ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ

ಇಲಾಖೆಯ ಬಗ್ಗೆ ಪರಿಚಯ ಹಾಗೂ ಆಡಳಿತಾತ್ಮಕ ಚೌಕಟ್ಟು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹಲವಾರು ಸಾಮಾಜಿಕ ಶಾಸನಗಳ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವರ್ಗದ ಮಹಿಳೆಯರು ಹಾಗೂ ಮಕ್ಕಳಿಗೆ ನಿಂದನೆ ಹಾಗೂ ಶೋಷಣೆಯಿಂದ ರಕ್ಷಿಸಲು ಕಾರ್ಯಪ್ರವೃತ್ತವಾಗಿದೆ. ಅವರಿಗೆ ರಕ್ಷಣೆ, ಪಾಲನೆ ಮತ್ತು ಪುನರ್ ವಸತಿ ಮುಂತಾದ ಮೂಲ ಮಾನವ ಹಕ್ಕುಗಳನ್ನು ಖಾತ್ರಿಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.

ಇಲಾಖೆಯು ಮಹಿಳೆಯರಿಗೆ ಶಿಕ್ಷಣ ಹಾಗೂ ಅರಿವು ಮೂಡಿಸಿ ಉದ್ಯೋಗ  ಆಧಾರಿತ ವೃತ್ತಿ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿರುವ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಟಾನ ಗೊಳಿಸಲಾಗುತ್ತದೆ ಹಾಗೂ ಇಲಾಖೆಯು 0-6ವರ್ಷ ವಯೋಮಾನದ ಮಕ್ಕಳ   ಆರೋಗ್ಯ ಹಾಗೂ ಪೌಷ್ಟಿಕತೆ ಮಟ್ಟವನ್ನು ಉತ್ತಮ ಪಡಿಸಿ ಆದರ ದೈಹಿಕ, ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬುನಾದಿ ಹಾಕುವ ದೃಷ್ಟಿಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಜಿಲ್ಲಾ ಮಟ್ಟದ ಹಾಗೂ ಕೆಳಗಡೆ ಇಲಾಖೆಯ  ಆಡಳಿತದ ಸಂಘಟನೆ ಕೆಳಕಂಡಂತಿರುತ್ತದೆ.

ಜಿಲ್ಲಾ ಮಟ್ಟ:-  ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆ,
ಸಹಾಯಕರಾಗಿ:
1. ಜಿಲ್ಲಾ ನಿರೂಪಣಾಧಿಕಾರಿಗಳು,
2. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಅಧಿಕಾರಿಗಳು ಇರುತ್ತಾರೆ.

ತಾಲ್ಲೂಕು ಮಟ್ಟ:-  ಪ್ರತಿ ತಾಲ್ಲೂಕಿನಲ್ಲಿ ಒಬ್ಬರಂತೆ 10ಜನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತುಮಕೂರು (ನ)ದಲ್ಲಿ ಒಬ್ಬರು ಒಟ್ಟು 11ಜನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪನಿರ್ದೇಶಕರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ತುಮಕೂರು ನಗರದಲ್ಲಿರುವ ಕಛೇರಿಗಳು
1.ಬಾಲಕಿಯರ ಬಾಲಮಂದಿರದಲ್ಲಿ- ಅಧೀಕ್ಷಕರು,
2.ಸ್ವೀಕಾರ ಕೇಂದ್ರದಲ್ಲಿ ಅಧೀಕ್ಷಕರು
3.ಪರಿವೀಕ್ಷಣಾಧಿಕಾರಿಗಳು- ಪರಿವೀಕ್ಷಣಾಧಿನಿಯಮ  ಇವರೆಲ್ಲರೂ ಉಪನಿರ್ದೇಶಕರ ಅಧೀನದಲ್ಲಿ ಕೆಲಸನಿರ್ವಹಿಸುತ್ತಿದ್ದಾರೆ.

ಇಲಾಖೆಯ ಧ್ಯೇಯ ಹಾಗೂ ಮುನ್ನೋಟ

ಮಹಿಳೆಯರ ಸಾಮಾಜಿಕ ಆರ್ಥಿಕ ಸಬಲೀಕರಣ ಸಾಧಿಸುವ ಹಾಗೂ ಮಕ್ಕಳಿಗೆ ರಕ್ಷಣೆ ಪಾಲನೆ ಪೋಷಣೆ ಹಾಗೂ ಪುನರ್ ವಸತಿ ಒದಗಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನ ಗೊಳಿಸಿರುವುದು ಇಲಾಖೆಯ ಮುಖ್ಯ ಧ್ಯೇಯವಾಗಿರುತ್ತದೆ.

ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳು :-

ಸಮಗ್ರ ಶಿಶು ಅಭಿವೃದ್ಧಿ ಯೋಜನೆ : -

ಸಮಗ್ರ ಶಿಶು ಅಭಿವೃದ್ಧಿ ಸೇವೆ ಯೋಜನೆಯ ಉದ್ದೇಶಗಳು

ಒಟ್ಟು ಜನಸಂಖ್ಯೆಯ ಶೇ.17ರಷ್ಟು ಜನ 6 ವರ್ಷದವರು. ಬಡತನ ಕಾಯಿಲೆಗಳು, ಅಪೌಷ್ಟಿಕತೆ ಮತ್ತು ಮಾನವ ಸಂಪನ್ಮೂಲ ನಷ್ಟವಾಗುತ್ತಿತ್ತು. ಮಕ್ಕಳು ಎಳೆ ವಯಸ್ಸಿನಲ್ಲಿ ಕಷ್ಟ ಸಾವು ನೋವು ಅನುಭವಿಸುತ್ತಿದ್ದರು. ಇದನ್ನು ಮನಗೊಂಡು 1972 ರಲ್ಲಿ ಕೇಂದ್ರ ಸರ್ಕಾರದ ಯೋಜನಾ ಸಚಿವರು ತಂಡ ರಚಿಸಿ ಅಧ್ಯಯನ ವರದಿ ನೀಡಲು ಕೋರಿದರು. ಅದರಂತೆ ದೇಶದಲ್ಲಿ ಅಪೌಷ್ಟಿಕತೆ, ವಿಟಮಿನ್ ಗಳ ಕೊರತೆ, ಅತಿಸಾರ ಬೇದಿ, ಚರ್ಮ ರೋಗಗಳು, ಉಸಿರಾಟದ ತೊಂದರೆ, ನಾಯಿಕೆಮ್ಮು, ದಡಾರ, ಬೆಳವಣಿಗೆಯಲ್ಲಿ ಕುಂಠಿತ, ಅಸ್ವಚ್ಛತೆ, ಶಿಶು ಮರಣದರ 130 ರಿಂದ 140, ಮಕ್ಕಳ ಮರಣ ದರ 50 ರಿಂದ 60, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚು, ಕ್ಷಯ ರೋಗ, ತಾಯಂದಿರ ಮರಣ ಹೆಚ್ಚು ಇರವುದು ವರದಿಯಲ್ಲಿ ಕಂಡು ಬಂತು. ಈ ಉದ್ದೇಶವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಗೆ ಬಂತು.
1. 0-6 ವರ್ಷದೊಳಗಿನ ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಹಾಗೂ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು.
2. ಮಗುವಿನ ಮಾನಸಿಕ, ಸಾಮಾಜಿಕ, ದೈಹಿಕ ಸಮರ್ಪಕ ಬೆಳವಣಿಗೆಗೆ ಬುನಾದಿ ಹಾಕುವುದು.
3. ಶಿಶು ಮರಣ ದರ, ಅಪೌಷ್ಠಿಕತೆ, ರೋಗನಿವಾರಣಾ ಹಾಗೂ ಶಾಲೆ ಬಿಡುವ ಘಟನೆಗಳನ್ನು ಕಡಿಮೆ ಮಾಡುವುದು.
4. ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಇತರೆ ಇಲಾಖೆಗಳೊಂದಿಗೆ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು.
5. ಆರೋಗ್ಯ ಶಿಕ್ಷಣನೀಡುವ ಮೂಲಕ ತಾಯಂದಿರಿಗೆ ಸಾಮಾನ್ಯ ಪೌಷ್ಠಿಕ ಹಾಗೂ ಆರೋಗ್ಯ ಅಗತ್ಯತೆಗಳನ್ನು ಪೂರೈಸುವಲ್ಲಿ ಸಬಲರನ್ನಾಗಿ ಮಾಡುವುದು.

