕಟ್ಟಡಗಳು (ಡಿ-03)
ಸದರಿ ಯೋಜನೆಯಡಿ ಹೊಸದಾಗಿ ಕಟ್ಟಡ ನಿರ್ಮಾಣ, ಕಟ್ಟಡ ದುರಸ್ತಿ ಹಾಗೂ ನವೀಕರಣಕ್ಕೆ ಅನುದಾನವನ್ನು ಉಪಯೋಗಿಸಲಾಗುವುದು.

ತೋಟಗಾರಿಕೆ ಕ್ಷೇತ್ರಗಳ ನಿವಹಣೆ (ಡಿ-04)
ಜಿಲ್ಲಾ ಪಂಚಾಯತ್ ಗೆ ಒಳಪಡುವ ತೋಟಗಾರಿಕಾ ಕ್ಷೇತ್ರಗಳ ಉಳುಮೆ, ಹಸಿರೆಲೆ ಗೊಬ್ಬರದ ಬೀಜಗಳ ಬಿತ್ತನೆ ಸಸ್ಯ ಸಂರಕ್ಷಣಾ ಔಷಧಿಗಳ ಸಿಂಪಡಣೆ ಇತ್ಯಾದಿ. ಕ್ಷೇತ್ರ ನಿರ್ವಹಣೆ ಕಾರ್ಯವ ನ್ನು ಕೈಗೊಳ್ಳಲಾಗುವುದು.

ತೆಂಗು ಬೀಜ ಮತ್ತು ನರ್ಸರಿ ನಿರ್ವಹಣೆ (ಡಿ-05):-

A) ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆ:- ಈ ಯೋಜನೆಯಡಿ ಉತ್ತಮ ಗುಣ ಮಟ್ಟದ ತೆಂಗಿನ ಕಾಯಿ ಸಂಗ್ರಹಣೆ ಮಾಡಿ ಇಲಾಖಾ ನರ್ಸರಿಗಳಲ್ಲಿ ಬೆಳೆಸಿ ರೈತರಿಗೆ ಉತ್ಕ್ಷಷ್ಟ ತೆಂಗಿನ ಗಿಡ ಮಾರಾಟ ಮಾಡಲು ವ್ಯವಸ್ತೆ ಮಾಡಲಾಗಿದೆ. ವಿವಿಧ ತೋಟಗಾರಕೆ ಕ್ಷೇತ್ರಗಳಲ್ಲಿನ ತೆಂಗಿನ ನರ್ಸರಿ ನಿರ್ವಹಣೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು.

B) ಸಸ್ಯ ಸಂರಕ್ಷಣಾ ಪ್ರಯೋಗಾಲಯ: ಗೋನಿಯೋಜಸ್ ಪರೋಪಜೀವಿಗಳನ್ನು ಉತ್ಪಾದಿಸಿ ತೆಂಗು ಬೆಳೆಗೆ ಬೀಳುವ ಕಪ್ಪು ತಲೆ ಹುಳುಗಳನ್ನು ಹತೋಟಿ ಮಾಡಲು ರೈತರ ತೆಂಗಿನ ತೋಟಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಚಾರ ಮತ್ತು ಸಾಹಿತ್ಯ (ಡಿ-03):-
2016-17 ನೇ ಸಾಲಿನಲ್ಲಿ ಶ್ರೀ ಸಿದ್ದಗಂಗಾ ಜಾತ್ರೆಯ  ಅಂಗವಾಗಿ ನಡೆದ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಮತ್ತು ಪಟ್ಟನಾಯಕನ ಹಳ್ಳಿ ಜಾತ್ರೆಯ ವಸ್ತು ಪ್ರದಶನದಲ್ಲಿ ಇಲಾಖಾ ಮಳಿಗೆಗಳನ್ನು ಸ್ಥಾಪಿಸಿ ತೋಟಗಾರಿಕೆ ಬೆಳೆಗಳು ಹಾಗೂ ತಂತ್ರಜ್ಞಾನದ ಪ್ರದರ್ಶಿಕೆಗಳನ್ನು ಪ್ರದರ್ಶಿಸಲು ರೈತ  ಸಮುದಾಯಕ್ಕೆ ಇಲಾಖೆಯಿಂದ  ದೊರೆಯುವ  ಅನುಕೂಲಗಳ ಬಗ್ಗೆ ತೋಟಗಾರಿಕೆ ಬೆಳೆ ಬೆಳೆಯುವ ಬಗ್ಗೆ ಹೆಚ್ಚಿನ ಪ್ರಚಾರ ನೀಡಲು ಹಾಗೂ ತುಮಕೂರು ಜಿಲ್ಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ನಡೆಸಲಾಗುವುದು.

