ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ

ರಾಜ್ಯದಲ್ಲಿನ ಯುವಜನರ ಹಾಗೂ ಕ್ರೀಡಾಪಟುಗಳ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ, 1969ನೇ ಇಸವಿಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಪ್ರಾರಂಭಿಸಲಾಯಿತು.  ರಾಜ್ಯ ಮಟ್ಟದಲ್ಲಿ ಇಲಾಖೆಯನ್ನು ಐ.ಎ.ಎಸ್/ಐ.ಪಿ.ಎಸ್/ಕೆ.ಎ.ಎಸ್ ಅಧಿಕಾರಿಗಳ ವೃಂದದಿಂದ ತೈನಾನಿಸಲ್ಪಟ್ಟ ಆಯುಕ್ತರು/ ನಿದೇðಶಕರು ಮುನ್ನಡೆಸುತ್ತಿದ್ದಾರೆ.  ಜಿಲ್ಲಾಮಟ್ಟದಲ್ಲಿನ ಇಲಾಖಾ ವ್ಯವಸ್ಥೆಯು ಈ ಕೆಳಂಡಂತಿರುತ್ತದೆ.

1. ಸಹಾಯಕ ನಿರ್ದೇಶಕರು        - 1
2. ಅಧಿಕ್ಷಕರು                           - 1
3. ಅಧೀಕ್ಷಕರು (ಕ್ರೀಡಾಶಾಲೆ)     - 1
4. ದ್ವಿತೀಯ ದರ್ಜೆ ಸಹಾಯಕರು - 1
5. ಗುಂಪು ‘ಡಿ’ ನೌಕರರು           - 1

ಇದರ ಜೊತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ 4 ಜನ ತರಬೇತುದಾರರು, ಇಲಾಖಾ ಚಟುವಟಿಕೆಗಳನ್ನು ಏರ್ಪಡಿಸಲು ಸಹಾಯಕ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇಲಾಖೆಯ ಮೂಲ ಉದ್ದೇಶ

1. ತುಮಕೂರಿನಲ್ಲಿ ಜಿಲ್ಲಾ ಕ್ರೀಡಾಂಗಣದ ನಿರ್ಮಾಣ ಮತ್ತು ನಿರ್ವಹಣೆ

2. ತುಮಕೂರಿನಲ್ಲಿ ಒಳಾಂಗಣ ಕ್ರೀಡಾಂಗಣದ ನಿರ್ಮಾಣ ಮತ್ತು ನಿರ್ವಹಣೆ

3. ತುಮಕೂರಿನಲ್ಲಿ ಕ್ರೀಡಾಶಾಲೆ ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ

4. ಮಧುಗಿರಿ, ಸಿರಾ, ಪಾವಗಡ, ತಿಪಟೂರು, ಕೊರಟಗೆರೆ,  ಚಿ.ನಾ.ಹಳ್ಳಿ , ಕುಣಿಗಲ್ ಹಾಗೂ ತುರುವೇಕೆರೆ ಪಟ್ಟಣಗಳಲ್ಲಿ ಕ್ರೀಡಾಂಗಣಗಳ ನಿರ್ಮಾಣ ಮತ್ತು ನಿರ್ವಹಣೆ

