ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಮಧುಗಿರಿ ತಾಲ್ಲೂಕು ಪಂಚಾಯತಿ

ಪೀಠಿಕೆ ಮತ್ತು ಸಂಘಟನೆ:-

ತಾಲ್ಲೂಕು ಪಂಚಾಯಿತಿ ಮಧುಗಿರಿ ಕಛೇರಿಯ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಅನ್ವಯ ರೂಪುಗೊಂಡಿರುವ ಗ್ರಾಮೀಣ ಮತದಾರರಿಂದ ಆಯ್ಕೆಗೊಂಡಿರುವ ಸ್ಥಳೀಯ ಸಂಸ್ಥೆಯಾಗಿರುತ್ತದೆ. ಈ ತಾಲ್ಲೂಕು ಪಂಚಾಯತಿಯಲ್ಲಿ ಪ್ರಸ್ತುತ 24 ಜನಪ್ರತಿನಿಧಿಗಳು ಯೋಜನೆಗಳ ಬಗ್ಗೆ ಕಾರ್ಯನೀತಿಯನ್ನು ರೂಪಿಸಿರುತ್ತಾರೆ. ಅಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಟಾನಗೊಳಿಸಲು ಸೂಕ್ತ ಮಾರ್ಗದರ್ಶನ ಸಲಹೆ ಮತ್ತು ನಿರ್ದೇಶನಗಳನ್ನು ನೀಡಿತ್ತಾರೆ. ಈ ಸ್ಥಳೀಯ ಸಂಸ್ಥೆಗೆ ಅಧ್ಯಕ್ಷರು ಮುಖ್ಯಸ್ಥರಾಗಿರುತ್ತಾರೆ. ತಾಲ್ಲೂಕು ಪಂಚಾಯತಿಯಲ್ಲಿ ರಚಿತವಾಗಿರುವ 3 ನ್ಯಾಯ ಸಮಿತಿಗಳ ಮೂಲಕ ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ತಾಲ್ಲೂಕು ಪಂಚಾಯತಿ ನಿರ್ಣಯಗಳನ್ನು ಜಾರಿಗೆ ತರುತ್ತಾರೆ. ತಾಲ್ಲೂಕು ಪಂಚಾಯತಿಯಲ್ಲಿ ಕೆಳಕಂಡ ಸ್ಥಾಯಿ ಸಮಿತಿಗಳು ರಚನೆಯಾಗಿರುತ್ತವೆ.

  1. ಸಾಮಾನ್ಯ ಸ್ಥಾಯಿ ಸಮಿತಿ
  2. ಹಣಕಾಸು ಲೆಕ್ಕ ಪರಿಶೋಧನೆ ಸ್ಥಾಯಿ ಸಮಿತಿ
  3. ಸಾಮಾಜಿಕ ನ್ಯಾಯ ಸಮಿತಿ

ಮಧುಗಿರಿ ತಾಲ್ಲೂಕು ಪಂಚಾಯಿತಿ ಕಛೇರಿಯು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಲೆಕ್ಕಾಧಿಕಾರಿಗಳು, ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು, ಬೆರಳಚ್ಚುಗಾರರು, ವಾಹನ ಚಾಲಕರು, ಮತ್ತು ಗ್ರೂಪ್ ಡಿ ನೌಕರರನ್ನೊಳಗೊಂಡಿದ್ದು, ಇಲಾಖೆಗೆ ಸಂಬಂಧಿಸಿದ ವಿವಿಧ ರೀತಿಯ ಕೆಲಸಗಳನ್ನು ನಿರ್ವಹಿಸಿರುತ್ತಾರೆ ಜೊತೆಗೆ ತಾಲ್ಲೂಕು ಪಂಚಾಯಿತಿ ಮಧುಗಿರಿಯ ವ್ಯಾಪ್ತಿಯಲ್ಲಿ 39 ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಕಛೇರಿಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಅಧೀನದಲ್ಲಿ ಬಿಲ್ ಕಲೆಕ್ಟರ್ (ಕರ ವಸೂಲಿಗಾರರು) ಜವಾನರು, ನೀರು ವಿತರಕರು, ಇತ್ಯಾಧಿಯಾಗಿ ಸಿಬ್ಬಂದಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಾಂತರ ಜನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮುಂದುವರೆದು ಈ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಶಾಖೆ ಇದ್ದು ತಾಲ್ಲೂಕಿನ ಎಲ್ಲಾ ಶಾಲೆಗಳ ಮಕ್ಕಳಿಗೆ ಬಿಸಿಊಟದ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಅದೇ ರೀತಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಶಾಖೆಯಿದ್ದು ಹಿಂದುಳಿದ ವರ್ಗದ ವಸತಿ ನಿಲಯದ ಎಲ್ಲಾ ನಿರ್ವಹಣೆಗಳನ್ನು ಕೈಗೊಳ್ಳುತ್ತದೆ. ಮತ್ತು ತಾಲ್ಲೂಕು ಸಾಕ್ಷರ ಮಿತ್ರ ವಿಭಾಗವು ಇದ್ದು, ತಾಲ್ಲೂಕಿನಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ.

