![]() |
ಸಮಾಜ ಕಲ್ಯಾಣ ಇಲಾಖೆ |
ಭಾರತೀಯ ಸಂವಿಧಾನವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇತರ ದುರ್ಬಲ ವರ್ಗಗಳ ಜನರು ಸಮುದಾಯದಲ್ಲಿ ಸೂಕ್ತ ಸ್ಥಾನಮಾನ ಹೊಂದುವಂತಾಗಲು ಅವರುಗಳ ಅಭಿವೃದ್ಧಿಗಾಗಿ ಕೆಲವು ವಿಶೇಷ ಸಾಂವಿಧಾನಿಕ ರಕ್ಷಣೆಗಳನ್ನು ಒದಗಿಸಿದೆ. ಭಾರತಗಣರಾಜ್ಯದ ಪ್ರಜೆಯಾಗಿ ಜಾತಿ ವ್ಯವಸ್ಥೆಯ ಆಧಾರದಲ್ಲಿ ಆಚರಿಸಲಾಗುವ ಅಸ್ಪೃಶ್ಯತೆಯ ಹೆಸರಲ್ಲಿ ವಂಚಿಸಲ್ಪಟ್ಟಿದ್ದ ಕೆಲ ಹಕ್ಕುಗಳು ಮತ್ತು ಸವಲತ್ತುಗಳಿಗೆ ಅವರು ಸಂಪೂರ್ಣ ಬಾಧ್ಯಸ್ಥರಾಗಿರುತ್ತಾರೆ.ಸಾಂವಿಧಾನಿಕ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳವರ (ಎಸ್.ಸಿ ಮತ್ತು ಎಸ್.ಟಿ) ಅಭಿವೃದ್ಧಿ ಅದರಲ್ಲೂ ಮುಖ್ಯವಾಗಿ ಸಾಮಾಜಿಕ, ಆರ್ಥಿಕ ಮತ್ತ್ತು ಶೈಕ್ಷಣಿಕ ಉನ್ನತಿಗಾಗಿ 1956ರ ನಂತರ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಿತು. 1956ಕ್ಕಿಂತ ಹಿಂದೆ ಸಮಾಜ ಕಲ್ಯಾಣ ಇಲಾಖೆಯನ್ನು ಶೋಷಿತ ವರ್ಗಗಳವರ ಇಲಾಖೆ ಎಂದುಕರೆಯಲಾಗುತ್ತಿತ್ತು. ಮತ್ತು ಶೋಷಿತ ವರ್ಗಗಳವರ ಆಯುಕ್ತರು ಹಾಗೂ ಓರ್ವ ಹೆಚ್ಚುವರಿ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿತ್ತು. ಅವರು ಎಸ್ಸಿ/ಎಸ್ಟಿ, ನೋಟಿಫೈಡ್- ಡೀನೋಟಿಫೈಡ್ ಟ್ರೈಬುಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳವರಿಗೆ ರೂಪಿಸಲಾದ ಯೋಜನೆಗಳ ಜಾರಿ ಅವರ ಜವಾಬ್ದಾರಿಯಾಗಿತ್ತು. 1956 ಕ್ಕಿಂತ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಶೋಷಿತ ವರ್ಗಗಳವರ ಅಧಿಕಾರಿಗಳು ಎಂದು ಕರೆಯಲಾಗುತ್ತಿತ್ತು. ಅಂದಿನ ಮುಂಬಯಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅವರನ್ನು ಜಿಲ್ಲಾ ವಿಶೇಷ ಹಿಂದುಳಿದ ವರ್ಗಗಳ ಅಧಿಕಾರಿಗಳೆಂದು ಮತ್ತು ಹಿಂದಿನ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಅವರನ್ನು ಸಾಮಾಜಿಕ ಅಧಿಕಾರಿಗಳು ಎಂದು ಕರೆಯಲಾಗುತ್ತಿತ್ತು. 1956ರಲ್ಲಿ ಇಲಾಖೆಯನ್ನು ಸಮಾಜ ಕಲ್ಯಾಣ ಇಲಾಖೆ ಎಂದು ನಾಮಕರಣ ಮಾಡಲಾಯಿತು ಮತ್ತು 1959ರಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳೆಂದು ಪುನರ್ ನಿಯೋಜಿಸಿ, ಎಸ್ಸಿ/ಎಸ್ಟಿಗಳು, ಹಿಂದುಳಿದ ವರ್ಗಗಳವರು, ಅಲ್ಪಸಂಖ್ಯಾತರು, ಮಹಿಳೆ ಮತ್ತು ಮಕ್ಕಳು, ವಿಕಲಚೇತನರು ಇತ್ಯಾದಿ ವರ್ಗಗಳವರ ಅಭಿವೃದ್ಧಿಗೆ ಶ್ರಮಿಸುವ ಜವಾಬ್ದಾರಿ ನೀಡಲಾಯಿತು. 1975 ನೇ ಸಾಲಿನಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಅಭಿವೃದ್ಧಿಯನ್ನು ಬೇರ್ಪಡಿಸಿ ಪ್ರತ್ಯೇಕ ಇಲಾಖೆಯನ್ನು ರಚಿಸಲಾಯಿತು. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 1977ರಲ್ಲಿ ಪ್ರತ್ಯೇಕಗೊಂಡಿತು. ಮತ್ತು 1998ರಲ್ಲಿ ಈ ಇಲಾಖೆಯಿಂದ ಬುಡಕಟ್ಟು ಜನರ ಕಲ್ಯಾಣ ಇಲಾಖೆಯು ಪ್ರತ್ಯೇಕಗೊಂಡಿತು.