ಜೇನು ಕೃಷಿ (ಡಿ-08) :-

ಈ ಯೋಜನೆಯಡಿ ಜೇನು ಕೃಷಿ ಸಹಾಯಕರಿಗೆ ಗೌರವಧನ ಹಾಗೂ ಜೇನುಕೃಷಿ ತರಬೇತಿ ಜೇನು ಪೆಟ್ಟಿಗೆ ಖರೀದಿಸಿದವರಿಗೆ ಸಹಾಯಧನ ನೀಡಲಾಗುವುದು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ:-

2016-17 ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗಗಳು, ಬಡತನ ರೇಖೆ ಕೆಳಮಟ್ಟದಲ್ಲಿ ಇರುವ ಇತರೆ ಕುಟುಂಬಗಳು, ಇಂದಿರಾ ಅವಾಜ್ ಯೋಜನೆ ಫಲಾನುಭವಿಗೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಹಾಗೂ ಇಲಾಖೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳು

ರೈತರಿಗೆ ಸಹಾಯ (ಡಿ-09) :-

A) ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ:-

ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಯಡಿ ಮಾವು, ಸಪೋಟ, ಬೆಳೆದ ರೈತರಿಗೆ ಪ್ರೋತ್ಸಾಹ ನೀಡುವುದು.

B) ಶೇಕಡಾ 50ರ ಸಹಾಯಧನದಲ್ಲಿ ರೈತರಿಗೆ ಸಸ್ಯ ಸಂರಕ್ಷಣಾ ಔಷಧಿಗಳ ಸರಬರಾಜು:-

ಸಸ್ಯ ಸಂರಕ್ಷಣಾ ಔಷಧಿಗಳು ಖರೀದಿಸಿದ ರೈತರುಗಳಿಗೆ ಶೇ. 50ರಂತೆ ಸಹಾಯಧನ ವಿತರಿಸಲಾಗುವುದು.

C) ಅಲಂಕಾರಿಕ ಗಿಡಗಳ ಅಭಿವೃದ್ಧಿ:-

ಈ ಯೋಜನೆಯಡಿ ಕುಂಡಗಳಲ್ಲಿ ಅಲಂಕಾರಿಕ ಗಿಡಗಳನ್ನು ಅಭಿವೃದ್ಧಿಪಡಿಸಿ ಸರ್ಕಾರಿ ಕಛೇರಿ, ಅತಿಥಿ ಗೃಹ, ನ್ಯಾಯಾಲಯಗಳು ಮತ್ತು ಸರ್ಕಾರಿ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಗಿಡಗಳನ್ನು ಜೋಡಿ ಅಲಂಕರಿಸಲಾಗುವುದು.

ರೈತರಿಗೆ ತರಬೇತಿ (ತೋಟಗಾರಿಕೆ ತರಬೇತಿ) (ಡಿ-10):-

ಈ ಯೋಜನೆಯಡಿ 500 ರೈತ ಮಹಿಳೆಯರಿಗೆ ಹಣ್ಣು ಮತ್ತು ತರಕಾರಿ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಗುವುದು.

ವಿಶೇಷ ಘಟಕ ಯೋಜನೆ (ಡಿ-11) :-
ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ತೆಂಗು ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು.

ಗಿರಿಜನ ಉಪಯೋಜನೆ (ಡಿ--12)
ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತೆಂಗು ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು.

 

2016-17 ನೇ ಸಾಲಿನ ರಾಜ್ಯ ವಲಯ ಯೋಜನೆಗಳು

1) ಸೂಕ್ಷ್ಮ ನೀರಾವರಿ ಯೋಜನೆ:-(ಎಸ್-04)
ಕೇಂದ್ರ ಸರ್ಕಾರದ ಅನುದಾನದೊಂದಿಗೆ ರಾಜ್ಯ ಸರ್ಕಾದ ಭಾಗಶ:  ಅನುದಾನವನ್ನು ಒಳಗೊಂಡಂತೆ ತುಮಕೂರು ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ 2016-17 ನೇ ಸಾಲಿನಲ್ಲಿ ಹನಿ ನೀರಾವರಿ ಪದ್ದತಿ ಅಳವಡಿಸಿದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ.90 ಹಾಗೂ 2 ಹೆಕ್ಟರ್ ಮೇಲ್ಪಟ್ಟು 5 ಹೆಕ್ಟೇ ರ್ ವರೆಗೆ  ಶೇ.45 ರಂತೆ ಹನಿ ನೀರಾವರಿ ಸಹಾಯಧನ ಪಾವತಿಸಲಾಗುವುದು.

2) ಎಸ್-05 ತೆಂಗಿನಲ್ಲಿ ಸಂಯೋಜಿತ ಬೇಸಾಯ

ಈ ಯೋಜನೆಯಡಿ ಮೊದಲನೇ ಹಾಗೂ ಎರಡನೇ ವರ್ಷಗಳ ತೆಂಗು ಪ್ರಾತ್ಯಕ್ಷತೆಗಳ ತಾಕುಗಳ ನಿರ್ವಹಣೆ, ತೆಂಗಿನ ಬೆಳೆಯ ರೋಗ ಮತ್ತು ಕೀಟ ನಿರ್ವಹಣೆ, ತೆಂಗು ತೋಟಗಳ ಪ್ರದೇಶ ವಿಸ್ತರಣೆ ಹಾಗೂ ತೆಂಗು ತೋಟದ ಪುನಃಶ್ಚೇತನ ಕಾರ್ಯಕ್ರಮಕ್ಕೆ ಸಹಾಯಧನ ನೀಡಲಾಗುವುದು.