ಮೂಲ ಉದ್ದೇಶ:

ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವುದು ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದು.

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಗಳ ಮುಖ್ಯಾಂಶಗಳು.

ವಸತಿ ಯೋಜನೆ
ಈ ಯೋಜನೆಯಡಿಯಲ್ಲಿ ಇಂದಿರಾ ಆವಾಜ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಆಶ್ರಯ ವಸತಿ ಯೋಜನೆ, ಬಸವ ಇಂದಿರಾ ಯೋಜನೆಯಡಿಯಲ್ಲಿ ಹಾಗೂ ಆಶ್ರಯ ನಿವೇಶನ ಯೋಜನೆಯಡಿಯಲ್ಲಿ ಸರ್ಕಾರವು ನೀಡುವ ವಾರ್ಷಿಕ ಗುರಿಯಂತೆ ಎಲ್ಲಾ ವರ್ಗಗಳ ವಸತಿ ರಹಿತರನ್ನು ಗುರುತಿಸಿ ವಸತಿ ನೀಡಲು ಕ್ರಮವಹಿಸಲಾಗುತ್ತಿದೆ.

ಗ್ರಾಮ ಸ್ವರಾಜ್:
ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ಮಧುಗಿರಿ ತಾಲ್ಲೂಕನ್ನು ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟಿರುವುದರಿಂದ ಈ ತಾಲ್ಲೂಕಿನ ಗ್ರಾಮ ಸ್ವರಾಜ್ ಯೋಜನೆ ಅನ್ವಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಧಿಸಲು ಕ್ರಮವಹಿಸಲಾಗುತ್ತಿದೆ. ಈ ಯೋಜನೆ ಅನ್ವಯ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ ಇತ್ಯಾದಿಯಾಗಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಸುವರ್ಣ ಗ್ರಾಮೋದಯ ಯೋಜನೆ:
ಈ ಯೋಜನೆಯ ಅನ್ವಯ ಸರ್ಕಾರ ಆಯ್ಕೆ ಮಾಡುವ ಗ್ರಾಮಗಳ ಎಲ್ಲಾ ಅಭಿವೃದ್ಧಿಗಳನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು ಇತ್ಯಾದಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಸ್ವರ್ಣ ಜಯಂತಿ ಸ್ವರೋಜ್ಗಾರ್ ಯೋಜನೆ:
ತಾಲ್ಲೂಕಿನಲ್ಲಿರುವ ಸ್ತ್ರೀಶಕ್ತಿ ಸಂಘಗಳಿಗೆ ನಿಯಮಾನುಸಾರ ಸರ್ಕಾರದ ಮಾರ್ಗಸೂಚಿಯಂತೆ ಅನುದಾನವನ್ನು ಬಿಡುಗಡೆಗೊಳಿಸಿ ಸ್ತ್ರೀಶಕ್ತಿ ಸಂಘಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಆರ್ಥಿಕವಾಗಿ ಸದೃಢಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ವಚ್ಛ ಗ್ರಾಮ ಯೋಜನೆ:
ಈ ಯೋಜನೆಯ ಅನ್ವಯ ಗ್ರಾಮಾಂತರ ಪ್ರದೇಶಗಳಲ್ಲಿ ಬಡ ಕುಟುಂಬಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮಾರ್ಗಸೂಚಿಯಂತೆ ಸಹಾಯದನ ನೀಡಲಾಗುತ್ತಿದೆ.

