![]() |
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ |
ಸಮಾಜ ಕಲ್ಯಾಣ ಇಲಾಖೆಯು 1956 ರಲ್ಲಿ ಸರ್ಕಾರಿ ಆದೇಶ ಸಂಖ್ಯೆ:ಎಸ್.ಎಸ್.4009-ಎಸ್.ಆರ್.ಟಿ-2-56-1-ದಿನಾಂಕ:18-10-1956ರ ಅನ್ವಯ ಆರಂಭಗೊಂಡಿತು. ಇಲಾಖೆಯನ್ನು ಆರಂಭಿಸುವ ಪ್ರಮುಖ ಉದ್ದೇಶವೂ ಪರಿಶಿಷ್ಟ ಜಾತಿಗಳು/ಪಂಗಡಗಳು/ಹಿತರೆ ಹಿಂದುಳಿದ ವರ್ಗಗಳು/ಮಹಿಳೆಯರು ಮತ್ತು ಮಕ್ಕಳ ಅಭಿವೃದ್ದಿಯಾಗಿತ್ತು. ನಂತರದ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳು ಇತರೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಪಂಗಡಗಳವರ ಅಭಿವೃದ್ದಿಗೆ ಇಲಾಖೆಗಳನ್ನು ಆರಂಭಿಸಲಾಯಿತು. ಪ್ರಸ್ತುತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ವರ್ಗಗಳವರ ಕಲ್ಯಾಣ ಕಾರ್ಯಕ್ರಮಗಳನ್ನು ಮಾತ್ರ ಕೈಗೆತ್ತಿ ಕೊಳ್ಳುತ್ತದೆ. ಸರ್ಕಾರವು ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ದಿಗಾಗಿ ಹಾಗೂ ಈ ಜನಾಂಗದ ಜನರನ್ನು ಇಲಾಖೆಯ ಕಾರ್ಯಕ್ರಮಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಈ ಇಲಾಖಯನ್ನು ರಚಿಸಲಾಗಿದೆ. ಸಮಾಜದಲ್ಲಿ ಈ ಜನಾಂಗದ ಸಮಾನತೆಯನ್ನು ಕಾಪಾಡಲು ಹಲವಾರು ಶೈಕ್ಷಣಿಕ ಹಾಗೂ ಆರ್ಥಿಕ ಕಾರ್ಯಕ್ರಮಗಳಿಂದ ಈ ಕೆಳಕಂಡ ಇಲಾಖೆಗಳ ಮೂಲಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತದೆ.
* ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.
*ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ.
* ಇತರೆ ಇಲಾಖೆಗಳ ಮೂಲಕ.
ಇಲಾಖೆಯ ಮೂಲ ಉದ್ದೇಶ ಹಾಗೂ ಗುರಿಗಳು
1) ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ವಸತಿನಿಲಯಗಳ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸುವುದು.
2)ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದ ಮೂಲಕ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದು.
3)ಪರಿಶಿಷ್ಟ ವರ್ಗಗಳ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು.
4)ಗಿರಿಜನ ಉಪಯೋಜನೆಯಡ ಇತರೆ ಇಲಾಖೆಗಳ ಮೂಲಕ ಪರಿಶಿಷ್ಟ ವಗದ ಕುಟುಂಬಗಳಿಗೆ ಸಹಾಯಧನ ನೀಡುವುದು.
5)ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವರ್ಗದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡುವುದು.
