![]() |
ತಿಪಟೂರು ತಾಲ್ಲೂಕು ಪಂಚಾಯತ್ |
ಪಂಚಾಯಿತಿ ಎಂಬುದು ಬಹಳ ಹಿಂದಿನಿಂದಲೂ ಬೆಳೆದು ಬಂದಿರುವ ಒಂದು ಪದ್ಧತಿ. ಬಹಳ ಹಿಂದೆ “ಪಂಚರು” ಪಂಚಾಯಿತಿಯ ಮುಖ್ಯಸ್ಥರಾಗಿರುತ್ತಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ ಪಂಚರಾಗಿ ಅಧಿಕಾರ ನಡೆಸಲು ಅವಕಾಶವಿತ್ತು. ಈ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂಬ ಆರೋಪಗಳಿವೆ. ಸಿರಿವಂತರು, ಶಕ್ತಿವಂತರ ಹೇಳಿಕೆಗಳು ನ್ಯಾಯವಾಗಿ ಬಿಡುತ್ತಿತ್ತು. ಅವರ ಅಭಿಪ್ರಾಯಗಳನ್ನು, ತೀರ್ಮಾನಗಳನ್ನು ಜನಸಾಮಾನ್ಯರು ವಿರೋಧಿಸುವ ಹಾಗಿರಲಿಲ್ಲ. ನಂತರ, ಕರ್ನಾಟಕದಲ್ಲಿ 1903ರಲ್ಲಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ಕಾಯಿದೆಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ, 3 ಹಂತಗಳ ಸ್ಥಳೀಯ ಆಡಳಿತ ವ್ಯವಸ್ಥೆ ಜಾರಿಗೆ ಬಂದಿತು.
ಎ) ಜಿಲ್ಲಾ ಮಂಡಳಿ
ಬಿ) ತಾಲ್ಲೂಕು ಬೋರ್ಡ್
ಸಿ) ಪಂಚಾಯಿತಿ ಸಂಘಟನೆಸ್ವಾತಂತ್ರ್ಯಾನಂತರದಲ್ಲಿ ಅಂದರೆ 1959ರಲ್ಲಿ ಎಲ್ಲಾ ರಾಜ್ಯಗಳಲ್ಲೂ ಪಂಚಾಯತ್ ರಾಜ್ ಅಧಿನಿಯಮವನ್ನು ಜಾರಿಗೆ ತಂದು 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹುಟ್ಟುಹಾಕಲಾಯಿತು.
ಎ) ಗ್ರಾಮ ಪಂಚಾಯಿತಿ
ಬಿ) ಬ್ಲಾಕ್ ಪಂಚಾಯಿತಿ ಸಮಿತಿ (ತಾಲ್ಲೂಕು ಬೋರ್ಡ್)
ಸಿ) ಜಿಲ್ಲಾ ಪರಿಷತ್ಈ ವ್ಯವಸ್ಥೆಯಲ್ಲಿ ಬ್ಲಾಕ್ ಪಂಚಾಯಿತಿ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು. ಅನಂತರದಲ್ಲಿ 1977ರಲ್ಲಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ಕಾಲಕಲ್ಪಕ್ಕೆ ಪ್ರಯತ್ನ ಮಾಡಿತು. ಇದರ ಪರಿಣಾಮವಾಗಿ ದೇಶಾದ್ಯಂತ 2 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಮಾಡಿತು. ಅದರಲ್ಲಿ;
ಎ) ಮಂಡಲ್ ಪಂಚಾಯಿತಿ
ಬಿ) ಜಿಲ್ಲಾ ಪಂಚಾಯಿತಿ
1987 ರಿಂದ 1992ರ ಅವಧಿಯಲ್ಲಿ ಈ ಎರಡೂ ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಇಡೀ ದೇಶಕ್ಕೆ ಏಕರೂಪದ ಪಂಚಾಯತ್ ರಾಜ್ ಮಾದರಿಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ಸಂವಿಧಾನದ 1973ರ ತಿದ್ದುಪಡಿಯನ್ನು ಮಾಡಿ, 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು 1993 ರಿಂದ ಜಾರಿಗೆ ತರಲಾಗಿದೆ.
ಎ) ಗ್ರಾಮ ಪಂಚಾಯಿತಿ
ಬಿ) ಮಧ್ಯಂತರ ಪಂಚಾಯಿತಿ (ತಾಲ್ಲೂಕು ಪಂಚಾಯಿತಿ)
ಸಿ) ಜಿಲ್ಲಾ ಪಂಚಾಯಿತಿಎ) ಗ್ರಾಮ ಪಂಚಾಯಿತಿ:
ಪ್ರತಿ 5,000 ದಿಂದ 7,000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆಯನ್ನು ಮಾಡಲಾಯಿತು. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ತಿಪಟೂರು ತಾಲ್ಲೂಕಿನ ಒಟ್ಟು ಜನಸಂಖ್ಯೆ 2,17,124 ಇದ್ದು, ಒಟ್ಟು 231 ಗ್ರಾಮಗಳು ಮತ್ತು 26 ಗ್ರಾಮ ಪಂಚಾಯಿತಿಗಳು ಇರುತ್ತವೆ.ಬಿ) ಮಧ್ಯಂತರ ಪಂಚಾಯಿತಿ (ತಾಲ್ಲೂಕು ಪಂಚಾಯಿತಿ):
ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿರುತ್ತದೆ. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ, ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಪದನಿಮಿತ್ತ ಸದಸ್ಯರುಗಳಾಗಿರುತ್ತಾರೆ. ಜೊತೆಗೆ ಒಂದು ವರ್ಷದ ಅವಧಿಗೆ ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ತಾಲ್ಲೂಕು ಪಂಚಾಯಿತಿಗೆ ಸಹ-ಸದಸ್ಯರುಗಳಾಗಿರುತ್ತಾರೆ. ತಿಪಟೂರು ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರಿದ್ದು, ಅದರಲ್ಲಿ 10 ಜನ ಮಹಿಳೆಯರು ಮತ್ತು 7 ಜನ ಪುರುಷರು ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.ಸಿ) ಜಿಲ್ಲಾ ಪಂಚಾಯಿತಿ:
ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ, ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೆ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ ಸದಸದ್ಯರು, ವಿಧಾನಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರುಗಳು ಸದಸ್ಯರುಗಳಾಗಿರುತ್ತಾರೆ.
ಎ) ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ.
ಬಿ) ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ.
ಸಿ) ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ನೈರ್ಮಲ್ಯ ಕಾರ್ಯಕ್ರಮ.
ಡಿ) ಗ್ರಾಮೀಣ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ.
ಇ) ಗ್ರಾಮೀಣ ಪ್ರದೇಶದಲ್ಲಿ ನಿರ್ಮಲ ಕರ್ನಾಟಕ ಯೋಜನೆಯಡಿ ಶೌಚಾಲಯಗಳ ನಿರ್ಮಾಣ.
ಎಫ್) ಕೂಲಿ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಅವಕಾಶ ಕಲ್ಪಿಸುವುದು.
ಜಿ) ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡತನ ರೇಖೆಗಿಂತ ಕಡಿಮೆ ಇರುವ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸುವುದು.
ಹೆಚ್) ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದು.
ಐ) ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯಡಿ ವೈಯಕ್ತಿಕ ಮತ್ತು ಗುಂಪುಗಳಿಗೆ ಸಹಾಯಧನ.
ಜೆ) ಕುಗ್ರಾಮಗಳನ್ನು ಸುವರ್ಣ ಗ್ರಾಮೋದಯ ಯೋಜನೆಯಡಿ ಸುವರ್ಣ ಗ್ರಾಮಗಳನ್ನಾಗಿಸುವ ಯೋಜನೆ.
ಕೆ) ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ/ಪಂಗಡದ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು.
ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು:
1. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ:
ಅ) ಯೋಜನೆ ಅನುಷ್ಟಾನಗೊಳಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು ಅಕುಶಲ ದೈಹಿಕ ಕೆಲಸ ಮಾಡಲು ಇಚ್ಚಿಸುವ ಗ್ರಾಮೀಣ ಪ್ರದೇಶದಲ್ಲಿ ವಯಸ್ಕರಿಗೆ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಟ 100 ದಿನಗಳ ಉದ್ಯೋಗ ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಧಿನಿಯಮ-2005ನ್ನು ಜಾರಿಗೆ ತಂದಿರುತ್ತದೆ.
ಎ) ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಟ 100 ದಿನಗಳ ಖಾತ್ರಿ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು.
ಬಿ) ವಲಸೆ ಹೋಗುವುದನ್ನು ತಪ್ಪಿಸುವದು.
ಸಿ) ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು.
ಡಿ) ಗ್ರಾಮೀಣ ಬಡವರ ಜೀವನೋಪಾಯದ ಸಂಪನ್ಮೂಲಗಳಾಧಾರವನ್ನು ಬಲಪಡಿಸುವುದು.
ಇ) ಸಮಾನ ಕೂಲಿ
ಎಫ್) ಗುತ್ತಿಗೆದಾರರ ಮತ್ತು ಯಂತ್ರಗಳ ನಿಷೇಧ.ಈ ಯೋಜನೆಯಲ್ಲಿ ದಿನ ಒಂದಕ್ಕೆ ರೂ.125.00 ಕೂಲಿಯನ್ನು ಮತ್ತು ರೂ.3.00ಗಳ ಸಲಕರಣೆ ಬಾಬ್ತನ್ನು ಕೊಡಲಾಗುತ್ತದೆ.
ಆ) ಕಾಮಗಾರಿ ವಿಧಗಳು:
ಎ) ಜಲರಕ್ಷಣೆ ಮತ್ತು ನೀರಿನ ಕೊಯ್ಲು, ಕೆರೆ, ತಡೆ ಅಣೆ, ಬಟ್ಟಿಂಗ್ ತೋಡುಬಾವಿ ಮತ್ತು ಕೃಷಿಹೊಂಡ
ಬಿ) ಬರಗಾಲ ತಡೆಗಟ್ಟುವದು
ಸಿ) ಕಿರು ಮತ್ತು ಸಣ್ಣ ನೀರಾವರಿ ಕಾಲುವೆಗಳು ಸೇರಿದಂತೆ ನೀರಾವರಿ ಕಾಲುವೆಗಳ ಅಭಿವೃದ್ಧಿ
ಡಿ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಒಡೆತನದ ಭೂ ಅಭಿವೃದ್ಧಿ (ತೋಟಗಾರಿಕೆ ಮತ್ತು ಭೂ ಅಭಿವೃದ್ಧಿ)
ಇ) ಕೆರೆಗಳ ಹೂಳು ತೆಗೆಯುವದು
ಎಫ್) ಜಮೀನು ಅಭಿವೃದ್ಧಿ
ಜಿ) ಪ್ರವಾಹ ನಿಯಂತ್ರಣ ಹಾಗೂ ಸಂರಕ್ಷಣಾ ಕಾಮಗಾರಿಗಳು
ಹೆಚ್) ಗ್ರಾಮೀಣ ಪ್ರದೇಶಗಳ ಸಂಪರ್ಕ
ಐ) ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಕೇಂದ್ರ ಸರ್ಕಾರ ಸೂಚಿಸಲಾದ ಇತರೆ ಕಾಮಗಾರಿಗಳುಅರಣ್ಯ ಕಾಮಗಾರಿಗಳು - ಶೇ.20
ಜಲಾನಯನ ಕಾಮಗಾರಿಗಳು - ಶೇ.70
ರಸ್ತೆ ಕಾಮಗಾರಿಗಳು - ಶೇ.10ಈ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಕುಟುಂಬದವರು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಲ್ಲಿ ನೋಂದಣಿ ಮಾಡಿಸಿ ಜಾಬ್ ಕಾರ್ಡ್ ಪಡೆದಿರಬೇಕು. ಕೂಲಿ ಮೊತ್ತವನ್ನು ಅವರ ವೈಯಕ್ತಿಕ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಛೇರಿಯಲ್ಲಿ ಜಮಾ ಮಾಡಲಾಗುವುದು. ಎಲ್ಲಾ ಕೆಲಸಗಳನ್ನು ಎಂ.ಜಿ.ಎನ್.ಆರ್.ಇ.ಜಿ.ಎ. ನಿಯಮಗಳಿಗೆ ಒಳಪಟ್ಟು ಹಾಗೂ ಆದೇಶದಂತೆ ನಿರ್ವಹಿಸಬೇಕಾಗುತ್ತದೆ. ನಿಗಧಿತ ಅವಧಿಯೊಳಗೆ ಕೂಲಿ ಪಾವತಿಸದಿದ್ದಲ್ಲಿ ಪರ್ಯಾಯಕ್ಕೆ ಅರ್ಹತೆ ಇರುತ್ತದೆ. ನಿರುದ್ಯೋಗ ಭತ್ಯೆ ಯೋಜನೆಯಲ್ಲಿ ಕೆಲಸ ನಿರ್ವಹಿಸುವಾಗ ಅಪಘಾತ ಸಂಭವಿಸಿದ್ದಲ್ಲಿ ಪರಿಹಾರಕ್ಕೆ ಅವಕಾಶವಿರುತ್ತದೆ. ಈ ಯೋಜನೆಯು ಒಂದು ಯೋಜನೆಯಾಗಿರದೆ ಇದು ಒಂದು ಆಕ್ಟ್ ಆಗಿರುತ್ತದೆ.