3) ಎಸ್.10 ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ:-
ಈ ಯೋಜನೆಯಡಿ ಹಣ್ಣು, ತರಕಾರಿ ಹೂ ಮತ್ತು ತೋಟದ ಬೆಳೆಗಳ ಅಧಿಕ ಸಾಂಧ್ರತೆ, ಸಮಗ್ರ ಬೇಸಾಯ ಕಾರ್ಯಕ್ರಮ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕಾರ್ಯಕ್ರಮಗಳಿ ಗೆಹಾಗೂ ಅನುವುಗಾರರ ಗೌರವಧನಕ್ಕಾಗಿ ಪ್ರೋತ್ಸಾಹ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಶೇ. 40 ಅನುದಾನವನ್ನು ಯಾಂತ್ರೀಕರಣ, ಬಾಳೆಯಲ್ಲಿ ನಿಖರ ಬೇಸಾಯ, ವೀಳ್ಯೆದೆಲೆ ಪುನಃಶ್ಚೇತನ, ಸಹಾಯಧನ ನೀಡಲಾಗುವುದು. ಕೈತೋಟ ಮತ್ತು ತಾರಸಿ ತೋಟಗಳ ಬಗ್ಗೆ ತರಬೇತಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫಲಾನುಬವಿಗಳ ಸರ್ವತೋಮುಖ ಅಭಿವೃದ್ಧಿಯಡಿ ವಿವಿಧ ತೋಟಗಾರಿಕೆ ಪ್ರದೇಶಗಳ ಬಾಳೆ, ಟಮೋಟ, ಇತ್ಯಾದಿಯನ್ನು ಆಯ್ಕೆ ಮಾಡಿ ಸದರಿ ಫಲಾನುಭವಿಗಳಿಗೆ ಯಾಂತ್ರೀಕರಣ, ಹನಿ ನೀರಾವರಿ, ಜೀವಸಾರ ಘಟಕ ಕೃಷಿ ಹೊಂಡ ಹಾಗೂ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಗೆ ಸಹಾಯಧನ ನೀಡುವುದು.

ತೋಟಗಾರಿಕೆ ವಿಸ್ತರಣೆಯಡಿ ತಾಂತ್ರಿಕವಾಗಿ ರೈತರಿಗೆ ಮಾಹಿತಿಯನ್ನು, ತರಬೇತಿಯನ್ನು ನೀಡಲಾಗುವುದು.

ಹೂ ಕೃಷಿಗೆ ಉತ್ತೇಜನ:-

ಈ ಯೋಜನೆಯಡಿ ಹಸಿರು ಮನೆಯಲದಲಿ ಹಳೆಯ ಮತ್ತು ಅನುತ್ಪಾದಕ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡುವುದು. ಹಸಿರು ಮನೆಗಳಲ್ಲಿ ಹಾಳಾಗಿರುವ ಪಾಲಿಥೀನ್ ಶೀಟ್ ಗಳ ಬದಲಾವಣೆಗೆ ಸಹಾಯಧನ ನೀಡಲಾಗುವುದು.

4) ಕೃಷಿ ಕ್ಷೇತ್ರ ಮತ್ತು ಸಸ್ಯ ವಾಟಿಕೆಗಳ ಅಭಿವೃದ್ಧಿ:-

ಈ ಯೋಜನೆಯಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಸ್ಯ ಅಭಿವೃದ್ಧಿ ಹಾಗೂ ನಿರ್ಮಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

5) ಎಸ್-14 ಇಲಾಖೆ ಪ್ರಯೋಗ ಶಾಲೆಗಳ ಅಭಿವೃದ್ಧಿ:-

ಈ ಯೋಜನೆಯಡಿ ತರಕಾರಿ ಬೆಳೆಗಳ ಬೀಜಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಶಾಲೆಗೆ ಪರೀಕ್ಷೆಗೆ ಕಳುಹಿಸಲಾಗುವುದು.

6) ಎಸ್-15 ತೋಟಗಾರಿಕೆ ಬೆಳೆಗಳ ರೋಗ ಮತ್ತು ನಿಯಂತ್ರಣ:-

ಈ ಯೋಜನೆಯಡಿ ಗೋನಿಯೋಜಸ್ ಪರೋಪಜೀವಿಗಳ ಉತ್ಪಾದನೆ, ಸಿಬ್ಬಂದಿ ವೇತನ, ಮೂಲಭೂತ ಸೌಕರ್ಯ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮತ್ತು ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿದ ರೈತರಿಗೆ ಶೇ. 50 ರಷ್ಟು ಸಹಾಯಧನವನ್ನು ನೀಡಲಾಗುವುದು.