ತುಮಕೂರು ಜಿಲ್ಲೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆ/ಯೋಜನೇತರ ಕಾರ್ಯಕ್ರಮಗಳ ವಿವರ
1)ಮೆಟ್ರಿಕ್ ಪೂರ್ವಬಾಲಕರ ವಿದ್ಯಾರ್ಥಿನಿಲಯಗಳು
ಜಿಲ್ಲೆಯಲ್ಲಿ ಒಟ್ಟು 05 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿರುತ್ತವೆ. ವಿವಿಧ ಶಾಲೆಗಳಲ್ಲಿ ಮಾದ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿನಿಲಯಗಳಲ್ಲಿ ಅವಕಾಶ ಕಲ್ಪಸಲಾಗುವೂದು. ಶೇ.75 ಪ.ವರ್ಗ, ಶೇ.25 ಪ.ಜಾತಿ ಮತ್ತು ಇತರೆ ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶವಕಾಶ ಕಲ್ಪಿಸಲಾಗುವೂದು. ವಿವಿಧ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿನಿಲಯದ ಬಾಲಕರಿಗೆ ಮಾಹೆಯಾನ ಪ್ರತಿ ವಿದ್ಯಾರ್ಥಿಗೆ ರೂ.1300-00 ಗಳ ದರದಲ್ಲಿ 10 ತಿಂಗಳ ಅವಧಿಗೆ ಉಚಿತ ಊಟ/ವಸತಿ ಕಲ್ಪಿಸಲಾಗುವೂದು. ವಾರ್ಷಿಕವಾಗಿ ಲೇಖನ ಸಾಮಗ್ರಿ ,ಸಮವಸ್ತ್ರ ನೀಡಲಾಗುವೂದು.ಜಿಲ್ಲೆಯಲ್ಲಿ ಒಟ್ಟು 293 ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
2)ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು
ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ಬಾಲಕ/ಬಾಲಕೀಯರ ಒಟ್ಟು 3 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವೂದು. ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಮುಖಾಂತರ ವಿದ್ಯಾರ್ಥಿಗಳನ್ನು ವಿದ್ಯಾರ್ಥಿನಿಲಯಗಳಿಗೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿನಿಲಯಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ/ವಸತಿ ನೀಡಲಾಗುತ್ತಿದೆ. ಹಾಗೂ ಮಾಹೆಯಾನ ರೂ. 1400-00 ಮೊತ್ತ ಮಿತಿಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಊಟ/ತಿಂಡಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 553 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಪ್ರಯೋಜನ ಪಡೆಯುತ್ತಿದ್ದಾರೆ.
3)ಆಶ್ರಮ ಶಾಲೆಗಳು
ಜಿಲ್ಲೆಯಲ್ಲಿ 3 ಆಶ್ರಮ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು 1 ರಿಂದ 5 ನೇ ತರಗತಿ ವ್ಯಾಸಂಗ ಮಾಡಲು ಇಚ್ಚಿಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶೇ.75 ಪ.ವರ್ಗ ಹಾಗೂ ಶೇ.25 ಪ.ಜಾತಿ ಹಾಗೂ ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ತಾಲ್ಲೂಕು ಮಟ್ಟದ ಸಮಿತಿ ಮೂಲಕ ವಿದ್ಯಾರ್ಥಿಗಳನ್ನು ಈ ಆಶ್ರಮ ಶಾಲೆಗಳಿಗೆ ಆಯ್ಕೆ ಮಾಡಲಾಗುವೂದು. ಆಶ್ರಮ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ , ವಸತಿ ಹಾಗೂ ವಿದ್ಯಾಬ್ಯಾಸ ನೀಡಲಾಗುತ್ತದೆ. ಮಾಹೆಯಾನ ರೂ.1100-00 ಮೊತ್ತದೊಳಗೆ ಊಟ/ತಿಂಡಿಯನ್ನು ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನ ವೆಚ್ಚ ಮಾಡಲಾಗುತ್ತದೆ. ವಾರ್ಷಿಕವಾಗಿ ಲೇಖನ ಸಾಮಗ್ರಿ, ಸಮವಸ್ತ್ರ ಇತ್ಯಾದಿ ಸೌಲಭ್ಯ ಒದಗಿಸಲಾಗುವುದು.ಜಿಲ್ಲೆಯಲ್ಲಿ ಕಾಶಾಪುರ, ಕೊರಟಗೆರೆ ತಾಲ್ಲೂಕು, ಹನುಮಾಪುರ, ತುರುವೇಕೆರೆ ತಾಲ್ಲೂಕು ಹಾಗೂ ಚಿಕ್ಕನಾಯಕನಹಳ್ಳಿ ಟೌನ್ ನಲ್ಲಿ ಆಶ್ರಮ ಶಾಲೆಗಳನ್ನು ನಡೆಸಲಾಗುತ್ತಿದೆ. ಒಟ್ಟು 145 ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯುತ್ತಿರುತ್ತಾರೆ.
4) ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ
ವಿವಿಧ ಶಾಲೆಗಳಲ್ಲಿ 1 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುವುದು. ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು, ಮಾನ್ಯತೆ ಪಡೆದ ಯಾವುದೇ ಸಾರ್ವಜನಿಕ ವಸತಿ ನಿಲಯದ ವಾಸಿಯಾದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಿರುವುದಿಲ್ಲ. ವಾರ್ಷಿಕವಾಗಿ 1 ರಿಂದ 5 ನೇ ತರಗತಿ ಗಂಡು ಮಕ್ಕಳಿಗೆ ರೂ.750-00 ಮತ್ತು ಹೆಣ್ಣು ಮಕ್ಕಳಿಗ 850-00 ರಂತೆ, ವಾರ್ಷಿಕವಾಗಿ 6ರಿಂದ 7 ನೇ ತರಗತಿ ಗಂಡು ಮಕ್ಕಳಿಗೆ ರೂ.900-00 ಮತ್ತು ಹೆಣ್ಣು ಮಕ್ಕಳಿಗೆ 1000-00 ರಂತೆ, ವಾರ್ಷಿಕವಾಗಿ 8ನೇ ತರಗತಿ ಗಂಡು ಮಕ್ಕಳಿಗೆ ರೂ.1000-00 ಮತ್ತು ಹೆಣ್ಣು ಮಕ್ಕಳಿಗೆ 1100-00 ರಂತೆ, ವಿದ್ಯಾರ್ಥಿಗಳಿಗ ಹಾಗೂ ವಾರ್ಷಿಕವಾಗಿ 10ನೇ ತರಗತಿ ಗಂಡು ಮಕ್ಕಳಿಗೆ ರೂ.2500-00 ಮತ್ತು ಹೆಣ್ಣು ಮಕ್ಕಳಿಗೆ 2500-00 ರಂತೆ ವಿದ್ಯಾರ್ಥಿವೇತನ ಮಂಜೂರಾತಿ ನೀಡಲಾಗುವುದು.
5)ಮೊರಾರ್ಜಿದೇಸಾಯಿ ಮಾದರಿ ವಸತಿ ಶಾಲೆಗಳು
ಜಿಲ್ಲೆಯಲ್ಲಿ ಒಟ್ಟು 2 ಮೊರಾರ್ಜಿದೇಸಾಯಿ ಮಾದರಿ ವಸತಿ ಶಾಲೆಗಳು ನಡೆಯುತ್ತಿದ್ದು 6 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ/ಪ.ವರ್ಗ ಹಾಗೂ ಇತರೆ ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು. ಪ್ರತಿ ವರ್ಷ 6 ನೇ ತರಗತಿಗೆ 50 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುವೂದು. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು. ನಿಗಧಿ ಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಿಗಧಿ ಪಡಿಸಿದ ದಿನಾಂಕದಂದು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ/ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಸದರಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇರೆಗೆ ಅವರು ಕೇಳಿರುವ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಲಾಗುವುದು. ಶೇ.75 ರಷ್ಟು ಪ.ವರ್ಗದ ಹಾಗೂ ಶೇ. 25 ರಷ್ಟು ಪ.ಜಾತಿ ಹಾಗೂ ಇತರೆ ಜಾತಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು. ಮಾಹೆಯಾನ ರೂ.1400-00 ಪ್ರತಿ ವಿದ್ಯಾರ್ಥಿಗೆ ಊಟ, ತಿಂಡಿ ವೆಚ್ಚಕ್ಕೆ ವಿನಿಯೋಗಿಸಲಾಗುವೂದು. ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ , ತಿಂಡಿ, ವಸತಿ ಹಾಗೂ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 500 ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆಯುತ್ತಿರುತ್ತಾರೆ.