ಇಂದು ಸಮಾಜ ಕಲ್ಯಾಣ ಆಯುಕ್ತರ ಕಾರ್ಯಾಲಯವು ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತದೆ. ಸಮಾಜ ಕಲ್ಯಾಣ ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ( 2001 ರ ಜನಗಣತಿಯಂತೆ ಕರ್ನಾಟಕದ ಒಟ್ಟು ಜನಸಂಖ್ಯೆಯು 5.29 ಕೋಟಿಗಳಾಗಿದ್ದು, ಈ ಪೈಕಿ ಎಸ್.ಸಿ ಮತ್ತು ಎಸ್ಟಿಗಳ ಪಾಲು ಅನುಕ್ರಮವಾಗಿ 86 ಲಕ್ಷ ಮತ್ತು 35 ಲಕ್ಷಗಳಾಗಿರುತ್ತವೆ. ಶೇಕಡಾವಾರು ಲೆಕ್ಕದಲ್ಲಿ ರಾಜ್ಯದ ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆಯು ಅನುಕ್ರಮವಾಗಿ ಶೇ 16.20 ಮತ್ತು 6.6 ಆಗಿರುತ್ತದೆ. ಸಾಮಾನ್ಯ ಸಾಕ್ಷರತಾ ಪ್ರಮಾಣವಾದ ಶೇ 67.04ಕ್ಕೆ ಪ್ರತಿಯಾಗಿ ಎಸ್ಸಿ ಸಾಕ್ಷರತಾ ಪ್ರಮಾಣವು ಶೇ 52.90 ಮತ್ತು ಎಸ್ಟಿ ಸಾಕ್ಷರತಾ ಪ್ರಮಾಣವು ಶೇ 48.31 ರಷ್ಟಿದೆ.) ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹಣ ಒದಗಿಸುತ್ತವೆ. ಕೆಲವು ಯೋಜನೆಗಳು ವಿಶೇಷ ಕೇಂದ್ರೀಯ ಅನುದಾನಗಳ ಮೂಲಕ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳಂತಹ ಕೇಂದ್ರ ಪ್ರಾಯೋಜಿತ ಯೋಜನೆಗಳಡಿಯಲ್ಲಿ ಕೇಂದ್ರ ಸರ್ಕಾರದಿಂದ ಭಾಗಶಃ ಅಥವಾ ಪೂರ್ಣ ಅನುದಾನಕ್ಕೊಳಪಟ್ಟಿರುತ್ತವೆಯಾದರೂ, ಹೆಚ್ಚಿನ ಯೋಜನೆಗಳಿಗೆ ರಾಜ್ಯ ಸರ್ಕಾರವೇ ಅನುದಾನ ನೀಡಿ ಅನುಷ್ಠಾನಗೊಳಿಸುತ್ತದೆ. ವಿಸ್ತೃತವಾಗಿ ಹೇಳುವುದಾದರೆ ಯೋಜನೆಗಳನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ, ರಾಜ್ಯ ಮಟ್ಟದಲ್ಲಿ (ಸಮಾಜ ಕಲ್ಯಾಣ ಆಯುಕ್ತಾಲಯ) ಒಂದು ಹಂತ, ಜಿಲ್ಲಾ ಮಟ್ಟದಲ್ಲಿ (ಜಿಲ್ಲಾ ಪಂಚಾಯ್ತಿ) ಒಂದು ಹಂತ ಮತ್ತು ಕೆಲವು ತಾಲ್ಲೂಕು ಪಂಚಾಯ್ತಿ ಮಟ್ಟದಲ್ಲಿ. ಈ ಯೋಜನೆಗಳು ಪ್ರಮುಖ ಆದ್ಯತಾ ಕ್ಷೇತ್ರಗಳಾದ ಶಿಕ್ಷಣ, ಉದ್ಯೋಗ, ವಸತಿ ನೀರಾವರಿ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಬೆಂಗಳೂರಿನಲ್ಲಿರುವ ಸಮಾಜ ಕಲ್ಯಾಣ ಆಯುಕ್ತರ ಕಾರ್ಯಾಲಯದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ವಿವಿಧ ವಿಭಾಗಗಳನ್ನು ವಿಂಗಡಿಸಲಾಗಿದೆ, ಉದಾ; ಶಿಕ್ಷಣ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಶಿಕ್ಷಣ ವಿಭಾಗ, ಉದ್ಯೋಗ ಮತ್ತು ತರಬೇತಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ನಡೆಸುವ ಉದ್ಯೋಗ ಮತ್ತು ತರಬೇತಿ ವಿಭಾಗ, ವಿಶೇಷ ಘಟಕ ಯೋಜನೆಗಳ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ ವಿಶೇಷ ಘಟಕ ಯೋಜನೆ ವಿಭಾಗ, ಎಲ್ಲ ವಿಭಾಗಗಳ ಚಟುವಟಿಕೆಗಳ ಸಂಯೋಜನೆ ಹಾಗೂ ದೌರ್ಜನ್ಯಕ್ಕೊಳಪಟ್ಟ ಪರಿಶಿಷ್ಟ ಜಾತಿಯವರಿಗೆ ಪರಿಹಾರ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಕಾನೂನು ಪದವೀಧರರಿಗೆ ತರಬೇತಿಯಂತಹ ಕೆಲ ವಿಶೇಷ ಯೋಜನೆಗಳ ಅನುಷ್ಠಾನಕ್ಕಾಗಿ ಸಂಯೋಜನಾ ವಿಭಾಗಗಳಿರುತ್ತವೆ.