2. 12ನೇ ಮತ್ತು 13ನೇ ಹಣಕಾಸು ಯೋಜನೆ:
ಈ ಎರಡೂ ಯೋಜನೆಗಳು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಪ್ರತಿ ವರ್ಷ ಯೋಜನೆಯಡಿ ತಾಲ್ಲೂಕು ಪಂಚಾಯಿತಿಗೆ ಅನುದಾನ ಬಿಡುಗಡೆಯಾಗಿರುತ್ತದೆ. ಬಿಡುಗಡೆಯಾದ ಅನುದಾನಕ್ಕೆ ಯೋಜನೆ ಅನ್ವಯ ಈ ಕೆಳಕಂಡ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತದೆ.
ಅ) ಗ್ರಾಮೀಣ ಮಾರುಕಟ್ಟೆ ಮೂಲಭೂತ ಸೌಕರ್ಯವನ್ನು ಸೃಜಿಸುವುದು ಮತ್ತು ಅಭಿವೃದ್ಧಿಪಡಿಸುವದು
ಆ) ಕೃಷಿ ಮಾರುಕಟ್ಟೆ ಪ್ರಾಂಗಣಗಳ ಅಭಿವೃದ್ಧಿ ಮತ್ತು ನಿರ್ವಹಣೆ
ಇ) ವಾರದ ಮಾರುಕಟ್ಟೆ, ಸಂತೆ ಮೈದಾನದ ಅಭಿವೃದ್ಧಿ ಮತ್ತು ನಿರ್ವಹಣೆ
ಈ) ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್, ಡೆಸ್ಕ್, ಕ್ರೀಡಾ ಸಾಮಗ್ರಿಗಳನ್ನು ಒಳಗೊಂಡಂತೆ ಸಲಕರಣೆ ಮತ್ತು ಸಾಮಗ್ರಿಗಳ ಸರಬರಾಜು, ಪ್ರಯೋಗ ಶಾಲೆ ಸಾಮಗ್ರಿಗಳ ವಿತರಣೆ
ಉ) ಅಂಗನವಾಡಿ ಕಟ್ಟಡಗಳು
ಎ) ತಾಲ್ಲೂಕು ಪಂಚಾಯಿತಿಗಳ ಗಣಕೀಕರಣ, ಡಾಟಾ ಬೇಸ್ ಹಾಗೂ ಲೆಕ್ಕಪತ್ರಗಳ ನಿರ್ವಹಣೆ, ಯೋಜನೆಗಳ ಮಾರ್ಗಸೂಚಿಗಳನ್ವಯ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಕರಡು ಯೋಜನೆಯನ್ನು ತಯಾರಿಸಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಟ್ಟು ಮಂಡಿಸಿ ಸಭೆಯ ಅನುಮೋದನೆ ಪಡೆದು, ನಂತರ ಜಿಲ್ಲಾ ಪಂಚಾಯಿತಿಯ ಅನುಮೋದನೆಗೆ ಕಳುಹಿಸಿ, ಜಿಲ್ಲಾ ಪಂಚಾಯಿತಿಯ ಅನುಮೋದನೆ ಪಡೆದು ಪಿ.ಆರ್.ಇ.ಡಿ. ಉಪ-ವಿಭಾಗದಿಂದ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಬಿಲ್ ಪಾವತಿಸಲಾಗುವುದು.3. ಅಧಿಭಾರಶುಲ್ಕ ಯೋಜನೆ:
ಯೋಜನೆಯಡಿ ಪ್ರತಿ ವರ್ಷ ತಾಲ್ಲೂಕು ಪಂಚಾಯಿತಿಗೆ ಅನುದಾನ ಬಿಡುಗಡೆಯಾಗುತ್ತದೆ. ಯೋಜನೆಯ ಮಾರ್ಗಸೂಚಿಗಳನ್ವಯ ಕುಡಿಯುವ ನೀರು ನಿರ್ವಹಣೆ, ರಸ್ತೆ ಅಭಿವೃದ್ಧಿ, ಗ್ರಾಮ ನೈರ್ಮಲ್ಯ, ಕಟ್ಟೆ ಅಭಿವೃದ್ಧಿ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವುದು. ಯೋಜನೆಯ ಮಾರ್ಗಸೂಚಿಯನ್ವಯ ಕ್ರಿಯಾ ಯೋಜನೆಯನ್ನು ತಯಾರಿಸಿ, ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಸಭೆಯ ಅನುಮೋದನೆ ಪಡೆದು, ನಂತರ ಜಿಲ್ಲಾ ಪಂಚಾಯಿತಿಯ ಅನುಮೋದನೆಗೆ ಸಲ್ಲಿಸಿ, ಜಿಲ್ಲಾ ಪಂಚಾಯಿತಿಯ ಅನುಮೋದನೆ ಪಡೆದು ಪಿ.ಆರ್.ಇ.ಡಿ. ಉಪ-ವಿಭಾಗದಿಂದ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಬಿಲ್ ಪಾವತಿಸಲಾಗುವುದು.4. ವಸತಿ ಯೋಜನೆಗಳು:
ವಸತಿ ಯೋಜನೆಗಳಾದ ಆಶ್ರಯ, ಅಂಬೇಡ್ಕರ್, ವಿಶೇಷ ಆಶ್ರಯ, ಇಂದಿರಾ ಆವಾಸ್, ಬಸವ ಇಂದಿರಾ ಆವಾಸ್ ಈ ಯೋಜನೆಗಳು ಅಸ್ತಿತ್ವದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಮಟ್ಟದ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಗುರ್ತಿಸಿ, ಅಂತಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.ಆಶ್ರಯ:
ಸದರಿ ಯೋಜನೆಯ ರಾಜ್ಯ ಸರ್ಕಾರದ ಯೋಜನೆಯಾಗಿರುತ್ತದೆ. ಪ್ರತಿ ವರ್ಷ ಯೋಜನೆಯಡಿ ಮನೆಗಳ ಗುರಿ ನಿಗದಿಪಡಿಸುತ್ತಾರೆ. ನಿಗದಿಪಡಿಸಿದ ಗುರಿಯಂತೆ ಗ್ರಾಮ ಪಂಚಾಯಿತಿಗಳು ಫಲಾನುಘವಿಗಳನ್ನು ಆಯ್ಕೆ ಮಾಡಿ ತಾಲ್ಲೂಕು ಪಂಚಾಯಿತಿಗೆ ಪಟ್ಟಿಯನ್ನು ಸಲ್ಲಿಸುತ್ತಾರೆ. ಪಟ್ಟಿಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರಿಂದ ಅನುಮೋದನೆ ಪಡೆದು ನಂತರ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು. ಪ್ರಸ್ತುತ ಯೋಜನೆಯ ಫಟಕ ವೆಚ್ಚ ರೂ.40,000-00ಗಳಾಗಿರುತ್ತವೆ.ಅಂಬೇಡ್ಕರ್:
ಸದರಿ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀಸಲಾಗಿರುತ್ತದೆ. ಗ್ರಾಮ ಪಂಚಾಯಿತಿಗೆ ನಿಗಧಿಪಡಿಸಿದ ಗುರಿಯಂತೆ ಗ್ರಾಮ ಪಂಚಾಯಿತಿಗಳು ಫಲಾನುಘವಿಗಳನ್ನು ಗ್ರಾಮಸಭೆಯಲ್ಲಿ ಆಯ್ಕೆ ಮಾಡಿ, ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರಿಂದ ಅನುಮೋದನೆ ಪಡೆದು ನಂತರ ಗ್ರಾಮ ಪಂಚಾಯಿತಿಗಳಿಂದ ಅನುಷ್ಟಾನಗೊಳಿಸಲಾಗುವುದು. ಪ್ರಸ್ತುತ ಯೋಜನೆಯ ಫಟಕ ವೆಚ್ಚ ರೂ.40,000-00ಗಳಾಗಿರುತ್ತವೆ.ವಿಶೇಷ ಗ್ರಾಮೀಣ ಆಶ್ರಯ:
ಈ ಯೋಜನೆಯು ಅಂಗವಿಕಲ ಫಲಾನುಭವಿಗಳಿಗೆ ಮೀಸಲಿರುತ್ತದೆ. ಶೇ.60ಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿರುವ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಗುರ್ತಿಸಿ, ನಂತರ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು, ಅಂತಹ ಫಲಾನುಭವಿಗಳಿಗೆ ಯೋಜನೆಯಡಿಯಲ್ಲಿ ಮನೆ ಮಂಜೂರಾತಿ ನೀಡಲಾಗುತ್ತಿದೆ. ಪ್ರತಿ ಫಟಕ ವೆಚ್ಚ ರೂ.30,000-00 ಗಳಾಗಿರುತ್ತವೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮಂಜೂರಾದ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿ ಹಂತ ಹಂತವಾಗಿ ಕಾಮಗಾರಿಗಳನ್ನು ನಿರ್ವಹಿಸಿ ಪೋಟೋ ಪಡೆದು ಬಿಲ್ ಪಾವತಿ ಮಾಡುತ್ತಾರೆ.ಇಂದಿರಾ ಆವಾಸ್ ಯೋಜನೆ:
ಈ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಯೋಜನೆಯಡಿ ಪ್ರತಿ ವರ್ಷ ಮನೆಗಳ ಬಿಲ್ ನ್ನು ನಿಗದಿಪಡಿಸುತ್ತಾರೆ. ನಿಗದಿಪಡಿಸಿದ ಗುರಿಯಂತೆ ಗ್ರಾಮ ಪಂಚಾಯಿತಿಗಳು ಗ್ರಾಮಸಭೆ ನಡೆಸಿ, ಶೇ.30ಕ್ಕಿಂತ ಕಡಿಮೆ ಅಂಕಗಳನ್ನು ಹೊಂದಿರುವ ಬಡತನ ರೇಖೆಗಿಂತ ಕೆಳಮಟ್ಟದವರನ್ನು ಗ್ರಾಮಸಭೆಯಲ್ಲಿ ಗುರ್ತಿಸಿ ಪಟ್ಟಿಯನ್ನು ತಯಾರಿಸಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರಿಂದ ಅನುಮೋದನೆ ಪಡೆದು ನಂತರ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು. ಪ್ರಸ್ತುತ ಯೋಜನೆಯ ಫಟಕ ವೆಚ್ಚ ರೂ.40,000-00ಗಳಾಗಿರುತ್ತವೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮಂಜೂರಾದ ಪಟ್ಟಿಯನ್ನು ಆಧರಿಸಿ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿ ಹಂತ ಹಂತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮನೆಗಳ ಬಿಲ್ ಪಾವತಿಸುತ್ತಾರೆ.ಬಸವ ಇಂದಿರಾ ಯೋಜನೆ:
ಈ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. 2010-11ನೇ ಸಾಲಿನಿಂದ ಜಾರಿಗೆ ಬಂದಿದೆ. ಯೋಜನೆಯ ಮುಖ್ಯ ಉದ್ದೇಶ ಗುಡಿಸಲು ರಹಿತ ಗ್ರಾಮಗಳನ್ನಾಗಿ ಮಾಡುವುದು. ಗ್ರಾಮಾಂತರ ಪ್ರದೇಶದಲ್ಲಿ ಸ್ವಂತ ನಿವೇಶನವನ್ನು ಹೊಂದಿದ್ದು, ಗುಡಿಸಲುವಾಸಿ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಗುರ್ತಿಸಿ ಪಟ್ಟಿಯನ್ನು ತಯಾರಿಸಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರಿಂದ ಅನುಮೋದನೆ ಪಡೆದು ನಂತರ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು. ಪ್ರಸ್ತುತ ಯೋಜನೆಯ ಫಟಕ ವೆಚ್ಚ ರೂ.63,500-00ಗಳಾಗಿರುತ್ತವೆ. ಇದರಲ್ಲಿ ರೂ.50,000-00ಗಳ ಅನುದಾನ, ರೂ.10,000-00ಗಳ ಸಾಲ ಮತ್ತು ರೂ.3,500-00 ಫಲಾನುಬವಿಗಳ ವಂತಿಕೆಯಾಗಿರುತ್ತದೆ.ಸುವರ್ಣ ಗ್ರಾಮೋದಯ ಯೋಜನೆ:
ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ನಿಗಧಿತ ಅನುದಾನದಲ್ಲಿ ರಸ್ತೆ ಮತ್ತು ಚರಂಡಿಗೆ ಶೇ.60, ಸಮುದಾಯ ಭವನಕ್ಕೆ ಶೇ.15, ಅಂಗನವಾಡಿ ಕಟ್ಟಡಕ್ಕೆ ಶೇ.10, ತ್ಯಾಜ್ಯ ವಸ್ತು ವಿಲೇವಾರಿಗೆ ಶೇ.7, ತರಬೇತಿಗೆ ಶೇ.6, ವಿದ್ಯುಚ್ಚಕ್ತಿಗೆ ಶೇ.1 ಮತ್ತು ಐ.ಇ.ಸಿ. ಚಟುವಟಿಕೆಗೆ ಶೇ.1ರಷ್ಟು ನಿಗಧಿಪಡಿಸಿ ವೆಚ್ಚ ಮಾಡಬಹುದಾಗಿರುತ್ತದೆ. ಕಾಮಗಾರಿಗಳನ್ನು ಕೈಗೆತ್ತೆಕೊಳ್ಳುವ ಮುನ್ನ ಆಯ್ಕೆಯಾದ ಗ್ರಾಮಗಳ ಪೂರ್ವಬಾವಿ ಸಮೀಕ್ಷೆಯೊಂದಿಗೆ ಗ್ರಾಮಗಳಿಗೆ ಅವಶ್ಯಕತೆಯಿರುವ ಸೌಲಭ್ಯಗಳನ್ನು ಜನತೆಯ ಆಶೋತ್ತರದಂತೆ ಮತ್ತು ಗ್ರಾಮ ಪಂಚಾಯಿತಿಯ ಅನುಮೋದನೆ ಪಡೆದು ಪಾರದರ್ಶಕತೆ ಅಧಿನಿಯಮದ ಪ್ರಕಾರ ಅನುಷ್ಟಾನಗೊಳಿಸಲಾಗುತ್ತದೆ.6. ಸ್ವರ್ಣಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ:
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯ ಗುಂಪುಗಳಲ್ಲಿ ಗುರ್ತಿಸಲಾದವರಿಗೆ ತಂತ್ರಜ್ಞಾನ ಉನ್ನತೀಕರಣಗೊಳಿಸಲು ಅನುವು ಮಾಡಿಕೊಳ್ಳಲಾಗುವುದು. ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳು ಮತ್ತು ಸ್ಥಳೀಯ ಕೌಶಲ್ಯತೆಯನ್ನು ಆಧರಿಸಿ ಸ್ಥಳೀಯ ಹಾಗೂ ಮಾರುಕಟ್ಟೆಗಳಿಗೆ ಅವಶ್ಯಕವಾದ ಸಿದ್ದವಸ್ತುಗಳನ್ನು ತಯಾರಿಸಲು ಸಹಾಯ ನೀಡಲಾಗುವುದು. ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರಿಗಳು ಉತ್ಪಾದಿಸುವ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯ ವ್ವವಸ್ಥೆ ಒದಗಿಸಲು ಅವಕಾಶವಿರುತ್ತದೆ. ರೂ.7,500-00ಗಳಿಗೆ ಗರಿಷ್ಟ ಮಿತಿಯನ್ನು ಒಳಗೊಂಡಂತೆ ಶೇ.30ರಷ್ಟು ಯೋಜನಾ ವೆಚ್ಚವಾಗಿ ಸಹಾಯ ಧನವನ್ನು ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ ನೀಡುತ್ತದೆ.ಅದೇ ರೀತಿಯಲ್ಲಿ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗದವರಿಗೆ ಮತ್ತು ಅಂಗವಿಕಲ ಸ್ವರೋಜ್ ಗಾರಿಗಳಿಗೆ ರೂ.10,000-00 ಗಳ ಗರಿಷ್ಟ ಶೇ.50ರಷ್ಟು ಸಹಾಯಧನ ನೀಡುತ್ತದೆ.ಸ್ವರೋಜ್ಗಾರಿಗಳಿಗೆ ಸಹಾಯಧನವನ್ನು ಶೇ.50ರಷ್ಟು ಅಥವಾ ತಲಾದಾಯದ ರೂ.10,000-00 ಅಥವಾ 1.25 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಎಸ್.ಜಿ. ಎಸ್.ವೈ.ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿಗೆ ಶೇ.42,ಪರಿಶಿಷ್ಟ ಪಂಗಡಕ್ಕೆ ಶೇ.8,ಮಹಿಳೆಯರಿಗೆ ಶೇ.40,ಅಲ್ಪಸಂಖ್ಯಾತರಿಗೆ ಶೇ.15 ಹಾಗೂ ಅಂಗವಿಕಲರಿಗೆ ಶೇ.3ರಷ್ಟು ಸೌಲಭ್ಯವನ್ನು ನೀಡಲಾಗುತ್ತದೆ.7) ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಕ್ಷೇಮಾಭಿವೃದ್ಧಿಯೇ ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಪ್ರತಿವರ್ಷ ತಾಲ್ಲೂಕು ಪಂಚಾಯಿತಿಯ ಯೋಜನಾ ಕಾರ್ಯಕ್ರಮದಲ್ಲಿ ಅನುದಾನವನ್ನು ನಿಗಧಿಪಡಿಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಹೆಚ್ಚಿಗೆ ಇರುವ ಗ್ರಾಮವನ್ನು ಗುರುತಿಸಿ, ಅಂತಹ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳು ಅಂದರೆ ರಸ್ತೆ ಅಭಿವೃದ್ಧಿ, ಗ್ರಾಮ ನೈರ್ಮಲ್ಯ, ಸೇತುವೆ ನಿರ್ಮಾಣ ಮತ್ತು ಡಾಂಬರೀಕರಣ ಕಾಮಗಾರಿಗಳನ್ನು ಕೈಗಿತ್ತಿಕೊಳ್ಳಲಾಗುತ್ತದೆ ಹಾಗೂ ವೈಯಕ್ತಿಕ ಫಲಾನುಭವಿಗಳಿಗೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇತರೆ ಅಭಿವೃದ್ಧಿ ಯೋಜನೆಗಳಾದ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಪಶುಪಾಲನೆ ಮತ್ತು ರೇಷ್ಮೆ ಈ ಇಲಾಖೆಗಳು ಸಹ ತಮ್ಮ ಇಲಾಖೆಗಳ ಯೋಜನೆಯಡಿಯಲ್ಲಿ ಮೀಸಲಿಟ್ಟ ಹಣವನ್ನು ವೈಯಕ್ತಿಕ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಗುತ್ತದೆ.8) ಸ್ವಚ್ಚಗ್ರಾಮ ಯೋಜನೆ:
ಎಲ್ಲಾ ಪಂಚಸೂತ್ರಗಳನ್ನು ಆಧರಿಸಿ ಕಾಮಗಾರಿಗಳನ್ನು ಕಡ್ಡಾಯವಾಗಿ ಅಳವಡಿಸಲು ಆಯ್ಕೆಯಾದ ಗ್ರಾಮದ ವಾಸ್ತವಿಕ ಅಗತ್ಯತೆಗನುಗುಣವಾಗಿ ಪ್ರತಿ ಗ್ರಾಮಕ್ಕೆ ರೂ.2.00 ಲಕ್ಷದವರೆಗೆ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾ ಪಂಚಾಯಿತಿಗೆ ಅನುಮೋದನೆಗೆ ಕಳುಹಿಸಲಾಗುವುದು. ಆಯ್ಕೆಯಾದ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಂಪೂರ್ಣ ನೈರ್ಮಲೀಕರಣ ವ್ಯವಸ್ಥೆಗೊಳಿಸಲು ಆದ್ಯತೆ ನೀಡಲಾಗುವುದು. ಆಯ್ಕೆಯಾದ ಗ್ರಾಮದಲ್ಲಿ ತಿಪ್ಪೆಗುಂಡಿಗಳನ್ನು ಗ್ರಾಮದ ಹೊರಕ್ಕೆ ಸ್ಥಳಾಂತರಿಸಲು ಜಮೀನಿ ಖರೀದಿಸಲು ಅವಕಾಶವಿರುತ್ತದೆ. ಕೌಟುಂಬಿಕ/ಸಾಮೂಹಿಕ ಶೌಚಾಲಯಗಳ ನಿರ್ಮಾಣ ಮತ್ತು ಹೊಗೆರಹಿತ ಒಲೆಗಳ ಸ್ಥಾಪನೆಯನ್ನು ಸಂಪೂರ್ಣವಾಗಿ ಯೋಜನೆಯಡಿ ಅನುಷ್ಟಾನಗೊಳಿಸಲಾಗುತ್ತದೆ. ಸ್ವಚ್ಚಗ್ರಾಮ ಯೋಜನೆಯ ನಿಧಿ ನಿರ್ವಹಣೆಯನ್ನು ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ಭೂಸೇನಾ ನಿಗಮವು ನಿರ್ವಹಿಸುತ್ತದೆ.
ಈ ಯೋಜನೆಯು ಈ ಕೆಳಕಂಡ 5 ಅಂಶಗಳನ್ನು ಒಳಗೊಂಡಿರುತ್ತದೆ.
ಎ) ಗ್ರಾಮದ ಒಳರಸ್ತೆ ಮತ್ತು ಬೀದಿಗಳ ಮೇಲ್ಮೈ ಉತ್ತಮಗೊಳಿಸುವುದು.
ಬಿ) ಕೊಳೆ ಮತ್ತು ಮಳೆ ನೀರಿನ ವಿಲೇವಾರಿಗಾಗಿ ಪ್ರತಿ ಬೀದಿಯಲ್ಲಿಯೂ ಚರಂಡಿಗಳ ನಿರ್ಮಾಣ.
ಸಿ) ಸಾಮೂಹಿಕ ಮಿಶ್ರ ಗೊಬ್ಬರದ ಅಂಗಳವನ್ನು (ಕಮ್ಯುನಿಟಿ ಕಾಂಪೋಸ್ಟ್) ಒದಗಿಸಿ ಗ್ರಾಮದ ವಾಸಸ್ಥಳಗಳಿಂದ ತಿಪ್ಪೆಗುಂಡಿಗಳನ್ನು ಸ್ಥಳಾಂತರಿಸುವುದು.
ಡಿ) ಗ್ರಾಮದ ಎಲ್ಲಾ ಮನೆಗಳಿಗೂ ಹೊಗೆರಹಿತ ಒಲೆಗಳನ್ನು ಒದಗಿಸುವುದು.