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು

ಯೋಜನಾ ಕಾರ್ಯಕ್ರಮಗಳು

 1. ಗ್ರಾಮೀಣ ಕ್ರೀಡಾ ಕೇಂದ್ರಗಳು : ಈ ಶೀರ್ಷಿಕೆಯ ಮೂಲಕ ಯುವಕ/ ಯುವತಿಸಂಘ/ವಿದ್ಯಾಸಂಸ್ಥೆಗಳಿಗೆ ಸಲಕರಣಾ ಧನ  ಸಹಾಯ ಒದಗಿಸಲಾಗುತ್ತದೆ.
 2. ಕ್ರೀಡಾಶಾಲೆಗಳು: ಈ ಶೀರ್ಷಿಕೆ ಮೂಲಕ ತುಮಕೂರಿನ ಕ್ರೀಡಾಶಾಲೆ/ವಸತಿ ನಿಲಯವನ್ನು ನಿವ೵ಹಿಸಲಾಗುತ್ತಿದೆ.
 3. ಕ್ರೀಡಾಕೂಟ ಮತ್ತು ಲಿಗಳ ಸಂಘಟನೆ ಹಾಗೂ ಅದರಲ್ಲಿ ಭಾಗವಹಿಸುವವರಿಗೆ ಪ್ರಯಾಣ/ದಿನಭತ್ಯೆ: ಇಲಾಖಾ ಚಟುವಟಿಕೆಗಳಾದ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಸಕಾ೵ರಿ ನೌಕರರ ಕ್ರೀಡಾಕೂಟ,ಿತರೆ ಕ್ರೀಡಾಕೂಟಗಳು, ಯುವಜನೋತ್ಸವ, ಯುವಜನ ಮೇಳಗಳನ್ನು ಏಪðಡಿಸಲು ತಗಲುವ ಸಂಘಟನಾ ವೆಚ್ಚಗಳನ್ನು ಹಾಗೂ  ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜಿಲ್ಲಾ ತಂಡದ ಪ್ರಯಾಣಭತ್ಯೆ ಮತ್ತು ದಿನಭತ್ಯೆಗಳಿಗೆ ಸಂಬಂಧಿಸಿದ ವೆಚ್ಚವನ್ನು ಈ ಶೀರ್ಷಿಕೆಯಡಿಯಲ್ಲಿ ಭರಿಸಲಾಗುವುದು.
 4. ಕ್ರೀಡಾಂಗಣ ಮತ್ತು ಇತರೆಗಳ ನಿರ್ಮಾಣ ಮತ್ತು ನಿರ್ವಹಣೆ: ತುಮಕೂರಿನ ಜಿಲ್ಲಾ ಕ್ರೀಡಾಂಗಣ ಹಾಗೂ ಮಧುಗಿರಿ, ಸಿರಾ, ಪಾವಗಡ, ತಿಪಟೂರು, ಕೊರಟಗೆರೆ, ಚಿ.ನಾ.ಹಳ್ಳಿ, ಕುಣಿಗಲ್ ಹಾಗೂ ತುರುವೇಕೆರೆ ತಾಲ್ಲೂಕು ಕ್ರೀಡಾಂಗಣಗಳ ನಿವðಹಣಾ ವೆಚ್ಚಗಳನ್ನು ಈ ಶೀರ್ಷಿಕೆಯಡಿಯಲ್ಲಿ ಭರಿಸಲಾಗುವುದು.
 5. ಒಳಾಂಗಣ ಕ್ರೀಡಾಂಗಣ ಮತ್ತು ಬಯಲು ರಂಗಮಂದಿರಗಳ ನಿರ್ಮಾಣಕ್ಕೆ ಅನುದಾನ : ತುಮಕೂರಿನ ಒಳಾಂಗಣ ಕ್ರೀಡಾಂಗಣಕ್ಕೆ ಸಂಬಂಧಿಸಿದ ಗಮ್ಮಿಂಗ್, ಬೆಳಕಿನ ವ್ಯವಸ್ಥೆ ಇತ್ಯಾದಿಗಳ ವೆಚ್ಚವನ್ನು ಈ ಶೀರ್ಷಿಕೆ ಅಡಿಯಲ್ಲಿ ಭರಿಸಲಾಗುತ್ತದೆ.
 6. ಕಷ್ಟ ಪರಿಸ್ಥಿತಿಯಲ್ಲಿರುವ ಕ್ರೀಡಾಪಟುಗಳು/ಕುಸ್ತಿಪಟುಗಳಿಗೆ ಆರ್ಥಿಕ ನೆರವು : ತುಮಕೂರು ಜಿಲ್ಲೆಯಲ್ಲಿ ಆಥಿðಕವಾಗಿ ಸಂಕಷ್ಟದಲ್ಲಿರುವ 09 ಕ್ರೀಡಾಪಟುಗಳು/ಕುಸ್ತಿಪಟುಗಳಿಗೆ ಮಸಾಶನವನ್ನು ಈ ಶೀರ್ಷಿಕೆ ಮೂಲಕ ನೀಡಲಾಗುತ್ತಿದೆ.