6)ಕಿತ್ತೂರು ರಾಣಿ ಚನ್ನಮ್ಮ ಬಾಲಕೀಯರ ವಸತಿ ಶಾಲೆಗಳು
ಜಿಲ್ಲೆಯಲ್ಲಿ ಒಟ್ಟು 2 ಕಿತ್ತೂರು ರಾಣಿ ಚನ್ನಮ್ಮ ಬಾಲಕೀಯರ ವಸತಿ ಶಾಲೆಗಳು ನಡೆಯುತ್ತಿದ್ದು 6 ರಿಂದ 12 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ ವರ್ಗದ ಹಾಗೂ ಇತರೆ ಜಾತಿ ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು. ಪ್ರತಿ ವರ್ಷ 6 ನೇ ತರಗತಿಗೆ 50 ವಿದ್ಯಾರ್ಥಿನಿಯರನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು.ನಿಗಧಿ ಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಿಗಧಿ ಪಡಿಸಿದ ದಿನಾಂಕದಂದು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲಾ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಸದರಿ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇರೆಗೆ ಅವರು ಕೇಳಿರುವಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಲಾಗುವೂದು. ಶೇ. 75 ರಷ್ಟು ಪ.ವರ್ಗದ , ಶೇ.25 ರಷ್ಟು ಪ.ಜಾತಿ ಹಾಗೂ ಇತರೆ ಜಾತಿಯ ಹೆಣ್ಣು ಮಕ್ಕಳಿಗೆ ಪ್ರವೇಶ ಅವಕಾಶಕಲ್ಪಿಸಲಾಗುವೂದು. ಮಾಹೆಯಾನ ರೂ.1400-00 ವೆಚ್ಚದಲ್ಲಿ ಊಟ, ತಿಂಡಿ ಸೌಲಭ್ಯ ಕಲ್ಪಿಸಲಾಗುತ್ತದೆ. ದಾಖಲಾದ ಬಾಲಕೀಯರಿಗೆ ಊಟ,ವಸತಿ ಹಾಗೂ ಶೈಕ್ಷಣಿಕ ಸೌಲಭ್ಯವನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 500 ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯುತ್ತಿದ್ದಾರೆ.
7)ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳು
ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ವರ್ಗದ ಅರ್ಹ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ನಿಗಧಿ ಪಡಿಸಿದ ದರಗಳಂತೆ ಮುಂಜೂರು ಮಾಡಲಾಗುವೂದು. ಸದರಿ ವಿದ್ಯಾರ್ಥಿವೇತನಕ್ಕೆ ಪೋಷಕರ ವರಮಾನ ರೂ.1.45ಲಕ್ಷ ಮೀರದಿದ್ದಲ್ಲಿ ಪೂರ್ಣ ನಿರ್ವಹಣಾ ವೆಚ್ಚ ಹಾಗೂ ಶುಲ್ಕ ಪಾವತಿಸಲಾಗುವೂದು. ವಿದ್ಯಾರ್ಥಿಯು ಖಾಯಂ ನೌಕರನಾಗಿದ್ದರೆ ಈ ವಿದ್ಯಾರ್ಥಿವೇತನಕ್ಕೆ ಅರ್ಹತೆ ಇರುವೂದಿಲ್ಲ. ಕುಟುಂಬದಲ್ಲಿ ಎರಡು ಜನ ಗಂಡು ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಹೆಣ್ಣು ಮಕ್ಕಳಿಗೆ ನಿರ್ಭಂಧವಿರುವೂದಿಲ್ಲ. ಸಂಬಂಧಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಂದ ಅರ್ಜಿಗಳನ್ನು ಸಂಬಂಧಿಸಿದ ವಿದ್ಯಾಸಂಸ್ಥೆಗಳಿಗೆ ಒದಗಿಸಲಾಗುವೂದು.