ಇ) ಗ್ರಾಮದ ಎಲ್ಲಾ ಜನತೆಗಾಗಿ ಕೌಟುಂಬಿಕ ಶೌಚಾಲಯಗಳು, ಸಾಮೂಹಿಕ ಶೌಚಾಲಯ ಸಂಕೀರ್ಣಗಳ ವಿವರಗಳು ಮತ್ತು ಶಾಲಾ ಶೌಚಾಲಯಗಳ ನಿರ್ಮಾಣ.9) ಜೈವಾನಿಲ ಯೋಜನೆ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯಾಗಿರುತ್ತದೆ. ಪರಿಶಿಷ್ಟ ಜಾತಿ/ಪಂಗಡ, ಸಣ್ಣ ರೈತರು ಮತ್ತು ಅತಿ ಸಣ್ಣ ರೈತರಿಗೆ ಯೋಜನೆಯಡಿ ಜೈವಾನಿಲ ಘಟಕ ಸ್ಥಾಪನೆಗೆ ಅವಕಾಶವಿರುತ್ತದೆ. ಫಲಾನುಭವಿಗಳಿಗೆ ನೀಡುವ ಅನುದಾನ ಸಂಪೂರ್ಣ ಉಚಿತ ಸಹಾಯಧನವಾಗಿರುತ್ತದೆ. ಘಟಕ ಸ್ಥಾಪನೆಯ ಕಾಮಗಾರಿಯನ್ನು ಒಂದು ಏಜೆನ್ಸಿಗೆ ವಹಿಸಲಾಗುತ್ತದೆ. ಸದರಿ ಏಜೆನ್ಸಿಯವರು ಆಯ್ಕೆಯಾದ ಫಲಾನುಭವಿಯ ಮನೆಯ ಹತ್ತಿರ ಹೋಗಿ ಜೈವಾನಿಲ ಘಟಕ ಕಾಮಗಾರಿಯನ್ನು ಅನುಷ್ಟಾನಗೊಳಿಸಿ ಆ ರೈತರಿಂದ ಕಾಮಗಾರಿ ಪೂರ್ಣವಾದ ಬಗ್ಗೆ ದೃಡೀಕರಣ ಪತ್ರವನ್ನು ಪಡೆದು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಿ ತಾಲ್ಲೂಕು ಪಂಚಾಯಿತಿಯಿಂದ ಅನುದಾನವನ್ನು ಸಂಬಂಧಪಟ್ಟ ಏಜೆನ್ಸಿಯವರು ಪಡೆಯುತ್ತಾರೆ.10) ನಿರ್ಮಲ ಪುರಸ್ಕಾರ ಯೋಜನೆ:
ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಮಟ್ಟದ ಫಲಾನುಭವಿಗೆ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕಾಮಗಾರಿಯನ್ನು ಅನುಷ್ಟಾನಗೊಳಿಸಲಾವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ರೂ.3,000-00 ಗಳ ಅನುದಾನವನ್ನು ನೀಡಲಾಗುವುದು. ಯೋಜನೆಯು ಅನುಷ್ಟಾನದ ಜವಾಬ್ದಾರಿ ಗ್ರಾಮ ಪಂಚಾಯಿತಿಗಳದ್ದಾಗಿರುತ್ತದೆ.
ಕ್ರ. ಸಂ.
ಹುದ್ದೆಯ ಹೆಸರು
ಮಂಜೂರಾದ ಹುದ್ದೆಗಳ ಸಂಖ್ಯೆ
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ
1
ಕಾರ್ಯನಿರ್ವಾಹಕ ಅಧಿಕಾರಿ
1
1
0
2
ಸಹಾಯಕ ಲೆಕ್ಕ ಅಧಿಕಾರಿ
1
1
0
3
ವ್ಯವಸ್ಥಾಪಕರು
1
1
0
4
ಕಿರಿಯ ಇಂಜಿನಿಯರ್
3
3
0
5
ಪ್ರಥಮ ದರ್ಜೆ ಸಹಾಯಕರು
3
2
1
6
ಪ್ರಥಮ ದರ್ಜೆ ಲೆಕ್ಕ ಸಹಾಯಕರು
2
1
1
7
ದ್ವಿತೀಯ ದರ್ಜೆ ಸಹಾಯಕರು
3
3
0
8
ಬೆರಳಚ್ಚುಗಾರರು
2
1
1
9
ವಾಹನಚಾಲಕರು
2
2
0
10
ಡಿ-ದರ್ಜೆ ನೌಕರರು
4
3
1
11
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
26
16
10
12
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
8
8
0
13
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
18
17
1
ಬಿ.ಸಿ.ಎಂ. ಇಲಾಖೆ:
14
ವಿಸ್ತರಣಾಧಿಕಾರಿ
1
1
0
15
ನಿಲಯಪಾಲಕರು
2
2
0
16
ಮೇಲ್ವಿಚಾರಕರು
5
5
0
17
ಶಿಕ್ಷಕರು
2
2
0
18
ಅಡುಗೆಯವರು
15
15
0
19
ಅಡುಗೆ-ಸಹಾಯಕರು
8
8
0
20
ಕಾವಲುಗಾರರು
1
1
0
ಅಕ್ಷರ ದಾಸೋಹ:
21
ಸಹಾಯಕ ನಿರ್ದೇಶಕರು
1
1
0
22
ಪ್ರಥಮ ದರ್ಜೆ ಸಹಾಯಕರು
1
1
0
ಒಟ್ಟು
95
15
0
ತಾಲ್ಲೂಕು ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರ ವಿವರಗಳು:
ಎ) ಅಧ್ಯಕ್ಷರು 1
ಬಿ) ಉಪಾಧ್ಯಕ್ಷರು 1
ಸಿ) ಸದಸ್ಯರು 15ಕಡತಗಳ ವಿಲೇವಾರಿ (ದಿ:1-4-2010 ರಿಂದ 31-03-2011ರ ವರೆಗೆ):
ಒಟ್ಟು ಸ್ವೀಕೃತ 1283
ಒಟ್ಟು ವಿಲೇ ಆಗಿರುವುದು 690
ಕ್ರ. ಸಂ.
ಹೆಸರು
ಪದನಾಮ
ಇಲಾಖೆ ಹೆಸರು
1
2
3
4
1
ರೇವಣ್ಣ ಆರ್.
ಕಾರ್ಯನಿರ್ವಾಹಕ ಅಧಿಕಾರಿ
ರಾಜ್ಯ ಲೆಕ್ಕಪತ್ರ ಇಲಾಖೆ
2
ಶಿವನಂಜಯ್ಯ ಕೆ.
ಸಹಾಯಕ ಲೆಕ್ಕ ಅಧಿಕಾರಿ
ಖಜಾನೆ ಇಲಾಖೆ
3
ಸಣ್ಣಮುದ್ದೇಗೌಡ ಕೆ.ಸಿ.
ವ್ಯವಸ್ಥಾಪಕರು
ಸಹಕಾರ ಇಲಾಖೆ
4
ರಾಮಣ್ಣ ಕೆ.ಜಿ.
ಕಿರಿಯ ಇಂಜಿನಿಯರ್
ಲೋಕೋಪಯೋಗಿ ಇಲಾಖೆ
5
ರಾಜಣ್ಣ ಎಂ.ಎನ್.
ಕಿರಿಯ ಇಂಜಿನಿಯರ್
ಲೋಕೋಪಯೋಗಿ ಇಲಾಖೆ
6
ರಾಮಕೃಷ್ಣನಾಯಕ್ ಎಸ್.
ಕಿರಿಯ ಇಂಜಿನಿಯರ್
ಲೋಕೋಪಯೋಗಿ ಇಲಾಖೆ
7
ಬನವಯ್ಯ ಕೆ.ಎಸ್.
ಪ್ರಥಮ ದರ್ಜೆ ಸಹಾಯಕರು
ಲೋಕೋಪಯೋಗಿ ಇಲಾಖೆ
8
ಶೇಖರಪ್ಪ
ಪ್ರಥಮ ದರ್ಜೆ ಸಹಾಯಕರು
ಲೋಕೋಪಯೋಗಿ ಇಲಾಖೆ
9
ಭೈರಯ್ಯ
ಪ್ರಥಮ ದರ್ಜೆ ಲೆಕ್ಕ ಸಹಾಯಕರು
ಖಜಾನೆ ಇಲಾಖೆ
10
ಸುಮಿತ್ರ ಟಿ.ವಿ.
ದ್ವಿತೀಯ ದರ್ಜೆ ಸಹಾಯಕರು
ಆರ್.ಡಿ.ಪಿ.ಆರ್.
11
ಭಾಗ್ಯಜ್ಯೋತಿ ಟಿ.ಎಸ್.
ದ್ವಿತೀಯ ದರ್ಜೆ ಸಹಾಯಕರು
ಆರ್.ಡಿ.ಪಿ.ಆರ್.
12
ಮಂಜುನಾಥ್ ಹೆಚ್.ಎಂ.
ದ್ವಿತೀಯ ದರ್ಜೆ ಸಹಾಯಕರು
ಲೋಕೋಪಯೋಗಿ ಇಲಾಖೆ
13
ಗೀತಾಬಾಯಿ ಜಿ.
ಬೆರಳಚ್ಚುಗಾರರು
ಸಮಾಜ ಕಲ್ಯಾಣ ಇಲಾಖೆ
14
ತಮ್ಮಣ್ಣಗೌಡ
ವಾಹನಚಾಲಕರು
ಆರ್.ಡಿ.ಪಿ.ಆರ್.
15
ಶಿವಪ್ಪ ಜಿ.
ವಾಹನಚಾಲಕರು
ಆರ್.ಡಿ.ಪಿ.ಆರ್.
16
ಗಂಗಯ್ಯ ಬಿ.ಸಿ.
ಡಿ-ದರ್ಜೆ ನೌಕರರು
ಆರ್.ಡಿ.ಪಿ.ಆರ್.
17
ನಾರಾಯಣ ಆರ್.
ಡಿ-ದರ್ಜೆ ನೌಕರರು
ಆರ್.ಡಿ.ಪಿ.ಆರ್.
18
ನೀಲಪ್ಪ ಎಂ.
ಡಿ-ದರ್ಜೆ ನೌಕರರು
ಆರ್.ಡಿ.ಪಿ.ಆರ್.
19
ಜಯದೇವಪ್ಪ ಜೆ.ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
20
ಜಯಶೀಲ ಹೆಚ್.ಎನ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
21
ಮಮತ ಹೆಚ್.ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
22
ಸೀಬಿರಂಗಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
23
ಸೌಭಾಗ್ಯವತಿ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
24
ರವೀಂದ್ರಕುಮಾರ್ ಬಿ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
25
ಗೋಪಿನಾಥ್
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
26
ಗೋಪಾಲಕೃಷ್ಣ ಹೆಚ್.ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
27
ಶಂಕರಲಿಂಗಪ್ಪ ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
28
ಅನಿಲ್ ಕುಮಾರ್ ಜಿ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
29
ಬಸವರಾಜು
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
30
ಕಾಂತರಾಜು ಸಿ.ಟಿ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
31
ಶಿವಲಿಂಗಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
32
ಹನುಮಂತಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
33
ಅನಂತ ಜಿ.ಎ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಆರ್.ಡಿ.ಪಿ.ಆರ್.
34
ಲಕ್ಷ್ಮೀಬಾಯಿ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
35
ಗುರುಸಿದ್ದಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
36
ಕಾಂತರಾಜು ಎಸ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
37
ಕವಿತ ಸಿ.ಎಸ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
38
ಉಮೇಶ್
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
39
ಉಮೇಶ್ ಹೆಚ್.ಎಸ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
40
ಲಕ್ಷ್ಮಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಆರ್.ಡಿ.ಪಿ.ಆರ್.