ಸೇವೆಗಳು:

0-6 ವರ್ಷದೊಳಗಿನ ಮಕ್ಕಳಿಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡುವುದು.
ಮಕ್ಕಳಿಗೆ ಹಾಗೂ ತಾಯಂದಿರಿಗೆ ರೋಗನಿರೋಧಕ ಚುಚ್ಚುಮದ್ದು ನೀಡುವುದು.
ಆರೋಗ್ಯ ತಪಾಸಣೆ
ಸಲಹಾ ಸೇವೆ
ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಠಿಕ ಶಿಕ್ಷಣ ನೀಡುವುದು
3-6 ವರ್ಷದೊಳಗಿನ ಮಕ್ಕಳಿಗೆ ಶಾಲಾಪೂರ್ವ ಚಟುವಟಿಕೆ ನಡೆಸುವುದು

ತುಮಕೂರಿನ ಜಿಲ್ಲೆಯಲ್ಲಿ 10 ತಾಲ್ಲೂಕುಗಳಿದ್ದು, 11 ಐ.ಸಿ.ಡಿ.ಎಸ್. ಯೋಜನೆಯಗಳಿದ್ದು, ಸಂಪೂರ್ಣವಾಗಿ 3576 ಅಂಗನವಾಡಿ ಕೇಂದ್ರಗಳು ಮತ್ತು 519 ಮಿನಿ ಅಂಗನವಾಡಿ ಕೇಂದ್ರಗಳ ಸೇರಿ ಒಟ್ಟು 4095 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಫಲಾನುಭವಿಗಳ ವರ್ಗಗಳು

* 06 ತಿಂಗಳಿನಿಂದ 06 ವರ್ಷದೊಳಗಿನ ಫಲಾನುಭವಿಗಳಲ್ಲಿ 154696

* ಬಾಣಂತಿಯರು 18227

* ಗರ್ಭಿಣಿಯರು 19823

*ಹರೆಯದ ಬಾಲಕಿಯರು 8164

* ಅಂಗನವಾಡಿ ಕಾರ್ಯಕರ್ತೆ 4095 ಅಂಗನವಾಡಿ ಸಹಾಯಕಿ 3576

ಕಿಶೋರಿ ಶಕ್ತಿ ಯೋಜನೆ:
ಈ ಯೋಜನೆಯಡಿ 11 ರಿಂದ 18 ವರ್ಷದ ವಯಸ್ಸಿನ ಬಾಲಕಿಯರಿಗೆ ದಿನವೊಂದಕ್ಕೆ ರೂ: 5-00 ಗಳ ವೆಚ್ಚದಲ್ಲಿ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಅವರಿಗೆ ಆರೋಗ್ಯ ಹಾಗೂ  ವೈಯುಕ್ತಿಕ ಸ್ವಚ್ಛತೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ.  ಈ ತರಬೇತಿ ಪಡೆದ ಕಿಶೋರಿಯರು ಗ್ರಾಮದಲ್ಲಿ ಆರೋಗ್ಯ ಹಾಗೂ ವೈಯುಕ್ತಿಕ ನಡವಳಿಕೆಗಳ ಬಗ್ಗೆ ಪ್ರಾಯಸ್ತ ಹೆಣ್ಣುಮಕ್ಕಳಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಾರೆ.

ಶಿಶುಪಾಲನಾ ಕೇಂದ್ರಗಳ ಯೋಜನೆ :
ವ್ಯವಸಾಯ ಹಾಗೂ ಇನ್ನಿತರ ವೃತ್ತಿ ನಿರತ ಮಹಿಳೆಯರ 0-3 ವರ್ಷದ ಮಕ್ಕಳಿಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆಶ್ರಯ ನೀಡಲು ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಧನಸಹಾಯ ನೀಡಲಾಗುವುದು.  ಶಿಶುಪಾಲನಾ ಕೇಂದ್ರದ ಶೇಕಡ.90ರಷ್ಟು ಅನುದಾನವನ್ನು ಜಿಲ್ಲಾ ಪಂಚಾಯತ್ ನಿಂದ ಉಳಿದ ಶೇಕಡ.10ರಷ್ಟು ಅನುದಾನವನ್ನು ಸ್ವಯಂ ಸೇವಾ ಸಂಸ್ಥೆಯರು ಭರಿಸಬೇಕಾಗುತ್ತದೆ. ಜಿಲ್ಲೆಯಲ್ಲಿ 10 ಶಿಶುಪಾಲನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಇಲಾಖೆಯ ಯೋಜನೆಗಳು

ಭಾಗ್ಯಲಕ್ಷ್ಮಿ ಯೋಜನೆ:-
ಭಾಗ್ಯಲಕ್ಷ್ಮೀ ಯೋಜನೆ ದಿನಾಂಕ:1-4-2006ರಿಂದ ಜಾರಿಯಲ್ಲಿದ್ದು, ಸರ್ಕಾರದ ಆದೇಶ ಸಂ:ಮಮಇ:99:ಮಮಅ:06 ದಿನಾಂಕ:17-10-2006ರಲ್ಲಿ ಸದರಿ ಯೋಜನೆಗೆ ಮಂಜೂರಾತಿ ದೊರೆತಿರುತ್ತದೆ. ಸದರಿ ಆದೇಶನ್ವಯ ಬಡತನ ರೇಖೆಗಿಂತ ಕೆಳಗಿನ ಹಾಗೂ 3ಕ್ಕಿಂತ ಹೆಚ್ಚಿಗೆ ಮಕ್ಕಳು ಅಲ್ಲದ ಕುಟುಂಬದಲ್ಲಿ ಜನಿಸಿರುವ ಮಕ್ಕಳಲ್ಲಿ ಗರಿಷ್ಟ ಇಬ್ಬರು ಹೆಣ್ಣು ಮಕ್ಕಳಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ. ಲಿಂಗಾನುಪಾತವನ್ನು ಸಮತೋಲನಗೊಳಿಸುವುದು. ಹೆಣ್ಣು ಮಗುವಿನ ಸ್ಥಾನಮಾನವನ್ನು ಕುಟುಂಬದಲ್ಲಿ  ಹಾಗೂ ಸಮಾಜದಲ್ಲಿ ಉತ್ತಮಗೊಳಿಸುವುದು.ಬಾಲ್ಯವಿವಾಹ ತಡೆಗಟ್ಟುವುದು.

ಮಾನದಂಡಗಳು :-
ಕುಟುಂಬವು ಬಿ.ಪಿ.ಎಲ್. ಕಾರ್ಡ್ ಹೊಂದಿರಬೇಕು.
ಮಗುವಿನ ಜನನ ನೋಂದಣಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಸೌಲಭ್ಯವನ್ನು ಕುಟುಂಬದ 02 ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಕುಟುಂಬವು 02 ಮಕ್ಕಳನ್ನು ಮೀರಿರಬಾರದು ಹಾಗೂ ಕುಟುಂಬದ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆ ಪದ್ದತಿಯನ್ನು ಆಳವಡಿಸಿಕೊಂಡಿರಬೇಕು.
ಆರೋಗ್ಯ ಇಲಾಖೆ ಕಾರ್ಯಕ್ರಮದಂತೆ ರೋಗ ನಿರೋಧಕ ಚುಚ್ಚಮದ್ದನ್ನು ಹಾಕಿಸಿರಬೇಕು.