ಸಾಂಸ್ಥಿಕ ಸಂರಚನೆ ಸಮಾಜ ಕಲ್ಯಾಣ ಇಲಾಖೆಯು 1956ರಲ್ಲಿ ಸರ್ಕಾರಿ ಆದೇಶ ಸಂಖ್ಯೆ: ಎಸ್.ಎಸ್-4009-ಎಸ್.ಆರ್.ಡಿ-2-56-1 ದಿನಾಂಕ: 18-10-1956 ರ ಅನ್ವಯ ಆರಂಭಗೊಂಡಿತು. ಇಲಾಖೆಯನ್ನು ಆರಂಭಿಸುವ ಪ್ರಮುಖ ಉದ್ದೇಶವು ಪರಿಶಿಷ್ಟ ಜಾತಿಗಳು/ಪಂಗಡಗಳು/ ಇತರ ಹಿಂದುಳಿದ ವರ್ಗಗಳು/ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯಾಗಿತ್ತು. ನಂತರದ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳು, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರು ಹಾಗೂ ಪರಿಶಿಷ್ಟ ಪಂಗಡಗಳವರ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಲಾಯಿತು. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಗಳವರ ಕಲ್ಯಾಣ ಕಾರ್ಯಕ್ರಮಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತದೆ.
ಕಾರ್ಯಕ್ರಮದ ಉದ್ದೇಶ ಮತ್ತು ನೋಟ
1. ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳು
2. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು
3. ವಸತಿ ಶಾಲೆಗಳು
4. ಶ್ರೀ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು
5. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು
6. ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ
7. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
8. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳು
9. ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚಗಳು
10. ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಣ
11. ಪುಸ್ತಕ ಭಂಡಾರ
12. ಕಾನೂನು ಪದವೀದರರಿಗೆ ಶಿಷ್ಯವೇತನ
13. ಅಂತರಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ ಮಂಜೂರಾತಿ
14. ದೌರ್ಜನ್ಯಕ್ಕೆ ಒಳಪಟ್ಟ ಪ.ಜಾತಿ/ಪ.ಪಂಗಡದವರಿಗೆ ಪರಿಹಾರ
15. ವಿಶೇಷ ಘಟಕ ಯೋಜನೆ ಕಾರ್ಯಕ್ರಮಗಳು .
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಜಾತಿಯವರ ಏಳಿಗೆಗಾಗಿ ಸರ್ಕಾರವು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದು.
ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳು
ಜಿಲ್ಲೆಯಲ್ಲಿ ಒಟ್ಟು 63 ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿರುತ್ತವೆ, ವಿವಿಧ ಶಾಲೆಗಳಲ್ಲಿ ಮಾದ್ಯಮಿಕ ಪ್ರೌಡಶಾಲೆ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ.ಜಾತಿ, ಪ.ಪಂಗಡ ಮತ್ತು ಇತರೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಶೇ.75 ಪ.ಜಾತಿ, ಶೇ 25 ಪ.ವರ್ಗ ಮತ್ತು ಇತರೆ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು. ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿ ನಿಲಯಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಮಾಹೆಯಾನ ಪ್ರತಿ ವಿದ್ಯಾರ್ಥಿಗೆ ರೂ 1300/- ಗಳ ದರದಲ್ಲಿ 10 ತಿಂಗಳ ಅವದಿಗೆ ಉಚಿತ ಊಟ/ವಸತಿ, ಕಲ್ಪಿಸಲಾಗುವುದು. ವಾರ್ಷಿಕವಾಗಿ ಲೇಖನ ಸಾಮಾಗ್ರಿ, ಸಮವಸ್ತ್ರ, ನೀಡಲಾಗುವುದು. ಈ ಜಿಲ್ಲೆಯಲ್ಲಿ ಒಟ್ಟು 3465ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆಯುತ್ತಿದ್ದಾರೆ.ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು
ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ಒಟ್ಟು 30 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಹಾಗೂ ಪ.ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಮುಖಾಂತರ ಆಯ್ಕೆಮಾಡಲಾಗುವುದು. ವಿದ್ಯಾರ್ಥಿ ನಿಲಯಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ /ವಸತಿ ನೀಡಲಾಗುತ್ತಿದೆ. ಹಾಗೂ ಮಾಹೆಯಾನ 1400/- ಮೊತ್ತ ಮಿತಿಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಊಟ, ತಿಂಡಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 4404 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಪ್ರಯೋಜನ ಪಡೆಯುತ್ತಿದ್ದಾರೆ.ವಸತಿ ಶಾಲೆಗಳು