41
ಶಿವಣ್ಣ ಹೆಚ್.ಆರ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
42
ಸತ್ಯನಾರಾಯಣಾಚಾರಿ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
43
ನಂಜೇಗೌಡ ಬಿ.ಎಲ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
44
ರಾಮಯ್ಯ ಬಿ.ಎನ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
45
ಉಮಾಮಹೇಶ್
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
46
ರೇವಯ್ಯ ಎನ್.ಜಿ.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
47
ಕೋದಂಡರಾಮಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
48
ಅಣ್ಣೇಗೌಡ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
49
ನಾರಾಯಣ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
50
ದೊಡ್ಡಕ್ಯಾತಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
51
ನಾರಾಯಣ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
52
ಪ್ರದೀಪ್ ಕುಮಾರ್
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
53
ಬಸವಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
54
ಚೆಲುವರಾಜು
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
55
ಗಂಗಯ್ಯ ಹೆಚ್.ಡಿ.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
56
ಗೌರಮ್ಮ ಎಸ್.ಎಲ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಆರ್.ಡಿ.ಪಿ.ಆರ್.
57
ಸಯೀದಾ ಮುಮ್ತಾಜ್ ಬಾನು
ವಿಸ್ತರಣಾಧಿಕಾರಿ
ಬಿ.ಸಿ.ಎಂ. ಇಲಾಖೆ
58
ಶಂಕರನಾರಾಯಣ ಎಸ್.ಕೆ.
ನಿಲಯಪಾಲಕರು
ಬಿ.ಸಿ.ಎಂ. ಇಲಾಖೆ
59
ಸುಮಂಗಳಮ್ಮ
ಮೇಲ್ವಿಚಾರಕರು
ಬಿ.ಸಿ.ಎಂ. ಇಲಾಖೆ
60
ಉಮೇಶ ಜಿ.
ಮೇಲ್ವಿಚಾರಕರು
ಬಿ.ಸಿ.ಎಂ. ಇಲಾಖೆ
61
ಪ್ರಶಾಂತ ಎಸ್.ಎನ್.
ಮೇಲ್ವಿಚಾರಕರು
ಬಿ.ಸಿ.ಎಂ. ಇಲಾಖೆ
62
ಶಿವರಾಜ ಎನ್.ಯಲಿಗಾರ್
ಮೇಲ್ವಿಚಾರಕರು
ಬಿ.ಸಿ.ಎಂ. ಇಲಾಖೆ
63
ಚೌಡಪ್ಪ ಸಿ.
ಶಿಕ್ಷಕರು
ಬಿ.ಸಿ.ಎಂ. ಇಲಾಖೆ
64
ಚನ್ನವೀರಯ್ಯ
ಅಡುಗೆಯವರು
ಬಿ.ಸಿ.ಎಂ. ಇಲಾಖೆ
65
ರಂಗಸ್ವಾಮಿ
ಅಡುಗೆಯವರು
ಬಿ.ಸಿ.ಎಂ. ಇಲಾಖೆ
66
ಚಂದ್ರಯ್ಯ ಬಿ.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
67
ನರಸಿಂಹ ಹೆಚ್.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
68
ಲೀಲಾ ಎಂ.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
69
ನರಸಮ್ಮ
ಅಡುಗೆಯವರು
ಬಿ.ಸಿ.ಎಂ. ಇಲಾಖೆ
70
ಗಂಗಾಧರಯ್ಯ ಎಂ.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
71
ಲಕ್ಷ್ಮಯ್ಯ ಬಿ.ಎನ್.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
72
ಲಕ್ಷ್ಮಮ್ಮ ಎನ್.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
73
ರಾಜಣ್ಣ ಕೆ.
ಅಡುಗೆಯವರು
ಬಿ.ಸಿ.ಎಂ. ಇಲಾಖೆ
74
ಪಾರ್ವತಿ
ಅಡುಗೆಯವರು
ಬಿ.ಸಿ.ಎಂ. ಇಲಾಖೆ
75
ಸಿದ್ದಗಂಗಮ್ಮ
ಅಡುಗೆ-ಸಹಾಯಕರು
ಬಿ.ಸಿ.ಎಂ. ಇಲಾಖೆ
76
ಕೆಂಪರಾಜು ಬಿ.ಪಿ.
ಅಡುಗೆ-ಸಹಾಯಕರು
ಬಿ.ಸಿ.ಎಂ. ಇಲಾಖೆ
77
ಸುವರ್ಣಮ್ಮ
ಕಾವಲುಗಾರರು
ಬಿ.ಸಿ.ಎಂ. ಇಲಾಖೆ
78
ಅಶ್ವತ್ಥಪ್ಪ
ಸಹಾಯಕ ನಿರ್ದೇಶಕರು
ಶಿಕ್ಷಣ ಇಲಾಖೆ
79
ಗಂಗಾಧರಯ್ಯ
ಪ್ರಥಮ ದರ್ಜೆ ಸಹಾಯಕರು
ಶಿಕ್ಷಣ ಇಲಾಖೆ
ತಿಪಟೂರು ತಾಲ್ಲೂಕು ಪಂಚಾಯಿತಿ ಇಲಾಖೆಯ ಗುರಿ ಮತ್ತು ಸಾಧನೆಗಳು:
ಕ್ರ. ಸಂ.
ಯೋಜನೆ
ಭೌತಿಕ ಗುರಿ
ಆರ್ಥಿಕ ಸಾಧನೆ
ಭೌತಿಕ
ಆರ್ಥಿಕ
ಭೌತಿಕ
ಆರ್ಥಿಕ
1
2
3
4
5
6
1
ಆಶ್ರಯ ಯೋಜನೆ
617
369
246.80
147.20
2
ವಿಶೇಷ ಆಶ್ರಯ ಯೋಜನೆ
994
791
298.80
237.30
3
ಇಂದಿರಾ ಆವಾಸ್ ಯೋಜನೆ
426
657312
346149.10
262.80124.80
129.604
ಅಂಬೇಡ್ಕರ್ ಯೋಜನೆ
20
5
8.00
2.00
5
ಎಸ್.ಜಿ.ಎಸ್.ವೈ.
112
60
64.00
55.34
6
ರಾ.ಗ್ರಾ.ಉ.ಖಾ.ಯೋಜನೆ
0
0
3000.00
235.00
7
ಅಧಿಭಾರಶುಲ್ಕ
49
13
17.63
6.55
8
12ನೇ ಹಣಕಾಸು ಯೋಜನೆ
98
65
35.24
25.38
9
13ನೇ ಹಣಕಾಸು ಯೋಜನೆ
22
7
20.62
6.97
10
ನಿರ್ಮಲ ಗ್ರಾಮ ಯೋಜನೆ
3948
230
57.22
6.60
11
ಮನೆ ತೆರಿಗೆ
0
0
93.35
57.56
12
ಕುಡಿಯುವ ನೀರು ತೆರಿಗೆ
0
0
53.13
21.98
14
ಶೇ.20ರ ಅನುದಾನ
0
0
30.20
1.00
15
ಗ್ರಾ.ಪಂ. ಅನುದಾನ
0
0
4.50
4.50
ಮಾಹಿತಿ ಹಕ್ಕು ಅಧಿನಿಯಮ-2005ರ ಕಲಂ 4(1)(ಬಿ):
ಅ) ತಿಪಟೂರು ತಾಲ್ಲೂಕಿನ ಸಾಮಾನ್ಯ ಮಾಹಿತಿಗಳು:
ಸಾರ್ವಜನಿಕ ಮಾಹಿತಿ ಅಧಿಕಾರಿ : ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ, ತಿಪಟೂರು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ : ಲೆಕ್ಕಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ತಿಪಟೂರು
ಮೇಲ್ಮನವಿ ಪ್ರಾಧಿಕಾರ : ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ತಿಪಟೂರು
1
ಭೌಗೋಳಿಕ ವಿಸ್ತೀರ್ಣ
785 ಚ.ಕಿ.ಮೀ.
2
ಒಟ್ಟು ಜನಸಂಖ್ಯೆ (2001ರ ಜನಗಣತಿ ಪ್ರಕಾರ)
ಅ) ಗ್ರಾಮೀಣ ಜನಸಂಖ್ಯೆ
ಆ) ನಗರ ಜನಸಂಖ್ಯೆ2,17,124
1,64,020
53,1043
ನಗರ ಪ್ರದೇಶ:
ಅ) ಗಂಡಸರು
ಆ) ಹೆಂಗಸರು
ಇ) ಪರಿಶಿಷ್ಟ ಜಾತಿ
ಈ) ಪರಿಶಿಷ್ಟ ಪಂಗಡ
1,09,799
1,07,325
30,484
7,8104
ಲಿಂಗಾನುಪಾತ
997
5
ಜನಸಾಂದ್ರತೆ
277 ಚ.ಕಿ.ಮೀ.
6
ಪ್ರಾಥಮಿಕ ಶಾಲೆಗಳು
ಪ್ರೌಢಶಾಲೆಗಳು297
147
ಸಾಕ್ಷರತೆ ಪ್ರಮಾಣ
ಶೇ. 75
8
ಮಳೆ ಪ್ರಮಾಣ
ಅ) ವಾರ್ಷಿಕ ಮಳೆ
ಆ) ವಾಸ್ತವಿಕ ಮಳೆ
ಮಿ.ಮೀ.
ಮಿ.ಮೀ.9
ಮಳೆ ಮಾಪನಗಳು
5
10
ವಾಣಿಜ್ಯ ಬ್ಯಾಂಕ್ ಗಳು
ಗ್ರಾಮೀಣ ಬ್ಯಾಂಕ್
ಸರ್ಕಾರಿ ಬ್ಯಾಂಕ್
ಕ್ರೆಡಿಟ್ ಸಹಕಾರ ಸಂಘಗಳು21
2
1
15511
ರಸ್ತೆಗಳು
ರಾಷ್ಟ್ರೀಯ ಹೆದ್ದಾರಿ
ರಾಜ್ಯ ಹೆದ್ದಾರಿ
ಜಿಲ್ಲಾ ಮುಖ್ಯರಸ್ತೆ
41 ಕಿ.ಮೀ
51.10 ಕಿ.ಮೀ.
118.40 ಕಿ.ಮೀ.12
ನಾಡಕಛೇರಿಗಳು
3
13
ಹೋಬಳಿಗಳು
4
14
ಕಂದಾಯ ಗ್ರಾಮಗಳು
231
15
ಗ್ರಾಮ ಪಂಚಾಯಿತಿಗಳು
26
ಆ) ತಾಲ್ಲೂಕು ಪಂಚಾಯಿತಿ ಕಾರ್ಯಾಲಯಗಳ ಅಧಿಕಾರಿ/ನೌಕರರ ವಿವರ:
ಕ್ರ. ಸಂ.
ಹುದ್ದೆಯ ಹೆಸರು
1
ಕಾರ್ಯನಿರ್ವಾಹಕ ಅಧಿಕಾರಿ
2
ಸಹಾಯಕ ಲೆಕ್ಕ ಅಧಿಕಾರಿ
3
ವ್ಯವಸ್ಥಾಪಕರು
4
ಕಿರಿಯ ಇಂಜಿನಿಯರ್
5
ಪ್ರಥಮ ದರ್ಜೆ ಸಹಾಯಕರು
6
ಪ್ರಥಮ ದರ್ಜೆ ಲೆಕ್ಕ ಸಹಾಯಕರು
7
ದ್ವಿತೀಯ ದರ್ಜೆ ಸಹಾಯಕರು
8
ಬೆರಳಚ್ಚುಗಾರರು
9
ವಾಹನಚಾಲಕರು
10
ಡಿ-ದರ್ಜೆ ನೌಕರರು
11
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
12
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
13
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಬಿ.ಸಿ.ಎಂ. ಇಲಾಖೆ:
14
ವಿಸ್ತರಣಾಧಿಕಾರಿ
15
ನಿಲಯಪಾಲಕರು
16
ಮೇಲ್ವಿಚಾರಕರು
17
ಶಿಕ್ಷಕರು
18
ಅಡುಗೆಯವರು
19
ಅಡುಗೆ-ಸಹಾಯಕರು
20
ಕಾವಲುಗಾರರು
ಅಕ್ಷರ ದಾಸೋಹ:
21
ಸಹಾಯಕ ನಿರ್ದೇಶಕರು
22
ಪ್ರಥಮ ದರ್ಜೆ ಸಹಾಯಕರು
ಇ) ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನ:
ಎ) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ತಾಲ್ಲೂಕು ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿನ ತೀರ್ಮಾನದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ತಾಲ್ಲೂಕು ಪಂಚಾಯಿತಿಯ ಮುಖ್ಯಸ್ಥರು ಆಗಿರುತ್ತಾರೆ.