ಸೌಲಭ್ಯಗಳು .
ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ದಿನಾಂಕ:01-04-2006 ರಿಂದ 31-07-2008 ರವರೆಗೆ ಜನಿಸಿ ಯೋಜನೆಯಡಿ ನೋಂದಾಯಿಸಲ್ಪಟ್ಟ 1ನೇ ಫಲಾನುಭವಿಗೆ ರೂ.34751/- ಹಾಗೂ 2ನೇ ಫಲಾನುಭವಿಗೆ ರೂ.40619/- ಮತ್ತು ವಿದ್ಯಾರ್ಥಿ ವೇತನ ಸೌಲಭ್ಯ.
ದಿನಾಂಕ:01-08-2008 ರಿಂದ ಜನಿಸಿದ ಪರಿಪಕ್ವ ಮೊತ್ತ 1ನೇ ಫಲಾನುಭವಿಗೆ ರೂ.100052/-, 2ನೇ ಫಲಾನುಭವಿಗೆ ರೂ.100097/-
ದಿನಾಂಕ:01-04-2006 ರಿಂದ 31-07-2008 ರವರೆಗೆ ಜನಿಸಿದ ಮಗುವಿಗೆ ಪ್ರತಿ ವರ್ಷ ಗರಿಷ್ಟ ರೂ.25000/-ಗಳ ಆರೋಗ್ಯ ವಿಮೆ ಹಾಗೂ ವಿಮಾದಾರ ಪೋಷಕ ಅಪಘಾತದಲ್ಲಿ ಮರಣ ಹೊಂದಿದ್ದರೆ ರೂ.100000/-, ಸಹಜ ಮರಣ ಹೊಂದಿದ್ದರೆ ರೂ.42500/- ನೀಡಲಾಗುವುದು.
ದಿನಾಂಕ:01-08-2008 ರಿಂದ ಜನಿಸಿದ ಮಗುವಿನ ವಿಮಾದಾರ ಪೋಷಕ ಅಪಘಾತದಲ್ಲಿ ಮರಣ ಹೊಂದಿದ್ದರೆ ರೂ.75000/- ಸಹಜ ಮರಣ ಹೊಂದಿದ್ದರೆ ರೂ.30000/-
ಮಗುವಿಗೆ 15 ವರ್ಷ ತುಂಬಿ 10ನೇ ತರಗತಿ ಪಾಸಾದ ನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ರೂ.50000/-ಗಳವರೆಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ.

ಸ್ತ್ರೀಶಕ್ತಿ ಯೋಜನೆ:- ಯೋಜನೆ ಗ್ರಾಮೀಣ ಮಹಿಳೆಯರಿಗೆ ಅಧಿಕಾರ ಮತ್ತು ಅವುಗಳನ್ನು ಸ್ವಯಂ ಮಾಡಲೇಬೇಕಾದ ಮಾಡಲು ವಸ್ತುನಿಷ್ಠ 2000-01ರ ಸಮಯದಲ್ಲಿ ಆರಂಭಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಬಡತನದ ರೇಖೆಗಿಂತ ಕೆಳಗೆ ವಾಸಿಸುತ್ತಿರುವ ಮಹಿಳೆಯರಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸುವಂತಹ ಹಾಗೂ ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಪ್ರಕ್ರಿಯೆಯನ್ನು ಬಲಪಡಿಸುವುದು. ಸ್ವಸಹಾಯ ಗುಂಪುಗಳನ್ನು ರಚಿಸಿ ಮಹಿಳೆಯರನ್ನು ಸಂಘಟಿಸುವುದರ ಮುಖಾಂತರ ಅವರಲ್ಲಿ ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಿ ಸಂಪನ್ಮೂಲಗಳ ಹತೋಟಿ ಹಾಗೂ ಸಮೀಪ್ಯವನ್ನು ಸಾಧಿಸುವುದು. ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ ಆವರಲ್ಲಿ ಆರ್ಥಿಕ ಸ್ಥಿರತೆಯನ್ನು ಮೂಡಿಸುವುದು, ತನ್ಮೂಲಕ ಬಡತನ ನಿವಾರಣೆ ಮಾಡುವುದು. ಈ ಯೋಜನೆಯಡಿ ಗುರಿ ಸಾಧಿಸಲು ಸ್ತ್ರೀಶಕ್ತಿ ಗುಂಪುಗಳ ರಚೆನಯಾಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ  ಸೇರಿದ ಮತ್ತು ಇತರೆ ವರ್ಗಗಳಿಂದ ಕೂಡಿದ ಗ್ರಾಮೀಣ ಪ್ರದೇಶದಲ್ಲಿ 10234 ಮತ್ತು ನಗರ ಪ್ರದೇಶದಲ್ಲಿ 238 ಸ್ತ್ರೀಶಕ್ತಿ ಗುಂಪುಗಳಿದ್ದು ಒಟ್ಟು ಜಿಲ್ಲೆಯಲ್ಲಿ 10472 ಸ್ತ್ರೀಶಕ್ತಿ ಗುಂಪುಗಳು ರಚನೆಯಾಗಿವೆ. ತರಬೇತಿ ಲಿಂಗ, ಸಂವಹನ, ಕೌಶಲ್ಯಗಳು, ನಾಯಕತ್ವ ಗುಣಗಳು ಮತ್ತು ಪುಸ್ತಕ ಕೀಪಿಂಗ್ ಬಗ್ಗೆ ಸದಸ್ಯರಿಗೆ  ತರಬೇತಿ ನೀಡಲಾಗಿದೆ. ಮಹಿಳಾ ಸಬಲೀಕರಣದ ಉದ್ದೇಶದಿಂದ 15 ರಿಂದ 20 ಜನ ಸಮಾನ ಮನಸ್ಕ ಮಹಿಳೆಯರು ಗುಂಪು ರಚಿಸಿಕೊಂಡು ಪ್ರತಿವಾರ ಸಭೆ ಮಾಡಿ ಉಳಿತಾಯ ಮಾಡಿ, ಆಂತರಿಕ ಸಾಲ ಪಡೆದು ಬ್ಯಾಂಕ್ ಮತ್ತಿತರ ಆರ್ಥಿಕ ಸಂಸ್ಥೆಗಳ ನೆರವು ಪಡೆದು ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು.