15ನೇ ಹಣಕಾಸು ಯೋಜನೆ:
ಈ ಯೋಜನೆ ಅನ್ವಯ ಸರ್ಕಾರವು ವಾರ್ಷಿಕವಾಗಿ ನೀಡುವ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯ ಅನುಮೋದನೆ ಪಡೆದು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀನ ಉದ್ಯೋಗ ಖಾತ್ರಿ ಯೋಜನೆ:
ಈ ಯೋಜನೆಯಲ್ಲಿ ಕುಶಲ ಕೂಲಿ ಕಾರ್ಮಿಕರಿಗೆ ಕೂಲಿ ಕಾರ್ಮಿಕರ ಕುಟುಂಬಳಿಗೆ ವಾರ್ಷಿಕವಾಗಿ ನೂರು ಮಾನವ ದಿನಗಳ ಉದ್ಯೋಗ ವನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಈ ಕಾರ್ಯಾಲಯದ ವ್ಯಾಪ್ತಿಯಲ್ಲಿ 39 ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:

ತಾಲ್ಲೂಕು ಪಂಚಾಯತಿ ಮಧುಗಿರಿ ಕಛೇರಿಯಲ್ಲಿ ಈ ಕೆಳಕಂಡ ಅಧಿಕಾರಿ / ಸಿಬ್ಬಂದಿಗಳು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹುದ್ದೆಗಳ ವಿವರ

ಮಂಜೂರಾದ ಹುದ್ದೆ

ಭರ್ತಿಯಾದ ಹುದ್ದೆ

ಖಾಲಿ ಹುದ್ದೆಗಳು

ಷರಾ

ಕಾರ್ಯನಿರ್ವಾಹಕ ಅಧಿಕಾರಿಗಳು

1

1

0

 

ಕಛೇರಿ ವ್ಯವಸ್ಥಾಪಕರು

1

1

0

 

ತಾಲ್ಲೂಕು ಯೋಜನಾಧಿಕಾರಿಗಳು

1

1

0

ಜಿಲ್ಲಾ ಪಂಚಾಯತಿಗೆ ನಿಯೋಜನೆ

ಸಹಾಯಕ ಲೆಕ್ಕಾಧಿಕಾರಿಗಳು

1

1

0

 

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು

39

25

13

 

ಕಿರಿಯ ಅಭಿಯಂತರರು

3

1

2

 

ಪ್ರಥಮ ದರ್ಜೆ ಸಹಾಯಕರು

3

1

2

 

ಪ್ರಗತಿ ಸಹಾಯಕರು

1

0

0

 

ದ್ವಿತೀಯ ದರ್ಜೆ ಸಹಾಯಕರು

3

3

0

 

ಬೆರಳಚ್ಚುಗಾರರು

2

0

0

 

ಶೀಘ್ರಲಿಪಿಗಾರರು

1

0

0

 

ವಾಹನ ಚಾಲಕರು

2

2

0

 

‘ಡಿ’ ದರ್ಜೆ ನೌಕರರು

4

4

0

 

ಕಾರ್ಯದರ್ಶಿ ಗ್ರೇಡ್-1

16

14

2

 

ಕಾರ್ಯದರ್ಶಿ ಗ್ರೇಡ್-2

23

21

2

 

 

102

75

21

 

ಯಾರು ಯಾವ ಇಲಾಖೆಯವರು:

ತಾಲ್ಲೂಕು ಪಂಚಾಯತಿ ಮಧುಗಿರಿ ಕಛೇರಿಯಲ್ಲಿ ಕೆಳಕಂಡ ಅಧಿಕಾರಿ / ಸಿಬ್ಬಂದಿಗಳು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಧಿಕಾರಿ / ನೌಕರರ ಹೆಸರು ಮತ್ತು ಹುದ್ದೆ                           ಮೂಲ ಇಲಾಖೆಯ ವಿವರ
ಶ್ರೀ.ಟಿ.ಎಲ್. ಲೋಕೇಶ್                                         ಲೋಕೋಪಯೋಗಿ ಇಲಾಖೆ
ಎ.ಹನುಮಂರಾಯಪ್ಪ, ವ್ಯವಸ್ಥಾಪಕರು                               ಸಹಾಯಕರು
ನರಸಿಂಹಮೂರ್ತಿ, ಸಹಾಯಕ ಲೆಕ್ಕಾಧಿಕಾರಿಗಳು                 ಲೆಕ್ಕಪತ್ರ ಇಲಾಖೆ
ಹೆಚ್.ಕೆ.ಜಯಮ್ಮ, ಪ್ರ.ದ.ಸ.                                    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಮಹಾಲಕ್ಷ್ಮಮ್ಮ, ಪ್ರ.ದ.ಸ.                                               ಲೆಕ್ಕಪತ್ರ ಇಲಾಖೆ
ದಸೇಗೌಡ, ಪ್ರ.ದ.ಸ.                                                     ಲೆಕ್ಕಪತ್ರ ಇಲಾಖೆ
ರಮೇಶ್ , ದ್ವಿ.ದ.ಸ.                                                       ಕಂದಾಯ ಇಲಾಖೆ
ಜಿ.ಕೆ.ನಾಗಮಣಿ, ದ್ವಿ.ದ.ಸ.                                              ಲೋಕೋಪಯೋಗಿ ಇಲಾಖೆ
ಹನುಮಂತಮ್ಮ, ದ್ವಿ.ದ.ಸ.                                              ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ದೀನ್ ಕುಮಾರ್, ವಾಹನ ಚಾಲಕರು                                 ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಅವಲಪ್ಪ, ವಾಹನ ಚಾಲಕರು                                           ರೇಷ್ಮೆ ಇಲಾಖೆ
ಶಂಕರಪ್ಪ, ಡಿ.ಗ್ರೂಪ್                                                     ಲೋಕೋಪಯೋಗಿ ಇಲಾಖೆ
ಜಯಣ್ಣ, ಡಿ.ಗ್ರೂಪ್                                                        ಹಿಂದುಳಿದವರ್ಗಗಳ ಇಲಾಖೆ
ರಾಮಕೃಷ್ಣಪ್ಪ, ಡಿ.ಗ್ರೂಪ್                                                ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಮಹಮದ್ ಷಫೀಉಲ್ಲಾ, ಡಿ.ಗ್ರೂಪ್                                   ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕುಮಾರ್, ಸಾಕ್ಷರ ಸಂಯೋಜಕರು                                   ಶಿಕ್ಷಣ ಇಲಾಖೆ
ರಾಜಣ್ಣ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ               ಶಿಕ್ಷಣ ಇಲಾಖೆ
ಆಂಜಿನಪ್ಪ, ಪ್ರ.ದ.ಸ.                                                   ಶಿಕ್ಷಣ ಇಲಾಖೆ

ಇಲಾಖೆಯ ಗುರಿ ಮತ್ತು ಸಾಧನೆಗಳು:

ತಾಲ್ಲೂಕು ಪಂಚಾಯತಿ ಮಧುಗಿರಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ತಾಲ್ಲೂಕು ಪಮಚಾಯತಿ ಕಾಲಕಾಲಕ್ಕೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸಾರಿಗೆ ವ್ಯವಸ್ಥೆಗಳು, ಕುಡಿಯುವ ನೀರಿನ ಸೌಲಭ್ಯಗಳು, ಬೀದಿ ದೀಪದ ವ್ಯವಸ್ಥೆ, ಗ್ರಾಮ ನೈರ್ಮಲ್ಯ ಇತ್ಯಾದಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತಿದೆ.

ಮಾಹಿತಿ ಹಕ್ಕು ಅಧಿನಿಯಮ – 2005 ಕಲಂ 4(1) ಎ ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ / ಸಹಾಯಕ ಮಾಹಿತಿ ಅಧಿಕಾರಿ:

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1) ಎ ಮತ್ತು ಬಿ ಯನ್ನು ಸಿದ್ದಪಡಿಸಿ ಲಗತ್ತಿಸಿದೆ.

ಸಾರ್ವಜನಿಕ ಮಾಹಿತಿ ಅಧಿಕಾರಿ ಶ್ರೀ ಎ ಹನುಮಂತರಾಯಪ್ಪ, ವ್ಯವಸ್ಥಾಪಕರು, ತಾಲ್ಲೂಕು ಪಂಚಾಯತಿ, ಮಧುಗಿರಿ ಮತ್ತು

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ನರಸಿಂಹಮೂರ್ತಿ, ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಪಂಚಾಯತಿ, ಮಧುಗಿರಿ.

ಇಲಾಖಾ ಕಛೇರಿ ವಿಳಾಸ:

ತಾಲ್ಲೂಕು ಪಂಚಾಯತಿ ಕಾರ್ಯಾಲಯ
ಕೋಟೆ ಆವರಣ, ಮಧುಗಿರಿ
ಮಧುಗಿರಿ ತಾಲ್ಲೂಕು.

ಮೇಲೆ
logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in