ಜಿಲ್ಲೆಯಲ್ಲಿ 2 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು 1 ರಿಂದ 5ನೇ ತರಗತಿ ವ್ಯಾಸಂಗಮಾಡಲು ಇಚ್ಚಿಸುವ ಪ.ಜಾತಿ/ಪ.ವರ್ಗ/ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶೇ.75 ಪ.ಜಾತಿ ಹಾಗೂ ಶೇ.25 ಪ.ವರ್ಗ/ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು.ತಾಲ್ಲೂಕು ಮಟ್ಟದ ಸಮಿತಿ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗುವುದು. ವಸತಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ, ಶೈಕ್ಷಣಿಕ ವಿದ್ಯಾಭ್ಯಾಸ ನೀಡಲಾಗುತ್ತದೆ. ಹಾಗೂ ಮಾಹೆಯಾನ ರೂ.1000.00 ಊಟ/ತಿಂಡಿಯನ್ನು ಪ್ರತಿ ವಿದ್ಯಾರ್ಥಿಗೆ ವೆಚ್ಚ ಮಾಡಲಾಗುತ್ತದೆ. ವಾರ್ಷಿಕವಾಗಿ ಲೇಖನ ಸಾಮಾಗ್ರಿ, ಸಮವಸ್ತ್ರ, ಇತ್ಯಾದಿ ಸೌಲಭ್ಯ ಒದಗಿಸಲಾಗುವುದು. ಜಿಲ್ಲೆಯಲ್ಲಿ ಪಾವಗಡ ಟೌನ್, ತುಮಕೂರುಟೌನ್ ತಲಾ ಒಂದರಂತೆ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ. ಒಟ್ಟು 250 ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯುತ್ತಿರುತ್ತಾರೆ.ಶ್ರೀ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುವ ವಿಜ್ಞಾನ ವಿಭಾಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗುವುದು. ಪ್ರಥಮ ಪಿಯುಸಿಯಲ್ಲಿ ಪಿಸಿಎಂಬಿ ಹಾಗೂ ಪಿಸಿಎಂಎಸ್ ಕಾಂಬಿನೇಷನ್ ಇದ್ದು ವಿಭಾಗಕ್ಕೆ ತಲಾ 40 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶವಿರುತ್ತದೆ. ಶೇ 75 ಪ.ಜಾತಿ ಹಾಗೂ ಶೇ 25 ಪ.ವರ್ಗ/ ಇತರೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಶೈಕ್ಷಣಿಕ ವಿದ್ಯಾಭ್ಯಾಸ ಒದಗಿಸಲಾಗುವುದು. ಮಾಹೆಯಾನ ಪ್ರತಿ ವಿದ್ಯಾರ್ಥಿಗೆ ರೂ.1400/-ರ ಮಿತಿಯಲ್ಲಿ ಊಟ/ತಿಂಡಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕು ಗೊಲ್ಲಹಳ್ಳಿಯಲ್ಲಿ ಈ ಕಾಲೇಜು ನಡೆಯುತ್ತಿದ್ದು ಒಟ್ಟು 80 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿರುತ್ತಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು
ಜಿಲ್ಲೆಯಲ್ಲಿ ಒಟ್ಟು 9 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ನಡೆಯುತ್ತಿದ್ದು 6 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ/ವರ್ಗ ಇತರೆ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು. ಪ್ರತಿ ವರ್ಷ 6ನೇ ತರಗತಿಗೆ 50 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು. ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಿಗದಿಪಡಿಸಿದ ದಿನಾಂಕದೊಂದು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ವವರ್ಗಗಳ/ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಸದರಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕದ ಮೇರೆಗೆ ಅವರು ಕೇಳಿರುವ ಶಾಲೆಗಳಿಗೆ ಆಯ್ಕೆ ಮಾಡಲಾಗುವುದು. ಶೇ 75 ರಷ್ಟು ಪರಿಶಿಷ್ಟಜಾತಿಯ ಹಾಗೂ ಶೇಕಡ.25ರಷ್ಟು ಇತರೆ ಜಾತಿಯ ಗಂಡು ಮತ್ತು ಹೆಣ್ಣುಮಕ್ಕಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು 6 ರಿಂದ 10 ತರಗತಿ ಪ್ರತಿ ತರಗತಿಗೆ 50 ವಿದ್ಯಾರ್ಥಿಗಳಂತೆ ದಾಖಲಾತಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಮಾಹೆಯಾನ ರೂ.1400/- ದರದಲ್ಲಿ ಪ್ರತಿ ವಿದ್ಯಾರ್ಥಿಗೆ ಊಟ ತಿಂಡಿ ವೆಚ್ಚಕ್ಕೆ ವಿನಿಯೋಗಿಸಲಾಗುವುದು. ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ ತಿಂಡಿ ವಸತಿ ಹಾಗೂ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 2250 ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆಯುತ್ತಿರುತ್ತಾರೆ.ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ
ಜಿಲ್ಲೆಯಲ್ಲಿ ಒಟ್ಟು 6 ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗಳು ನಡೆಯುತ್ತಿದ್ದು 6 ರಿಂದ 12 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ/ವರ್ಗದ ಇತರೆ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು. ಪ್ರತಿ ವರ್ಷ 6ನೇ ತರಗತಿಗೆ 50 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು. ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಿಗದಿಪಡಿಸಿದ ದಿನಾಂಕದೊಂದು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ವವರ್ಗಗಳ ಇಲಾಖೆಯ ಎಲ್ಲಾ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಸದರಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕದ ಮೇರೆಗೆ ಅವರು ಕೇಳಿರುವ ಶಾಲೆಗಳಿಗೆ ಆಯ್ಕೆ ಮಾಡಲಾಗುವುದು.ಶೇ 75 ರಷ್ಟು ಪರಿಶಿಷ್ಟಜಾತಿಯ ಹೆಣ್ಣುಮಕ್ಕಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು 6 ರಿಂದ 12 ತರಗತಿ ಪ್ರತಿ ತರಗತಿಗೆ 50 ವಿದ್ಯಾರ್ಥಿಗಳಂತೆ ದಾಖಲಾತಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಮಾಹೆಯಾನ ರೂ 1400/- ವೆಚ್ಚವನ್ನು ಊಟ ತಿಂಡಿ ಸೌಲಭ್ಯ ಕಲ್ಪಿಸಲಾಗುತ್ತದೆ. ದಾಖಲಾದ ವಿದ್ಯಾರ್ಥಿಗಳು ಉಚಿತ ಊಟ ವಸತಿ ಹಾಗೂ ಶೈಕ್ಷಣಿಕ ಸೌಲಭ್ಯವನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 1500 ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯುತ್ತಿದ್ದಾರೆ.ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
ಪ ಜಾತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಇವರುಗಳಿಗೆ ಕೆಳಕಂಡಂತೆ ಮೆಟ್ರಿಕ್ ಪೂರ್ವವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುತ್ತದೆ.1) 1-5 ನೇ ತರಗತಿವರೆಗಿನ ಬಾಲಕರಿಗೆ ವಾರ್ಷಿಕ750/-
2)1) 1-5 ನೇ ತರಗತಿವರೆಗಿನ ಬಾಲಕಿಯರಿಗೆ ವಾರ್ಷಿಕ 850/-
3) 6-7 ನೇ ತರಗತಿವರೆಗಿನ ಬಾಲಕರಿಗೆ ವಾರ್ಷಿಕ 900/-
4) 6-7ನೇ ತರಗತಿವರೆಗಿನ ಬಾಲಕಿಯರಿಗೆ ವಾರ್ಷಿಕ1000/-
5) 8ನೇ ತರಗತಿವರೆಗಿನ ಬಾಲಕರಿಗೆ ವಾರ್ಷಿಕ 1000/-
6) 8ನೇ ತರಗತಿವರೆಗಿನ ಬಾಲಕಿಯರಿಗೆ ವಾರ್ಷಿಕ 1100- /-
7) 9-10 ನೇ ತರಗತಿವರೆಗೆ ಡೇಸ್ಕಾಲರ್ ವಾರ್ಷಿಕ 2250/- ಹಾಗೂ ಹಾಸ್ಟೆಲ್ಲರ್ ವಾರ್ಷಿಕ 4500/-
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳು
ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜು ವಿಶ್ವ ವಿದ್ಯಾನಿಲಯಗಳಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಅರ್ಹ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ನಿಗಧಿಪಡಿಸಿದ ದರಗಳಂತೆ ಮಂಜೂರು ಮಾಡಲಾಗುವುದು. ಸದರಿ ವಿದ್ಯಾರ್ಥಿ ವೇತನಕ್ಕೆ ಪೋಷಕರ ವರಮಾನ 2.00 ಲಕ್ಷ ಮೀರದಿದ್ದಲ್ಲಿ ಪೂರ್ಣ ನಿರ್ವಹಣಾ ವೆಚ್ಚ ಹಾಗೂ ಶುಲ್ಕ ಪಾವತಿಸಲಾಗುವುದು. ವಿದ್ಯಾರ್ಥಿಯು ಖಾಯಂ ನೌಕರನಾಗಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಇರುವುದಿಲ್ಲ. ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳು ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ. ಹೆಣ್ಣು ಮಕ್ಕಳಿಗೆ ನಿರ್ಭಂಧವಿರುವುದಿಲ್ಲ. ಸಂಬಂಧಿಸಿದ ಸಹಾಯಕ ನಿರ್ದೇಶಕರಗಳಿಂದ ಅರ್ಜಿಗಳನ್ನು ಸಂಬಂಧಿಸಿದ ವಿದ್ಯಾಸಂಸ್ಥೆಗಳಿಗೆ ಒದಗಿಸಲಾಗುವುದು.
ವಿವರ
ಡೇ ಸ್ಕಾಲರ್
ಹಾಸ್ಟ್ಲರ್
ಷರಾ
ಗ್ರೂಪ್ 1
550/-
1200/-
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಹಾಗೂ ಇತರೆ ಕೋರ್ಸ್ ಗಳಿಗೆ
ಗ್ರೂಪ್ 2
530/-
820/-
ಸ್ನಾತಕೋತ್ತರ ಮತ್ತು ಪಾಲಿಟೆಕ್ನಿಕ್ ಕೋರ್ಸ್ ಗಳಿಗೆ
ಗ್ರೂಪ್ 3
300/-
570/-
ಪದವಿ ಮತ್ತು ಇತರೆ ಕೋರ್ಸ್ ಗಳಿಗೆ
ಗ್ರೂಪ್ 4
230/-
380/-
ಪಿ.ಯು.ಸಿ ಮತ್ತು ಐ.ಟಿ.ಐ ಕೋರ್ಸ್ ಗಳಿಗೆ
ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚಗಳು
ಪ.ಜಾತಿ ಮತ್ತು ವರ್ಗದ ವಿದ್ಯಾಥಿಗಳು ಎಸ್.ಎಸ್.ಎಲ್.ಸಿ ನಂತರ ತಮ್ಮ ವ್ಯಾಸಂಗವನ್ನು ಮುಂದುವರೆಸಲು ಸಾದ್ಯವಾಗದ ವಿದ್ಯಾಥಿಗಳಿಗೆ ಅಮಗೀಕೃತ ಮತ್ತು ಸರ್ಕಾರಿ ಕಾಲೇಜು ವಿದ್ಯಾಥಿಗಳು ವಿದ್ಯಾರ್ಥಿನಿಲಯದಲ್ಲಿರುವವರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವ ಮತ್ತು ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿಪಡಿಸಿರುವ ವಿದ್ಯಾರ್ಥಿವೇತನ ದರಕ್ಕಿಂತ ಆಯಾ ವಿದ್ಯಾರ್ಥಿಗಳಿಗೆ ಹೆಚ್ಚಿನ ವೆಚ್ಚ ಮಾಡಿದಲ್ಲಿ ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚವನ್ನು ಪಾವತಿಸಲಾಗುವುದು.ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಣ
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಈ ಕೆಳಕಂಡ ಕೋರ್ಸ್ ಗಳಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಕೆಳಕಂಡಂತೆ ವಾರ್ಷಿಕವಾಗಿ ಬಹುಮಾನ ಹಣ ನೀಡಲಾಗುವುದು.