ಜಿಲ್ಲೆಯ ಎಲ್ಲಾ ಗುಂಪುಗಳಿಗೆ ತಲಾ ರೂ.5000/- ದಂತೆ ಸುತ್ತಿನಿಧಿ ನೀಡಲಾಗಿದೆ. ಅತ್ಯಧಿಕ ಉಳಿತಾಯ ಮಾಡಿದ ಗುಂಪುಗಳಿಗೆ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಗುಂಪುಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಸಾಂತ್ವನ ಯೋಜನೆ:-
ದೌರ್ಜನ್ಯ ಹಾಗೂ ಅತ್ಯಾಚಾರಕ್ಕೊಳಪಟಟ ಮಹಿಳೆಯರಿಗೆ ಆರ್ಥಿಕ ಸಹಾಯ, ಕಾನೂನು ಸಹಾಯ ನೀಡುವುದು, ಆಶ್ರಯ ಒದಗಿಸುವುದು ಹಾಗೂ ಸ್ವ ಉದ್ಯೋಗ ಮಾಡಲು ಅನುಕೂಲವಾಗುವಂತೆ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದೇ ಈ ಯೋಜನೆಯ ಉದ್ದೇಶ. ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಹಿಳಾ ಸಹಾಯವಾಣಿ ಸ್ಥಾಪಿಸಲಪ್ಟ್ಟಿದ್ದು, ಈ ಮೂಲಕ ನೊಂದಣೆ ಮಾಡಿದ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಸಮಿತಿಯ ಮುಂದಿಟ್ಟು ಪ್ರಕರಣಗಳ ತೀವ್ರತೆಗನುಗುಣವಾಗಿ ಪರಿಹಾರ ನೀಡಲಾಗುವುದು. ಈ ಮಹಿಳೆಯರ ಸಮಾಲೋಚನೆ ಮತ್ತು ಪುನರ್ವಸತಿ ದೃಷ್ಟಿಯಿಂದ, "ಸಾಂತ್ವನ" ಯೋಜನೆಯಲ್ಲಿ ವರ್ಷ 2001-02 ಸಮಯದಲ್ಲಿ ಆರಂಭಿಸಲಾಯಿತು. ತುಮಕೂರು ಜಿಲ್ಲೆಯಲ್ಲಿ 10 ತಾಲ್ಲೂಕುಗಳಿದ್ದು ಜಿಲ್ಲೆಯಲ್ಲಿ 11 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಾನೂನು ನೆರವು, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ, ದೌರ್ಜನ್ಯ ಸಂತ್ರಸ್ತರಿಗೆ ಆರೋಗ್ಯ ರಕ್ಷಣೆ ನೀಡುವ ಯೋಜನೆ ಗುರಿ, ಆದರೆ ಅವುಗಳನ್ನು ಸಹಾಯ ಸಮಾಜದಲ್ಲಿನ ಇತರ ಮಹಿಳೆಯರು ನಂತಹ ಒಂದು ಜೀವನವನ್ನು ಈ ಮಹಿಳೆಯರಿಗೆ ಅಧಿಕಾರ ಸಲುವಾಗಿ ತರಬೇತಿಯನ್ನು ನೀಡುವ ಮೂಲಕ ಸ್ವಯಂಗೊಳಿಸಿದೆ.
ಅನುಷ್ಟಾನ :- ಪ್ರತಿ ತಾಲ್ಲೂಕಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಸಾಂತ್ವನ ಕೇಂದ್ರಗಳು ಪ್ರಾರಂಭಿಸಲಾಗಿದ್ದು ಮಹಿಳಾ ಸಹಾಯವಾಣಿ ಸ್ಥಾಪಿಸಿ ಉಚಿತಕರೆ 1091 ಹಾಗೂ ಇತರೆ ದೂರವಾಣಿ ಕರೆಗಳು ಮಾಡಿ ಸೌಲಭ್ಯ ಪಡೆಯಬಹುದು.

ಸ್ವಾಧಾರ ಯೋಜನೆ :-  ಶೋಷಣೆಗೊಳಪಟ್ಟ ಮಹಿಳೆಯರು ಪರಿತ್ಯೆಕ್ತೆಯರು, ವೈವಾಹಿಕ ಜೀನದಲ್ಲಿ ತೊಂದರೆಗೊಳಪಟ್ಟವರು ಹಾಗೂ ರಕ್ಷಣೆಯ ಅಗತ್ಯವಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಸಂಸ್ಥೆಯ ಮೂಲಕ ಪಾಲನೆ, ರಕ್ಷಣೆ, ಮಾರ್ಗದರ್ಶನ ತರಬೇತಿ ಇತ್ಯಾದಿಗಳನ್ನು ನೀಡಿ ಅವರು ಸಮಾಜದಲ್ಲಿ ಹೊಂದಾಣಿಕೆ ಮಾಡಿಕೊಂಡು ಜೀವಿಸಲು ಪುನರ್ವಸತಿ ಕಲ್ಪಿಸಿ ಇದರ ಮಧ್ಯೆ ಅನುಪಾಲನೆ ಮಾಡುವಂತಹ ಸಂಸ್ಥೆಗಳಿಗೆ ಅನುದಾನ ನೀಡುವುದೇ ಈ ಯೋಜನೆಯ ಉದ್ದೇಶವಾಗಿರುತ್ತದೆ. ಶಿಕ್ಷಣದ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅವರನ್ನು ಪುನರ್ವಸತಿ. ಕಲ್ಪಿಸುವುದು ಇತ್ಯಾದಿ ವರ್ತನೆಯ ತರಬೇತಿ ಮೂಲಕ ಜಾಗೃತಿ, ಕೌಶಲ್ಯ ಅಭಿವೃದ್ಧಿ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಉತ್ತೇಜನ ನೀಡುವುದು. ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಆಶ್ರಯ, ಆರೈಕೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಈ ಯೋಜನೆಯನ್ನು  ಅನುಷ್ಟಾನಗೊಳಿಸಲಾಗುತ್ತಿದೆ. ತುಮಕೂರಿನಲ್ಲಿ 02 ಸ್ವಾಧಾರ ಕೇಂದ್ರಗಳಿವೆ.

ನಿರ್ಗತಿಕ ಮಕ್ಕಳ ಕುಟೀರಗಳು:-ಈ ಯೋಜನೆಯಡಿ ನಿರ್ಗತಿಕ/ಅನಾಥ/ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆ, ಹಾಗು ಪುನರ್ ವಸತಿ ಕಲ್ಪಿಸುವ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ನಿರ್ಗತಿಕ ಮಕ್ಕಳ ಕುಟೀರಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 16 ಕುಠೀರಗಳಿವೆ.
ಬಾಲಕಿಯರ ವಸತಿ ನಿಲಯಗಳು :- ಗ್ರಾಮಾಂತರ ಪ್ರದೇಶದ  ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಹಾಗೂ ಶಾಲೆ/ಕಾಲೇಜು ಬಿಡುವುದನ್ನು ತಪ್ಪಿಸಲು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಬಾಲಕಿಯರ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ.  ಜಿಲ್ಲೆಯಲ್ಲಿ ತುಮಕೂರು ನಗರ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿದೆ.