ವಿವರ
ಡೇ ಸ್ಕಾಲರ್
ಹಾಸ್ಟಲರ್
ಷರಾ
ಗ್ರೂಫ್ ಎ
550-00
1200-00
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೆ
ಗ್ರೂಫ್ ಬಿ
530-00
820-00
ಸ್ನಾತಕೋತ್ತರ ಮತ್ತು ಪಾಲಿಟೆಕ್ನಿಕ್ ಕೋರ್ಸುಗಳಿಗೆ
ಗ್ರೂಫ್ ಸಿ
300-00
570-00
ಪದವಿ ಮತ್ತು ಇತರೆ ಕೋರ್ಸುಗಳಿಗೆ
ಗ್ರೂಫ್ ಡಿ
230-00
380-00
ಪಿ.ಯು.ಸಿ ಮತ್ತು ಐ.ಟಿ.ಐ ಕೋರ್ಸುಗಳಿಗೆ
8)ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರಾತಿ
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳೊಂದಿಗೆ ಸ್ಪರ್ದಾತ್ಮಕ ಮನೋಭಾವನೆ ಬೆಳೆಸಿಕೊಳ್ಳಲು ಹಾಗೂ ಶಿಕ್ಷಣ ಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಪಿ.ಯು.ಸಿ, ಅಂತಿಮ ಪದವಿ, ಸ್ನಾತಕೋತ್ತರ ಅಂತಿಮ ಪರೀಕ್ಷೆಯಲ್ಲಿ ಮತ್ತು ಅಂತಿಮ ವರ್ಷದ ಇಂಜಿನಿಯರಿಂಗ್ , ವೈದ್ಯಕೀಯ, ಕೃಷಿ, ಪಶುವೈದ್ಯಕೀಯ ಪರೀಕ್ಷೆಗಳಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಬಹುಮಾನ ಹಣ ನೀಡಲಾಗುವೂದು. ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳು ಪ್ರಾರಂಭವಾದ ಸಂದರ್ಭದಲ್ಲಿ ಸಂಬಂಧಿಸಿದ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಅರ್ಜಿ ಆಹ್ವಾನಿಸುವರು. ಸದರಿ ಕಛೇರಿಗಳಿಂದ ಅರ್ಜಿ ಪಡೆದು ನಿಗಧಿ ಪಡಿಸಿದ ಕೊನೆಯ ದಿನಾಂಕದೊಳಗೆ ಅವರಿಗೆ ಅರ್ಜಿ ಸಲ್ಲಿಸಿದರೆ ಈ ಬಹುಮಾನ ಹಣವನ್ನು ಪಡೆಯಬಹುದಾಗಿರುತ್ತದೆ.
9)ಪ್ರವಾಸ ವೆಚ್ಚಗಳು
ಮೆಟ್ರಿಕ್ ನಂತರದ ಮತ್ತು ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ವರ್ಗದ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಧಿಯಲ್ಲಿ ಶೈಕ್ಷಣಿಕ ಪ್ರವಾಸ ಕಡ್ಡಾಯವಾಗಿದ್ದ ಪಕ್ಷದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸ ವೆಚ್ಚ ಮುಂಜೂರು ಮಾಡಲಾಗುವುದು. ಸಂಬಂಧಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಈ ಯೋಜನೆಯಲ್ಲಿ ಶೈಕ್ಷಣಿಕ ಪ್ರವಾಸ ಮಾಡಿದ ವಿದ್ಯಾರ್ಥಿಗಳ ವಿವರಗಳನ್ನು ಆಯಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಿಂದ ಶೈಕ್ಷಣಿಕ ಪ್ರವಾಸವು ಕಡ್ಡಾಯವೆಂದು ದೃಢೀಕರಣದೊಂದಿಗೆ ನಿಗಧಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕಾಗಿರುತ್ತದೆ. ಅದರಂತೆ ಅರ್ಹರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ರೂ.1000-00 ಅಥವಾ ವಾಸ್ತವಿಕ ವೆಚ್ಚ ಯಾವುದು ಕೆಡಿಮೆಯೋ ಅದನ್ನು ಮಂಜೂರು ಮಾಡಲಾಗುವುದು.