ದ್ವಿತೀಯ ಪಿಯುಸಿ ರೂ.20000.00
ಪದವಿ ಬಿ.ಎ/ ಬಿಎಸ್ಸಿ/ ಬಿ.ಕಾಂ ಇತ್ಯಾದಿ ರೂ.25000.00
ಸ್ನಾತಕೋತ್ತರ ಪದವಿ ರೂ 30000.00
ವೈದ್ಯಕೀಯ ಇಂಜಿನಿಯರಿಂಗ್ ಕೋರ್ಸಸ್ ರೂ.35000.00ಪುಸ್ತಕ ಭಂಡಾರ
ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಮತ್ತು ಇತರೆ ವೃತ್ತಿ ಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ಅದ್ಯಯನ ಪುಸ್ತಕಗಳನ್ನು ಸಂಬಂಧಿಸಿದ ಕಾಲೇಜುಗಳಿಗೆ ಒದಗಿಸಲಾಗುವುದು.ಕಾನೂನು ಪದವೀಧರರಿಗೆ ಶಿಷ್ಯವೇತನ
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಕಾನೂನು ಪದವಿ ಪಡೆದಿದ್ದಲ್ಲಿ ಆಡಳಿತ ನ್ಯಾಯಾಧೀಕರಣದಲ್ಲಿ ಹೆಚ್ಚು ಜ್ಞಾನ ಗಳಿಸಲು ನೆರವಾಗುವಂತೆ ತರಬೇತಿ ನೀಡಲಾಗುವುದು. ಈ ತರಭೇತಿಯ ಅವಧಿ 4 ವರ್ಷಗಳಾಗಿರುತ್ತದೆ. 20 ವರ್ಷಕ್ಕೂ ಮೇಲ್ಪಟ್ಟು ವಕೀಲಿ ವೃತ್ತಿಯಲ್ಲಿ ಅನುಭವವಿರುವ ವಕೀಲರೊಂದಿಗೆ ಅಥವಾ ಜಿಲ್ಲಾ ಸರ್ಕಾರಿ ಸತ್ರ ನ್ಯಾಯಾಲಯ ಅಭಿಯೋಜಕರುಗಳಲ್ಲಿ ತರಬೇತಿಗಾಗಿ ನಿಯೋಜಿಸಲಾಗುವುದು. ಮಾಹೆಯಾನ ರೂ.2000/- ಶಿಷ್ಯವೇತನವನ್ನು 4 ವರ್ಷಗಳು ನೀಡಲಾಗುತ್ತದೆ.
ಅಂತರಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ ಮಂಜೂರಾತಿ
ಅ) ಪರಿಶಿಷ್ಟ ಜಾತಿಯವರು ಇತರೆ ಮೇಲ್ಜಾತಿಯವರನ್ನು ವಿವಾಹವಾದಲ್ಲಿ ಅವರು ಸಮಾಜದಿಂದ ಬೇರ್ಪಟ್ಟು ಕಷ್ಟಕ್ಕೆ ಒಳಪಡುತ್ತಾರೆ. ಅವರು ಸಮಗ್ರವಾಗಿ ಜೀವನವನ್ನು ಸಾಗಿಸಲು ಆರ್ಥಿಕ ಸಹಾಯದ ಅವಶ್ಯಕತೆ ಇರುತ್ತದೆ. ಈ ಹಿನ್ನಲೆಯಲ್ಲಿ ಇಂತಹ ದಂಪತಿಗಳಿಗೆ ಸಹಾಯವಾಗಲು ಈ ಯೋಜನೆಯನ್ನು ರೂಪಿಸಲಾಗಿದೆ. ಪರಿಶಿಷ್ಟ ಜಾತಿಯ ವಧು ಸವರ್ಣೀಯ ಜಾತಿಯ ವರನನ್ನು ವಿವಾಹವಾದರೆ ಅಂತಹ ದಂಪತಿಗಳಿಗೆ ರೂ.3,00,000/- ಹಾಗೂ ಇತರೆ ಜಾತಿಯ ವಧುವನ್ನು ಪರಿಶಿಷ್ಟ ಜಾತಿಯ ವರನು ವಿವಾಹವಾದರೆ ಅಂತಹ ದಂಪತಿಗಳಿಗೆ ರೂ. 2,00,000/- ಗಳನ್ನು ಪ್ರೋತ್ಸಾಹಧನವನ್ನಾಗಿ ಮಂಜೂರು ಮಾಡಲಾಗುವುದು. ಇಬ್ಬರೂ ಸಹ ಹಿಂದುಗಳಾಗಿರಬೇಕು. ಸಂಬಂಧಿಸಿದ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಛೇರಿಯಿಂದ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.ಸಹಾಯಕ ನಿರ್ದೇಶಕರ ಕಛೇರಿಯಿಂದ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗುವುದು. ಈ ಹಣವನ್ನು ಪ್ರತಿ ವರ್ಷ 2 ಕಂತುಗಳಲ್ಲಿ ಪಾವತಿಸಲಾಗುವುದು. ಶೇಕಡ 50ರಷ್ಟು ನಗದು ಹಾಗೂ ಶೇಕಡ 50ರಷ್ಟು ಎನ್ಎಸ್ಸಿ ರೂಪದಲ್ಲಿ ದಂಪತಿಗಳಿಬ್ಬರ ಹೆಸರಿಗೆ ಪಾವತಿಸಲಾಗುವುದು. ವಾರ್ಷಿಕ ಆದಾಯ ರೂ.2,00,000/-ಒಳಗಿರುವ ಎಲ್ಲಾ ಅಂತರಜಾತಿ ವಿವಾಹದ ದಂಪತಿಗಳು ಈ ಸೌಲಭ್ಯ ಪಡೆಯಲು ಆರ್ಹರು.ಆ) ಪರಿಶಿಷ್ಟ ಜಾತಿಯಲ್ಲಿನ ವಧು ವರರು ಸರಳ ರೀತಿಯಲ್ಲಿ ಸಂಘ ಸಂಸ್ಥೆಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಡಿ ವಿವಾಹವಾದರೆ ಅಂತಹ ದಂಪತಿಗಳಿಗೆ ಪ್ರೋತ್ಸಾಹಧನವಾಗಿ ಒಂದು ಬಾರಿಗೆ ರೂ. 50000/- ಗಳನ್ನು ಮಂಜೂರು ಮಾಡುಲಾಗುತ್ತದೆ.