ಅಪರಾಧಿಗಳ ಪರಿವೀಕ್ಷಣಾಧಿನಿಯಮ:- ಅಪರಾಧಿಗಳ ಪರಿವೀಕ್ಷಣಾಧಿನಿಯಮವು ರಾಜ್ಯಾಂದ್ಯಂತ ಜಾರಿಯಲ್ಲಿದೆ. ಈ ಅಧಿನಿಯಮದ ಮೇರೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಒಬ್ಬ ಪರಿವೀಕ್ಷಣಾಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಸದರಿ ಅಧಿಕಾರಿಗಳು ಬಾಲಕಲ್ಯಾಣ ಮಂಡಳಿ/ ಬಾಲನ್ಯಾಯಾಲಯದಿಂದ ಕಳುಹಿಸಿದ ಪ್ರಕರಣಗಳ ಮತ್ತು ಅನೈತಿಕ ವ್ಯವಹಾರ (ನಿವಾರಣೆ) ಕಾಯ್ದೆಯ ಮೇರೆಗೆ ವೀಕ್ಷಣಾಲಯ, ರಾಜ್ಯ ನಿಲಯ ಮತ್ತು ಸ್ವೀಕಾರ ಕೇಂದ್ರಗಳಿಗೆ ಬಂದ ನಿವಾಸಿಗಳ ಗೃಹ ತನಿಖಾ ವರದಿಗಳನ್ನು ಮತ್ತು ಪರಿವೀಕ್ಷಣಾಧಿನಿಯಮದ ಮೇರೆಗೆ ಬರುವ ಪ್ರಕರಣಗಳ ತನಿಖೆಯನ್ನು ನಡೆಸುವ ಜೊತೆಗೆ ಬಿಡುಗಡೆಯಾದ ನಿವಾಸಿಗಳ ಮೇಲ್ವಿಚಾರಣೆಯನ್ನು ಮಾಡುತ್ತಾರೆ. ಬಾಲನ್ಯಾಯ ಮಂಡಳಿ (ಮಕ್ಕಳ ರಕ್ಷಣೆ, ಪಾಲನೆ, ಪೋಷಣೆ) ಕಾಯ್ದೆ 2000 ತಿದ್ದುಪಡಿ 2006 ಅನ್ವಯ ಕಾನೂನಿನೊಡನೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಗೃಹ. ಇಲ್ಲಿ ಬಾಲನ್ಯಾಯ ಮಂಡಳಿ (ಜೆ.ಜೆ.ಬೋರ್ಡ್) ಇದ್ದು ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಈ ಕಾಯಿದೆಯಡಿ, ವಯಸ್ಸು 18 ವರ್ಷ ಕೆಳಗಿನ ಅಪರಾಧಿಗಳ ಉತ್ತಮ ನೀತಿ ಪರೀಕ್ಷಣಾವಧಿಯ ಅಡಿಯಲ್ಲಿ ಇರಿಸಲಾಗುತ್ತದೆ. ತನಿಖೆ, ಬಾಲಾಪರಾಧ ವಿಚಾರಣೆಯನ್ನು i.r.o ಅಡಿಯಲ್ಲಿ ಅನೈತಿಕ ಸಂಚಾರ (ತಡೆ) ಕಾಯಿದೆ ಬಾಲಾಪರಾಧಿಗಳ ಮಂಡಳಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಪ್ರಸಂಗಗಳಲ್ಲಿ ನಿಭಾಯಿಸುತ್ತಾರೆ ಸಂದರ್ಭಗಳಲ್ಲಿ ನೀಡಿದ್ದ ಜಿಲ್ಲೆಯ ಒಂದು ಪರಿವೀಕ್ಷಣಾಧಿಕಾರಿ ಇದ್ದು, ಪರಿವೀಕ್ಷಣಾ ಅಪರಾಧಿಗಳ ಕಚೇರಿ ಕಟ್ಟಡ, ಎಂ.ಜಿ.ರಸ್ತೆ, ಜಿಲ್ಲಾ ಬಾಲಭವನ ಕಟ್ಟಡ, ತುಮಕೂರಿನಲ್ಲಿದೆ.

ಬಾಲಮಂದಿರಗಳು :- ಬಾಲನ್ಯಾಯ (ಮಕ್ಕಳ ರಕ್ಷಣೆ, ಪಾಲನೆ, ಪೋಷಣೆ) ಕಾಯ್ದೆ 2000 ತಿದ್ದುಪಡಿ 2006 ಅನ್ವಯ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ಒದಗಿಸಲು ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಮಂದಿರಗಳಿವೆ. ತುಮಕೂರಿನಲ್ ಕುಣಿಗಲ್ ರಸ್ತೆಯಲ್ಲಿನ ಅಮರಜ್ಯೋತಿನಗರದಲ್ಲಿ ಬಾಲಕಿಯರ ಬಾಲಮಂದಿರವಿದೆ. ಮಕ್ಕಳಿಗೆ ತರಬೇತಿ ಮತ್ತು ಪುನರ್ವಸತಿ ಮಕ್ಕಳ ಶಿಕ್ಷಣಕ್ಕೆ ವಸತಿ ನಿರ್ವಹಣೆ ಮತ್ತು ಸೌಲಭ್ಯಗಳನ್ನು ಒದಗಸಿದ್ದು ಅವರ ಪಾತ್ರವನ್ನು ಮತ್ತು ಅವರ ಸಾಮರ್ಥ್ಯಗಳನ್ನು ಅಭಿವೃದ್ಧಿ ಖಚಿತಪಡಿಸಿಕೊಳ್ಳಲು. ಆಹಾರ, ಉಡುಪು, ಹಾಸಿಗೆ ಮತ್ತು ಸರ್ಕಾರ ಆದೇಶಿಸಿದಂತೆ ಪ್ರಮಾಣದ ಪ್ರಕಾರ ನೀಡಲಾಗುತ್ತದೆ.

ಸ್ವೀಕಾರ ಕೇಂದ್ರಗಳು:- ಸ್ವೀಕಾರ ಕೇಂದ್ರಗಳು ಅಲ್ಪಾವಧಿ ವಸತಿಗಾಗಿ ಇದ್ದು, ವಿಧವೆಯರು, ನಿರ್ಗತಿಕರು, ಪರಿತ್ಯೆಕ್ತ ಮಹಿಳೆಯರು, ಸ್ವಯಂ ಪ್ರೇರಿತರಾಗಿ ಬಂದಲ್ಲಿ ಅವರಿಗೆ ತಾತ್ಕಾಲಿಕ ಆಶ್ರಯವನ್ನು ನೀಡಲಾಗುವುದು ಅವರಿಗೆ ಸೂಕ್ತ ಪುನರ್ ವಸತಿ ಕಲ್ಪಿಸುವವರೆಗೂ ಆಶ್ರಯ ನೀಡಲಾಗುವುದು.ಸ್ವೀಕಾರ ಕೇಂದ್ರದಲ್ಲಿ ಅವರಿಗೆ ಪಾಲನೆ, ಆಶ್ರಯ, ರಕ್ಷಣೆ, ನೈತಿಕ ಶಿಕ್ಷಣ, ದೈಹಿಕ ಶಿಕ್ಷಣ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಅವರಿಗೆ ಸರ್ಕಾರದಿಂದ ನಿಗಧಿಪಡಿಸಿದ ಪ್ರಮಾಣದಂತೆ ಆಹಾರ ಹಾಗೂ ವಸ್ತ್ರಗಳನ್ನು ಒದಗಿಸಲಾಗುವುದು. ಪೋಷಣೆ ಮತ್ತು ಆಶ್ರಯದ ಅಗತ್ಯವಿರುವ ಹಾಗೂ ಅನೈತಿಕ ವ್ಯವಹಾರ ಅಧಿನಿಯಮದ ಮೇರೆಗೆ ಬರುವ ಬಾಲಕಿಯರು ಮತ್ತು ಮಹಿಳೆಯರನ್ನು ಸ್ವೀಕರಿಸಿ ಗರಿಷ್ಠ 06 ತಿಂಗಳವರೆಗೆ ಕೇಂದ್ರದಲ್ಲಿ ಇಡುವುದು. ತುಮಕೂರು ನಗರದಲ್ಲಿ ಕುಣಿಗಲ್ ರಸ್ತೆಯ ಅಮರಜ್ಯೋತಿನಗರದಲ್ಲಿ ಸ್ವೀಕಾರ ಕೇಂದ್ರ ಅಸ್ಥಿತ್ವದಲ್ಲಿರುತ್ತದೆ.

ರಾಜ್ಯ ಮಹಿಳಾ ನಿಲಯ :- ಸ್ವೀಕಾರ ಕೇಂದ್ರದಲ್ಲಿ ದಾಖಲಾದ ಹೆಣ್ಣು ಮಕ್ಕಳು ನಿರ್ಗತಿಕರು/ಅನಾಥರು ಅಥವಾ ತಮ್ಮ ಕುಟುಂಬಗಳಿಗೆ ವಾಪಾಸ್ಸು ಹೋಗಲು ನಿರಾಕರಿಸಿದವರಿಗೆ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ನೀಡಲಾಗುವುದು.