10)ಕಾನೂನು ಪದವೀಧರರಿಗೆ ಶಿಷ್ಯ ವೇತನ
ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಕಾನೂನು ಪದವಿ ಪಡೆದಿದ್ದಲ್ಲಿ ಆಡಳಿತ ನ್ಯಾಯಾಧೀಕರಣದಲ್ಲಿ ಹೆಚ್ಚು ಜ್ಙಾನಗಳಿಸಲು ನೆರವಾಗುವಂತೆ ತರಭೇತಿ ನೀಡಲಾಗುವೂದು.ಈ ತರಭೇತಿಯ ಅವಧಿ 4 ವರ್ಷಗಳಾಗಿರುತ್ತದೆ. 20 ವರ್ಷಗಳಿಗೂ ಮೇಲ್ಪಟ್ಟು ವಕೀಲಿ ವೃತ್ತಿಯಲ್ಲಿ ಅನುಭವವಿರುವ ವಕೀಲರಲ್ಲಿ ಅಥವಾ ಜಿಲ್ಲಾ ಸರ್ಕಾರಿ ಸತ್ರ ನ್ಯಾಯಾಲಯ ಅಭಿಯೋಜಕರಲ್ಲಿತರಭೇತಿಗಾಗಿ ನಿಯೋಜಿಸಲಾಗುವುದು. ಮಾಹೆಯಾನ ರೂ.2000-00 ಶಿಷ್ಯವೇತನವನ್ನು 4 ವರ್ಷಗಳು ನೀಡಲಾಗುತ್ತದೆ.
11)ಗಿರಿಜನ ಉಪಯೋಜನೆ ಕಾರ್ಯಕ್ರಮಗಳು
ಗ್ರಾಮಾಂತರ ಪ್ರದೇಶಗಳಲ್ಲಿ ಪ.ವರ್ಗದ ಸರ್ವಾಂಗೀಣ ಅಭಿವೃದ್ದಿಗಾಗಿ ತಾಲ್ಲೂಕು ಪಂಚಾಯತ್ ಹಾಗೂ ಅದರ ಅಧೀನದ ಅಭಿವೃದ್ದಿ ಇಲಾಖೆಗಳ ಮುಖಾಂತರ ಈ ಯೋಜನೆ ಕಾರ್ಯಗತಗೊಳಿಸಲಾಗುವೂದು. ಪ್ರತಿ ಆರ್ಥಿಕ ವರ್ಷಗಳಲ್ಲಿ ಈ ಹಿಂದೆ ಯಾವುದೇ ಸೌಲಭ್ಯ ವನ್ನು ಪಡೆಯದ, ಹಾಗೂ ಅಭಿವೃದ್ದಿಯಲ್ಲಿ ಹಿಂದುಳಿದ ಮತ್ತು ಹೆಚ್ಚಿನ ಸಮಖ್ಯೆಯಲ್ಲಿ ಪ.ವರ್ಗದ ಕುಟುಂಬಗಳು ವಾಸವಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಈ ಗ್ರಾಮಗಳಿಗೆ ಆಗಬೇಕಾದ ಅಗತ್ಯ ಮೂಲಭೂತ ಸೌಕರ್ಯ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕಲ್ಪಿಸಿರುವ ಸೌಲಭ್ಯಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಈ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಹಾಗೂ ಅದರ ಅಧೀನದ ಅಭಿವೃದ್ದಿ ಇಲಾಖೆಯಿಂದ ಅನುಷ್ಟಾನಗೊಳಿಸಲಾಗುವೂದು. ಈ ಕಾರ್ಯಕ್ರಮವನ್ನು ರೇಷ್ಮೆ, ತೋಟಗಾರಿಕೆ, ಜಲಸಂಪನ್ಮೂಲ , ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ ಇಲಾಖೆ, ಕೈಗಾರಿಕಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯತ್ ವತಿಯಿಂದ ಅನುಷ್ಟಾನಗೊಳಿಸಲಾಗುವೂದು.