ದೌರ್ಜನ್ಯಕ್ಕೆ ಒಳಪಟ್ಟ ಪ.ಜಾತಿ/ಪ.ಪಂಗಡದವರಿಗೆ ಪರಿಹಾರ
ಪ.ಜಾತಿ/ಪ.ವರ್ಗದ ಜನಾಂಗದ ಮೇಲೆ ಅನ್ಯ ಜಾತಿಯ(ಸವರ್ಣೀಯ) ದೌರ್ಜನ್ಯವೆಸಗಿದ್ದ ಸಂದರ್ಭಗಳಲ್ಲಿ ದೌರ್ಜನ್ಯ ಕಾಯ್ದೆ 1989 ಹಾಗೂ 1995ರ ನಿಯಮದ ಅನ್ವಯ ಪರಿಹಾರ, ಪುನರ್ವಸತಿ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ರೂಪಿಸಿದೆ. ಪರಿಹಾರ ಮಂಜೂರು ಮಾಡುವ ಪೂರ್ಣ ಅಧಿಕಾರವನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಪರಿಹಾರ ನೀಡುವಾಗ ಜೀವ, ಆಸ್ತಿಗಳ ನಷ್ಟಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ವರದಿ ಪಡೆದು ಮಂಜೂರು ಮಾಡಲಾಗುವುದು. ದೌರ್ಜನ್ಯ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲ್ಪಟ್ಟಿರುವ ವಿಶೇಷ ನ್ಯಾಯಲಯದ ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಸಿಬ್ಬಂದಿ ವೇತನ ಹಾಗೂ ಕಛೇರಿ ನಿರ್ವಹಣಾ ವೆಚ್ಚ ಭರಿಸಲು ಈ ಯೋಜನೆಯಡಿ ಅನುದಾನದ ಅವಕಾಶ ಮಾಡಿಕೊಳ್ಳಲಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ಮುಂದೆ ಮತ್ತು ನ್ಯಾಯಾಲಯಕ್ಕೆ ಹಾಜರಾಗುವ ಪ.ಜಾತಿ/ಪ.ವರ್ಗದ ಸಂತ್ರಸ್ಥರಿಗೆ ಹಾಗೂ ಸಾಕ್ಷಿಗಳಿಗೆ ನಿರ್ವಹಣೆ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದು. 2015-16 ನೇ ಸಾಲಿಗೆ ರೂ.8.25 ಲಕ್ಷ ಗಳನ್ನು 60 ಸಂತ್ರಸ್ಥರಿಗೆ ನೀಡಲಾಗಿದೆ.ವಿಶೇಷ ಘಟಕ ಯೋಜನೆ ಕಾರ್ಯಕ್ರಮಗಳು
ಗ್ರಾಮಾಂತರ ಪ್ರದೇಶದಲ್ಲಿ ಪ.ಜಾತಿಯವರ ಸರ್ವಾಂಗಿಣ ಅಭಿವೃದ್ದಿಗಾಗಿ ತಾಲ್ಲೂಕು ಪಂಚಾಯತ್ ಹಾಗೂ ಅಧೀನದ ಅಭಿವೃದ್ದಿ ಇಲಾಖೆಗಳ ಮುಖಾಂತರ ಕಾರ್ಯಗತಗೊಳಿಸಲಾಗುವುದು. ಪ್ರತಿ ಆರ್ಥಿಕ ವರ್ಷಗಳಲ್ಲಿ ಈ ಹಿಂದೆ ಯಾವುದೇ ಸೌಲಭ್ಯವನ್ನು ಪಡೆಯದ ಅಭಿವೃದ್ದಿಯಲ್ಲಿ ಹಿಂದುಳಿದ ಹೆಚ್ಚಿನ ಸಂಖ್ಯೆಯಲ್ಲಿ ಪ.ಜಾತಿ ಕುಟುಂಬಗಳು ವಾಸವಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಈ ಗ್ರಾಮಗಳಿಗೆ ಆಗಬೇಕಾದ ಅಗತ್ಯ ಮೂಲಭೂತ ಸೌಕರ್ಯ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕಲ್ಪಿಸಿರುವ ಸೌಲಭ್ಯಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಈ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದ ಹಾಗೂ ಅಧೀನದ ಅಭಿವೃದ್ದಿ ಇಲಾಖೆಗಳಿಂದ ಅನುಷ್ಟಾನಗೊಳಿಸಲಾಗುವುದು. ಈ ಕಾರ್ಯಕ್ರಮವನ್ನು ರೇಷ್ಮೆ, ತೋಟಗಾರಿಕೆ, ಜಲಸಂಪನ್ಮೂಲ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ ಇಲಾಖೆ, ಕೈಗಾರಿಕೆ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯತ್ ವತಿಯಿಂದ ಅನುಷ್ಟಾನಗೊಳಿಸಲಾಗುವುದು.
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ
ಕ್ರ.ಸಂ
ಕಾರ್ಯಕ್ರಮದ ಹೆಸರು
ಒದಗಿಸಲಾದ ಅನುದಾನ (ರೂ ಲಕ್ಷಗಳಲ್ಲಿ)
ಖರ್ಚಾದ ಅನುದಾನ (ರೂ ಲಕ್ಷಗಳಲ್ಲಿ)
ಶೇಕಡ ಪ್ರಗತಿ
1
ಜಿಲ್ಲಾ ಪಂಚಾಯತ್ ಯೋಜನೆ
524.00 513.55 98 2
ಜಿಲ್ಲಾ ಪಂಚಾಯತ್ ಯೋಜನೇತರ
926.46 874.87 94 3
ತಾಲ್ಲೂಕು ಪಂಚಾಯತ್ ಯೋಜನೆ
1712.00 1608.07 94 4
ತಾಲ್ಲೂಕು ಪಂಚಾಯತ್ ಯೋಜನೇತರ
1415.85 1284.88 91
ಇಲಾಖೆಯ ಆಡಳಿತ ವ್ಯವಸ್ಥೆಯು ಮೂರು ಹಂತಗಳನ್ನು ಒಳಗೊಂಡಿದೆ.