ಮಹಿಳಾ ಕಾನೂನು ಪದವೀದರರಿಗೆ ಸಹಾಯಧನ:-
ಕಾನೂನು ಪದವಿ ಪಡೆದಿರುವ ಮಹಿಳೆಯರಿಗೆ ಕಾನೂನು ಆಡಳಿತದಲ್ಲಿ ತರಬೇತಿ ಪಡೆಯಲು ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕುಟುಂಬದ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ 40 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಬೇಕು. ಕಾನೂನು ಪದವಿ ಪಡೆದಿರುವ ಮಹಿಳೆ 35 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಯು ಬಾರ್ ಕೌನ್ಸಿಲ್ ನಲ್ಲಿ ತಮ್ಮ ಹೆಸರನ್ನು ನೊಂದಾಇಸಿರಬೇಕು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ 2 ವರ್ಷ ವಕೀಲಿಕೆ ಮಾಡಿ ಅನುಭವನ ಇರುವ ವಕೀಲರ ಅಧೀನದಲ್ಲಿ ತರಬೇತಿ ಹೊದಿರಬೇಕು. ತರಬೇತಿ ಪಡೆಯಲು ಆಯ್ದೆಯಾದ ಮಹಿಳಾ ಕಾನೂನು ಪದವೀಧರರಿಗೆ ಮಾಹೆಯಾನ ರೂ. 1000 ಮಾತ್ರ ಆರ್ಥಿಕ ಸಹಾಯವನ್ನು ನಾಲ್ಕು ವರ್ಷಗಳವರೆಗೆ ನೀಡಲಾಗುತ್ತದೆ. ತರಬೇತಿಗೆ ನೊಂದಾಯಿಸಿಕೊಳ್ಳಲು ರೂ. 460-00ಗಳನ್ನು ಮಾತ್ರ ಮತ್ತು ಅತ್ಯಾವಶ್ಯಕ ಕಾನೂನು ಪುಸ್ತಕಗಳನ್ನು ಖರೀದಿಸಲು ರೂ.500-00 ಗಳನ್ನು ಮಾತ್ರ ನೀಡಲಾಗುವುದು.

ಮಾದಕ ವಸ್ತುಗಳ ದುರುಪಯೋಗವನ್ನು ನಿವಾರಿಸಲು ಸಹಾಯಧನ:- ಮಾದಕ ವಸ್ತುಗಳ ದುರುಪಯೋಗವನ್ನು ನಿವಾರಿಸಲು ಜಾಗೃತಿ ಮೂಡಿಸುವುದು ಮತ್ತು ಮಾದಕ ವ್ಯಸನಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಸಲಹೆ, ಮಾರ್ಗದರ್ಶನ, ಚಿಕಿತ್ಸೆ, ಅನುಪಾಲನೆ ಮಾಡಿ ಪುನರ್ ವಸತಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕನಿಷ್ಟ ಮೂರು ವರ್ಷಗಳ ಉತ್ತಮ ಸೇವೆ ಸಲ್ಲಿಸಿರುವ ರಾಷ್ಟ್ರಮಟ್ಟದ ಅಥವಾ ಇತರೆ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆಯಡಿ ಕೇಂದ್ರ ಸರ್ಕಾರದ ಧನಸಹಾಯ ಪಡೆಯಲು ಅರ್ಹವಾಗಿರುತ್ತದೆ.  ಇದಲ್ಲದೆ ಸಮಾಜ ಸೇವೆಯಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳನ್ನೊಳಗೊಂಡಂತೆ ವಿಶ್ವವಿದ್ಯನಿಲಯಗಳು ಮತ್ತು ಇತರೆ ಉಚ್ಛಶಿಕ್ಷಣ ಸಂಸ್ಥೆಗಳು ಸಹ ಅನುದಾನಕ್ಕೆ ಅರ್ಹವಾಗಿರುತ್ತದೆ.

ಈ ಯೋಜನೆಯಡಿ ಈ ಕೆಳಗೆ ನಮೂದಿಸಿರುವ ಸೇವೆಗಳಿಗೆ ಅನುದಾನ ಲಭ್ಯವಿರುತ್ತದೆ.
1. ಮಾದಕವಸ್ತು ಸೇವನೆ ಮತ್ತು ಮಧ್ಯವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಮುದ್ರಣ ಸಾಮಾಗ್ರಿಗಳ ತಯಾರಿಕೆ, ಪ್ರಕಟಣೆ ಮತ್ತು ಇವುಗಳ ಬಳಕೆ
2. ಮಾದಕ ವಸ್ತುಗಳ ಚಟಕ್ಕೆ ಬಲಿಯಾದವರಿಗೆ ಮತ್ತು ಮಧ್ಯವ್ಯಸನಿಗಳಿಗೆ ಸಮುದಾಯ ಆಧಾರಿತ ಸಲಹೆ ಮಾರ್ಗದರ್ಶನ ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸುವ (ಡಿಅಡಿಕ್ಷನ್) ಮತ್ತು ಪುನರ್ವಸತಿ ಕೇಂದ್ರ ಪ್ರಾರಂಭಿಸಲು
3. ಮಾದಕವಸ್ತು ಮತ್ತು ಮಧ್ಯವ್ಯಸನಿ ತಡೆಗಟ್ಟಲು ಏರ್ಪಡಿಸುವ ಶಿಬಿರಗಳು
4. ಯೋಜನೆಯ ಕಾರ್ಯಕ್ರಮ ಹಾಗೂ ಚಟುವಟಿಕೆಗಳಿಗೆ ಕಟ್ಟಡ ನಿರ್ಮಿಸಲು ಮತ್ತು ಕಟ್ಟಡಗಳ ಜೀರ್ಣೋದ್ದಾರ
5 ಕಾರ್ಯಕ್ರಮಗಳ ಪದೋನ್ನತಿಗೆ ಪೀಠೋಪಕರಣ ಮತ್ತು ಸಾಧನ ಸಲಕರಣೆಗಳನ್ನು ಖರೀದಿಸಲು ಅನುದಾನದ ಮಿತಿಯನ್ನು ಪ್ರತಿ ಪ್ರಕರಣದ ಅರ್ಹತೆಗೆ ಅನುಗುಣವಾಗಿ ಯೋಜನೆಯ ಒಟ್ಟು ವೆಚ್ಚ ಶೇಕಡ 90ಕ್ಕೆ ಮಿತಿಗೊಳಿಸಿ ನಿರ್ಧರಿಸಲಾಗುವುದು.  ಹೊಸ ಕಟ್ಟಡಗಳನ್ನು ನಿರ್ಮಿಸಲು ಹಳೆ ಕಟ್ಟಡದ ಜೀರ್ಣೋದ್ದಾರ ಮಾಡಲು ಅಂದಾಜಿನ ಶೇಕಡ 50 ಅಥವಾ ರೂ: 7.50 ಲಕ್ಷಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಲಾಗುವುದು.

ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಗಳಿಗೆ ಚಿಕಿತ್ಸೆ, ಸಲಹೆ, ಮಾರ್ಗದರ್ಶನ, ಪುನರ್ ವಸತಿ ಕಲ್ಪಿಸಲು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಈ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ ತುಮಕೂರಿನಲ್ಲಿ ಒಂದು ಕೇಂದ್ರವಿದೆ.