7) ಎಸ್-20 ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆ:-

ಈ ಯೋಜನೆಯಡಿ ಜೇನು ಕೃಷಿ ತರಬೇತಿ ಹಾಗೂ ಜೇನು ಪೆಟ್ಟಿಗೆಗಳ ವಿತರಣೆ, ಜೇನು ಪೆಟ್ಟಿಗೆ ಹಾಗೂ ಕಾಲೋನಿಗಳ ಖರೀದಿಸಿದ ರೈತರುಗಳಿಗೆ ಸಹಾಯಧನ ಮತ್ತು ಮಧುವನಗಳ ಅಭಿವೃದ್ಧಿಗಳಿಗೆ ಪ್ರೋತ್ಸಾಹಿಸಲಾಗುವುದು.

8) ತೋಟಗಾರಿಕೆ ಮೂಭೂತ ಅಭಿವೃದ್ಧಿ

ಸದರಿ ಯೋಜನೆಯಡಿ ಹೊಸದಾಗಿ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ನವೀಕರಣಕ್ಕೆ ಅನುದಾನವನ್ನು ಉಪಯೋಗಿಸಲಾಗುವುದು.

9) ಎಸ್-17 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ಎ) ತೋಟಗಾರಿಕೆ ಬೆಳೆಗಳ ನಿಖರ ಬೇಸಾಯ ಯೋಜನೆ:-

ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೊಸದಾಗಿ ಪ್ರದೇಶ ವಿಸ್ತರಣೆ, ತಾಕುಗಳನ್ನು ಅಭಿವೃದ್ಧಿ ಪಡಿಸಲು ಪ್ರೋತ್ಸಾಹಿಸಲಾಗುವುದು.

ಬಿ) ತೋಟಗಾರಿಕೆಯಲ್ಲಿ ಯಾಂತ್ರೀಕರಣ:- ಈ ಯೋಜನೆಯಡಿಯಲ್ಲಿ ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಉತ್ತೇಜಿಸಲು ಇಲಾಖಾ ಮಾರ್ಗಸೂಚಿಯನ್ವಯ ಯಂತ್ರೋಪಕರಣಗಳನ್ನು ಖರೀದಿಸಿದ ರೈತ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಗುವುದು.

ಸಿ) ವೀಳ್ಯೆದೆಲೆ ಪುನಃಶ್ಚೇತನ:- ಸದರಿ ಕಾರ್ಯಕ್ರಮದಡಿ ಕೀಟ ಮತ್ತು ರೋಗದಿಂದ ಹಾನಿಗೊಳಗಾಗಿರುವ ವೀಳ್ಯೆದೆಲೆ ಬೆಳೆಯನ್ನು ಪುನಃಶ್ಚೇತನಗೊಳಿಸಲು ಸಹಾಯಧನ ನೀಡಲಾಗುವುದು.

2016-17 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ

ಮಾದರಿ ಸಸ್ಯಾಗಾರ:-

ತೋಟಗಾರಿಕೆ ಬೆಳೆಗಳ ಸಸ್ಯಾಭಿವೃದ್ಧಿ ಮಾಡಲು ಮಾದರಿ ಸಸ್ಯಾಗಾರ ನಿರ್ಮಿಸಲು ಸಹಾಯಧನ ನೀಡಲಾಗುವುದು. ಸಾರ್ವಜನಿಕ ವಲಯಕ್ಕೆ ರೂ, 25 ಲಕ್ಷ/ಹೆ (ಶೇ. 100) ಹಾಗೂ ಖಾಸಗಿ ವಲಯಕ್ಕೆ ರೂ, 10 ಲಕ್ಷ/ಹೆ (ಶೇ. 40) ರಂತೆ ಸಹಾಯಧನ ನೀಡಲಾಗುವುದು.

ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆ :-

ತೋಟಗಾರಿಕೆ ಬೆಳೆಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು, ಈ ಬೆಳೆಗಳ ಪ್ರದೇಶವನ್ನು ವಿಸ್ತರಿಸುವುದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಮೂಲಭೂತ ಉದ್ದೇಶಗಳಲ್ಲಿ ಒಂದಾಗಿರುತ್ತದೆ. ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಮೂಲಕ ತೋಟಗಾರಿಕೆ ಬೆಳೆಗಳನ್ನು / ಹೊಸ ತಳಿಗಳನ್ನು ಪರಿಚಯಿಸಿ ರೈತರ ಆರ್ಥಿಕ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಆಧಾರಿತ ಚಟುವಟಿಕೆಗಳನ್ನು ಸಹ ಅಭಿವೃದ್ಧಿ ಪಡಿಸುವುದರ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಣ್ಣು, ಪುಷ್ಪ, ಸಾಂಬಾರು ಮತ್ತು ಕೋಕೋ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.