1. ರಾಜ್ಯ ಮಟ್ಟ
2. ಜಿಲ್ಲಾ ಮಟ್ಟ
3. ತಾಲೂಕು ಮಟ್ಟ1. ರಾಜ್ಯ ಮಟ್ಟ:
ರಾಜ್ಯ ಮಟ್ಟದಲ್ಲಿ ಸಮಾಜ ಕಲ್ಯಾಣ ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅವರಿಗೆ ಸಹಾಯಕರಾಗಿ ಮೂವರು ಜಂಟಿ ನಿರ್ದೇಶಕರು, ನಾಲ್ವರು ಉಪ ನಿರ್ದೇಶಕರು ಹಾಗೂ ಓರ್ವ ಮುಖ್ಯ ಲೆಕ್ಕಾಧಿಕಾರಿಗಳಿರುತ್ತಾರೆ. ಇವರಲ್ಲದೇ, ಸಮಾಜ ಕಲ್ಯಾಣ ಇಲಾಖೆಯ ಓರ್ವ ಜಂಟಿ ನಿರ್ದೇಶಕರು ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಪರೀಕ್ಷಾ ಕೇಂದ್ರೀಯ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಅಂಬೇಡ್ಕರ್ ಭವನದಲ್ಲಿದ್ದು, ಐಎಎಸ್ ಮತ್ತು ಐಪಿಎಸ್ ನಂತಹ ಭಾರತೀಯ ಸಿವಿಲ್ ಸರ್ವೀಸಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗ ಬಯಸುವ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುವುದು.2.ಜಿಲ್ಲಾ ಮಟ್ಟ:
ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಗಳು ಅನುಷ್ಠಾನಗೊಳಿಸುತ್ತವೆ. ಜಂಟಿ ನಿರ್ದೇಶಕರು ಜಿಲ್ಲಾ ಮಟ್ಟದಲ್ಲಿ ಸಮಾಜ ಕಲ್ಯಾಣ ಮುಖ್ಯಸ್ಥರಾಗಿದ್ದು, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.3. ತಾಲ್ಲೂಕು ಮಟ್ಟ:
ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಮುಖ್ಯಸ್ಥರಾಗಿದ್ದು, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಹಾಗೂ ಜಂಟಿ ನಿರ್ದೇಶಕರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಜಾತಿಯವರ ಏಳಿಗೆಗಾಗಿ ಸರ್ಕಾರವು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದು.
ಮಾಹಿತಿ ಹಕ್ಕು ಅಧಿನಿಯಮ-2005 ಕಲಂ4 (1) ಎ ಮತ್ತು ಬಿ
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಕ್ರ.ಸಂ
ಕಛೇರಿ ಹೆಸರು ಮತ್ತು ವಿಳಾಸ
ಜಿಲ್ಲೆ/ ತಾಲ್ಲೂಕು/ಹೋಬಳಿ/ ಗ್ರಾಮ ಪಂಚಾಯತ್
ಕಛೇರಿ ದೂರವಾಣಿ/ಪ್ಯಾಕ್ಸ್ ಸಂಖ್ಯೆ
ಮೊಬೈಲ್ ಸಂಖ್ಯೆ
1
ಸಾರ್ವಜನಿಕ ಮಾಹಿತಿ ಅಧಿಕಾರಿ/ ಜಂಟಿ ನಿರ್ದೇಶಕರು
ತುಮಕೂರು
0816-2278132
9480843045
2
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ತುಮಕೂರು
0816-2278132
9448661402
3
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ತುಮಕೂರು
0816-2251361
9480843205 4
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ತುಮಕೂರು
0816-2251362
7259979118
5
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಗುಬ್ಬಿ
08131-223684
9480843198 6
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಗುಬ್ಬಿ
08131-223684
9538420210 7
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ತುರುವೇಕೆರೆ
08139-287057
3480843206 8
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ತುರುವೇಕೆರೆ
08139-287057
9483186277 9
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ತಿಪಟೂರು
08134-253275
948043204 10
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ತಿಪಟೂರು
08134-253275
9448631488
11
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಚಿಕ್ಕನಾಯಕನಹಳ್ಳಿ
08133-267491
9480843197 12
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಚಿಕ್ಕನಾಯಕನಹಳ್ಳಿ
08133-267491
7829984224
13
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಶಿರಾ
08135-276530
9480843203 14
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಶಿರಾ
08135-276530
9731521540 15
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಮಧುಗಿರಿ
08137 283346/ 282125
9480843201
16
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಮಧುಗಿರಿ
08137-283346/ 282125
9741972401 17
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಪಾವಗಡ
08136 245221
9480843202
18
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಪಾವಗಡ
08136 245221
9945060218
19
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಕೊರಟಗೆರೆ
08138-232843
9480843199 20
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಕೊರಟಗೆರೆ
08138-232843
9986910779
21
ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ನಿರ್ದೇಶಕರು
ಕುಣಿಗಲ್
08132-221113
9480843200 22
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಕಛೇರಿ ಅಧೀಕ್ಷಕರು
ಕುಣಿಗಲ್
08132- 221113
9036503138
ಜಂಟಿ ನಿರ್ದೇಶಕರ ಕಛೇರಿ
ಸಮಾಜ ಕಲ್ಯಾಣ ಇಲಾಖೆ ,ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರ,
ತುಮಕೂರು
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||