ಬಿ) ಸಾರ್ವಜನಿಕರಿಂದ, ಅಧೀನ ಕಛೇರಿಯಿಂದ, ಮೇಲಾಧಿಕಾರಿಗಳಿಂದ ಮತ್ತು ಸರ್ಕಾರದಿಂದ ಬರುವಂತಹ ಎಲ್ಲಾ ಕಾಗದ ಪತ್ರಗಳನ್ನು ಸಾಮಾನ್ಯ ಸ್ವೀಕೃತಿ ಶಾಖೆಯಲ್ಲಿ ಸ್ವೀಕರಿಸಿ ವ್ಯವಸ್ಥಾಪಕರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಕಿರುಸಹಿ ಮಾಡಿದ ನಂತರ ಆಯಾ ಶಾಖೆಯ ವಿಷಯನಿರ್ವಾಹಕರಿಗೆ ನೀಡಲಾಗುವುದು. ಸಾರ್ವಜನಿಕರ ಮನವಿಯ ಬಗ್ಗೆ ಸ್ವೀಕೃತಿ ಪತ್ರ ನೀಡಲಾಗುವುದು.
ಸಿ) ಕಛೇರಿಯ ಕೈಪಿಡಿಯ ನಿಯಮಾವಳಿ ರೀತ್ಯಾ ಕಾಗದ ಪತ್ರಗಳನ್ನು ವಿಷಯನಿರ್ವಾಹಕರು ಸ್ವೀಕರಿಸಿ ಗರಿಷ್ಟ 5 ದಿನದೊಳಗೆ ಎಲ್ಲಾ ಕಾಗದ ಪತ್ರಗಳನ್ನು ವಿಷಯನಿರ್ವಾಹಕರ ದಿನಚರಿಯಲ್ಲಿ ನಮೂದಿಸಿಕೊಂಡು ತದನಂತರ ವಿಷಯವಹಿಯಲ್ಲಿ ಅನುಕ್ರಮವಾಗಿ ದಾಖಲಿಸಿಕೊಂಡು ಕಡತದಲ್ಲಿ ಟಿಪ್ಪಣಿ ಹಾಕಿ ಮಂಡಿಸುತ್ತಾರೆ. ನಂತರ ಸಂಬಂಧಿಸಿದ ಶಾಖಾಮುಖ್ಯಸ್ಥರಿಂದ ಪರಿಶೀಲಿಸಲ್ಪಟ್ಟು ನಂತರ ಕಾರ್ಯನಿರ್ವಾಹಕರಿಂದ ಆದೇಶ ಪಡೆದು ಕ್ರಮ ವಹಿಸಲಾಗುವುದು.
ಈ) ಕಛೇರಿಯ ನಿರ್ವಹಣೆಗೆ ರೂಪಿಸಿದ ಸೂತ್ರಗಳು:
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರಡಿಯಲ್ಲಿ ರೂಪಿಸಲಾದ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿರುತ್ತದೆ. ಸರ್ಕಾರದಿಂದ ಮತ್ತು ಅಧೀನ ಕಛೇರಿಗಳಿಂದ ಬಂದಂತಹ ಕಾಗದ ಪತ್ರಗಳನ್ನು ಸ್ವೀಕೃತಿಯಲ್ಲಿ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಂದ ಬರುವಂತಹ ಅರ್ಜಿಗಳನ್ನು ಅರ್ಜಿ/ಮನವಿಗಳನ್ನು ಸ್ವೀಕರಿಸಲು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸ್ವೀಕೃತಿ ಕೌಂಟರ್ ತೆರೆಯಲಾಗಿದೆ ಮತ್ತು ಸಾರ್ವಜನಿಕರಿಗೆ ಸ್ವೀಕೃತಿ ಕೊಡುವ ವ್ಯವಸ್ಥೆ ಮಾಡಲಾಗಿದೆ.ಸರ್ಕಾರದಿಂದ ಬಂದ ಪತ್ರಗಳನ್ನು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಅವರ ಕಿರುಸಹಿ ಪಡೆದು, ನಂತರ ಮುಂದಿನ ಕ್ರಮಕ್ಕೆ ಕಾಗದ ಪತ್ರಗಳನ್ನು ವಿವಿಧ ಶಾಖೆಗಳಿಗೆ ಹಂಚಲಾಗುವುದು. ಇದಲ್ಲದೆ ತುರ್ತು ಕಾಗದಗಳ ವಿಲೇವಾರಿಗೆ ಅಂದರೆ ಚುಕ್ಕೆ ಗುರುತಿನ ಪ್ರಶ್ನೆ, ಟೆಲೆಕ್ಸ್ ಸಂದೇಶಗಳು, ಫ್ಯಾಕ್ಸ್ ಸಂದೇಶಗಳು ಇತ್ಯಾದಿ ವಿಷಯಗಳ ಬಗ್ಗೆ ಪ್ರತ್ಯೇಕ ವಹಿಗಳಲ್ಲಿ ದಾಖಲಿಸಿಕೊಂಡು ಸಂಬಂಧಪಟ್ಟ ವಿಷಯನಿರ್ವಾಹಕರಿಗೆ ನೀಡಿ ಖುದ್ದಾಗಿ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಉ) ತಾಲ್ಲೂಕು ಪಂಚಾಯಿತಿ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ/ಅದರ ನಿಯಂತ್ರಣದಲ್ಲಿರುವ/ಅದರ ಉದ್ಯೋಗಿಗಳು ಬಳಸುವ ನಿಯಮಗಳು,ಅನುಸೂಚಿಗಳು,ಕೈಪಿಡಿ & ದಾಖಲೆಗಳ ವಿವರ:
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅಡಿಯಲ್ಲಿ ರಚಿಸಲಾದ ನಿಯಮಗಳು
ಸರ್ಕಾರ ಕಾಲಕಾಲಕ್ಕೆ ರೂಪಿಸುವ ಆದೇಶಗಳು ಮತ್ತು ಸುತ್ತೋಲೆಗಳು
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ತೆಗೆದುಕೊಳ್ಳುವ ನಿರ್ಣಯಗಳ ಮೇಲಿನ ಆದೇಶಗಳು
ಕರ್ನಾಟಕ ಆರ್ಥಿಕ ಸಂಹಿತೆ (ಕೆ.ಎಫ್.ಸಿ.)
ಬಡ್ಜೆಟ್ ಕೈಪಿಡಿ
ಕರ್ನಾಟಕ ಖಜಾನೆ ಸಂಹಿತೆ (ಕೆ.ಟಿ.ಸಿ.)
ಕರ್ನಾಟಕ ನಾಗರೀಕ ಸೇವಾ ನಿಯಮಗಳು (ಕೆ.ಸಿ.ಎಸ್.ಆರ್.)
ಸಾದಿಲ್ವಾರು ವೆಚ್ಚದ ಕೈಪಿಡಿ
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957
ಕರ್ನಾಟಕ ಸರ್ಕಾರಿ ನೌಕರರ ನಿಯಮಗಳು 1993
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1966ಮೇಲಿನ ಕಾಯಿದೆ ನಿಯಮಗಳಡಿ ಎಲ್ಲಾ ಕಡೆಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಅಂತಿಮ ಆದೇಶ ನೀಡಿ ಕಡತವನ್ನು ಮುಕ್ತಾಯ ಮಾಡಿದ ನಂತರ ಕಡತಗಳ ಪ್ರಾಮುಖ್ಯತೆಯನ್ನು ಅನುಸರಿಸಿ ಪ್ರವರ್ಗ-ಎ, ಬಿ, ಸಿ, ಡಿ ಮತ್ತು ಇ-ವರ್ಗಗಳೆಂದು ವರ್ಗೀಕರಿಸಿ ನಿರ್ವಹಿಸಲಾಗುತ್ತಿದೆ. ಪ್ರತಿ ವರ್ಗೀಕರಣದ ಅವಧಿ ಈ ಕೆಳಕಂಡಂತಿದೆ.
ಎ-ಡಿಸ್ - ಶಾಶ್ವತ
ಬಿ-ಡಿಸ್ - 30 ವರ್ಷಗಳು
ಸಿ-ಡಿಸ್ - 10 ವರ್ಷಗಳು
ಡಿ-ಡಿಸ್ - 5 ವರ್ಷಗಳು
ಇ-ಡಿಸ್ - 1 ವರ್ಷಎ) ಕಛೇರಿಯಲ್ಲಿ ದಿನನಿತ್ಯ ಉಪಯೋಗಿಸಬಹುದಾದ ವಹಿ-ದಾಖಲೆಗಳ ವಿವರ:
ಟಪಾಲು ವಹಿ
ಅರೆಸರ್ಕಾರಿ ಪತ್ರದ ವಹಿ
ಚುಕ್ಕೆ ಗುರುತಿನ ಪ್ರಶ್ನೆಯ ವಹಿ
ಹಾಜರಾತಿ ವಹಿ
ಚಲನ-ವಲನ ವಹಿ
ವೇತನ ಬಟವಾಡೆ ವಹಿ
ಚೆಕ್ ಸ್ವೀಕೃತಿ ವಹಿ
ವಿಷಯನಿರ್ವಾಹಕರ ವಹಿ
ಎನ್.ಎಂ.ಆರ್.ವಹಿ
ಅಳತೆ ಪುಸ್ತಕದ ವಹಿ
ನಗದು ಪುಸ್ತಕ ವಹಿ
ಹಣ ಬಳಕೆ ಪ್ರಮಾಣ ಪತ್ರದ ವಹಿ
ಕಾಮಗಾರಿ ಆಡಳಿತಾತ್ಮಕ ಮಂಜೂರಾತಿ ವಹಿ
ಅಂದಾಜು ಪಟ್ಟಿ ಮಂಜೂರಾತಿ ವಹಿ
ರವಾನೆ ವಹಿ
ವಸತಿ/ನಿವೇಶನ ಮಂಜೂರಾತಿ ವಹಿಏ) ತಾಲ್ಲೂಕು ಪಂಚಾಯಿತಿ ಅಧಿಕಾರಿ/ನೌಕರರ ಹುದ್ದೆ ಮತ್ತು ವೇತನದ ವಿವರ:
ಕ್ರ. ಸಂ.
ಅಧಿಕಾರಿ/ನೌಕರರ ಪದನಾಮ
ವೇತನ ಶ್ರೇಣಿ
ಮಂಜೂರಾದ ಹುದ್ದೆಗಳ ಸಂಖ್ಯೆ
1
ಕಾರ್ಯನಿರ್ವಾಹಕ ಅಧಿಕಾರಿ
14050-25050
1
2
ಸಹಾಯಕ ಲೆಕ್ಕ ಅಧಿಕಾರಿ
11400-21600
1
3
ವ್ಯವಸ್ಥಾಪಕರು
10000-18150
1
4
ಕಿರಿಯ ಇಂಜಿನಿಯರ್
8825-16000
3
5
ಪ್ರಥಮ ದರ್ಜೆ ಸಹಾಯಕರು
7275-13350
3
6
ಪ್ರಥಮ ದರ್ಜೆ ಲೆಕ್ಕ ಸಹಾಯಕರು
7275-13350
2
7
ದ್ವಿತೀಯ ದರ್ಜೆ ಸಹಾಯಕರು
5800-10500
3
8
ಬೆರಳಚ್ಚುಗಾರರು
5800-10500
2
9
ವಾಹನಚಾಲಕರು
5800-10500
2
10
ಡಿ-ದರ್ಜೆ ನೌಕರರು
4800-7275
4
11
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
10000-18150
26
12
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
7275-13350
8
13
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
5800-10500
18
ಬಿ.ಸಿ.ಎಂ. ಇಲಾಖೆ:
14
ವಿಸ್ತರಣಾಧಿಕಾರಿ
10000-18150
1
15
ನಿಲಯಪಾಲಕರು
10000-18150
2
16
ಮೇಲ್ವಿಚಾರಕರು
7275-13350
5
17
ಶಿಕ್ಷಕರು
7275-13350
2
18
ಅಡುಗೆಯವರು
5200-8200
15
19
ಅಡುಗೆ-ಸಹಾಯಕರು
4800-7275
8
20
ಕಾವಲುಗಾರರು
4800-7275
1
ಅಕ್ಷರ ದಾಸೋಹ:
21
ಸಹಾಯಕ ನಿರ್ದೇಶಕರು
11400-21600
1
22
ಪ್ರಥಮ ದರ್ಜೆ ಸಹಾಯಕರು
7275-13350
1
ಐ) ಕಛೇರಿ ಸಿಬ್ಬಂದಿಯ ಕಾರ್ಯ ನಿರ್ವಹಣೆಯ ವಿವರಗಳು:
ಕ್ರ. ಸಂ.