ಹೊಸದಾಗಿ ನಾಟಿ ಮಾಡಿದ ಮಾವು (ರೂ, 10000-00/ಹೆ) ದಾಳಿಂಬೆ (ರೂ, 19200-00/ಹೆ) ಅಂಗಾಂಶ ಬಾಳೆ (ರೂ, 40800-00/ಹೆ) ಗೆಡ್ಡೆ ಬಾಳೆ (ರೂ, 26000-00/ಹೆ) ನಿಂಬೆ ( ರೂ, 16000-00/ಹೆ), ಕಾಳುಮೆಣಸು ಬೆಳೆಗೆ (ರೂ, 20000-00/ಹೆ), ಕೋಕೋ ಬೆಳೆಗೆ (ರೂ, 20000-00/ಹೆ) ಹಾಗೂ ಪಪ್ಪಾಯ ಬೆಳೆಗೆ ( ರೂ, 30000-00/ಹೆ) ಸಹಾಯಧನವನ್ನು ನೀಡಲಾಗುವುದು.

ಪುಷ್ಪಗಳ ಪ್ರದೇಶ ವಿಸ್ತರಣೆ:-

ಈ ಕಾರ್ಯಕ್ರಮದಡಿಯಲ್ಲಿ ಬಿಡಿ ಹೂಗಳಿಗೆ ರೂ, 16000/ಹೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ರೂ, 10000/ಹೆ ದೊಡ್ಡ ರೈತರಿಗೆ ಗೆಡ್ಡೆ ಜಾತಿಯ ಹೂಗಳಿಗೆ ರೂ, 60000/ಹೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ರೂ, 37500/ಹೆ ದೊಡ್ಡ ರೈತರಿಗೆ, ಕತ್ತರಿಸಿದ ಹೂಗಳಿಗೆ ರೂ, 40000/ಹೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ರೂ, 25000/ಹೆ ರಂತೆ ಇತರೆ ರೈತರಿಗೆ ಸಹಾಯಧನ ನೀಡಲಾಗುವುದು.

ಸಸ್ಯ ಸಂರಕ್ಷಣೆ ಹಾಗೂ ಪೋಷಕಾಂಶ ನಿರ್ವಹಣೆ:-

ಈ ಕಾರ್ಯಕ್ರಮದಡಿ ಸಮಗ್ರ ಕೀಟ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಗಾಗಿ ಅರ್ಹ ಫಲಾನುಭವಿಗಳಿಗೆ ರೂ, 1200/ಹೆ ದಂತೆ 4 ಹೆಕ್ಟೇರ್ ಗಳಿಗೆ ಸಹಾಯಧನವನ್ನು ನೀಡಲಾಗುವುದು.

ಜೇನು ಕೃಷಿ:-

ಜೇನು ಕೃಷಿ ಉತ್ತೇಜನಕ್ಕಾಗಿ ಜೇನು ಕುಟುಂಬ ಮತ್ತು ಜೇನು ತುಪ್ಪ ತೆಗೆಯುವ ಯಂತ್ರಕ್ಕೆ ರೂ, 8000/- ಸಹಾಯಧನ ನೀಡಲಾಗುವುದು.

ಸಾವಯವ ಕೃಷಿಗೆ ಉತ್ತೇಜನ:-

ತೋಟಗಾರಿಕೆ ಬೆಳೆಗಳ ಬೇಸಾಯದಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವ ಉದ್ದೇಶಕ್ಕಾಗಿ ಜೀವಸಾರ ಘಟಕ ಹಾಗೂ ಎರೆಹುಳು ಗೊಬ್ಬರ ಘಟಕ ನಿರ್ಮಿಸಲು ರೂ, 30000/- ಗಳ ಸಹಾಯಧನವನ್ನು ನೀಡಲಾಗುವುದು.

ಸಂರಕ್ಷಿತ ಬೇಸಾಯ:-

ಈ ಕಾರ್ಯಕ್ರಮದಡಿ ಕತ್ತರಿಸುವ ಹೂಗಳು, ದೊಣ್ಣೆ ಮೆಣಸಿನ ಕಾಯಿ ಹಾಗೂ ತರಕಾರಿ ಸಸಿಗಳನ್ನು ಸಂರಕ್ಷಿತ ಬೇಸಾಯದಲ್ಲಿ ಬೆಳೆಯಲು ಶೇ. 50 ರಂತೆ ರೂ, 394/ಚ.ಮೀ ನಂತೆ 4000ಚ.ಮೀ ಗಳಿಗೆಸಹಾಯಧನ ನೀಡಲಾಗುವುದು ದಾಳಿಂಬೆ ಬೆಳೆಗೆ ಪಕ್ಷಿ ನಿರೋದಕ ಬಲೆ ಹಾಕಲು ರೂ, 50000 ಪ್ರತಿ 50 ಗುಂಟೆಗೆ ಮತ್ತು ವಿವಿಧ ಬೆಳೆಗಳಿಗೆ ಪ್ಲಾಸ್ಟಿಕ್ ಹೊದಿಕೆ ಮಾಡಲು ಉತ್ತೇಜಿಸುವುದಕ್ಕಾಗಿ ರೂ, 16000/ಹೆ ರಂತೆ ಸಹಾಯಧನ ನೀಡಲಾಗುವುದು.