ಯೋಜನೇತರ

 1. ಸಹಾಯಕ ಯುವಜನ ಸೇವಾಧಿಕಾರಿಗಳ ವೇತನ ಮತ್ತು ಇತರೆ ವೆಚ್ಚಗಳು:   ಇಲಾಖಾಧಿಕಾಗಳ ಹಾಗೂ ಸಿಬ್ಬಂಧಿ ವಗðದವರ ವೇತನ ಮತ್ತು ಕಚೇರಿಯ ಇತರೆ  ವೆಚ್ಚಗಳನ್ನು ಈ ಶೀರ್ಷಿಕೆ  ಮೂಲಕ ಭರಿಸಲಾಗುತ್ತದೆ.
 2. ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯೇತರರಿಗೆ ಸಹಾಯ : ಈ ಶೀರ್ಷಿಕೆ ಅಡಿಯಲ್ಲಿ ವಿವಿಧ ಯುವಕ/ಯುವತಿ/ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳು ಸಂಘಟಿಸಲಾಗುತ್ತದೆ.
 3. ಕ್ರೀಡಾ ಸಾಮಗ್ರಿ ಖರೀದಿಗಾಗಿ ಜಿಲ್ಲಾ ಮತ್ತು ವಿಭಾಗೀಯ ಯುವಜನ ಸೇವಾ ಮಂಡಳಿಗೆ ಸಹಾಯ: ದಿನನಿತ್ಯ ಅಭ್ಯಾಸ ಮಾಡುವ ಕ್ರೀಡಾಪಟುಗಳ ಉಪಯೋಗಕ್ಕಾಗಿ ಬೇಕಾಗುವ ಕ್ರೀಡಾ ಸಾಮಗ್ರಿಗಳನ್ನು ಈ ಶೀರ್ಷಿಕೆ ಮೂಲಕ ಒದಗಿಸಲಾಗುವುದು.
 4. ಕ್ರೀಡಾ ಸಾಮಗ್ರಿಗಳನ್ನು ಕೊಳ್ಳಲು ಮತ್ತು ಆಟದ ಮೈದಾನಗಳನ್ನು ಅಭಿವೃದ್ಧಿಗೊಳಿಸಲು ಶೈಕ್ಷಣಿಕ ಮತ್ತು ಇತರೆ ಸಂಸ್ಥೆಗಳಿಗೆ ಸಹಾಯ: ಈ ಶೀರ್ಷಿಕೆ ಅಡಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕ್ರೀಡಾ ಅಭ್ಯಾಸಕ್ಕಾಗಿ ಬೇಕಾಗುವ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗುವುದು.
 5. ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ: ಈ ಶೀರ್ಷಿಕೆ ಅಡಿಯಲ್ಲಿ ಕ್ರೀಡಾಶಾಲೆ/ವಸತಿನಿಲಯಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ತರಬೇತುದಾರರ ಪ್ರಯಾಣ ಮತ್ತು ದಿನಭತ್ಯೆಗಳನ್ನು ನೀಡಲಾಗುವುದು.