ಮಕ್ಕಳ ಸಹಾಯವಾಣಿ :-  ತೊಂದರೆಯಲ್ಲಿರುವ ಮತ್ತು ಪಾಲನೆ, ರಕ್ಷಣೆ ಅವಶ್ಯಕವಿರುವ ಮಕ್ಕಳಿಗಾಗಿ 1098 ಉಚಿತ ದೂರವಾಣಿ ಕರೆಮಾಡಿ ನೆರವು ನೀಡುವ ಯೋಜನೆ  ಈ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳ ಮುಖಾಂತರ ಅನುಷ್ಟಾನಗೊಳಿಸಲಾಗುತ್ತಿದೆ.
ಕೌಟುಂಬಿಕ ದೌರ್ಜನ್ಯ ದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ :- ಒಂದೇ ಕುಟುಂಬದಲ್ಲಿ ವಾಸಿಸುವ ಮಹಿಳೆಗೆ ಇತರೆ ಸದಸ್ಯರಿಂದ ದೈಹಿಕ, ಮಾನಸಿಕ/ಭಾವನಾತ್ಮಕ  ಆರ್ಥಿಕ ಮತ್ತು ಲೈಂಗಿಕ ಹಿಂಸೆ ಉಂಟಾದಲ್ಲಿ ಈ ಕಾಯ್ದೆಯಡಿ ದೂರು ದಾಖಲಿಸಬಹುದು.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕರ ಮತ್ತು ಮಾರಾಟ ತಡೆಗಟ್ಟುವ ಯೋಜನೆ :- ಮಹಿಳೆಯರನ್ನು ಮತ್ತು ಮಕ್ಕಳನ್ನು ಕಳ್ಳ ಸಾಗಾಣಿಕೆ (ಮಾನವ ಸಾಗಾಣಿಕೆ) ಮಾಡುವ ಮತ್ತು ಮಾರಾಟ ಮಾಡುವ ಕುರಿತು ತಡೆಗಟ್ಟಲು ಜಾಗೃತಿ  ಮೂಡಿಸುವ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಕಾವಲು ಸಮಿತಿಗಳನ್ನು ರಚಿಸಲಾಗಿದೆ.
ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆ :- ಮಹಿಳೆಯರ ಸಬಲೀಕರಣ ಹಾಗೂ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರದಿಂದ ಅನುಷ್ಟಾನಗೊಳಿಸುವ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆ/ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಿಡುವ ಕಾರ್ಯಕ್ರಮ
ದತ್ತು ಸ್ವೀಕಾರ ಕೇಂದ್ರಗಳು :- ಅನಾಥ, ನಿರ್ಗತಿಕ, ತಿರಸ್ಕೃತ ಮಕ್ಕಳಿಗೆ ಕುಟುಂಬದ ವಾತವರಣ ಹಾಗೂ ನೈಜ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಕೊರತೆಯನ್ನು ಹೋಗಲಾಡಿಸಲು ದತ್ತು ಸ್ವೀಕಾರ ಕೇಂದ್ರಗಳು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಸ್ಥಾಪಿಸಲಾಗಿದೆ.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿಗಳು.
ಅಸಾಧಾರಣ ಸಾದನೆ ಮಾಡಿದ ಶಿಕ್ಷಣ, ಕಲೆ, ಕ್ರೀಡೆ ಮತ್ತು ಸಾಂಸ್ಕ್ೃತಿಕ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ.
ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗಳು : ಮಗು ಸಮಯ ಪ್ರಜ್ಞೆಯಿಂದ ಜೀವದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಸಾಹಸ ತೋರಿದ ಮಕ್ಕಳಿಗೆ ನೀಡಿರುವ ಪ್ರಶಸ್ತಿಗಳು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ :- ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿರುವ ಸ್ವಯಂಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ.
ಸ್ತ್ರೀಶಕ್ತಿ ಪ್ರಶಸ್ತಿಗಳು ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಹಾಗೂ ಒಕ್ಕೂಟಗಳಿಗೆ ಪ್ರಶಸ್ತಿಗಳು

ಸ್ತ್ರೀಶಕ್ತಿ ಪುರಸ್ಕಾರ :- ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ, ಮಹಿಳಾ ಅಭಿವೃದ್ಧಿ ನಿಗಮಗಳಿಗೆ ರಾಜ್ಯ ಮಹಿಳಾ ಆಯೋಗಗಳಿಗೆ ಡಾ||ದುರ್ಗಾಬಾಯಿದೇಶ್ ಮುಖ್, ದೇವಿ ಅಹಲ್ಯಾಬಾಯಿ ಹೋಲ್ಕರ್ ಕನ್ನಗಿ, ಮಾತಾ ಜೀಜಾ ಬಾಯಿ, ರಾಣಿ ಗೈಡ್ ನಾಲೋಜೀಲಾಂಗ್ ಮತ್ತು ರಾಣಿ ಲಕ್ಷ್ಮಿ ಬಾಯಿ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಮರಣ ಪರಿಹಾರ ಹಾಗೂ ವೈದ್ಯಕೀಯ ನೆರವು
ಉತ್ತಮ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಮತ್ತು ರಾಷ್ಷ್ರ ಪ್ರಶಸ್ತಿ
ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ಜನಶ್ರೀ ಭೀಮಾ ಯೋಜನೆ

ಮಕ್ಕಳ ಹಕ್ಕುಗಳ ಆಯೋಗ:- ಮಕ್ಕಳು ಜೀವಿಸುವ ರಕ್ಷಣೆ ಹೊಂದುವ, ವಿಕಾಸ ಹೊಂದುವ ಮತ್ತು ಭಾಗವಹಿಸುವ ಹಕ್ಕುಗಳಿಂದ ವಂಚಿತರಾಗದಂತೆ ಕ್ರಮವಹಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಇರುತ್ತದೆ.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ
ಉದ್ಯೋಗಿನಿ : ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ಜಾರಿಗೆ ತಂದಿದ್ದು ಬ್ಯಾಂಕುಗಳು ನೀಡುವ ಸಾಲಕ್ಕೆ ನಿಗಮದಿಂದ ಸಹಾಯಧನ ನೀಡಲಾಗುವುದು.

 • ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವು
 • ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ ವಸತಿಗಾಗಿ ಆರ್ಥಿಕ ನೆರವು
 • ನಿರುದ್ಯೋಗ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗೆ (ಕಂಪ್ಯೂಟರ್ ಶಿಕ್ಷಣ )

ರಾಜ್ಯ ಮಹಿಳಾ ಆಯೋಗ :- ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಆತ್ಯಾಚಾರ, ಶೋಷಣೆ, ದಬ್ಬಾಳಿಕೆಗಳನ್ನು ತಡೆಗಟ್ಟಲು ಹಾಗೂ ರಕ್ಷಣೆ ನೀಡಲು ರಾಜ್ಯ ಮಹಿಳಾ ಆಯೋಗ ಇರುತ್ತದೆ.
.ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ :-

 • ವಿಶೇಷ ಶಾಲೆಗಳು (ಅಂಧ ಮಕ್ಕಳ ಶಾಲೆ, ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಬುದ್ದಿಮಾಂದ್ಯ  ಮಕ್ಕಳ ಶಾಲೆ)
 • ಸಂಪನ್ಮೂಲ ಶಿಕ್ಷಕರ ತರಬೇತಿ ಯೋಜನೆ
 • ವೃದ್ಧಾಶ್ರಮಗಳು ಮತ್ತು ಹಗಲು ಯೋಗಕ್ಷೇಮ ಕೇಂದ್ರಗಳು
 • ವಿದ್ಯಾರ್ಥಿ ವೇತನ
 • ಮಾಸಿಕ ನಿರ್ವಹಣೆ ಭತ್ಯೆ
 • ಆಧಾರ್ ಯೋಜನೆ
 • ಸಮುದಾಯ ಆಧಾರಿತ ಪುನರ್ ವಸತಿ ಯೋಜನೆ
 • ಸಾಧನ ಸಲಕರಣೆಗಳ ವಿತರಣೆ
 • ಗುರುತಿನ ಚೀಟಿ ನೀಡುವ ಯೋಜನೆ
 • ವಿಕಲಚೇತನರ ಮತ್ತು ಉದ್ಯೋಗಸ್ಥ ಮಹಿಳೆಯ ವಸತಿ ನಿಲಯ