12)ಮೆಟ್ರಿಕ್ ಪೂರ್ವ ಖಾಸಗಿ ವಿದ್ಯಾರ್ಥಿನಿಲಯಗಳು
ವಿವಿಧ ತಾಲ್ಲೂಕುಗಳಲ್ಲಿರುವ ಖಾಸಗಿ ಅನುಧಾನಿತ ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ ಇಲಾಖೆಯಿಂದ ಅನುಧಾನ ಪಡೆದು ಸಂಸ್ಥೆಯವರು ಅರ್ಹ ವಿದ್ಯಾರ್ಥಿಗಳನ್ನು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿರವರಿಂದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿಕೊಂಡು ಇದರಲ್ಲಿ ಶೇ.75 ಪ.ವರ್ಗ, ಶೇ.25 ಪ.ಜಾತಿ ಮತ್ತು ಇತರೆ ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವೂದು.
13)ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚಗಳು
ಪ.ವರ್ಗದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ನಂತರ ತಮ್ಮ ವ್ಯಾಸಂಗವನ್ನು ಮುಂದುವರಿಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಅಂಗೀಕೃತ ಕಾಲೇಜುಗಳು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ದಾಖಲಾಗಿ ಇಲಾಖೆಯು ನಡೆಸುವ ವಿದ್ಯಾರ್ಥಿನಿಲಯದಲ್ಲಿರುವವರಿಗೆ ಅವರ ವಿದ್ಯಾಬ್ಯಾಸಕ್ಕೆ ಅನುಕೂಲ ಕಲ್ಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವ ಮತ್ತು ವಿದ್ಯಾರ್ಥಿನಿಲಯದಲ್ಲಿರುವ ಪ.ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ನಿಗಧಿಪಡಿಸಿರುವ ಭಾರತ ಸರ್ಕಾರದ ವಿದ್ಯಾರ್ಥಿವೇತನ ಮಂಜೂರಾತಿ ನೀಡಿ ಹಾಸ್ಟೆಲ್ ನಲ್ಲಿ ವೆಚ್ಚವಾಗುವ ಊಟದ ದರಕ್ಕೆ ವ್ಯತ್ಯಾಸದ ಮೊಬಲಗನ್ನು ಆಯಾ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚವನ್ನಾಗಿ ಪಾವತಿಸಲಾಗುವೂದು.
ಇಲಾಖೆಯ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಅನುದಾನಗಳ ವಿವರ(2016-17 ಡಿಸಂಬರ್ ಅಂತ್ಯಕ್ಕೆ)
ಕ್ರಮ ಸಂಖ್ಯೆ
ಕಾರ್ಯಕ್ರಮದ ಹೆಸರು
ಒದಗಿಸಲಾದ ಅನುಧಾನ( ರೂ. ಲಕ್ಷಗಳಲ್ಲಿ)
ಖರ್ಚಾದ ಅನುಧಾನ (ರೂ. ಲಕ್ಷಗಳಲ್ಲಿ)
ಉಳಿಕೆ
1)
ಜಿಲ್ಲಾಪಂಚಾಯತ್ ಯೋಜನೆ
335.00
114.74
220.26
2)
ಜಿಲ್ಲಾ ಪಂಚಾಯತ್ ಯೋಜನೇತರ
557.00
56.81
500.19
3)
ತಾಲ್ಲೂಕು ಪಂಚಾಯತ್ ಯೋಜನೆ
335.00
64.17
570.83
4)
ತಾಲ್ಲೂಕು ಪಂಚಾಯತ್ ಯೋಜನೇತರ
75.00
0
75.00
1.ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು
2.ಉಪ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು
ಜಿಲ್ಲಾ ಮಟ್ಟದಲ್ಲಿ
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳುತಾಲ್ಲೂಕು ಮಟ್ಟದಲ್ಲಿ
ಸಹಾಯಕ ನಿರ್ದೇಶಕರು ಗ್ರೇಡ್-1/2 ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು.
ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4 (1) ಎ ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ /ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಸಾರ್ವಜನಿಕ ಮಾಹಿತಿ ಅಧಿಕಾರಿ,
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ,
ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ,
ಹಾಗೂ ಗಿರಿಜನ ವಿಸ್ತರಣಾಧಿಕಾರಿ, ತುಮಕೂರು ಜಿಲ್ಲೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ತುಮಕೂರು ಜಿಲ್ಲೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಛೇರಿ,
ಮೂರನೇ ಮುಖ್ಯ ರಸ್ತೆ, ಗಾಂಧಿನಗರ,
ಎಲ್.ಐ.ಸಿ ಕಛೇರಿ ಹತ್ತಿರ.
ತುಮಕೂರು-572102.ಇಲಾಖೆಯ ವಿವಿಧ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು
ಕ್ರ ಸಂ ಅಧಿಕಾರಿಗಳ ಹೆಸರು ಹುದ್ದೆ ಜಿಲ್ಲೆ/ತಾಲ್ಲೂಕು ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆ 1ಶ್ರೀ ಕೆ ಆರ್ ರಾಜಕುಮಾರ್ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತುಮಕೂರು ಜಿಲ್ಲೆ 0816-2279153 9731329444 2ಶ್ರೀ ಬಿ ಎನ್ ಲಕ್ಷ್ಮಿನರಸಿಂಹಯ್ಯ ಗಿರಿಜನ ಕಲ್ಯಾಣ ವಿಸ್ತರಾಣಾಧಿಕಾರಿ ತುಮಕೂರು ಜಿಲ್ಲೆ 0816-2279153 7259979118 3ಶ್ರೀಮತಿ ಶಮೀಮ್ ಉನ್ನೀಸ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ತುಮಕೂರು ತಾಲ್ಲೂಕು 0816-2251361 9480943205 4ಶ್ರೀ ಸಿ ಶ್ರೀನಿವಾಸ್ ಸಹಾಯಕ ನಿರ್ದೇಶಕರು ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ ಗುಬ್ಬಿ ತಾಲ್ಲೂಕು 08131-223694 9480943198 5ಶ್ರೀ ಶಂಕರಮೂರ್ತಿ ಹೆಚ್ ಎಸ್ ಸಹಾಯಕ ನಿರ್ದೇಶಕರು ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ ತಿಪಟೂರು ತಾಲ್ಲೂಕು 08134-252375 9480843204 6ಶ್ರೀ ಲೋಕೇಶ್ ಸಹಾಯಕ ನಿರ್ದೇಶಕರು ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ ಚಿಕ್ಕನಾಯಕನಹಳ್ಳಿ ತಾಲ್ಲೂಕು 08133-267491 9480843197 7ಶ್ರೀ ದೇವಲಾನಾಯಕ್ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಶಿರಾ ತಾಲ್ಲೂಕು 08135-276530 9480843203 8ಶ್ರೀ ಮಹದೇವಸ್ವಾಮಿ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಮಧುಗಿರಿ ತಾಲ್ಲೂಕು 08137-283346 9480843201 9ಶ್ರೀ ಲಕ್ಷ್ಮಿನರಸಿಂಹಯ್ಯ ಬಿ ಎನ್ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು. ಪಾವಗಡ ತಾಲ್ಲೂಕು 08136-245977 7259979118 10ಶ್ರೀ ಎಸ್ ರಾಮಣ್ಣ ಸಹಾಯಕ ನಿರ್ದೇಶಕರು ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ ಕೊರಟಗೆರೆ ತಾಲ್ಲೂಕು 08138-232843 9480843199 11ಶ್ರೀ ಮಲ್ಲಿಕಾರ್ಜುನ ಸಹಾಯಕ ನಿರ್ದೇಶಕರು ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ ಕುಣಿಗಲ್ ತಾಲ್ಲೂಕು 08132-221113 9480843200 12ಶ್ರೀಮತಿ ರುಕ್ಮಿಣಿ ಸಹಾಯಕ ನಿರ್ದೇಶಕರು ಗ್ರೇಡ್-2 ಸಮಾಜ ಕಲ್ಯಾಣ ಇಲಾಖೆ ತುರುವೇಕೆರೆ ತಾಲ್ಲೂಕು 08139-287057 9480843206
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||