ಹೆಸರು
ಹುದ್ದೆ
ನಿರ್ವಹಿಸುವ ಶಾಖೆಗಳ ವಿವರ
1
ಶಿವನಂಜಯ್ಯ ಕೆ.
ಸಹಾಯಕ ಲೆಕ್ಕ ಅಧಿಕಾರಿ
ಕಛೇರಿಯ ಹಣಕಾಸು ಮತ್ತು ಲೆಕ್ಕಪತ್ರಗಳ ಮೇಲ್ವಿಚಾರಣೆ, ಗ್ರಾಮ ಪಂಚಾಯಿತಿ ಜೋಡಿ ಲೆಕ್ಕ ನಮೂದು ಪದ್ದತಿಯ ಲೆಕ್ಕಪತ್ರಗಳ ನಿರ್ವಹಣೆ,ಮಹಾಲೇಖಾಪಾಲರು ಮತ್ತು ಜಿಲ್ಲಾ ಪಂಚಾಯಿತಿ ಆಡಿಟ್ ಪ್ಯಾರಾಗಳಿಗೆ ಉತ್ತರಿಸುವುದು.
2
ಸಣ್ಣಮುದ್ದೇಗೌಡ ಕೆ.ಸಿ.
ವ್ಯವಸ್ಥಾಪಕರು
ಕಛೇರಿಯ ಮೇಲ್ವಿಚಾರಣೆ,ಮಾಹಿತಿ ಹಕ್ಕು ಅಧಿನಿಯಮ,ನ್ಯಾಯಾಲಯ ಕಡತಗಳ ನಿರ್ವಹಣೆ,ಜನಸ್ಪಂದನ ಅರ್ಜಿಗಳ ವಿಲೇವಾರಿ.
3
ರಾಮಣ್ಣ ಕೆ.ಜಿ.
ಕಿರಿಯ ಇಂಜಿನಿಯರ್
ನಿಯೋಜನೆ ಮೇಲೆ ಸಿ.ಆರ್.ಇ.ಡಿ. ಉಪ-ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
4
ರಾಜಣ್ಣ ಎಂ.ಎನ್.
ಕಿರಿಯ ಇಂಜಿನಿಯರ್
ನಿಯೋಜನೆ ಮೇಲೆ ಸಿ.ಆರ್.ಇ.ಡಿ. ಉಪ-ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
5
ರಾಮಕೃಷ್ಣನಾಯಕ್ ಎಸ್.
ಕಿರಿಯ ಇಂಜಿನಿಯರ್
ನಿಯೋಜನೆ ಮೇಲೆ ಸಿ.ಆರ್.ಇ.ಡಿ. ಉಪ-ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
6
ಬನವಯ್ಯ ಕೆ.ಎಸ್.
ಪ್ರಥಮ ದರ್ಜೆ ಸಹಾಯಕರು
ಎನ್.ಆರ್.ಇ.ಜಿ.ಎ. ಮತ್ತು ಸಿಬ್ಬಂದಿ ಶಾಖೆ
7
ಶೇಖರಪ್ಪ
ಪ್ರಥಮ ದರ್ಜೆ ಸಹಾಯಕರು
12 & 13ನೇ ಹಣಕಾಸು,ಎಸ್.ಜಿ.ಎಸ್.ವೈ.,ಕುಡಿಯುವನೀರು ನಿರ್ವಹಣೆ,ಸುವರ್ಣ ಗ್ರಾಮೋದಯ,ಕಛೇರಿಯ ವಾಹನ ಗಳ ಕಡತ ನಿರ್ವಹಣೆ,ತಾ.ಪಂ.ನಿಧಿ-3ರ ನಿರ್ವಹಣೆ,ಟಾಸ್ಕ್ ಫೋರ್ಸ್,ಮಾಸಿಕ & ತ್ರೈಮಾಸಿಕ ಕೆ.ಡಿ.ಪಿ.ಸಭೆಗಳ ನಿರ್ವ ಹಣೆ.
8
ಭೈರಯ್ಯ
ಪ್ರಥಮ ದರ್ಜೆ ಲೆಕ್ಕ ಸಹಾಯಕರು
ತಾ.ಪಂ.ನಗದು ಶಾಖೆ,ವಿಶೇಷ ಘಟಕ ಯೋಜನೆ,ಗಿರಿಜನ ಉಪಯೋಜನೆ,ಸಾದಿಲ್ವಾರು ಬಿಲ್ ಗಳ ನಿರ್ವಹಣೆ,ತಾಲ್ಲೂಕು ಪಂಚಾಯಿತಿ ಸದಸ್ಯರುಗಳ ಗೌರವಧನ ಪಾವತಿ, ಅಧಿಭಾರಶುಲ್ಕ ಯೋಜನೆ.
9
ಸುಮಿತ್ರ ಟಿ.ವಿ.
ದ್ವಿತೀಯ ದರ್ಜೆ ಸಹಾಯಕರು
ಎಲ್ಲಾ ವಸತಿ ಯೋಜನೆಗಳು, ನಿವೇಶನ ಹಂಚಿಕೆ ಮತ್ತು ಸ್ವಚ್ಚಗ್ರಾಮ
10
ಭಾಗ್ಯಜ್ಯೋತಿ ಟಿ.ಎಸ್.
ದ್ವಿತೀಯ ದರ್ಜೆ ಸಹಾಯಕರು
ರವಾನೆ ಕೆಲಸ,ಗ್ರಾ.ಪಂ.ಶಾಖೆ,ಉಪಗ್ರಹ ತರಬೇತಿ,ಸಂಪೂರ್ಣ ಸ್ವಚ್ಚತಾ ಆಂದೋಲನ,ನಮ್ಮಭೂಮಿ-ನಮ್ಮ ತೋಟ,ಕುಗ್ರಾಮ-ಸುವರ್ಣ ಗ್ರಾಮ ಯೋಜನೆ
11
ಮಂಜುನಾಥ್ ಹೆಚ್.ಎಂ.
ದ್ವಿತೀಯ ದರ್ಜೆ ಸಹಾಯಕರು
ಸ್ವೀಕೃತಿ,ಕುಡಿಯುವ ನೀರಿನ ಕುಂದು ಕೊರತೆ ಅರ್ಜಿಗಳ ಸ್ವೀಕೃತಿ ಮತ್ತು ಪ್ರಯಾಣ ಭತ್ಯೆ ಬಿಲ್ ಗಳ ತಯಾರಿಕೆ
12
ಗೀತಾಬಾಯಿ ಜಿ.
ಬೆರಳಚ್ಚುಗಾರರು
ಕಛೇರಿಯ ಕಂಪ್ಯೂಟರ್ ಕೆಲಸಗಳ ನಿರ್ವಹಣೆ
13
ತಮ್ಮಣ್ಣಗೌಡ
ವಾಹನಚಾಲಕರು
ಕಾರ್ಯನಿರ್ವಾಹಕ ಅಧಿಕಾರಿಗಳ ಜೀಪ್ ಚಾಲನೆ ಮತ್ತು ನಿರ್ವಹಣೆ
14
ಶಿವಪ್ಪ ಜಿ.
ವಾಹನಚಾಲಕರು
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಜೀಪ್ ಚಾಲನೆ ಮತ್ತು ನಿರ್ವಹಣೆ
15
ಗಂಗಯ್ಯ ಬಿ.ಸಿ.
ಡಿ-ದರ್ಜೆ ನೌಕರರು
ಕಛೇರಿಯ ಸ್ವಚ್ಚತೆ
16
ನಾರಾಯಣ ಆರ್.
ಡಿ-ದರ್ಜೆ ನೌಕರರು
ಕಛೇರಿಯ ಸ್ವಚ್ಚತೆ
17
ನೀಲಪ್ಪ ಎಂ.
ಡಿ-ದರ್ಜೆ ನೌಕರರು
ಕಛೇರಿಯ ಸ್ವಚ್ಚತೆ
18
ಜಯದೇವಪ್ಪ ಜೆ.ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಬಳುವನೇರಲು ಗ್ರಾಮ ಪಂಚಾಯಿತಿ
19
ಜಯಶೀಲ ಹೆಚ್.ಎನ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಸಾರ್ಥವಳ್ಳಿ ಗ್ರಾಮ ಪಂಚಾಯಿತಿ
20
ಮಮತ ಹೆಚ್.ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮತ್ತಿಹಳ್ಳಿ ಗ್ರಾಮ ಪಂಚಾಯಿತಿ
21
ಸೀಬಿರಂಗಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹುಣಸೇಘಟ್ಟ ಗ್ರಾಮ ಪಂಚಾಯಿತಿ
22
ಸೌಭಾಗ್ಯವತಿ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ನೊಣವಿನಕೆರೆ ಗ್ರಾಮ ಪಂಚಾಯಿತಿ
23
ರವೀಂದ್ರಕುಮಾರ್ ಬಿ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ನಾಗರಘಟ್ಟ ಗ್ರಾಮ ಪಂಚಾಯಿತಿ
24
ಗೋಪಿನಾಥ್
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಕರಡಿ ಗ್ರಾಮ ಪಂಚಾಯಿತಿ
25
ಗೋಪಾಲಕೃಷ್ಣ ಹೆಚ್.ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ದಸರೀಘಟ್ಟ ಗ್ರಾಮ ಪಂಚಾಯಿತಿ
26
ಶಂಕರಲಿಂಗಪ್ಪ ಆರ್.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ರಂಗಾಪುರ ಗ್ರಾಮ ಪಂಚಾಯಿತಿ
27
ಅನಿಲ್ ಕುಮಾರ್ ಜಿ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಬಿಳಿಗೆರೆ ಗ್ರಾಮ ಪಂಚಾಯಿತಿ
28
ಬಸವರಾಜು
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗುಂಗುರುಮಳೆ ಗ್ರಾಮ ಪಂಚಾಯಿತಿ
29
ಕಾಂತರಾಜು ಸಿ.ಟಿ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ತಡಸೂರು ಗ್ರಾಮ ಪಂಚಾಯಿತಿ
30
ಶಿವಲಿಂಗಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹಾಲ್ಕುರಿಕೆ ಗ್ರಾಮ ಪಂಚಾಯಿತಿ
31
ಹನುಮಂತಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗುರುಗದಹಳ್ಳಿ ಗ್ರಾಮ ಪಂಚಾಯಿತಿ
32
ಅನಂತ ಜಿ.ಎ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಬಜಗೂರು ಗ್ರಾಮ ಪಂಚಾಯಿತಿ
33
ಲಕ್ಷ್ಮೀಬಾಯಿ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಬಳುವನೇರಲು ಗ್ರಾಮ ಪಂಚಾಯಿತಿ
34
ಗುರುಸಿದ್ದಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ನೊಣವಿನಕೆರೆ ಗ್ರಾಮ ಪಂಚಾಯಿತಿ
35
ಕಾಂತರಾಜು ಎಸ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಮತ್ತಿಹಳ್ಳಿ ಗ್ರಾಮ ಪಂಚಾಯಿತಿ
36
ಕವಿತ ಸಿ.ಎಸ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಬಿಳಿಗೆರೆ ಗ್ರಾಮ ಪಂಚಾಯಿತಿ
37
ಉಮೇಶ್
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ದಸರೀಘಟ್ಟ ಗ್ರಾಮ ಪಂಚಾಯಿತಿ
38
ಉಮೇಶ್ ಹೆಚ್.ಎಸ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ರಂಗಾಪುರ ಗ್ರಾಮ ಪಂಚಾಯಿತಿ
39
ಲಕ್ಷ್ಮಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-1
ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ
40
ಶಿವಣ್ಣ ಹೆಚ್.ಆರ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಸಾರ್ಥವಳ್ಳಿ ಗ್ರಾಮ ಪಂಚಾಯಿತಿ
41
ಸತ್ಯನಾರಾಯಣಾಚಾರಿ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ತಡಸೂರು ಗ್ರಾಮ ಪಂಚಾಯಿತಿ
42
ನಂಜೇಗೌಡ ಬಿ.ಎಲ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಹಾಲ್ಕುರಿಕೆ ಗ್ರಾಮ ಪಂಚಾಯಿತಿ
43
ರಾಮಯ್ಯ ಬಿ.ಎನ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಗುರುಗದಹಳ್ಳಿ ಗ್ರಾಮ ಪಂಚಾಯಿತಿ
44
ಉಮಾಮಹೇಶ್
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಬಜಗೂರು ಗ್ರಾಮ ಪಂಚಾಯಿತಿ
45
ರೇವಯ್ಯ ಎನ್.ಜಿ.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಮಣಿಕಿಕೆರೆ ಗ್ರಾಮ ಪಂಚಾಯಿತಿ
46
ಕೋದಂಡರಾಮಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ನೆಲ್ಲಿಕೆರೆ ಗ್ರಾಮ ಪಂಚಾಯಿತಿ
47
ಅಣ್ಣೇಗೌಡ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಕುಪ್ಪಾಳು ಗ್ರಾಮ ಪಂಚಾಯಿತಿ
48
ನಾರಾಯಣ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಈಚನೂರು ಗ್ರಾಮ ಪಂಚಾಯಿತಿ
49
ದೊಡ್ಡಕ್ಯಾತಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಮಸವನಘಟ್ಟ ಗ್ರಾಮ ಪಂಚಾಯಿತಿ
50
ನಾರಾಯಣ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಹುಣಸೇಘಟ್ಟ ಗ್ರಾಮ ಪಂಚಾಯಿತಿ
51
ಪ್ರದೀಪ್ ಕುಮಾರ್
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ
52
ಬಸವಯ್ಯ
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಹೊನ್ನವಳ್ಳಿ ಗ್ರಾಮ ಪಂಚಾಯಿತಿ
53
ಚೆಲುವರಾಜು
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಗ್ಯಾರಘಟ್ಟ ಗ್ರಾಮ ಪಂಚಾಯಿತಿ
54
ಗಂಗಯ್ಯ ಹೆಚ್.ಡಿ.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಅರಳಗುಪ್ಪೆ ಗ್ರಾಮ ಪಂಚಾಯಿತಿ
55
ಗೌರಮ್ಮ ಎಸ್.ಎಲ್.
ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್-2
ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ
56
ಸಯೀದಾ ಮುಮ್ತಾಜ್ ಬಾನು
ಬಿ.ಸಿ.ಎಂ. ವಿಸ್ತರಣಾಧಿಕಾರಿ
ಆಶ್ರಮ ಶಾಲೆ,ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಣೆ ಮತ್ತು ವಿದ್ಯಾರ್ಥಿ ವೇತನ ಮಂಜೂರಾತಿ
57
ಶಂಕರನಾರಾಯಣ ಎಸ್.ಕೆ.
ನಿಲಯಪಾಲಕರು
ತಿಪಟೂರು ಟೌನಿನ ಬಿ.ಸಿ.ಎಂ. ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಣೆ
58
ಸುಮಂಗಳಮ್ಮ
ಮೇಲ್ವಿಚಾರಕರು
ತಿಪಟೂರು ಟೌನಿನ ಬಿ.ಸಿ.ಎಂ. ಮೆಟ್ರಿಕ್ ನಂತರದ ಬಾಲಕಿಯರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಣೆ
59
ಉಮೇಶ ಜಿ.
ಮೇಲ್ವಿಚಾರಕರು
ಬಿಳಿಗೆರೆ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಣೆ
60
ಪ್ರಶಾಂತ ಎಸ್.ಎನ್.
ಮೇಲ್ವಿಚಾರಕರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಣೆ
61
ಶಿವರಾಜ ಎನ್.ಯಲಿಗಾರ್
ಮೇಲ್ವಿಚಾರಕರು
ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ವಹಣೆ
62
ಚೌಡಪ್ಪ ಸಿ.
ಶಿಕ್ಷಕರು
ಬಿ.ಜಿ.ಹಟ್ಟಿ ಆಶ್ರಮ ಶಾಲೆಯ ನಿರ್ವಹಣೆ
63
ಚನ್ನವೀರಯ್ಯ
ಅಡುಗೆಯವರು
ತಿಪಟೂರು ಟೌನಿನ ಬಿ.ಸಿ.ಎಂ. ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ
64
ರಂಗಸ್ವಾಮಿ
ಅಡುಗೆಯವರು
ತಿಪಟೂರು ಟೌನಿನ ಬಿ.ಸಿ.ಎಂ. ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ
65
ಚಂದ್ರಯ್ಯ ಬಿ.
ಅಡುಗೆಯವರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
66
ನರಸಿಂಹ ಹೆಚ್.
ಅಡುಗೆಯವರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
67
ಲೀಲಾ ಎಂ.
ಅಡುಗೆಯವರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ
68
ನರಸಮ್ಮ
ಅಡುಗೆಯವರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ
69
ಗಂಗಾಧರಯ್ಯ ಎಂ.
ಅಡುಗೆಯವರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ
70
ಲಕ್ಷ್ಮಯ್ಯ ಬಿ.ಎನ್.
ಅಡುಗೆಯವರು
ಬಿಳಿಗೆರೆ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
71
ಲಕ್ಷ್ಮಮ್ಮ ಎನ್.
ಅಡುಗೆಯವರು
ಬಿಳಿಗೆರೆ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
72
ರಾಜಣ್ಣ ಕೆ.
ಅಡುಗೆಯವರು
ಬಿ.ಜಿ.ಹಟ್ಟಿ ಆಶ್ರಮ ಶಾಲೆಯ ನಿರ್ವಹಣೆ
73
ಪಾರ್ವತಿ
ಅಡುಗೆಯವರು
ಬಿ.ಜಿ.ಹಟ್ಟಿ ಆಶ್ರಮ ಶಾಲೆಯ ನಿರ್ವಹಣೆ
74
ಸಿದ್ದಗಂಗಮ್ಮ
ಅಡುಗೆ-ಸಹಾಯಕರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
75
ಕೆಂಪರಾಜು ಬಿ.ಪಿ.
ಅಡುಗೆ-ಸಹಾಯಕರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ
76
ಸುವರ್ಣಮ್ಮ
ಕಾವಲುಗಾರರು
ತಿಪಟೂರು ಟೌನ್ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ
77
ಅಶ್ವತ್ಥಪ್ಪ
ಸಹಾಯಕ ನಿರ್ದೇಶಕರು
ತಾಲ್ಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದ ಮೇಲ್ವಿಚಾರಣೆ
78
ಗಂಗಾಧರಯ್ಯ
ಪ್ರಥಮ ದರ್ಜೆ ಸಹಾಯಕರು
ಅಕ್ಷರ ದಾಸೋಹ ಶಾಖೆಯ ಎಲ್ಲಾ ಕಾಗದ ಪತ್ರಗಳ ನಿರ್ವಹಣೆ, ಅಡುಗೆಯವರ ವೇತನ ಬಿಲ್ ತಯಾರಿಸುವುದು
ತಾಲ್ಲೂಕು ಪಂಚಾಯಿತಿ ಕಾರ್ಯಾಲಯ,
ತಿಪಟೂರು ತಾಲ್ಲೂಕು.
ಕ್ರ. ಸಂ.
ನೌಕರರ/ಕಛೇರಿಯ ಹೆಸರು
ಹುದ್ದೆ
ಜಿಲ್ಲಾ/ತಾಲ್ಲೂಕು/ಹೋಬಳಿ/ಗ್ರಾ.ಪಂ.
ದೂರವಾಣಿ ಸಂಖ್ಯೆ
ಮೊಬೈಲ್ ಸಂಖ್ಯೆ
1
ತಾಲ್ಲೂಕು ಪಂಚಾಯಿತಿ
ಕಾರ್ಯನಿರ್ವಾಹಕ ಅಧಿಕಾರಿ
ತಿಪಟೂರು ತಾಲ್ಲೂಕು
08134-251095
9480877140
2
ಗ್ರಾಮ ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಅರಳಗುಪ್ಪೆ ಗ್ರಾಮ ಪಂಚಾಯಿತಿ
261241
9480877428
3
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಬಳುವನೇರಲು ಗ್ರಾಮ ಪಂಚಾಯಿತಿ
293675
9480877430
4
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಬಜಗೂರು ಗ್ರಾಮ ಪಂಚಾಯಿತಿ
201226
9480877429
5
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಬಿಳಿಗೆರೆ ಗ್ರಾಮ ಪಂಚಾಯಿತಿ
262038
9480877431
6
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ದಸರೀಘಟ್ಟ ಗ್ರಾಮ ಪಂಚಾಯಿತಿ
259594
9480877432
7
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಈಚನೂರು ಗ್ರಾಮ ಪಂಚಾಯಿತಿ
9480877433
8
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗುಂಗುರುಮಳೆ ಗ್ರಾಮ ಪಂಚಾಯಿತಿ
261788
9480877435
9
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗ್ಯಾರಘಟ್ಟ ಗ್ರಾಮ ಪಂಚಾಯಿತಿ
9480877437
10
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ
9480877441
11
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗುರುಗದಹಳ್ಳಿ ಗ್ರಾಮ ಪಂಚಾಯಿತಿ
9480877436
12
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹುಣಸೇಘಟ್ಟ ಗ್ರಾಮ ಪಂಚಾಯಿತಿ
265035
9480877442
13
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ
9480877439
14
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹೊನ್ನವಳ್ಳಿ ಗ್ರಾಮ ಪಂಚಾಯಿತಿ
9480877440
15
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ
293610
9480877434
16
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹಾಲ್ಕುರಿಕೆ ಗ್ರಾಮ ಪಂಚಾಯಿತಿ
264009
9480877438
17
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಕುಪ್ಪಾಳು ಗ್ರಾಮ ಪಂಚಾಯಿತಿ
9480877444
18
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಕರಡಿ ಗ್ರಾಮ ಪಂಚಾಯಿತಿ
9480877443
19
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮಸವನಘಟ್ಟ ಗ್ರಾಮ ಪಂಚಾಯಿತಿ
9480877446
20
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮತ್ತಿಹಳ್ಳಿ ಗ್ರಾಮ ಪಂಚಾಯಿತಿ
293601
9480877447
21
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮಣಿಕಿಕೆರೆ ಗ್ರಾಮ ಪಂಚಾಯಿತಿ
294495
9480877445
22
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ನೊಣವಿನಕೆರೆ ಗ್ರಾಮ ಪಂಚಾಯಿತಿ
258051
9480877450
23
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ನೆಲ್ಲಿಕೆರೆ ಗ್ರಾಮ ಪಂಚಾಯಿತಿ
9480877449
24
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ನಾಗರಘಟ್ಟ ಗ್ರಾಮ ಪಂಚಾಯಿತಿ
9480877448
25
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ರಂಗಾಪುರ ಗ್ರಾಮ ಪಂಚಾಯಿತಿ
9480877451
26
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಸಾರ್ಥವಳ್ಳಿ ಗ್ರಾಮ ಪಂಚಾಯಿತಿ
293477
9480877452
27
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ತಡಸೂರು ಗ್ರಾಮ ಪಂಚಾಯಿತಿ
9480877453
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||