ಇತರೆ ಇಲಾಖೆಗಳ ಸಹಯೋಗದಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳು

 • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಐ.ಸಿ.ಡಿ.ಎಸ್. (ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸೇವೆಗಳು) ಚುಚ್ಚುಮದ್ದು ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ, ಆರೋಗ್ಯ ಮತ್ತು ಪೌಷ್ಟಿಕ ಶಿಕ್ಷಣ ಹಾಗೂ ಮಾಹಿತಿ ಸೇವೆ.
 • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ :- ಅಂಗನವಾಡಿ ನಿವೇಶನಗಳು, ಕಟ್ಟಡಗಳ ನಿರ್ಮಾಣ ಮತ್ತು ಶೌಚಾಲಯಗಳು
 • ಕಂದಾಯ ಇಲಾಖೆ :- ವಿಧವಾ ವೇತನ
 • ಕರ್ನಾಟಕ ಹಾಲು ಒಕ್ಕೂಟ : ಸ್ಟೆಪ್ ಯೋಜನೆ
 • ಎಲ್ಲಾ ಯೋಜನೆ/ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಿಡುವ ಕಾರ್ಯಕ್ರಮ

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:

ಜಿಲ್ಲೆಯಲ್ಲಿ 11 ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳಿದ್ದು ಅವುಗಳಲ್ಲಿ 10 ಗ್ರಾಮೀಣ ಯೋಜನೆಗಳಾಗಿದ್ದು ಒಂದು ತುಮಕೂರು ನಗರ ಯೋಜನೆಯಾಗಿರುತ್ತದೆ.  ಈ ಯೋಜನೆಗಳಲ್ಲಿ ಒಟ್ಟು 4095 ಅಂಗನವಾಡಿ ಕೇಂದ್ರಗಳಿರುತ್ತವೆ.  ಜಿಲ್ಲೆಯಲ್ಲಿ ಒಟ್ಟು 10472 ಸ್ತ್ರೀಶಕ್ತಿ ಗುಂಪುಗಳನ್ನು ರಚಿಸಲಾಗಿರುತ್ತದೆ. ಜಿಲ್ಲೆಯಲ್ಲಿ 11 ಸಾಂತ್ವನ ಕೇಂದ್ರಗಳಿರುತ್ತವೆ.

ಯಾರು ಯಾವ ಇಲಾಖೆಯವರು :

1

ಶ್ರೀ ನಟರಾಜ.ಎಸ್.

ಉಪನಿರ್ದೇಶಕರು

2

ಶ್ರೀ ಶ್ರೀಧರ್.ಎಂ.ಎಸ್.

ನಿರೂಪಣಾಧಿಕಾರಿಗಳು

3
ಶ್ರೀಮತಿ ಅಂಬಿಕಾ ಕೆ.ಹೆಚ್. (ಪ್ರಭಾರ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು

4

ಶ್ರೀ ಸಿ.ತಿಪ್ಪಯ್ಯ

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಚಿಕ್ಕನಾಯಕನಹಳ್ಳಿ

5

ಶ್ರೀ ಕೆ.ಆರ್.ಹೊನ್ನೇಶಪ್ಪ

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಗುಬ್ಬಿ

6

ಶ್ರೀಮತಿ ಅನುಷ

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕುಣಿಗಲ್

7

ಶ್ರೀ ಶ್ರೀಧರ್ ಎಂ.ಎಸ್. (ಪ್ರಭಾರ)

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕೊರಟಗೆರೆ

8

ಶ್ರೀ ಸ್ವಾಮಿ.ಟಿ.ಆರ್.

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಧುಗಿರಿ

9

ಶ್ರೀ ಶಿವಕುಮಾರಯ್ಯ ಎಸ್.

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪಾವಗಡ

10

ಶ್ರೀ ಎಂ. ಬಸವರಾಜು

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಶಿರಾ

11

ಶ್ರೀ ಪಿ. ಓಂಕಾರಪ್ಪ

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಿಪಟೂರು

12

ಶ್ರೀ ಎಂ.ಎಸ್. ಶ್ರೀಧರ್

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತುಮಕೂರು ಗ್ರಾಮಾಂತರ

13

ಶ್ರೀ ಸತ್ಯನಾರಾಯಣ.ಆರ್.

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತುಮಕೂರು ನಗರ

14

ಶ್ರೀ ಪುಟ್ಟಸ್ವಾಮಿ ಬಿ .ಪಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತುರುವೇಕೆರೆ

15

ಶ್ರೀಮತಿ. ಪುಷ್ಪಲತ

ಅಧೀಕ್ಷಕರು, ಬಾಲಕಿಯರ ಬಾಲಮಂದಿರ,ತುಮಕೂರು

16

ಶ್ರೀಮತಿ.ಕಮಲಮ್ಮ (ಪ್ರಭಾರ)

ಅಧೀಕ್ಷಕರು, ಸ್ವೀಕಾರ ಕೇಂದ್ರ, ತುಮಕೂರು

17

ಶ್ರೀ. ಕೃಷ್ಣಾನಾಯ್ಕ್.ಎಲ್. (ಪ್ರಭಾರ)

ಪರಿವೀಕ್ಷಣಾಧಿಕಾರಿ, ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ,ತುಮಕೂರು

 

ಕ್ರ.ಸಂ.

ಕಛೇರಿಯ ಹೆಸರು

ಪದನಾಮ

ದೂರವಾಣಿ ಸಂಖ್ಯೆ.

1

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು

ಉಪನಿರ್ದೇಶಕರು,
ಜಿಲ್ಲಾನಿರೂಪಣಾಧಿಕಾರಿ,
ಮಹಿಳಾಮತ್ತುಮಕ್ಕಳಅಭಿವೃದ್ಧಿಅಧಿಕಾರಿಗಳು

91816- 2272590

2

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಚಿಕ್ಕನಾಯಕನಹಳ್ಳಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918133-268245

3

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಗುಬ್ಬಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918131-223731

4

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಕುಣಿಗಲ್,

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918132-222691

5

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಕೊರಟಗೆರೆ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918138-232315

6

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಮಧುಗಿರಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918137-282452

7

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಪಾವಗಡ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918136-245733

8

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಶಿರಾ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918135-277578

9

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ತಿಪಟೂರು

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918134-252991

10

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ತುಮಕೂರು ಗ್ರಾಮಾಂತರ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

91816-2285021

11

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ತುಮಕೂರು ನಗರ

ಶಿಶು ಅಭಿವೃದ್ಧಿ ಯೋಜನಾಧಿಕಾರಿ

91816-2272204

12

ಶಿಶು ಅಭಿವೃದ್ಧಿ ಯೋಜನಾ ಕಛೇರಿ, ತುರುವೇಕೆರೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ

918139-228468

13

ಅಧೀಕ್ಷಕರು ಬಾಲಕಿಯರ ಬಾಲಮಂದಿರ, ತುಮಕೂರು

ಅಧೀಕ್ಷಕರು

91816-2214703

14

ಅಧೀಕ್ಷಕರು ಸರ್ಕಾರಿ ಸ್ವೀಕಾರ ಕೇಂದ್ರ, ತುಮಕೂರು

ಅಧೀಕ್ಷಕರು

91816-2214802

15

ಪರಿವೀಕ್ಷಣಾಧಿಕಾರಿ, ಜಿಲ್ಲಾ ಪರಿವೀಕ್ಷಣಾ ಅಧಿನಿಯಮ, ತುಮಕೂರು

ಪರಿವೀಕ್ಷಣಾಧಿಕಾರಿ

91816-2272590

ಇಲಾಖೆಯ ಜಿಲ್ಲಾ ಕಛೇರಿ ವಿಳಾಸ:-

ಉಪನಿರ್ದೇಶಕರ ಕಛೇರಿ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
ರೆಡ್ ಕ್ರಾಸ್ ಭವನ, ಅಶೋಕ ರಸ್ತೆ,
ತುಮಕೂರು.

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in