ಕೃಷಿ ಹೊಂಡ:-

ಮಳೆ ನೀರನ್ನು ಸಂಗ್ರಹಿಸಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಅಭಾವ ಇದ್ದ ಸಂಧರ್ಭದಲ್ಲಿ ಬಳಕೆ ಮಾಡಿ ಬೆಳೆಗಳ ುತ್ಪಾದಕತೆ ಹೆಚ್ಚಿಸಲು ಸಮುದಾಯ ಕೃಷಿ ಹೊಂಡ ನಿರ್ಮಾಣಕ್ಕೆ ರೂ, 4.00 ಲಕ್ಷ ಹಾಗೂ ಕೃಷಿ ಹೊಂಡಕ್ಕೆ ರೂ, 0.75 ಲಕ್ಷ ಸಹಾಯಧನ ನೀಡಲಾಗುವುದು.

ಕೊಯ್ಲೋತ್ತರ ನಿರ್ವಹಣೆ:-

ಕೊಯ್ಲಾದ ಹಣ್ಣು, ತರಕಾರಿ, ಪುಷ್ಪಗಳು ಹಾಗೂ ಇತರೆ ತೋಟಗಾರಿಕೆ ಪದಾರ್ಥಗಳನ್ನು ವಿಂಗಡಿಸಿ, ಅಗತ್ಯತೆಗೆ ತಕ್ಕಂತೆ ವೈಜ್ಞಾನಿಕತೆಗೆ ರೀತಿಯಲ್ಲಿ ವಿವಿಧ ಪ್ರಕಾರದ ಕಂಟೈನರ್ ಗಳಲ್ಲಿ ಪ್ಯಾಕ್ ಮಾಡುವ ಉದ್ದೇಶದಿಂದ ಸುಸಜ್ಜಿತವಾಗಿ ನಿರ್ಮಿಸಲಾದ ಪ್ಯಾಕ್ ಹೌಸ್ ಗೆ ರೂ, 2.00 ಲಕ್ಷ ಸಹಾಯಧನ ನೀಡಲಾಗುವುದು ಶೀತಲ ಗೃಹ ನಿರ್ಮಿಸಲು ಶೇ. 35 ರಂತೆ ರೂ, 1.75 ಲಕ್ಷ/ಘಟಕ ಹಾಗೂ ಹಣ್ಣು ಮಾಗಿಸುವ ಘಟಕಕ್ಕೆ ರೂ, 1.05 ಲಕ್ಷ/ಘಟಕ ರಂತೆ ಸಹಾಯಧನ ನೀಡಲಾಗುವುದು.

ಯಾಂತ್ರೀಕರಣ:-

ತೋಟಗಾರಿಕೆ ಬೆಳೆಗಳ ಚಟುವಟಿಕೆಗಾಗಿ ಮಿನಿಟ್ರಾಕ್ಟರ್ (20 ಹೆಚ್.ಪಿ) ಖರೀದಿಸುವ ಸಾಮಾನ್ಯ ವರ್ಗದ ರೈತರಿಗೆ ಶೇಕಡ. 25 ರಂತೆ ರೂ, 0.75 ಲಕ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ. 35 ರಂತೆ ರೂ, 1.00 ಲಕ್ಷಗಳ ಸಹಾಯಧನ ನೀಡಿ ಉತ್ತೇಜಿಸಲಾಗುವುದು.

ಮಾನವ ಸಂಪನ್ಮೂಲ ಅಭಿವೃದ್ಧಿ:-

ಸದರ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ರೈತರಿಗೆ ಹಾಗೂ ಅಧಿಕಾರಿಗಳಿಗೆ ಹೊರರಾಜ್ಯ, ಒಳರಾಜ್ಯ, ಒಳಜಿಲ್ಲೆ ಮತ್ತು ಕ್ಷೇತ್ರೋತ್ಸವ ತರಬೇತಿ ನೀಡಲಾಗುವುದು.