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ

1. ಯೋಜನಾ ಕಾರ್ಯಕ್ರಮಗಳ ಗುರಿ – 79

2. ಯೋಜನೇತರ ಕಾರ್ಯಕ್ರಮಗಳ ಗುರಿ – 16

ಯಾರು ಯಾವ ಇಲಾಖೆಯವರು

1. ಸಹಾಯಕ ನಿರ್ದೇಶಕರು   1 ಕೆ.ಜಿ.ಎಸ್

2. ಅಧೀಕ್ಷಕರು                     ಖಾಲಿ ಇದೆ

3. ಅಧೀಕ್ಷಕರು (ಕ್ರೀಡಾಶಾಲೆ)1 ಖಾಲಿ ಇದೆ

4. ದ್ವಿ.ದ.ಸ                         1 ಕರ್ನಾಟಕ ಲೋಕಸೇವಾ ಆಯೋಗ

5.ಗುಂಪು‘ಡಿ’ ನೌಕರರು       1 ನೇರನೇಮಕಾತಿ

ಮೇಲ್ಕಂಡವರ ಜೊತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ 4 ಜನ ತರಬೇತುದಾರರು, ಇಲಾಖಾ ಚಟುವಟಿಕೆಗಳನ್ನು ಏರ್ಪಡಿಸಲು ಸಹಾಯಕ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ರ.ಸಂ.

ಹುದ್ದೆ

ಜಿಲ್ಲಾ/ತಾಲ್ಲೂಕು/ಹೋಬಳಿ/ಗ್ರಾ.ಪಂ

ದೂರವಾಣಿ

ಮೊ.ಸಂ

1

ಸಹಾಯಕ ನಿರ್ದೇಶಕರು

ಜಿಲ್ಲೆ

2278124

 

2

ಅಧೀಕ್ಷಕರು

ಜಿಲ್ಲೆ

2278124

 

3

ಅಧೀಕ್ಷಕರು

ಜಿಲ್ಲೆ

2278124

 

4

ಕ.ಕ್ರೀ.ಪ್ರಾ. ಹಾಕಿ ತರಬೇತುದಾರರು

ಜಿಲ್ಲೆ

2278124

 

5

ಕ.ಕ್ರೀ.ಪ್ರಾ. ಕಬಡ್ಡಿ ತರಬೇತುದಾರರು

ಜಿಲ್ಲೆ

2278124

 

6

ಕ.ಕ್ರೀ.ಪ್ರಾ. ಜಿಮ್ನಾಸ್ಟಿಕ್ಸ್ ತರಬೇತುದಾರರು

ಜಿಲ್ಲೆ

2278124

 

7

ಕ.ಕ್ರೀ.ಪ್ರಾ. ಅಥ್ಲೆಟಿಕ್ಸ್ ತರಬೇತುದಾರರು

ಜಿಲ್ಲೆ

2278124

 

8

ಎಸ್.ಡಿ.ಎ

ಜಿಲ್ಲೆ

2278124

 

9

ಗುಂಪು ಡಿ

ಜಿಲ್ಲೆ

2278124

 

ಇಲಾಖೆಯ ಗುರಿ ಮತ್ತು ಸಾಧನೆಗಳು

ರಾಜ್ಯದ ಯುವಜನರಲ್ಲಿ ಅಡಗಿರುವ ಪ್ರತಿಭೆಯನ್ನು ಉತ್ತೇಜಿಸಿ ಪುಷ್ಠೀಕರಿಸುವುದರ ಮೂಲಕ ಅವರುಗಳಲ್ಲಿನ ಪ್ರತಿಭೆಗಳನ್ನು, ಸ್ಪರ್ಧಾತ್ಮಕ/ಯುವಜನ ಚಟುವಟಿಕೆಗಳಲ್ಲಿ ಹೊರಹೊಮ್ಮಿಸುವುದು.

ಮಾಹಿತಿಹಕ್ಕು ಅಧಿನಿಯಮ-2005 ಕಾಲಂ4(1) A ಮತ್ತು B, ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

ಪಿ.ಐ.ಒ : ಸಹಾಯಕ ನಿರ್ಧೇಶಕರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತುಮಕೂರು

ಎ.ಪಿ.ಐ.ಒ ಅಧೀಕ್ಷಕರು : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತುಮಕೂರು

ಜಿಲ್ಲಾ ಇಲಾಖಾ ಕಚೇರಿಯ ವಿಳಾಸ

ಸಹಾಯಕ ನಿರ್ದೇಶಕರ ಕಚೇರಿ,
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ,
ಮಹಾತ್ಮಗಾಂಧಿ ಕ್ರೀಡಾಂಗಣ, ತುಮಕೂರು

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in