ತುಮಕೂರು ಜಿಲ್ಲೆಗೆ ಸಂಬಂಧಪಟ್ಟಂತೆ ತೋಟಗಾರಿಕೆ ಬೆಳೆಗಳ ವಿವರ

1.ಭೂಮಿ ಉಪಯೋಗ

ಕ್ರ.ಸಂ

ವಿವರಗಳು

ವಿಸ್ತೀರ್ಣ (ಹೆ ಗಳಲ್ಲಿ)

ಶೇಕಡಾವಾರು ಮೊತ್ತ

1

ಒಟ್ಟು ಭೌಗೋಳಿಕ ವಿಸ್ತೀರ್ಣ

1064755

 

2

 ಅರಣ್ಯ ಪ್ರದೇಶ

45177

4.24

3

 ವ್ಯವಸಾಯೇತರ ಭೂಮಿ

85465

8.03

4

ಬಂಜರು ಭೂಮಿ

67539

6.34

5

¸ಸಾಗುವಳಿಗೆ ಯೋಗ್ಯ

62642

5.88

6

ಬೀಳು ಭೂಮಿ

185244

17.4

7

ಬಿತ್ತನೆಯಾದ ಪ್ರದೇಶ

599514

56.31

2. 2015-16 ನೇ ಸಾಲಿನ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ: 227352 ಹೆಕ್ಟೇರ್

1

ಹಣ್ಣಿನ ಬೆಳೆಗಳು

25172

11.07

2

ಹೂವಿನ ಬೆಳೆಗಳು

2860

1.26

3

ತರಕಾರಿ ಬೆಳೆಗಳು

6397

2.81

4

ಸಾಂಬಾರ ಬೆಳೆಗಳು

4908

2.16

5

ತೋಟದ ಬೆಳೆಗಳು

187992

82.69

6

ಔಷಧೀಯ ಗಿಡಗಳು

23

0.01

3. ಪ್ರಮುಖ ತೊಟಗಾರಿಕೆ ಬೆಳೆಗಳ ವಿಸ್ತೀರ್ಣ

ಕ್ರ.ಸಂ

ಬೆಳೆ

ವಿಸ್ತೀರ್ಣ

ಇಳುವರಿ

ಉತ್ಪನ್ನ

ಶೇ.ವಾರು ವಿಸ್ತೀರ್ಣ

1

ತೆಂಗು (ಲಕ್ಷಕಾಯಿಗಳಲ್ಲಿ)

152341

0.11

17135.95

67.01

2

ಅಡಿಕೆ

34719

1.45

50301.05

15.71

3

ಮಾವು

15670

10.72

167914

6.89

4

 ಬಾಳೆ

 

 

 

 

 

ಎ) ಪಚ್ಚ ಬಾಳೆ

1249.20

27.24

34022

1.95

 

 ಬಿ) ಇತರೆ ಬಾಳೆ

3086

18.56

57265.10

5

ದಾಳಿಂಬೆ

3328.10

10.64

35400.65

1.46

6

ಸಪೋಟ

1055

10.04

10587.40

0.46

7

ಹುಣಸೆ

3310

3.92

12969

1.46

8

ವಿಳ್ಯದೆಲೆ (ಲಕ್ಷ ಎಲೆಗಳು)

724

21.55

15598.90

0.32

9

ಮೆಣಸಿನ ಕಾಯಿ

 

 

 

1.19

 

ಎ) ಹಸಿ ಮೆಣಸಿನಕಾಯಿ

1316

14.84

19534.74

 

ಬಿ) ಒಣ ಮೆಣಸಿನಕಾಯಿ

1396

1.64

2287.45

10

ಟಮೋಟೋ

2184

53.03

114756

0.96

12
ಮಲ್ಲಿಗೆ 1026 6.16 6325.20 0.45
13
ಸೇವಂತಿಗೆ 1055 8.01 8446.25 0.46

ಯಾರು ಯಾವ ಇಲಾಖೆಯವರು: 

ಸಹಾಯಕ ಸಾಂಖ್ಯಿಕ  ಅಧಿಕಾರಿ, ಅಂಕಿ ಅಂಶಗಳ ಕಛೇರಿ ಬೆಂಗಳೂರು ರವರನ್ನು ಹೊರತುಪಡಿಸಿ ಉಳಿದ ಎಲ್ಲಾ ಅಧಿಕಾರಿ/ನೌಕರರು ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟವರಾಗಿರುತ್ತಾರೆ.

2010-11ನೇ ಸಾಲಿನ ವಿವಿಧ ಯೋಜನೆಗಳಡಿ ಸಾಧಿಸಿದ ಗುರಿ ಮತ್ತು ಸಾಧನೆಗಳ ವಿವರ

ಕ್ರ.ಸಂ

ಯೋಜನೆ

ಗುರಿ

ಸಾಧನೆ

ಶೇಕಡಾವಾರು

ಭೌತಿಕ (ಹೆ./ಸಂಖ್ಯೆಗಳಲ್ಲಿ)

ಮೊತ್ತ (ಲಕ್ಷಗಳಲ್ಲಿ)

ಬಿಡುಗಡೆಯಾದ ಅನುದಾನ

ಭೌತಿಕ (ಹೆ./ಸಂಖ್ಯೆಗಳಲ್ಲಿ)

ಮೊತ್ತ (ಲಕ್ಷಗಳಲ್ಲಿ)

1

ಜಿಲ್ಲಾ ಪಂಚಾಯತ್

1121106

93.00

69.79

687941

67.98

97.41%

2

ತಾಲ್ಲೂಕು ಪಂಚಾಯತ್

193 14.731 2.8 41 2.8 100%

3

ರಾಜ್ಯ ವಲಯ

5620241.45 1146.31 432.88 1382125.55 369.65 85%

4

ರಾಷ್ಟ್ರೀಯ ತೋಟಗಾರಿಕೆ ಮಿಷನ್

1482.13 648.59 606.28 1444.03 280.25 46.22%

5

ಸೂಕ್ಷ್ಮ ಹನಿ ನೀರಾವರಿ

1791 819.3 523.17 1229 502.37 96.02%
6
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 827 265.42 256.87 811 219.85 85.58%
7
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 1497 618.9   1235 848.12 56%

4(1) ಬಿ-ಆರ್.ಟಿ.ಐ. ಕಾಯ್ದೆ 

ಕಛೇರಿ ಹೆಸರು ಸಾರ್ವಜನಿಕ ಮಾಹಿತಿ ಅಧಿಕಾರಿ ಮೇಲ್ಮನವಿ ಪ್ರಾಧಿಕಾರ
ತೋಟಗಾರಿಕೆ ಉಪನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು ಕೇಂದ್ರ ಕಛೇರಿ ಸಹಾಯಕರು, ತೋಟಗಾರಿಕೆ ಉಪನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು. ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಗುಬ್ಬಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಗುಬ್ಬಿ. ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಕುಣಿಗಲ್. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಕುಣಿಗಲ್.. ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಚಿಕ್ಕನಾಯಕನಹಳ್ಳಿ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಚಿಕ್ಕನಾಯಕನಹಳ್ಳಿ. ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತಿಪಟೂರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತಿಪಟೂರು. ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಶಿರಾ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಶಿರಾ ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಕೊರಟಗೆರೆ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಕೊರಟಗೆರೆ ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತುರುವೇಕೆರೆ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ತುರುವೇಕೆರೆ ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಮಧುಗಿರಿ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಮಧುಗಿರಿ ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.
ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಪಾವಗಡ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ (ಜಿಲ್ಲಾ ಪಂಚಾಯತ್) ಪಾವಗಡ ತೋಟಗಾರಿಕೆ ಉಪನಿರ್ದೇಶಕ ರವರ ಕಛೇರಿ (ಜಿಲ್ಲಾ ಪಂಚಾಯತ್) ತುಮಕೂರು.

2016-17 ರ ಅಂತ್ಯದವರೆಗಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ತುಮಕೂರು ಜಿಲ್ಲೆಯ ತೋಟಗಾರಿಕೆ ಕಛೇರಿಗಳಲ್ಲಿನ ಹುದ್ದೆಗಳ ವಿವರ

ಕ್ರ.ಸಂ
ಹುದ್ದೆಗಳ ವಿವರ
ಮಂಜೂರಾದ ಹುದ್ದೆಗಳು
ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು
ಖಾಲಿ ಇರುವ ಹುದ್ದೆಗಳ ಸಂಖ್ಯೆ
1
2
3
4
5
1
ತೋಟಗಾರಿಕೆ ಉಪನಿರ್ದೇಶಕರು
1
1
0
2
ಕೇಂದ್ರ ಕಛೇರಿ ಸಹಾಯಕರು
1
1
0
3

ಸಹಾಯಕ ತೋಟಗಾರಿಕೆ ನಿರ್ದೇಶಕರು.(ಎನ್.ಹೆಚ್.ಎಂ)

1
0
1
4
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
5
3
2
5
ಸಹಾಯಕ ತೋಟಗಾರಿಕೆ ನಿರ್ದೇಶಕರು
5
3
2
6
ಸಹಾಯಕ ತೋಟಗಾರಿಕೆ ಅಧಿಕಾರಿ
65
50
15
7
ಸಹಾಯಕ ಸಾಂಖ್ಯಿಕ ಅಧಿಕಾರಿ
1
1
0
8
ಕಛೇರಿ ಅಧೀಕ್ಷಕರು
7
7
0
9
ಪ್ರಥಮ ದರ್ಜೆ ಸಹಾಯಕರು
8
7
1
10
ದ್ವಿತೀಯ ದರ್ಜೆ ಸಹಾಯಕರು
11
7
4
11
ಬೆರಳಚ್ಚುಗಾರರು
1
0
1
12
ವಾಹನ ಚಾಲಕರು
1
0
1
13
ತೋಟಗಾರಿಕೆ ಸಹಾಯಕರು
28
22
6
14
ತೋಟಗಾರರು
27
21
6
15
ಅಟೆಂಡರ್
1
1
0
16
ಕಛೇರಿ ಸೇವಕಿ
1
0
1
ಒಟ್ಟು
164
124
40

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in